ಧಾರವಾಡ: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election) ಮತದಾನ ಅಂತ್ಯವಾಗಿ 2615 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ (Voting Machine) ಭದ್ರವಾಗಿದೆ. ಈ ನಡುವೆ ತೀವ್ರ ಕುತೂಹಲ ಮೂಡಿಸಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ (Hubballi Dharwad Central) ಕ್ಷೇತ್ರದಲ್ಲಿ ತಡವಾಗಿ ಸ್ಟ್ರಾಂಗ್ ರೂಮ್ಗೆ (Strong Room) ಮತಯಂತ್ರಗಳು ಆಗಮಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಮತಯಂತ್ರಗಳು ತಡವಾಗಿ ಆಗಮಿಸಿದ ಕಾರಣ ಇಂದು ಬೆಳಗ್ಗೆ ಜಿಲ್ಲಾಡಳಿತ (District Administration) ಸ್ಟ್ರಾಂಗ್ ರೂಮ್ ಸೀಲ್ ಮಾಡಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಟ್ರಾಂಗ್ ರೂಮ್ ನಿರ್ಮಾಣ ಮಾಡಲಾಗಿದೆ.
ರಾತ್ರಿ ತಡವಾಗಿ ಡಿ ಮಸ್ಟರಿಂಗ್‌ಗೆ ಇವಿಎಂಗಳು ಬಂದಿವೆ
ಸ್ಟ್ರಾಂಗ್ ರೂಮ್ ಸೀಲ್ ವಿಳಂಬದ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಿನ್ನೆ ಸಂಜೆ ಬಳಿಕವೂ ಮತದಾನ ನಡೆದಿದೆ. ಹೀಗಾಗಿ ಡಿ ಮಸ್ಟರಿಂಗ್ ತಡವಾಗಿ ಆಗಿದೆ.
ಇದನ್ನೂ ಓದಿ: Operation Lotus ಮಾಡುವ ಸಂದರ್ಭ ಬರಲ್ಲ: ಬಹುಮತದ ಸರ್ಕಾರ ರಚನೆ ಎಂದ ಕರಂದ್ಲಾಜೆ
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಸ್ಕೂಲ್‌ನಲ್ಲಿ ಡಿ ಮಸ್ಟರಿಂಗ್ ನಡೆದಿದೆ, ರಾತ್ರಿ ತಡವಾಗಿ ಡಿ ಮಸ್ಟರಿಂಗ್‌ಗೆ ಇವಿಎಂಗಳು ಬಂದಿವೆ. ಹೀಗಾಗಿ ಮತಯಂತ್ರಗಳು ತಡವಾಗಿ ಎಣಿಕೆ ಕೇಂದ್ರಕ್ಕೆ ಬಂದಿವೆ. ಈಗ ಸ್ಟ್ರಾಂಗ್ ರೂಮ್‌ನಲ್ಲಿಟ್ಟು ಸೀಲ್ ಮಾಡಲಾಗುತ್ತಿದೆ. ಉಳಿದ ಆರು ಕ್ಷೇತ್ರಗಳ ಸ್ಟ್ರಾಂಗ್ ರೂಮ್ ನಿನ್ನೆಯೇ ಸೀಲ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಶೇಕಡಾ 64.30ರಷ್ಟು ಮತದಾನ
ಇನ್ನು, ನಿನ್ನೆ ನಡೆದ ವೋಟಿಂಗ್ನಲ್ಲಿ ಧಾರವಾಡ ಜಿಲ್ಲೆಯಲ್ಲಿ ಶೇಕಡಾ 73.19 ಮತದಾನ ನಡೆದಿದೆ. ನವಲಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಶೇಕಡಾ 76.99, ಕುಂದಗೋಳ ವಿಧಾನಸಭಾ ಮತಕ್ಷೇತ್ರ ಶೇಕಡಾ 82.82 ಮತದಾನ ಆಗಿದೆ.
ಇಳಿದಂತೆ ಧಾರವಾಡ ವಿಧಾನಸಭಾ ಮತಕ್ಷೇತ್ರ ಶೇಕಡಾ 76.99, ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇಯ ಶೇಕಡಾ 70.74, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರ ಶೇಕಡಾ 64.30. ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ಶೇಕಡಾ 64.33, ಕಲಘಟಗಿ ವಿಧಾನಸಭಾ ಮತಕ್ಷೇತ್ರ ಶೇಕಡಾ 81.78 ರಷ್ಟು ಮತದಾನ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ