ರಾಜ್ಯದ ಪ್ರಮುಖ ಮೂರು ಪಕ್ಷಗಳ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಇಂದು ರಾಜ್ಯ ರಾಜಕೀಯದಲ್ಲಿ (Karnataka Politics) ಏನೆಲ್ಲಾ ಬೆಳವಣಿಗೆ ಆಗುತ್ತಾ ಎಂಬುದರ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಶ್ರೀನಿವಾಸಪುರದಲ್ಲಿ ಹೊಡಿ ಬಡಿ ರಾಜಕೀಯ ಶುರುವಾಗಿದೆ
ರಮೇಶ್ ಕುಮಾರ್, ವೆಂಕಟಶಿವಾರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದೆ
ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಮುಖಂಡರಿಂದ ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ
ಗಾಯಾಳುಗಳಿಗೆ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ತುಮಕೂರು ಎಸ್.ಆರ್ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಜೆಡಿಎಸ್ ಗೆ ಆಘಾತ ಎದುರಾಗಿದೆ
ಜೆಡಿಎಸ್ ನಲ್ಲಿದ್ದುಕೊಂಡೆ ಗುಬ್ಬಿ ಶ್ರೀನಿವಾಸ್ಗೆ ಬಾಹ್ಯ ಬೆಂಬಲಕ್ಕೆ ಪಟ್ಟಣ ಪಂಚಾಯತ್ ಸದಸ್ಯರು ಮುಂದಾಗಿದ್ದಾರೆ
ಜೆಡಿಎಸ್ ಪಕ್ಷದ 9 ಸದಸ್ಯರು ಎಸ್.ಆರ್ ಶ್ರೀನಿವಾಸ್ ಗೆ ಬಾಹ್ಯ ಬೆಂಬಲ ಸೂಚಿಸಿದ್ದಾರೆ
ನಮಗೆ ಜೆಡಿಎಸ್ ಪಕ್ಷದ ಮೇಲೆ ಅಸಮಾಧಾನ ಇಲ್ಲ
ಕೇವಲ ಗುಬ್ಬಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿರುದ್ಧ ಮಾತ್ರ ಅಸಮಾಧಾನ ಎಂದಿದ್ದಾರೆ
ಹಾಸನ ಟಿಕೆಟ್ ದಂಗಲ್ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ.
ಹೆಚ್.ಡಿ ರೇವಣ್ಣ-ಹೆಚ್.ಡಿ ಕುಮಾರಸ್ವಾಮಿ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ ನಡೀತಿದೆ.
ನಾಳೆ 2ನೇ ಲಿಸ್ಟ್ ಬಿಡುಗಡೆಯಾಗುವ ಸಾಧ್ಯತೆ ಇದೆ.
ಹೀಗಾಗಿಇಬ್ಬರ ನಡುವೆ ಸಂಧಾನಕ್ಕೆ ದೇವೇಗೌಡರು ಯತ್ನಿಸುತ್ತಿದ್ದಾರೆ.
ದೇವೇಗೌಡರು ಸೂಚಿಸಿದವರಿಗೆ ಹಾಸನ ಟಿಕೆಟ್ ನೀಡಲಾಗುತ್ತೆ.
ರಾಜಕೀಯ ಪಕ್ಷಗಳ ಪುಕ್ಕಟ್ಟೆ ನೀಡುವ ಪ್ರಣಾಳಿಕೆ ವಿರುದ್ಧ ನಂಜಾವದೂತ ಸ್ವಾಮೀಜಿ ಕಿಡಿಕಾರಿದ್ದಾರೆ
ಮಂಡ್ಯದ ಮದ್ದೂರಿನಲ್ಲಿ ನಂಜಾವದೂತ ಸ್ವಾಮೀಜಿ ಮಾತನಾಡಿ ರಾಜಕೀಯ ಪಕ್ಷಗಳ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ
ಹಲವು ರಾಜ್ಯಗಳಲ್ಲಿ ಅಗತ್ಯಕ್ಕೆ ಮೀರಿದ ಸಾಲವನ್ನ ಜನಗಳ ಮೇಲೆ ಹೊರೆಸಿದ್ದಾರೆ
ಚೀಪ್ ಪಾಪ್ಯುಲಾರಿಟಿ ಕಾರ್ಯಕ್ರಮಗಳು ಯಾಕೆ ಬೇಕು?
ಸಾಲದ ಸುಳಿಗೆ ಸಿಲುಕುವ ರಾಜ್ಯ ನಮ್ಮದಾಗಬಾರದು ಎಂದು ಹೇಳಿದ್ದಾರೆ.
ಕೋಲಾರ ಜೆಡಿಎಸ್ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಅವರು ಬಂಡಾಯ ಬಾವುಟ ಹಾರಿಸಿದ್ದಾರೆ
ಕೋಲಾರ ಜೆಡಿಎಸ್ ಅಭ್ಯರ್ಥಿ ಸಿ.ಎಂ.ಆರ್ ಶ್ರೀನಾಥ್ ಹಾಗೂ ಸಹೋದರ ಹರೀಶ್ ಅವರು ತಮ್ಮನ್ನು ಪಕ್ಷದಲ್ಲಿ ಕಡೆಗಣನೆ ಮಾಡಿದ ಆರೋಪ
ವೇಮಗಲ್ ಗ್ರಾಮದಲ್ಲಿ ಬೆಂಬಲಿಗರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ ಕುರ್ಕಿ ರಾಜೇಶ್ವರಿ
ಪಕ್ಷದಲ್ಲಿ ಕಡೆಗಣನೆ ಹಿನ್ನಲೆ, ಸಭೆಯಲ್ಲಿ ಆಕ್ರೋಶ ಹೊರಹಾಕಿದ ರಾಜೇಶ್ವರಿ
ನರಸಾಪುರ ಹಾಗೂ ವೇಮಗಲ್ ಹೋಬಳಿ ಮಟ್ಟದಲ್ಲಿ ಪ್ರಭಾವ ಹೊಂದಿರುವ ಕುರ್ಕಿ ರಾಜೇಶ್ವರಿ
ಸಿದ್ದರಾಮಯ್ಯ ಆಪ್ತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮೂಲೆಗುಂಪು ಮಾಡಿದರೆ ಕಷ್ಟ
ಸಿದ್ದರಾಮಯ್ಯರನ್ನ ಕಾಂಗ್ರೆಸ್ ಪಕ್ಷದಲ್ಲಿ ಮೂಲೆ ಗುಂಪು ಮಾಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಇರೋದಿಲ್ಲ
ಹೈಕಮಾಂಡ್‌ಗೆ ಎಚ್ಚರಿಕೆ ಕೊಟ್ಟ ಮಾಜಿ ಸ್ಪೀಕರ್ ಶಾಸಕ ರಮೇಶ್ ಕುಮಾರ್
ಚುನಾವಣಾ ಅಖಾಡಕ್ಕೆ ಈಗಾಗಲೇ ಕಾಂಗ್ರೆಸ್‌ನ 124 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ಕಾಂಗ್ರೆಸ್‌ನ ಮೊದಲ ಪಟ್ಟಿ ರಿಲೀಸ್ ಆಗಿದ್ದು, ಈಗ ಕಾಂಗ್ರೆಸ್ 2ನೇ ಪಟ್ಟಿ ಬಹುತೇಕ ರೆಡಿಯಾಗಿದೆ ಎನ್ನಲಾಗುತ್ತಿದೆ. ಉಳಿದ 100ರಲ್ಲಿ 60 ಹೆಸರುಗಳಿಗೆ ಕಾಂಗ್ರೆಸ್ ಹೈಕಮಾಂಡ್ ಅಂಕಿತ ಹಾಕಿದೆ. ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 124 ಹೆಸರುಗಳನ್ನ ಬಿಡುಗಡೆಗೊಳಿಸಲಾಗಿತ್ತು.
ಚನ್ನಪಟ್ಟಣದ ಇಗ್ಗಲೂರು ಗ್ರಾಮದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ
ಯಾರ ಹೆಸರು ಮುಂಚೂಣಿಯಲ್ಲಿ ಇತ್ತು ಅವರ ಹೆಸರು ಪ್ರಸ್ತಾಪ ಆಗಿದೆ
ನಮ್ಮ ವರಿಷ್ಠರು ಏನು ತೀರ್ಮಾನ ಮಾಡ್ತಾರೆ ನೋಡೋಣ
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿದೆ
ಹಾಗಾಗಿ ಪಕ್ಷ ಸಹ ಟಿಕೆಟ್ ಕೊಡಲಿದೆ
ಮಂಡ್ಯ – ರಾಮನಗರ ಜಿಲ್ಲೆಯಲ್ಲಿ ಯುವಕರು ಪಕ್ಷಕ್ಕೆ ಬರುತ್ತಿದ್ದಾರೆ
ರಾಷ್ಟ್ರೀಯ ಪಕ್ಷಗಳ ನಾಯಕರು ಭೇಟಿ ಮಾಡಲು ಬಯಸಿದ್ದಾರೆಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರ
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಟಾಂಗ್
ಇಂದು ಮರಳಿಯ ಖಾಸಗಿ ಹೋಟೆಲ್ ನಲ್ಲಿ ಬಿಎಲ್ ಸಂತೋಷ್ ಭೇಟಿ
ಶಾಸಕ ಪರಣ್ಣ ಮುನವಳ್ಳಿ, ವಿರುಪಾಕ್ಷಪ್ಪ ಸಿಂಗನಾಳ ಉಪಸ್ಥಿತಿಯಲ್ಲಿ ಭೇಟಿ
ಕಾಂಗ್ರೆಸ್ ನಲ್ಲಿರುವ ಕರಿಯಣ್ಣ ಸಂಗಟಿ
ಗಂಗಾವತಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಹೆಚ್ ಆರ್ ಶ್ರೀನಾಥ್ ಬೆಂಬಲಿಗ ಸಂಗಟಿ
ಕಳೆದ ಬಾರಿ ಜೆಡಿಎಸ್ ನಿಂದ ಗಂಗಾವತಿ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಸಂಗಟಿ
ಹೆಚ್ ಆರ್ ಶ್ರೀನಾಥಗೆ ಕಾಂಗ್ರೆಸ್ ಟಿಕೆಟ್ ತಪ್ಪುವ ಸಾಧ್ಯತೆ
ಕೊಪ್ಪಳದಲ್ಲಿ ಸಂಸದ ಸಂಗಣ್ಣ ಪರವಾಗಿ ಇರುವ ಸಂಗಟಿ
ಸಂಗಟಿ ಸಂತೋಷ್ ಭೇಟಿ ಕುತೂಹಲ
ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರ ಕಾರ್ಯಾಚರಣೆ
ದಾಖಲೆ ರಹಿತ 7,95,000 ರೂಪಾಯಿ ವಶಪಡಿಸಿದ ಪೊಲೀಸರು
ಮಂಗಳೂರು-ಕೇರಳದ ಗಡಿಭಾಗದಲ್ಲಿ ಕಾರು ತಪಾಸಣೆ ವೇಳೆ ಸಿಕ್ಕಿದ ಹಣ
ಉಳ್ಳಾಲ ಠಾಣಾ ಪೊಲೀಸರಿಂದ ತಪಾಸಣೆ ವೇಳೆ ಹಣ ಪತ್ತೆ
ಕಾರು ಮತ್ತು ಹಣವನ್ನು ಚುನಾವಣಾ ಅಧಿಕಾರಿಗಳ ವಶಕ್ಕೆ ನೀಡಿದ ಪೊಲೀಸರು
ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯ ಅಭ್ಯರ್ಥಿಗಳು ಕಣಕ್ಕೆ
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಲಿಸ್ಟ್ ಫೈನಲ್
ಸಚಿವ ಅಶ್ವಥ್ ನಾರಾಯಣ್ ಹಾಗೂ ಯೋಗೇಶ್ವರ್ ಮಾಸ್ಟರ್ ಪ್ಲ್ಯಾನ್ ಏನು..?
ಜಿಲ್ಲೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮಣಿಸಲು ಒಕ್ಕಲಿಗ ಅಸ್ತ್ರ
ಬಿಜೆಪಿ ಬಿಡುತ್ತೇನೆ ಎಂದ ಕಾರ್ಯಕರ್ತನ ಮನವೊಲಿಸಲು MLA ಹರಸಾಹಸ
ದೇವದುರ್ಗ ಶಾಸಕ ಶಿವನಗೌಡ ನಾಯಕ್ ನ ಹರ ಸಾಹಸ
ಕೆ.ಶಿವನಗೌಡ ನಾಯಕ್ ರಾಯಚೂರು ಜಿಲ್ಲೆ ದೇವದುರ್ಗದ ಶಾಸಕ
15 ವರ್ಷದಿಂದ ಪಕ್ಷದಲ್ಲಿದ್ದು ದುಡಿದದ್ದಕ್ಕೆ ನೀವು ಬೆಲೆ ನೀಡಿಲ್ಲ ಎಂದ ಕಾರ್ಯಕರ್ತ
ಆಯ್ತು ಇದೊಂದು ಸಾರಿ ನೋಡಿ, ಪಕ್ಷ ಬಿಡಬೇಡಿ ಎಂದು ಅಂಗಲಾಚಿದ ಶಾಸಕ
ಕಾಫಿನಾಡ ಕಾಂಗ್ರೆಸ್ ನಲ್ಲಿ ನಿಲ್ಲದ ಅಸಮಾಧಾನದ ಕೂಗು
ಎಚ್.ಡಿ.ತಮ್ಮಯ್ಯ ವಿರುದ್ಧ ಮುಂದುವರಿದ ಆಕ್ರೋಶ
ನಿನ್ನೆಯ ಗಲಾಟೆ ಬಳಿಕ ಇಂದು ಮತ್ತೆ ಕಾಂಗ್ರೆಸ್ ಮುಖಂಡರ ಬಹಿರಂಗ ಸಭೆ
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಖರಾಯಪಟ್ಟಣದಲ್ಲಿ ಬಂಡಾಯದ ಸಭೆ
ಆರು ಜನ ಟಿಕೆಟ್ ಆಕಾಂಕ್ಷಿಗಳ ನೇತೃತ್ವದಲ್ಲಿ ಬಹಿರಂಗ ಸಭೆ
ನಮ್ಮ ಆರು ಜನರಲ್ಲೇ ಒಬ್ಬರಿಗೆ ಟಿಕೆಟ್ ಕೊಡಬೇಕು
ಆರು ಜನರಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಒಗ್ಗಟ್ಟಲ್ಲಿ ಕೆಲಸ ಮಾಡೋಣ
ಇಂದಿನ ಸಭೆಯಲ್ಲೂ ಕೂಡ ಹೆಚ್.ಡಿ.ತಮ್ಮಯ್ಯ ವಿರುದ್ಧ ಅಸಮಾಧಾನದ ಹೊಗೆ
ಹೆಚ್.ಡಿ.ತಮ್ಮಯ್ಯ, ಬಿಜೆಪಿ ಏಜೆಂಟ್ ಎಂದು ಆಕ್ರೋಶ
ಸೆಕೆಂಡ್ ಲಿಸ್ಟ್ ಘೋಷಣೆ ಮುನ್ನವೇ ಪ್ರತಿಭಟನೆ ಬಿಸಿ
ಟಿಕೆಟ್ ಗಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಹೈಡ್ರಾಮಾ
ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವಂತೆ ಅಲ್ಪಸಂಖ್ಯಾತರು ಒತ್ತಾಯ
ರಾಯಚೂರು ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ಹೈಡ್ರಾಮಾ
ನೂರಾರು ಸಂಖ್ಯೆಯ ಅಲ್ಪಸಂಖ್ಯಾತರಿಂದ ಘೋಷಣೆ ಕೂಗಿ ಆಕ್ರೋಶ
ಶಿರಹಟ್ಟಿ ಬಿಜೆಪಿಯಲ್ಲಿ ಬಂಡಾಯದ ಬಿಸಿ
ಮಾಜಿ ಶಾಸಕ ಗಂಗಣ್ಣ ಮಾಹಾಂತಶೆಟ್ಟರ್ ನೇತೃತ್ವದಲ್ಲಿ ಬಂಡಾಯ ಸಭೆ
ಲಕ್ಷ್ಮೇಶ್ವರ ಪಟ್ಟಣದ ರಂಭಾಪುರಿ ಸಮುದಾಯ ಭವನದಲ್ಲಿ ನಾಯಕರ ಸಭೆ
ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ಪಟ್ಟಣದ ಅತೃಪ್ತರಿಂದ ಶಕ್ತಿ ಪ್ರದರ್ಶನ
ಕೋರ್ ಕಮಿಟಿ ಸಭೆಯಲ್ಲಿ ಶಾಸಕರ ಹೆಸರು ಮುನ್ನೆಲೆಗೆ ಬಂದಿದ್ದಕ್ಕೆ ನಾಯಕರ ಅಸಮಾಧಾನ
ಹಾಲಿ ಶಾಸಕರಿಗೆ ಟಿಕೆಟ್ ನೀಡದಂತೆ ಒತ್ತಾಯ
ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ರಾಜೀನಾಮೆ
ಶಿರಸಿಯಲ್ಲಿ ಸ್ಪೀಕರ್ ಕಾಗೇರಿ ನಿವಾಸಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ ಶಾಸಕ
ಶೀಘ್ರದಲ್ಲೇ ಅಧಿಕೃತವಾಗಿ ಕಾಂಗ್ರೆಸ್ ಸೇರಲಿರುವ ಶಿವಲಿಂಗೇಗೌಡ
ನಾಮಮಂಗಲ ಬಿಜೆಪಿ ಟಿಕೆಟ್ ಎಲ್ ಆರ್ ಶಿವರಾಮೇಗೌಡಗೆ ಫಿಕ್ಸ್
ರಾಜ್ಯ ನಾಯಕರ ಸಭೆಯಲ್ಲಿ ಶಿವರಾಮೇಗೌಡಗೆ ಟಿಕೆಟ್ ಕೊಡಲು ನಿರ್ಧಾರ
ಈ ಮೂಲಕ ಫೈಟರ್ ರವಿಗೆ ಶಾಕ್ ಕೊಟ್ಟ ಬಿಜೆಪಿ
ಟಿಕೆಟ್ ಕೊಡ್ತೀವಿ ಎಂದು ಫೈಟರ್ ರವಿಯನ್ನು ಪಕ್ಷಕ್ಕೆ ಕರೆದುಕೊಂಡು ಬಂದಿದ್ದ ಸ್ಥಳೀಯ ಬಿಜೆಪಿ ಒಕ್ಕಲಿಗ ನಾಯಕರು
ಆ ನಂತರ ಫೈಟರ್ ರವಿ ಮೂಲಕ ಪಕ್ಷದ ಕೆಲಸವನ್ನು ಮಾಡಿಸಿದ್ದ ನಾಯಕರು
ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಕಾರ್ಯಕ್ರಮಕ್ಕೆ ಜನರನ್ನು ಫೈಟರ್ ರವಿ ಮೂಲಕ ಕರೆ ತಂದಿದ್ದ ನಾಯಕರು
ನಾಯಕರ ವಿಶ್ವಾಸ ಹಿನ್ನೆಲೆ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿ ಕೆಲಸ ಮಾಡ್ತಿರುವ ಫೈಟರ್ ರವಿ
ಇದೀಗ ಶಿವರಾಮೇಗೌಡರ ಎಂಟ್ರಿಯಿಂದ ಫೈಟರ್ ರವಿಗೆ ಕೊಕ್
ಫೈಟರ್ ರವಿ ರೌಢಿ ಶೀಟರ್ ಎಂದು ದೊಡ್ಡದಾಗಿ ವಿವಾದ ಆಗಿ ಪಕ್ಷಕ್ಕೆ ಮುಜುಗರ ಆಗಿದ್ರು ಫೈಟರ್ ರವಿಯನ್ನು ಪಕ್ಷದಲ್ಲಿ ಉಳಿಸಿಕೊಂಡಿದ್ದ ಬಿಜೆಪಿ.
ಶಿರಹಟ್ಟಿ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ
ಹಾಲಿ ಶಾಸಕ ರಾಮಪ್ಪ ಲಮಾಣಿ ವಿರುದ್ಧ ಬಂಡಾಯ ಸಾರಿದ ಬಿಜೆಪಿ ಮುಖಂಡರು, ಕಾರ್ಯಕರ್ತರು
ಗದಗ ಜಿಲ್ಲೆಯ ಶಿರಹಟ್ಟಿ ಮೀಸಲು ಕ್ಷೇತ್ರ
ಇಂದು ಲಕ್ಷ್ಮೇಶ್ವರ ಪಟ್ಟಣದ ರಂಭಾಪುರೀ ಸಮುದಾಯ ಭವನದಲ್ಲಿ ಸಭೆ
ಬಿಜೆಪಿ ಮುಖಂಡರು, ಕಾರ್ಯಕರ್ತರ ಸಭೆ
ಶಾಸಕ ರಾಮಣ್ಣ ಲಮಾಣಿ ಬಿಟ್ಟು ಬೇರೆ ಯಾರಿಗಾದ್ರೂ ಟಿಕೆಟ್ ಕೊಟ್ರೆ ಓಕೆ
ಇಲ್ಲಾಂದ್ರೆ ಬಂಡಾಯ ಅಭ್ಯರ್ಥಿ ಕಣಕ್ಕೆ ಇಳಿಸಲು ನಿರ್ಧಾರ ಸಾಧ್ಯತೆ
ಶಿರಹಟ್ಟಿ ಕ್ಷೇತ್ರದ ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ ಸಾವಿರಾರು ಕಾರ್ಯಕರ್ತರು ಭಾಗಿ ಸಾಧ್ಯತೆ