Karnataka Assembly Elections: ರಾಜ್ಯ ಚುನಾವಣೆಯಲ್ಲಿ ಈ 6 ಕ್ಷೇತ್ರಗಳ ಮೇಲೆ ಎಲ್ಲರ ಚಿತ್ತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ ಚುನಾವಣೆಗೆ ಕೌಂಟ್​ಡೌನ್​ ಸ್ಟಾರ್ಟ್​ ಆಗಿದೆ. ಹೀಗಿರುವಾಗ ಚುನಾವಣಾ ಕಣದಲ್ಲಿ ಭಾರೀ ಕುತೂಹಲ ಮೂಡಿಸಿರುವ ಕ್ಷೇತ್ರಗಳ ಪಟ್ಟಿ ಇಲ್ಲಿದೆ ನೋಡಿ

  • Trending Desk
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು(ಮೇ.08): ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ (Karnataka Assembly Elections) ಕೇವಲ 2 ದಿನಗಳು ಬಾಕಿ ಇವೆ. ಭಾರತೀಯ ಜನತಾ ಪಕ್ಷ (ಬಿಜೆಪಿ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Congress) ಮತ್ತು ಜನತಾ ದಳ (ಜಾತ್ಯತೀತ) 224 ಸದಸ್ಯ ಸ್ಥಾನಗಳನ್ನು ಗೆಲ್ಲಲು ಬಿರುಸಿನ ಪ್ರಚಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿವೆ. ಕರ್ನಾಟಕದಲ್ಲಿ (Karnataka )ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಪ್ರಚಾರವು ಸೋಮವಾರ ಅಂತ್ಯಗೊಳ್ಳಲಿದ್ದು, ರಾಜ್ಯದ ಎಲ್ಲಾ ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮತದಾರರನ್ನು ಸೆಳೆಯಲು ತಮ್ಮ ಕೊನೆಯ ಪ್ರಚಾರವನ್ನು ನಡೆಸುತ್ತಿವೆ.


ಆಡಳಿತಾರೂಢ ಭಾರತೀಯ ಜನತಾ ಪಕ್ಷವು 38 ವರ್ಷಗಳ ಪರ್ಯಾಯ ಸರ್ಕಾರವನ್ನು ಮುರಿಯಲು ಮತ್ತು ತನ್ನ ದಕ್ಷಿಣದ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದು, ಎಲ್ಲಾ ಪ್ರಮುಖ ಪಕ್ಷಗಳ ಪ್ರಮುಖರು ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಚುನಾವಣಾ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.


ಕಾಂಗ್ರೆಸ್ ಪಕ್ಷವು ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ, ಕಾಂಗ್ರೆಸ್ ಪಕ್ಷವು 2024 ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲ್ಲು ಹೆಚ್ಚು ಅಗತ್ಯವಾದ ತಂತ್ರವನ್ನು ಚಾಣಕ್ಯತೆಯಿಂದ ಬಳಸುತ್ತಿದ್ದು ನಾವು ಗೆದ್ದೆ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿದೆ.


ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನೇತೃತ್ವದ ಜೆಡಿ (ಎಸ್) ಪ್ರಚಾರದಲ್ಲಿ ತೊಡಗಿದ್ದು, ಸರ್ಕಾರ ರಚಿಸಲು ಬೇಕಾದ ಸಂಖ್ಯಾಬಲವನ್ನು ಪಡೆಯುವ ನಿರೀಕ್ಷೆಯಲ್ಲಿ, "ಕಿಂಗ್ ಮೇಕರ್" ಬದಲಿಗೆ "ಕಿಂಗ್" ಆಗಿ ಹೊರಹೊಮ್ಮುವ ಭರವಸೆಯಲ್ಲಿದೆ.


ಕರ್ನಾಟಕ ಚುನಾವಣೆ: ನಿರ್ಣಾಯಕ ಕ್ಷೇತ್ರಗಳು:


ವರುಣಾ:


ವರುಣಾ ಕ್ಷೇತ್ರವು ಸಾಕಷ್ಟು ಕುತೂಹಲ ಕೆರಳಿಸಿದ ಕ್ಷೇತ್ರವಾಗಿದೆ.ಕಾಂಗ್ರೆಸ್ ನಿಂದ ಪ್ರಬಲ ಸ್ಪರ್ಧಿಯಾಗಿ ಸಿದ್ಧರಾಮಯ್ಯನವರು ನಿಂತಿದ್ದರೆ ಅತ್ತ ಬಿಜೆಪಿಯಿಂದ ವಿ.ಸೋಮಣ್ಣ ಅವರು ಸಿದ್ಧರಾಮಯ್ಯನವರ ತೊಡೆ ಕಟ್ಟಿನಿಂತಿದ್ದಾರೆ. ಇಬ್ಬರೂ ಪ್ರಭಾವಿ ನಾಯಕರಾಗಿದ್ದು ವರುಣಾ ಹೈ ವೊಲ್ಟೇಜ್ ಕ್ಷೇತ್ರವಾಗಿ ಹೊರಹೊಮ್ಮಿದೆ.


ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯನವರು ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಚರ್ಚೆಯಲ್ಲಿವೆ, ಸೋಮಣ್ಣ ಅವರು ಲಿಂಗಾಯತ ಮತದೊಂದಿಗೆ ಗೆಲ್ಲುವ ವಿಶ್ವಾಸವನ್ನು ಹೊಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಮೈಸೂರು ಜಿಲ್ಲೆಯ ಲಿಂಗಾಯತ ಮತದಾರರನ್ನು ಮನವೊಲಿಸಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ.


ಇದನ್ನೂ ಓದಿ: Shobha Karandlaje: ಸೋನಿಯಾ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ: ಶೋಭಾ ಕರಂದ್ಲಾಜೆ

 ವರುಣಾ ಕ್ಷೇತ್ರದಲ್ಲಿ ಬಿಜೆಪಿಯ ಸೋಮಣ್ಣ ಅವರನ್ನು ಒಕ್ಕಲಿಗರು ಮತ್ತು ಲಿಂಗಾಯತರ ನಡುವಿನ ಸೇತುವೆ ಎಂದು ಪರಿಗಣಿಸಲಾಗಿದೆ. ಮತ್ತೊಂದೆಡೆ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಮನೆಮಾತಾಗಿದ್ದು, ವರುಣಾದಲ್ಲಿ ಡಾಕ್ಟರ್ ಎಂದೇ ಜನಪ್ರಿಯರಾಗಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಈ ಕ್ಷೇತ್ರದಲ್ಲಿ ಜೆಡಿಎಸ್‌ ಮರೆಯಾಗಿದೆ.

ಕನಕಪುರ:


ಕನಕಪುರದಲ್ಲಿ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ರಾಜ್ಯ ಕಂದಾಯ ಸಚಿವ ಆರ್ ಅಶೋಕ ನಡುವಿನ ಫೈಟ್ ಕರ್ನಾಟಕದಲ್ಲಿ ಭುಗಿಲೆದ್ದಿದೆ.


ಕಾಂಗ್ರೆಸ್ ನ ಶಿವಕುಮಾರ್ ಅವರ ಭದ್ರಕೋಟೆಯಲ್ಲಿ ಬಿಜೆಪಿಯ ಪ್ರಮುಖ ಒಕ್ಕಲಿಗ ಮುಖ ಅಶೋಕ ಅವರನ್ನು ಕೇಸರಿ ಪಕ್ಷವು ಕಾಂಗ್ರೆಸ್ ಲೀಡರ್ ಅನ್ನು ಎದುರಿಸಲು ಕಣಕ್ಕೆ ಇಳಿಸಿದೆ.


ಕನಕಪುರದ ದೇವೇಗೌಡರು ಎಂದು ಕರೆಯಲ್ಪಡುವ ಶಿವಕುಮಾರ್ ಅವರು ವ್ಯಾಪಕ ಆಕರ್ಷಣೆಯನ್ನು ಹೊಂದಿರುವ ಅತ್ಯಂತ ಸಕ್ರಿಯ ನಾಯಕರಾಗಿದ್ದಾರೆ. ಅವರು ಒಕ್ಕಲಿಗ ಮತ್ತು ಲಿಂಗಾಯತ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಾರೆ.


ಆರ್ ಅಶೋಕ್, ಪಕ್ಷದ ಉನ್ನತ ಒಕ್ಕಲಿಗ ನಾಯಕನಾಗಿ ತಮ್ಮ ಇಮೇಜ್ ರಚಿಸಿಕೊಂಡಿದ್ದಾರೆ. 2008 ರಲ್ಲಿ ಬಿಜೆಪಿ ಮೊದಲ ಪೂರ್ಣ ಬಹುಮತದ ಕರ್ನಾಟಕ ಸರ್ಕಾರವನ್ನು ರಚಿಸಿದಾಗ, ಅಶೋಕ ಯಡಿಯೂರಪ್ಪನವರ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ಅವರು 2004 ರಲ್ಲಿ ಉತ್ತರಹಳ್ಳಿಯ ಕ್ಷೇತ್ರವನ್ನು 84,000 ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು.


ಚನ್ನಪಟ್ಟಣ:


ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವು ಪ್ರಸ್ತುತ ಬಿಜೆಪಿಯ ಯೋಗೇಶ್ವರ್, ಕಾಂಗ್ರೆಸ್ಸಿನ ಎಸ್. ಗಂಗಾಧರ್ ಜೆಡಿಎಸ್ ಮುಖ್ಯಸ್ಥ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ನಡುವಿನ ಯುದ್ದವಾಗಿದೆ.


JD(S) ಬಹುಮತದ ಸರ್ಕಾರಕ್ಕಾಗಿ ಮತಗಳನ್ನು ಗೆಲ್ಲುವ ಸಾಧ್ಯತೆಯಿಲ್ಲದಿದ್ದರೂ, ಅದು ಕಿಂಗ್‌ಮೇಕರ್ ಆಗಬಹುದು. 2004ರಿಂದ ಸೋಲಿಲ್ಲದ ಸರದಾರರಾಗಿರುವ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ.


ಶಿಗ್ಗಾಂವಿ:


ಶಿಗ್ಗಾಂವಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ಥಾನವಾಗಿದ್ದು, ಕಾಂಗ್ರೆಸ್‌ಗೆ ಬೇಕಾದ ಮತ್ತು ಅಪೇಕ್ಷೆಯಿರುವ ಕ್ಷೇತ್ರವಾಗಿದೆ. ಆದರೆ, ಮೃದುಭಾಷಿ, ಸ್ಪಷ್ಟತೆಯ ನಾಯಕ ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ, ಕರ್ನಾಟಕದಲ್ಲಿ ಅಧಿಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದ ಆರೋಪಗಳಿಂದ ಅವರ ಹೆಸರು ಸ್ವಲ್ಪಮಟ್ಟಿಗೆ ಹಾಳಾಗಿದೆ.


z


ಶಿಕಾರಿಪುರ:


ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ, ಕ್ಷೇತ್ರ ಶಿಕಾರಿಪುರದಲ್ಲಿ ಕುತೂಹಲ ಮೂಡಿಸಿದ್ದು, ಮಾಜಿ ಸಿಎಂ ಈ ವರ್ಷ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಸ್ಥಾನಕ್ಕೆ ಈಗ ಅವರ ಪುತ್ರ ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪರ್ಧಿಸಲಿದ್ದು, ಶಿಕಾರಿಪುರಿ ಕ್ಷೇತ್ರಕ್ಕೆ ಕಾಂಗ್ರೆಸ್, ಜಿಬಿ ಮಾಲತೇಶ್ ಅವರನ್ನು ಕಣಕ್ಕಿಳಿಸಿದೆ.




ಚಿಕ್ಕಮಗಳೂರು


ಚಿಕ್ಕಮಗಳೂರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಸಾಂಪ್ರದಾಯಿಕ ಸ್ಥಾನ. 2004 ರಿಂದ ಈ ಕ್ಷೇತ್ರವನ್ನು ಬಿಜೆಪಿ ಗೆಲ್ಲುತ್ತ ಬಂದಿದ್ದು ಈ ಬಾರಿ ಕಾಂಗ್ರೆಸ್ ಗೆಲ್ಲುವ ನಿರೀಕ್ಷೆ ಹೊಂದಿದ್ದು ಎಚ್‌ಡಿ ತಮ್ಮಯ್ಯ ಅವರನ್ನು ಕಣಕ್ಕಿಳಿಸಿದೆ.


ಕಳೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಿ.ಎಂ.ತಿಮ್ಮ ಶೆಟ್ಟಿ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ.

top videos
    First published: