• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • 2023 ಕರ್ನಾಟಕ ಚುನಾವಣೆ: ತಾಯಿ ನಿಧನರಾದರೂ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಕಾನ್ಸ್​​ಸ್ಟೇಬಲ್​​!

2023 ಕರ್ನಾಟಕ ಚುನಾವಣೆ: ತಾಯಿ ನಿಧನರಾದರೂ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಕಾನ್ಸ್​​ಸ್ಟೇಬಲ್​​!

ಕಾನ್ಸ್ ಸ್ಟೇಬಲ್ ಅಶೋಕ

ಕಾನ್ಸ್ ಸ್ಟೇಬಲ್ ಅಶೋಕ

ನಮ್ಮನ್ನು ತಾಯಿ ಜೋಪಾನ ಮಾಡಿದ್ದಂತೆ ಈಗ ನಮ್ಮ ಇಲಾಖೆ ನಮ್ಮನ್ನು ನೋಡಿಕೊಳ್ಳುತ್ತಿದೆ. ಆದ್ದರಿಂದ ಮತ್ತೆ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದು ಅಶೋಕ ಅವರು ತಿಳಿಸಿದ್ದಾರೆ.

  • News18 Kannada
  • 5-MIN READ
  • Last Updated :
  • Gadag, India
  • Share this:

ಗದಗ: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election) ಮತದಾನಕ್ಕೆ (Voting) ಕೌಂಟ್​ಡೌನ್​ ಶುರುವಾಗಿದೆ. ಈಗಾಗಲೇ ಚುನಾವಣಾ ಆಯೋಗದ (Election Commission) ಅಧಿಕಾರಿಗಳು ಸಿಬ್ಬಂದಿಗೆ ಮತಯಂತ್ರ ಸೇರಿದಂತೆ ಅಗತ್ಯ ವಸ್ತುಗಳನ್ನು ಹಸ್ತಾಂತರ ಮಾಡಿದ್ದು, ಮತಕೇಂದ್ರದತ್ತ ಸಿಬ್ಬಂದಿಗಳು (Staff) ಆಗಮಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿಅಧಿಕಾರಿಗಳು ಸೇರಿದಂತೆ ಪೊಲೀಸ್ (Police)​ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ತಾಯಿ (Mother) ನಿಧನರಾದರೂ ಪೊಲೀಸ್​ ಕಾನ್ಸ್​​ಸ್ಟೇಬಲ್​ ಕೆಲಸಕ್ಕೆ ಹಾಜರಾಗಿ ಕರ್ತವ್ಯ ಪ್ರಜ್ಞೆಮೆರೆದಿದ್ದಾರೆ. ಈ ಘಟನೆ ಗದಗದ (Gadaga) ಬೆಟಗೇರಿ ಬಡಾವಣೆ ಪೊಲೀಸ್​ ಠಾಣೆಯಲ್ಲಿ ನಡೆದಿದೆ.


ಕಾನ್ಸ್ ಸ್ಟೇಬಲ್ ಕಾರ್ಯಕ್ಕೆ ಹಿರಿಯ ಅಧಿಕಾರಿಗಳ ಮೆಚ್ಚುಗೆ


ಬೆಟಗೇರಿ ಬಡಾವಣೆ ಠಾಣೆಯ ಪೊಲೀಸ್ ಕಾನ್ಸ್ ಸ್ಟೇಬಲ್ ಅಶೋಕ ಅವರ ತಾಯಿ ಶಂಕ್ರಮ್ಮ ಗದಗ (78) ಅವರು ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ನಿನ್ನೆ ರಾತ್ರಿಯೇ ತಾಯಿ ಅವರ ಅಂತ್ಯಕ್ರಿಯೆ ನಡೆಸಿದ ಅಶೋಕ ಅವರು ಇಂದು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.


ಇದನ್ನೂ ಓದಿ: 2023 Karnataka Elections: ಮತದಾನ ಮಾಡಿದವರಿಗೆ ಊಟ ಫ್ರೀ ಎಂದವರಿಗೆ ಶಾಕ್​! ಕ್ರಮಕ್ಕೆ ಮುಂದಾದ ಚುನಾವಣಾ ಆಯೋಗ


ತಾಯಿಯ ಅಗಲಿಕೆಯ ನೋವಿನಲ್ಲೂ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಅಶೋಕ ಅವರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಪೊಲೀಸ್ ಇಲಾಖೆ ರಜೆ ಮಂಜೂರು ಮಾಡಿದ್ದರೂ ಸಹ ಕರ್ತವ್ಯಕ್ಕೆ ಹಾಜರಾದ ಅಶೋಕ್ ಅವರಿಗೆ ಸನ್ಮಾನಿಸಿ ಪೊಲೀಸ್ ಇಲಾಖೆ ಗೌರವಿಸಿದೆ.




ಕಾನ್ಸ್​​ಸ್ಟೇಬಲ್  ಎಲ್ಲರಿಗೂ ಮಾದರಿ


ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ನಿನ್ನೆ ದಿನ ನಮ್ಮ ಪೊಲೀಸ್​ ಕಾನ್ಸ್​​ಟೇಬಲ್​​ ಅವರ ತಾಯಿ ನಿಧನರಾಗಿದ್ದರು. ಆದರೆ ಇಂದು ಅವರು ದುಃಖದ ನಡುವೆಯೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರ ಕರ್ತವ್ಯ ನಿಷ್ಠೆ, ಪ್ರಮಾಣಿಕೆತೆಗೆ ತುಂಬು ಹೃದಯದಿಂತ ಶುಭ ಕೋರುತ್ತೇವೆ. ಚುನಾವಣೆ ಎಂಬುವುದು ಪ್ರಮುಖ ಕರ್ತವ್ಯವಾಗಿದ್ದು, ಅದನ್ನು ನಿರ್ವಹಿಸಲು ಅವರು ಬಂದಿದ್ದಾರೆ. ಇಲಾಖೆಯಲ್ಲಿ ಕಾನ್ಸ್​​ಸ್ಟೇಬಲ್ ಓರ್ವ ಉದಾಹರಣೆಯ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದು, ಅವರ ನಡೆ ನಮಗೆ ಹೆಮ್ಮೆ ತರಿಸಿದೆ ಎಂದು ಹೇಳಿದ್ದಾರೆ.


ಈ ಬಗ್ಗೆ ಮಾತನಾಡಿರುವ ಕಾನ್ಸ್​ಟೇಬಲ್​ ಅವರು, ನಮ್ಮ ತಾಯಿ ಅವರಿಗೆ 80 ವರ್ಷ ವಯಸ್ಸಾಗಿತ್ತು. ಅಷ್ಟು ವಯಸ್ಸಾದರೂ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ನಿನ್ನೆ ದಿನ ಅವರಿಗೆ ಉಸಿರಾಟದ ಸಮಸ್ಯೆಯಿಂದ ನಿಧನರಾಗಿದ್ದರು. ನಿನ್ನೆ ಅಂತ್ಯಕ್ರಿಯೆ ನಡೆಸಿದ್ದು, ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಕೂಡ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

top videos


    ನಮ್ಮನ್ನು ತಾಯಿ ಜೋಪಾನ ಮಾಡಿದ್ದಂತೆ ಈಗ ನಮ್ಮ ಇಲಾಖೆ ನಮ್ಮನ್ನು ನೋಡಿಕೊಳ್ಳುತ್ತಿದೆ. ಆದ್ದರಿಂದ ಮತ್ತೆ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಅಧಿಕಾರಿಗಳು ರಜೆ ತೆಗೆದುಕೊಳ್ಳಲು ಸಲಹೆ ನೀಡಿದ್ದರು. ಆದರೂ ನಾನು ಕರ್ತವ್ಯ ಕಾರಣಕ್ಕೆ ಹಾಜರಾಗುತ್ತೇನೆ ಅಂತ ತಿಳಿಸಿ ಬಂದಿದ್ದೇನೆ ಎಂದು ಅಶೋಕ ಅವರು ತಿಳಿಸಿದ್ದಾರೆ.

    First published: