• Home
  • »
  • News
  • »
  • state
  • »
  • Karnataka Assembly Elections 2023: ಕರ್ನಾಟಕದಲ್ಲಿ ಅತೀ ಹೆಚ್ಚು ಮಹಿಳಾ ಮತದಾರರಿರುವುದು ಇದೇ ಜಿಲ್ಲೆಯಲ್ಲಿ!

Karnataka Assembly Elections 2023: ಕರ್ನಾಟಕದಲ್ಲಿ ಅತೀ ಹೆಚ್ಚು ಮಹಿಳಾ ಮತದಾರರಿರುವುದು ಇದೇ ಜಿಲ್ಲೆಯಲ್ಲಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Karnataka Assembly Elections 2023: ಈಗಾಗಲೇ ಚುನಾವಣಾ ಆಯೋಗವು 2023 ರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಅಂತಿಮ ಮತದಾರರ ಪಟ್ಟಿ ಬಂದಾಗಿದೆ. ರಾಜ್ಯದ ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಪುರುಷ ಮತ್ತು ಮಹಿಳಾ ಮತದಾರರಿದ್ದಾರೆ ಎಂಬ ಅಂಕಿ ಸಂಖ್ಯೆಗಳ ಸ್ಪಷ್ಟವಾದ ಚಿತ್ರಣ ಈಗಾಗಲೇ ಅಧಿಕಾರಿಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಸಿಕ್ಕಿದೆ.

ಮುಂದೆ ಓದಿ ...
  • Share this:

ಬೆಂಗಳೂರು(ಜ.10): ಈಗಾಗಲೇ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳು(Karnataka Assembly Elections) ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ನಡೆಯಬಹುದು ಅಂತ ವರದಿಗಳು ಹರಿದಾಡುತ್ತಿರುವುದನ್ನು ನಾವೆಲ್ಲಾ ನೋಡಿದ್ದೇವೆ. ಚುನಾವಣೆಗಳು(Elections) ಹತ್ತಿರ ಬರುತ್ತಿವೆ ಅಂತ ಹೇಳಿದರೆ ಸಾಕು ಹೊಸ ಮತದಾರರ ಹೆಸರುಗಳನ್ನು (Voters) ನೋಂದಾಯಿಸಿಕೊಳ್ಳುವುದು, ಮತ್ತೊಮ್ಮೆ ಪರಿಷ್ಕೃತ ಮತದಾರರ ಪಟ್ಟಿ ತಯಾರಿಸುವುದು ಹೀಗೆ ಕೆಲಸಗಳು ಒಂದೇ, ಎರಡೇ.. ಇವೆಲ್ಲವೂ ಆಯಾ ಜಿಲ್ಲೆಗಳ ಚುನಾವಣಾ ಅಧಿಕಾರಿಗಳ ಜವಾಬ್ದಾರಿ ಆಗಿರುತ್ತವೆ.


ಈಗಾಗಲೇ ಚುನಾವಣಾ ಆಯೋಗವು 2023 ರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಅಂತಿಮ ಮತದಾರರ ಪಟ್ಟಿ ಬಂದಾಗಿದೆ. ರಾಜ್ಯದ ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಪುರುಷ ಮತ್ತು ಮಹಿಳಾ ಮತದಾರರಿದ್ದಾರೆ ಎಂಬ ಅಂಕಿ ಸಂಖ್ಯೆಗಳ ಸ್ಪಷ್ಟವಾದ ಚಿತ್ರಣ ಈಗಾಗಲೇ ಅಧಿಕಾರಿಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಸಿಕ್ಕಿದೆ.


ಅತೀ ಹೆಚ್ಚು ಮಹಿಳಾ ಮತದಾರರಿರುವ ಜಿಲ್ಲೆ


ಈ ಅಂತಿಮ ಪಟ್ಟಿ ನೋಡಿದರೆ, ಇಡೀ ಕರ್ನಾಟಕ ರಾಜ್ಯದಲ್ಲಿಯೇ ಉಡುಪಿ ಜಿಲ್ಲೆಯು ಅತಿ ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವುದು ಕಂಡು ಬಂದಿದೆ. ಉಡುಪಿ ಜಿಲ್ಲೆ ಅತಿ ಹೆಚ್ಚು ಮಹಿಳಾ ಮತದಾರರನ್ನು ಹೊಂದಿದೆಯಂತೆ.


ಇದನ್ನೂ ಓದಿ: Siddaramaiah: ಕೋಲಾರದಲ್ಲಿ ಸುಲಭವೇ ಸಿದ್ದರಾಮಯ್ಯ ಗೆಲುವು? ಮಾಜಿ ಸಿಎಂಗೆ ಎದುರಾಗಲಿದೆ ಮೂರು ಮೂರು ತಿರುವು!


ಹೌದು.. ಈಗಾಗಲೇ ಎಂದರೆ ಸಂಕ್ಷಿಪ್ತ ಪರಿಷ್ಕರಣೆಯ ನಂತರ ಜನವರಿ 5 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಉಡುಪಿ ಜಿಲ್ಲೆಯು ಅತಿ ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಜಿಲ್ಲೆ ಅಂತ ಹೆಗ್ಗಳಿಕೆಗೆ ಪಾತ್ರವಾಗಿದೆ.


ಇನ್ನೊಂದೆಡೆ ಇದಕ್ಕೆ ತದ್ವಿರುದ್ಧ ಎಂಬಂತೆ, ಬೆಂಗಳೂರು ಗ್ರಾಮಾಂತರವು ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಮಹಿಳಾ ಮತದಾರರನ್ನು ಹೊಂದಿದೆ ಎಂದು ತಿಳಿದು ಬಂದಿದೆ.


ಉಡುಪಿ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರು ಕರ್ನಾಟಕದಲ್ಲಿ 5.05 ಕೋಟಿ ಜನ ಮತದಾರರಿದ್ದಾರೆ. ಉಡುಪಿಯಲ್ಲಿ 10.1 ಲಕ್ಷ ಮತದಾರರಿದ್ದು, ಅದರಲ್ಲಿ 5.2 ಲಕ್ಷ ಮಹಿಳೆಯರು ಮತ್ತು 4.9 ಲಕ್ಷ ಪುರುಷರು, ತೃತೀಯ ಲಿಂಗಿ 12 ಮತದಾರರಿದ್ದಾರೆ.


ಅತಿ ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಜಿಲ್ಲೆಯಾಗಿ ಉಡುಪಿ ಗುರುತಿಸಲ್ಪಟ್ಟಿರುವ ಬಗ್ಗೆ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಟ್ವೀಟ್ ಸಹ ಮಾಡಿದ್ದಾರೆ ಎಂದು ಡಿಸಿ ಹೇಳಿದರು.


ಉಡುಪಿಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚು


ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಪುರುಷ ಮತದಾರರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.


ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 1.12 ಲಕ್ಷ ಪುರುಷ ಮತದಾರರು ಮತ್ತು 1.17 ಲಕ್ಷ ಮಹಿಳೆ ಮತದಾರರು ಇದ್ದಾರೆ. ಕುಂದಾಪುರ ತಾಲೂಕಿನಲ್ಲಿರುವ 2,04,525 ಒಟ್ಟು ಮತದಾರರಲ್ಲಿ 98,224 ಪುರುಷ ಮತ್ತು 1,06,298 ಮಹಿಳೆ ಮತದಾರರು ಇದ್ದಾರೆ.


ಉಡುಪಿ ಕ್ಷೇತ್ರದಲ್ಲಿರುವ ಒಟ್ಟು 2,11,631 ಮತದಾರರಲ್ಲಿ 1,02,192 ಪುರುಷರು ಮತ್ತು 1,09,439 ಮಹಿಳೆ ಮತದಾರರು ಇದ್ದಾರೆ. ಇನ್ನೂ ಕಾಪುವಿನಲ್ಲಿ 88,114 ಪುರುಷರು ಮತ್ತು 95,968 ಮಹಿಳೆಯರು ಸೇರಿದಂತೆ 1,84,088 ಮತದಾರರಿದ್ದಾರೆ.


ಕಾರ್ಕಳದಲ್ಲಿ 1,86,451 ಮತದಾರರಿದ್ದು, 89,404 ಪುರುಷರು ಮತ್ತು 97,047 ಮಹಿಳಾ ಮತದಾರರು ಇದ್ದಾರೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ:Karnataka Assembly Elections: ಬೇಲೂರಿನ ಗದ್ದುಗೆ ಯಾರಿಗೆ? ಐತಿಹಾಸಿಕ ಕ್ಷೇತ್ರ ಪಕ್ಷಗಳ ಕದನ!


13 ಸಾವಿರಕ್ಕೂ ಹೆಚ್ಚು ಹೊಸ ಮತದಾರರ ನೋಂದಣಿ


ಕಳೆದ ಎರಡು ತಿಂಗಳಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ 13,816 ಹೊಸ ಮತದಾರರು ನೋಂದಾಯಿಸಿಕೊಂಡಿದ್ದಾರೆ ಮತ್ತು ಅವರಲ್ಲಿಯೂ ಸಹ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ಪರಿಷ್ಕರಣೆಯ ಸಂದರ್ಭದಲ್ಲಿ ಹೊಸ ಮತದಾರರ ಸೇರ್ಪಡೆಗೆ ಆಡಳಿತವು ಆದ್ಯತೆ ನೀಡಿದೆ. ಕಾಲೇಜುಗಳಲ್ಲಿ ವಿಶೇಷ ದಾಖಲಾತಿ ಅಭಿಯಾನಗಳನ್ನು ನಡೆಸಲಾಯಿತು.


ಇದರಲ್ಲಿ ಯುವ ಮತದಾರರು ಉತ್ಸಾಹದಿಂದ ಸ್ವಯಂಪ್ರೇರಿತರಾಗಿ ಅರ್ಜಿಗಳನ್ನು ಸಲ್ಲಿಸಿದರು ಎಂದು ಅವರು ಹೇಳಿದರು. ಯಾವುದೇ ಆಕ್ಷೇಪಣೆ ಇಲ್ಲದೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಡಿಸಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

Published by:Latha CG
First published: