• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Dhruva Sarja Election Campaign: ಪಕ್ಷೇತರ, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪರ ಧ್ರುವ ಸರ್ಜಾ ಪ್ರಚಾರ! ಈ ಬಗ್ಗೆ 'ಪೊಗರು' ನಟ ಹೇಳಿದ್ದೇನು?

Dhruva Sarja Election Campaign: ಪಕ್ಷೇತರ, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪರ ಧ್ರುವ ಸರ್ಜಾ ಪ್ರಚಾರ! ಈ ಬಗ್ಗೆ 'ಪೊಗರು' ನಟ ಹೇಳಿದ್ದೇನು?

ನಟ ಧ್ರುವ ಸರ್ಜಾ ಪ್ರಚಾರ

ನಟ ಧ್ರುವ ಸರ್ಜಾ ಪ್ರಚಾರ

ಅರಕಲಗೂಡು ಪಕ್ಷೇತರ ಅಭ್ಯರ್ಥಿ ಕೃಷ್ಣೇಗೌಡ 1000ಕ್ಕೂ ಹೆಚ್ಚು ಗೋವುಗಳ ಸಾಕ್ತಿದ್ದಾರೆ. ಈ ಒಂದು ಕಾರಣಕ್ಕೆ ನಾನು ಕೃಷ್ಣೇಗೌಡ ಪರ ಪ್ರಚಾರಕ್ಕೆ ಹೋಗಿದ್ದೆ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಬಾಬು ಅವರ ಪ್ರಚಾರಕ್ಕೆ ಹೋಗಲು ಒಂದು ಕಾರಣ ಇದೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಪದ್ಮನಾಭ ನಗರದಲ್ಲಿ (Padmanabhanagar ) ಸಚಿವ ಆರ್​. ಅಶೋಕ್ (R Ashok) ಪರ ನಟ ಧ್ರುವ ಸರ್ಜಾ (Dhruva Sarja) ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ನ್ಯೂಸ್​ 18 ಕನ್ನಡದೊಂದಿಗೆ ಮಾತನಾಡಿದ ಧ್ರುವ ಸರ್ಜಾ ಅವರು 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections) ತಾವು ಪಕ್ಷೇತ್ರರ, ಕಾಂಗ್ರೆಸ್ (Congress)​ ಮತ್ತು ಬಿಜೆಪಿ (BJP) ಅಭ್ಯರ್ಥಿ ಪರ ಪ್ರಚಾರ ನಡೆಸಲು ಕಾರಣವೇನು ಎಂದು ತಿಳಿಸಿದ್ದಾರೆ. ನಾವು ಎಲ್ಲಾ ಗೋಮಾತೆ ಅಂದರೆ ಪೂಜಿಸ್ತೀವಿ, ರಕ್ಷಿಸ್ತೀವಿ. ಅರಕಲಗೂಡು ಪಕ್ಷೇತರ ಅಭ್ಯರ್ಥಿ ಕೃಷ್ಣೇಗೌಡ ಅವರು 1,000 ಕ್ಕೂ ಹೆಚ್ಚು ಗೋವುಗಳ ಸಾಕುತ್ತಿದ್ದಾರೆ. ಈ ಒಂದು ಕಾರಣಕ್ಕೆ ನಾನು ಕೃಷ್ಣೆಗೌಡ ಪರ ಪ್ರಚಾರಕ್ಕೆ ಹೋಗಿದ್ದೆ ಎಂದು ತಿಳಿಸಿದ್ದಾರೆ.


ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಬಾಬು ಪರ ಪ್ರಚಾರ!


ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಬಾಬು ಅವರ ಪರ ಹೋಗಲು ಕಾರಣವೇನು ಅಂತ ತಿಳಿಸಿದ ಧ್ರುವ ಸರ್ಜಾ ಅವರು, ಮೋಹನ್ ಬಾಬು ಅವರ ಪರ ಪ್ರಚಾರಕ್ಕೆ ಹೋಗೋದಕ್ಕೂ ಒಂದು ರೀಸನ್ ಇದೆ.


ಇದನ್ನೂ ಓದಿ: Karnataka Elections: ‘ಸಿದ್ದು ಸೋಲಿಗೆ ಕಾಂಗ್ರೆಸ್​ನಲ್ಲೇ ಹುನ್ನಾರ!’ ನ್ಯೂಸ್​​18ಗೆ ಅಶ್ವಥ್ ನಾರಾಯಣ್ ಸ್ಫೋಟಕ ಹೇಳಿಕೆ


ನಮ್ಮ ಮನೆ ಬಳಿ ಸಾಕಷ್ಟು ಬಡ ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ಮನೆ ಬಳಿ ಬರುತ್ತಾರೆ. ನಿಮ್ಮದು ಎಜ್ಯುಕೇಶನ್ ಟ್ರಸ್ಟ್ ಇದೇ ನೀವು ಅವರಿಗೆ 15 ಫ್ರೀ ಸೀಟ್ ಕೊಡುತ್ತೀರಾ ಅಂತೆ ಕೇಳ್ದೆ, ಅವರು ಓಕೆ ಅಂದ್ರು ಆಗ ನಾನು ಆ ಪಕ್ಷ ನೋಡದೆ ಇದ್ದರೆ ಸಣ್ಣತನ ಆಗುತ್ತೆ. ಆ ಕಾರಣದಿಂದ ನಾನು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋದೆ ಎಂದು ತಿಳಿಸಿದರು.
ಇನ್ನು, ಬಿಜೆಪಿ ಅಭ್ಯರ್ಥಿ ಮುನಿರಾಜು ಅವರ ಪರ ಪ್ರಚಾರಕ್ಕೆ ಹೋಗಿದ್ದೆ. ನನ್ನ ಅಭಿಮಾನಿಗಳಿಗಾಗಿ ನಾನು ಅವರ ಪರ ಪ್ರಚಾರಕ್ಕೆ ಹೋಗಿದ್ದೆ. ನನ್ನನ್ನುಈ ಸ್ಥಾನಕ್ಕೆ ತಂದು ಕೂರಿಸಿದ್ದಾರೆ. ಅದಕ್ಕೆ ಜನರೇ ಕಾರಣ ಅವರಿಗೆ ಏನಾದರೂ ಮಾಡಲು ಸಹಾಯ ಆಗುತ್ತೆ ಅಂದರೆ ನಾನು ಏನಾದರೂ ಮಾಡ್ತೀನಿ.
ನನ್ನ ವಿಐಪಿಗಳಿಗೆ ನಾನು ಏನು ಅಂತ ಸ್ಪಷ್ಟವಾಗಿ ಗೊತ್ತಿದೆ. ಅವರಿಗೆ ನಾನು ಇದರ ಬಗ್ಗೆ ವಿವರಣೆ ನೀಡುವ ಅಗತ್ಯವಿಲ್ಲ ಅನ್ನೋದು ನನ್ನ ಭಾವನೆ. ಆದ್ದರಿಂದ ನಾನು ಯಾರಿಗೆ ಬೆಂಬಲ ನೀಡುತ್ತಿನಿ ಅವರಿಗೆ ಗೊತ್ತಿದೆ. ಅವರಿಗೆ ಯಾವುದೇ ಕಾರಣಕ್ಕೂ ಬೇಜಾರು ಆಗೋದಿಲ್ಲ ಎಂದು ತಿಳಿಸಿದರು.

First published: