ಇನ್ನು ಸಾಲು ಸಾಲು ಸಭೆ ನಡೆಸಿರುವ ಬಿಜೆಪಿ (BJP) ಪಟ್ಟಿಯನ್ನು ಹೈಕಮಾಂಡ್ಗೆ ರವಾನೆ ಮಾಡಿದೆ. ಜೆಡಿಎಸ್ ಪಟ್ಟಿ (JDS Candidate List) ಬಿಡುಗಡೆ ದಿನಾಂಕ ಮತ್ತೆ ಮುಂದೂಡಿಕೆಯಾಗಿದೆ.
ವರುಣಾದಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ಮೈತ್ರಿಯಾಗಿದೆ ಅಂತಾ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಮೈಸೂರಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರನ್ನು ಗೆಲ್ಲಿಸಲು ಮೈತ್ರಿ ಮಾಡಿಕೊಳ್ಳಲಾಗಿದೆ. ಯಾರು ಏನು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಅಲ್ಲಿ ಬಿಜೆಪಿ ಪಕ್ಷ ಸ್ಟ್ರಾಂಗ್ ಆಗಿಲ್ಲ. ಚುನಾವಣೆ ವೇಳೆ ನಾವೇ ಫೈಟ್ ಮಾಡಬೇಕಿದೆ ಅಂತ ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ಮೊದಲ ಪಟ್ಟಿಯನ್ನು ಏಪ್ರಿಲ್ 10ರೊಳಗೆ, ಎರಡನೇ ಪಟ್ಟಿಯನ್ನು ಏಪ್ರಿಲ್ 13ಕ್ಕೆ ನಿರೀಕ್ಷೆ ಮಾಡಬಹುದು ಎಂದು ಬಿಜೆಪಿ ಕೋರ್ ಕಮಿಟಿ ಸದಸ್ಯ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಹಾಲಿ ಶಾಸಕರು ಸೇರಿದಂತೆ ಪ್ರತಿ ಕ್ಷೇತ್ರಗಳಿಗೂ ಮೂವರು ಹೆಸರು ಶಿಫಾರಸು ಮಾಡುವ ತೀರ್ಮಾನ ಆಗಿದೆ. A, B, C ಮಾದರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ದೆಹಲಿಯಲ್ಲಿ ನಡೆಯಲಿರುವ ಸಂಸದೀಯ ಮಂಡಲಿ ಸಭೆಯಲ್ಲಿ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿ ಯಾರಾಗಬೇಕೆಂದು ತೀರ್ಮಾನ ಆಗುತ್ತದೆ ಎಂದು ತಿಳಿಸಿದ್ದಾರೆ.
224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೂ ಮೂವರು ಹೆಸರು ಫೈನಲ್
ಫೈನಲ್ ಮಾಡಿದ ಪಟ್ಟಿಯನ್ನು ದೆಹಲಿಗೆ ತೆಗೆದುಕೊಂಡು ಹೋದ ಧರ್ಮೇಂದ್ರ ಪ್ರಧಾನ್
ನಿನ್ನೆ ರಾತ್ರಿಯೆ ದೆಹಲಿಗೆ ತೆಗೆದುಕೊಂಡು ಹೋಗಿರುವ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್
ನಾಳೆ ಮಧ್ಯಾಹ್ನ ದೆಹಲಿಗೆ ತೆರಳಲಿರುವ ರಾಜ್ಯ ಬಿಜೆಪಿ ನಾಯಕರು
ನಾಳೆ ಸಂಜೆ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಮೊದಲ ಹಂತದಲ್ಲಿ ಸಭೆ
ಬಳಿಕ ಏಪ್ರಿಲ್ 8 ರಂದು ನಡೆಯಲಿರುವ ಕೇಂದ್ರೀಯ ಸಂಸದೀಯ ಮಂಡಲಿ ಸಭೆಯಲ್ಲಿ ಚರ್ಚೆ
ಮೂರರಲ್ಲಿ ಒಂದೊಂದು ಅಭ್ಯರ್ಥಿಯನ್ನು ಫೈನಲ್ ಮಾಡುವ ಬಗ್ಗೆ ಅಂತಿಮ ನಿರ್ಧಾರ
ಮತದಾರರಿಗೆ ಹಂಚಲು ಸೀರೆಗಳನ್ನ ಇಟ್ಟು ಹೋಗುತ್ತಿದ್ದ ಕಾರು ವಶಪಡಿಸಿಕೊಂಡ ಚುನಾವಣಾ ಅಧಿಕಾರಿಗಳು
ಕಾರನ್ನ ವಶಕ್ಕೆ ಪಡೆದು ತಿಲಕ ನಗರ ಠಾಣೆಗೆ ನೀಡಿದ ಚುನಾವಣಾ ಅಧಿಕಾರಿಗಳು
ಸದ್ಯ ಕಾರನ್ನ ತಿಲಕನಗರ ಠಾಣೆ ಬಳಿ ನಿಲ್ಲಿಸಿರುವ ಪೊಲೀಸರು
ಮಾರೇನಹಳ್ಳಿ ಬಳಿ ಕಾರು ವಶಕ್ಕೆ ಪಡೆದಿದ್ದ ಚುನಾವಣಾ ಅಧಿಕಾರಿಗಳು
ಬಿಸಿ ಪಾಟೀಲ್ರ ಹಿರೆಕೇರೂರಿನ ನಿವಾಸದಲ್ಲಿ ನಟಿ ಪ್ರೇಮಾ ಹೇಳಿಕೆ
ಸಚಿವ ಬಿ.ಸಿ ಪಾಟೀಲ್ ಅವರು ಈ ಬಾರಿ ಗೆಲ್ಲುತ್ತಾರೆ, ಇಲ್ಲಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ
ಬಿಸಿ ಪಾಟೀಲ್ ಸರ್ ಪೋನ್ ಮಾಡಿದ್ದರು, ಪ್ರಚಾರದ ಬಗ್ಗೆ ನನಗೆ ಏನೋ ಗೊತ್ತಿಲ್ಲ
ನಮ್ಮ ತಂದೆ ನಿಧನರಾದಾಗ ಬಂದಿದ್ದರು, ಹೀಗಾಗಿ ಅವರ ಮೇಲೆ ಗೌರವದಿಂದ ನಾನು ಬಂದಿದ್ದೇನೆ
ಮಹಿಳೆಯರು ನನಗೆ ಬಹಳ ಫ್ಯಾನ್ಸ್ ಇದ್ದಾರೆ, ಖಂಡಿತಾ ಅವರಿಗೆ ವೋಟುಗಳಾಗಿ ಮತ ಪರಿವರ್ತನೆ ಆಗುತ್ತೆ ಎಂದರು
ಕೊಪ್ಪಳತಮ್ಮ ರಾಜಕೀಯ ಎರಡನೇ ಇನಿಂಗ್ಸ್‌ನ್ನು ಕೊಪ್ಪಳ ಜಿಲ್ಲೆಯಲ್ಲಿ ಆರಂಭಿಸಿರುವ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಗಂಗಾವತಿಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರ 62ರ ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ರೆಡ್ಡಿಗೆ ಉಪ್ಪಿನಮಾಳಿ ಕ್ಯಾಂಪ್ಮಾರುತೇಶ್ವರ ನಗರದ ಮತಗಟ್ಟೆಯ ವ್ಯಾಪ್ತಿಯಲ್ಲಿ ಹೆಸರು ಸೇರ್ಪಡೆ ಮಾಡಲಾಗಿದೆ.
ಕಡೂರು, ಚಿಕ್ಕಮಗಳೂರುಗುಡ್ಡೆಹಳ್ಳಿ ಕೆಂಚಪ್ಪನ ಆಣೆ ಕಡೂರಲ್ಲಿ ಕಾಂಗ್ರೆಸ್ ಸೋಲುತ್ತೆ. ದತ್ತಣ್ಣಂಗೆ ಟಿಕೆಟ್ ಕೊಡ್ಲಿಲ್ಲ ಅಂದರೆ ಕಡೂರಲ್ಲಿ ಕಾಂಗ್ರೆಸ್ ಗೆಲ್ಲಲ್ಲ ಎಂದು ವೈ.ಎಸ್.ವಿ ದತ್ತಾ ಅಭಿಮಾನಿಗಳು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಆಡಿಯೋ ವೈರಲ್ ಆಗಿದೆ. ಒಳ್ಳೆ ಮನುಷ್ಯನಿಗೆ ಟಿಕೆಟ್ ಸಿಕ್ಕಿಲ್ಲ ಅಂದ ಮೇಲೆ ಕಾಂಗ್ರೆಸ್ ಸೋಲೋದು ಪಕ್ಕಾ. ದತ್ತ ಮತ್ತೆ ಜೆಡಿಎಸ್ಗೆ ಬಂದರೆ ನಾವಂತೂ ಗೆದ್ದೇ ಗೆಲ್ಲಿಸ್ತೀವಿ. 47 ಸಾವಿರ ಓಟು ದತ್ತಣ್ಣನ ಜೇಬಲ್ಲಿ ಇದೆ ಎಂದು ಅಭಿಮಾನಿಗಳು ಶಪಥ ಮಾಡಿದ್ದಾರೆ.
‘ಕಾಂಗ್ರೆಸ್ ಗೆಲ್ಲಲ್ಲ..’ – ಕಾಂಗ್ರೆಸ್ ನಾಯಕಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದಕ್ಕೆ ಹೆಚ್.ಆರ್ ಶ್ರೀನಾಥ್ ಅಸಮಾಧಾನಗೊಂಡಿದ್ದಾರೆ. ಟಿಕೆಟ್ ಮಿಸ್ ಆಗಿದ್ದಕ್ಕೆ ಬೇಸರವಿದೆ. ಮುಂದೆ ಬೆಂಬಲಿಗರ ಸಭೆ ಕರೆದು ತೀರ್ಮಾನಿಸ್ತೀನಿ ಎಂದು ಹೇಳಿದ್ದಾರೆ.
ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟವಾಗದೇ ತೀವ್ರ ಗೊಂದಲಕ್ಕೆ ಈಡಾಗಿದ್ದ ಹಾಲಿ ಶಾಸಕರಲ್ಲಿ ಕೆಲವರು ಕಾಯಲೇಬೇಕಾಗಿದೆ.
ಪ್ರಮುಖರೆಂದರೆ ಪಾವಗಡ ಶಾಸಕ ವೆಂಕಟರಮಣಪ್ಪ
ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ, ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ
ಹರಿಹರ ಶಾಸಕ ರಾಮಪ್ಪ, ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ
ಸಿದ್ದರಾಮಯ್ಯಗೆ ಟಿಕೆಟ್ ನೀಡಿದ್ದರಿಂದ ವರುಣಾದಿಂದ ಟಿಕೆಟ್ ಕೈತಪ್ಪಿದ್ದ ಡಾ. ಯತೀಂದ್ರಾಗೂ ಎಲ್ಲಿಂದಲೂ ಟಿಕೆಟ್ ನೀಡಿಕೆ ಆಗಿಲ್ಲ
ನಟ ಸುದೀಪ್ ಬಿಜೆಪಿಯ ಸ್ಟಾರ್ ಕ್ಯಾಂಪೇನರ್
ಬಿಜೆಪಿ ಕಚೇರಿಯಲ್ಲಿ ಸಚಿವ ಸುಧಾಕರ್ ಹೇಳಿಕೆ
ಪಕ್ಷದ ಸ್ಟಾರ್ ಕ್ಯಾಂಪೇನರ್ ಆಗಿಯೇ ಪ್ರಚಾರ ಮಾಡ್ತಾರೆ
ಈಗಾಗಲೇ ಅವರು ಮುಖ್ಯಮಂತ್ರಿ ಗಳಿಗೆ ಬೆಂಬಲ ಘೋಷಣೆ ಮಾಡಿದ್ದಾರೆ
ಅವರು ಎಲ್ಲೆಲ್ಲಿ ಪ್ರಚಾರ ಮಾಡಬೇಕು ಎಂದು ಶೀಘ್ರವೇ ತೀರ್ಮಾನ ಮಾಡ್ತೀವಿ.
ಇನ್ನೂ ಹಲವು ಸ್ಟಾರ್ ನಟರು ಪ್ರಚಾರಕ್ಕೆ ಬಂದರೆ ಸ್ವಾಗತ ಎಂದ ಸುಧಾಕರ್
ಕಾಂಗ್ರೆಸ್ ಟಿಕೆಟ್ ಎರಡನೇ ಪಟ್ಟಿ ಬಿಡುಗಡೆ ಹಿನ್ನಲೆ
ಚಿತ್ರದುರ್ಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಘುಆಚಾರ್ ಅಸಮಾಧಾನ
ಜಿಲ್ಲಾ ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ಭಿನ್ನಮತ ಸ್ಪೋಟ
ಚಿತ್ರದುರ್ಗದಲ್ಲಿ 2 ಬಾರಿ MLC ಆಗಿದ್ದ ರಘು ಆಚಾರ್
ನಟ ದೊಡ್ಡಣ್ಣನ ಅಳಿಯ ಕೆಸಿ ವೀರೇಂದ್ರ ಪಪ್ಪಿಗೆ ಕೈ ಟಿಕೆಟ್ ಘೋಷಣೆ
ರುಘುಆಚಾರ್ ಪರ ನಿಂತಿದ್ದ ಸಿದ್ದರಾಮಯ್ಯ, ಜಿ. ಪರಮೇಶ್ವರ್
ತರೀಕೆರೆ ಕ್ಷೇತ್ರಕ್ಕೆ ಗೋಪಿಕೃಷ್ಣಗೆ ಟಿಕೆಟ್ ಘೋಷಣೆ ಮಾಡದಿದ್ದಕ್ಕೆ ಆಕ್ರೋಶ
ಮಡಿವಾಳ ಸಮುದಾಯದ ಸ್ವಾಮೀಜಿ, ಶಿವಯೋಗಾನಂದಪುರಿ, ಸಂಘದ ರಾಜ್ಯಾಧ್ಯಕ್ಷ ಸಿ ನಂಜಪ್ಪ, ಮುಖಂಡ ರಿಂದ ಸುದ್ದಿಗೋಷ್ಠಿ
ಸಂಘದ ಅಧ್ಯಕ್ಷ ಸಿ ನಂಜಪ್ಪ ಹೇಳಿಕೆ
ಸಮುದಾಯದ ಮುಖಂಡ ಗೋಪಿಕೃಷ್ಣಗೆ ಟಿಕೆಟ್ ನೀಡದೆ ಇದ್ದರೆ ಕಾಂಗ್ರೆಸ್ ವಿರುದ್ಧ ಕೆಲಸ ಮಾಡೋದಾಗಿ ಎಚ್ಚರಿಕೆ
ಶಿರಹಟ್ಟಿ ಮೀಸಲು ಕ್ಷೇತ್ರದ ಟಿಕೆಟ್ ಪೆಂಡಿಂಗ್
ಶಿರಹಟ್ಟಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣ
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೆಸ್ರು ಇದ್ರೂ ಘೋಷಣೆ ಪೆಂಡಿಂಗ್ ಗೆ ಆಕ್ರೋಶ
ರಾಯಚೂರ ಮೂಲದ ಅಂಬಣ್ಣ ಹೆಸರು ಎಂಟ್ರಿಗೆ ಶಿರಹಟ್ಟಿ ಕ್ಷೇತ್ರದ ಜನರು ಕಿಡಿ
ಗೋ ಬ್ಯಾಕ್ ಅಂಬಣ್ಣ ಚಳುವಳಿ
ಶಿರಹಟ್ಟಿ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಲ್ಲಿ ಪ್ರತಿಭಟನೆ
ಗೋ ಬ್ಯಾಕ್ ಗೋ ಬ್ಯಾಕ್ ಅಂಬಣ್ಣಾ ಗೋ ಬ್ಯಾಕ್ ಅಂತ ಘೋಷಣೆ ಕೂಗಿ ಆಕ್ರೋಶ
ಹುಬ್ಬಳ್ಳಿಯ ಉಣಕಲ್ ನ ಸಿದ್ದಪ್ಪಜ್ಜನ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರೋ ಕಾರ್ಯಕ್ರಮ
ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್
ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಶಂಕರ ಪಾಟೀಲ್ ಮುನೇನಕೊಪ್ಪ ಹಾಗೂ ಶಾಸಕ ಅರವಿಂದ್ ಬೆಲ್ಲದ್ ಸಾಥ್
ಬಣಜಿಗ ಸಮುದಾಯವನ್ನ 2 ಡಿ ಗೆ ಸೇರಿಸಿದ್ದಕ್ಕೆ ಸಿಎಂಗೆ ಸನ್ಮಾನ.
ಗುಡ್ಡೆಹಳ್ಳಿ ಕೆಂಚಪ್ಪನ ಆಣೆಯಾಗು ಕಡೂರಲ್ಲಿ ಕಾಂಗ್ರೆಸ್ ಸೋಲುತ್ತೆ
ದತ್ತಣ್ಣಂಗೆ ಟಿಕೆಟ್ ಕೊಡ್ಲಿಲ್ಲ ಅಂದ್ರೆ ಕಡೂರಲ್ಲಿ ಕಾಂಗ್ರೆಸ್ ಸೋಲುತ್ತೆ
ಕಡೂರು ಕ್ಷೇತ್ರದಲ್ಲಿ ವೈ ಎಸ್ ವಿ ದತ್ತಾಗೆ ಕೈ ಟಿಕೆಟ್ ತಪ್ಪಿದ ಹಿನ್ನೆಲೆ
ದತ್ತ ಅಭಿಮಾನಿಗಳಿಂದ ಮತ್ತೆ ಜೆಡಿಎಸ್ ಗೆ ಬರುವಂತೆ ಒತ್ತಾಯ
ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಆಡಿಯೋ ವೈರಲ್
ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ಸಂತೋಷ ಲಾಡ್‌ಗೆ ಮಣೆ ಹಾಕಿದ ಕೈ ಹೈಕಮಾಂಡ್
ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಕ್ಷೇತ್ರದಲ್ಲಿ ಸಂಭ್ರಮಾಚರಣೆ
ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಪಟಾಕಿ ಸಿಡಿಸಿ ವಿಜಯೋತ್ಸವ ಮಾಡಿದ ಕಾರ್ಯಕರ್ತರು
ಮಾಜಿ ಸಚಿವ ಸಂತೋಷ ಲಾಡ್ ಮತ್ತು ಮಾಜಿ ವಿಧಾನ ಪರಿಷತ್ ನಾಗರಾಜ್ ಛಬ್ಬಿ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿತ್ತು
ಕೊನೆ ಘಳಿಗೆಯಲ್ಲಿ ಸಂತೋಷ ಲಾಡ್‌ಗೆ ಟಿಕೆಟ್ ನೀಡಿದ ಕಾಂಗ್ರೆಸ್ ಹೈಕಮಾಂಡ್
ಈ ಹಿನ್ನಲೆಯಲ್ಲಿ ಸಂಭ್ರಮಾಚರಣೆ.
ಗುಂಡ್ಲುಪೇಟೆ ಬಿಜೆಪಿ ಶಾಸಕ ನಿರಂಜನಕುಮಾರ್‌ಗೆ ಬಂಡಾಯದ ಬಿಸಿ!
ಶಾಸಕ ನಿರಂಜನಕುಮಾರ್ ವಿರುದ್ಧ ಸೆಡ್ಡು ಹೊಡೆಯಲು ಮುಂದಾದ ಚಾಮುಲ್ ನಿರ್ದೇಶಕ ಎಂ.ಪಿ.ಸುನೀಲ್
ಕಂದೇಗಾಲ ಪಾರ್ವತಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ ಎಂ.ಪಿ.ಸುನೀಲ್
ನೂರಾರು ಬೆಂಬಲಿಗರೊಂದಿಗೆ ಪ್ರಚಾರ ಆರಂಭ
ಟಿಕೆಟ್ ಸಿಗದಿದ್ದರೆ ಬಂಡಾಯವಾಗಿ ಸ್ಪರ್ಧಿಸುವ ಮುನ್ಸೂಚನೆ ನೀಡಿದ ಎಂ.ಪಿ.ಸುನೀಲ್
ಹಾಲಿ ಶಾಸಕ ನಿರಂಜನಕುಮಾರ್‌ಗೆ ಸ್ವಪಕ್ಷದ ಮುಖಂಡನಿಂದಲೇ ಬಂಡಾಯ ಎದುರಿಸುವ ಸ್ಥಿತಿ
ಇಕ್ಬಾಲ್ ಅನ್ಸಾರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಹಿನ್ನೆಲೆ
ಟಿಕೆಟ್ ವಂಚಿತ ಹೆಚ್.ಆರ್ ಶ್ರೀನಾಥ್ ಅಸಮಾಧಾನ
ಟಿಕೆಟ್ ಮಿಸ್ ಆಗಿದ್ದಕ್ಕೆ ಬೇಸರವಿದೆ
ಮುಂದೆ ಬೆಂಬಲಿಗರ ಸಭೆ ಕರೆದು ತೀರ್ಮಾನ
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾಜಿ ಎಂಎಲ್ಸಿ ಹೆಚ್.ಆರ್ ಶ್ರೀನಾಥ್ ಹೇಳಿಕೆ
ಇನ್ನು ಸಮಯ ಇದೆ, ಹೈಕಮಾಂಡ್ ಅಭ್ಯರ್ಥಿ ಬದಲಾವಣೆ ಮಾಡಬೇಕು.
ಗಂಗಾವತಿ ಬದಲಿಗೆ ರಾಯಚೂರು ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಅಭ್ಯರ್ಥಿ ಘೋಷಣೆ ಮಾಡಲಿ
ರಾಯಚೂರುನಲ್ಲಿ ಅಲ್ಪಸಂಖ್ಯಾತ ಸಮುದಾಯ ಮತಗಳು ಸಾಕಷ್ಟಿವೆ