• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • JDS Manifesto: ಜನತಾ ಅಭಿಪ್ರಾಯ ಆಧಾರಿತ ಜನತಾ ಸರ್ಕಾರ, ಅಧಿಕಾರಕ್ಕೆ ಬಂದರೆ ಪಂಚರತ್ನ ಸಾಕಾರ! ಜೆಡಿಎಸ್ ಪ್ರಣಾಳಿಕೆಯಲ್ಲಿ ಭರವಸೆ ಭರಪೂರ

JDS Manifesto: ಜನತಾ ಅಭಿಪ್ರಾಯ ಆಧಾರಿತ ಜನತಾ ಸರ್ಕಾರ, ಅಧಿಕಾರಕ್ಕೆ ಬಂದರೆ ಪಂಚರತ್ನ ಸಾಕಾರ! ಜೆಡಿಎಸ್ ಪ್ರಣಾಳಿಕೆಯಲ್ಲಿ ಭರವಸೆ ಭರಪೂರ

ಎಚ್​ ಡಿ ಕುಮಾರಸ್ವಾಮಿ

ಎಚ್​ ಡಿ ಕುಮಾರಸ್ವಾಮಿ

ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ, ರೈತರಿಗೆ ಹಿರಿಯ ನಾಗರಿಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಸಾಮಾಜಿಕ ಭದ್ರತೆಗಳು, ಪಂಚರತ್ನ ಯೋಜನೆ, ಕೈಗಾರಿಕೆ ಅಭಿವೃದ್ದಿ, ಸಾರಿಗೆ ಮತ್ತು ಪ್ರವಾಸೋದ್ಯಮ, ಜಲಧಾರೆ, ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೂ (Karnataka Assembly Election 2023) ರಾಜಕೀಯ ಪಕ್ಷಗಳ ಭರವಸೆಗಳ ಮಹಾಪೂರದ ಪಟ್ಟಿಯನ್ನು (Manifesto) ಬಿಡುಗಡೆ ಮಾಡುತ್ತವೆ. ಗುರುವಾರ ಜೆಡಿಎಸ್ (JDS)​ ಹಲವು ಯೋಜನೆಗಳುಳ್ಳ 36 ಪುಟಗಳ ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಬಾರಿ ಜೆಡಿಎಸ್​ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ನೀಡುವ ಸವಲತ್ತುಗಳ ಬಗ್ಗೆ ಜೆಡಿಎಸ್ (JDS) ಸುದೀರ್ಘ ಪ್ರಣಾಳಿಕೆಯಲ್ಲಿ ಹಲವು ಯೋಜನೆ ತಿಳಿಸಿದೆ. ಪಂಚರತ್ನ (Pancharathna), ಸಾಲಮನ್ನಾ, ಮಹಿಳೆಯರಿಗೆ ಹಲವು ಸವಲತ್ತು, ಆಟೋ ಡ್ರೈವರ್​ಗಳಿಗೆ ನೀಡಲಾಗುವ ಮಾಸಿಕ ಧನ ಸಹಾಯ ಸೇರಿದಂತೆ ಹಲವು ಭರವಸೆಗಳನ್ನು ತಿಳಿಸಿದೆ. ಇಂದು ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.


ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ, ರೈತರಿಗೆ ಹಿರಿಯ ನಾಗರೀಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಸಾಮಾಜಿಕ ಭದ್ರತೆಗಳು, ಪಂಚರತ್ನ ಯೋಜನೆ, ಕೈಗಾರಿಕೆ ಅಭಿವೃದ್ದಿ, ಸಾರಿಗೆ ಮತ್ತು ಪ್ರವಾಸೋದ್ಯಮ, ಜಲಧಾರೆ, ರಸ್ತೆ ಅಭಿವೃದ್ಧಿ ಮತ್ತು ಸಂಪರ್ಕ ಸೇತುವೆಗಳು, ಆಡಳಿತದಲ್ಲಿ ಸುಧಾರಣೆ, ಕೃಷಿ ಮತ್ತು ಹೈನುಗಾರಿಕೆಗೆ ಪ್ರೋತ್ಸಾಹ ಸೇರಿದಂತೆ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುವುದಾಗಿ ಜನತಾ ಪ್ರಣಾಳಿಕೆಯಲ್ಲಿ ತಿಳಿಸಿದೆ.


ಜೆಡಿಎಸ್ ಪ್ರಣಾಳಿಕೆಯ ಪ್ರಮುಖ ಅಂಶಗಳು ಇಲ್ಲಿವೆ


ಜನತಾ ಜಲಧಾರೆ ಯೋಜನೆ ಮೂಲಕ ರಾಜ್ಯದ ಸಮಗ್ರ ನೀರಾವರಿಗೆ ಮತ್ತು ಕುಡಿಯುವ
ನೀರು ಪೂರೈಕೆಗೆ ಒತ್ತು ನೀಡಲಾಗುವುದು.


ರಾಜ್ಯದ ಎಲ್ಲಾಜನತೆಯ ಅಭಿಪ್ರಾಯಗಳನ್ನುಸಂಗ್ರಹಿಸಿ, ಮುಂಬರುವ ಸರ್ಕಾರವನ್ನು ‘ಕರುನಾಡ ಜನಾಭಿಪ್ರಾಯ ಆಧಾರಿತ ಜನತಾ ಸರ್ಕಾರ’ ಮಾಡುವುದೇ ಪಕ್ಷದ ಗುರಿ


ಐದು ಅಂಶಗಳುಳ್ಳ ಪಂಚರತ್ನ ಯೋಜನೆ ಜಾರಿ


ಮಹಿಳೆಯರಿಗೆ ಹಲವು ಯೋಜನೆ
ಮಾತೃಶ್ರೀ ಮತ್ತು ಗರ್ಭಿಣಿ ತಾಯಂದಿರ ಅಗತ್ಯತೆ ಪೂರೈಕೆಗೆ 6 ತಿಂಗಳ ಕಾಲ 6 ಸಾವಿರ ರೂ ತಾಯಿ ಭತ್ಯೆ


ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ


ವಿಧವಾ ವೇತನ 900 ರೂ.ನಿಂದ 2,500 ರೂ.ಗಳಿಗೆ ಹೆಚ್ಚಳ


ಅಂಗನವಾಡಿ ಕಾರ್ಯಕರ್ತೆಯರಿಗೆ 11,000 ರೂ ಮತ್ತು ಸಹಾಯಕಿಯರಿಗೆ 6,500 ರೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 7,500 ರೂ.ಗಳ ಗೌರವಧನ ಪಾವತಿಸಲಾಗುತ್ತಿದೆ. ಜೆಡಿಎಸ್​ ಅಧಿಕಾರಕ್ಕೆ ಬಂದರೆ ಈ ಕಾರ್ಯಕರ್ತರ ಸೇವೆಯನ್ನು ಖಾಯಂಗೊಳಿಸಿ, ಹೆಚ್ಚುವರಿಯಾಗಿ 5000 ರೂ. ವೇತನ ಪಾವತಿಸಲಾಗುವುದು.


ಇದನ್ನೂ ಓದಿ: Karnataka Election: ‘ಜೆಡಿಎಸ್​​ಗೆ ಮತ ಹಾಕಿದರೂ ನಮಗೆ ಹಾಕಿದ್ದಂತೆ’! ಬಿಜೆಪಿ ಶಾಸಕ ಪ್ರೀತಂಗೌಡ ಸ್ಪೋಟಕ ಹೇಳಿಕೆ


ರೈತರಿಗೆ ಹಲವು ಯೋಜನೆಗಳು


ರಾಜ್ಯದಲ್ಲಿ 2015ರ ಕೃಷಿ ಗಣತಿಯಂತೆ 36,000 ಕೃಷಿ ಕಾರ್ಮಿಕರ ಕುಟುಂಬಗಳಿದ್ದು, ಪ್ರತಿ ಕೃಷಿ ಕಾರ್ಮಿಕ ಕುಟುಂಬಕ್ಕೆ ಪ್ರತಿ ತಿಂಗಳೂ 2,000 ರೂ.ನಂತೆ ಸಹಾಯಧನ


ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಸಾಲ ಮಾಡದಂತೆ ರೈತರ ಪ್ರತಿ ಎಕರೆಗೆ ವಾರ್ಷಿಕ 10,000 ರೂ. ಸಹಾಯ ಧನ ಕೊಡಲಾಗುವುದು.


ರೈತ ಯುವಕರನ್ನು ಮದುವೆಯಾಗುವ ಯುವತಿಯರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು


ಸಾರಥಿ ಸೈ ಯೋಜನೆ ಮೂಲಕ ರಾಜ್ಯದಲ್ಲಿರುವ ಪ್ರತಿ ಆಟೋ ಚಾಲಕನಿಗೆ ಪ್ರತಿ ತಿಂಗಳು 2,000 ರೂಗಳ ಮಾಸಾಶನ


ರಕ್ಷಕ ಬಂಧು ಯೋಜನೆ ಮೂಲಕ ನೋಂದಾಯಿತ ಖಾಸಗಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಪ್ರತಿ ತಿಂಗಳೂ 2,000 ರೂಪಾಯಿ ಸಹಾಯಧನ ನೀಡಲಾಗುವುದು.


ಹಿರಿ-ಸಿರಿ ಯೋಜನೆ ರಾಜ್ಯದಲ್ಲಿರುವ 57,91,032 ಹಿರಿಯ ನಾಗರಿಕರಲ್ಲಿ ಬಡತನ ರೇಖೆಗಿಂತ ಕೆಳಗಿರುವ 42,35,609 ಹಿರಿಯ ನಾಗರಿಕರ ಮಾಸಾಶನವನ್ನು1,200 ರೂ.ನಿಂದ 5,000 ರೂ.ಗಳಿಗೆ ಹೆಚ್ಚಳ ಮಾಡಲಾಗುವುದು.


ಇದನ್ನೂ ಓದಿ: Nikhil Kumaraswamy: ನನ್ನನ್ನು ತೀರಿಸಬೇಕು ಅಂತ ಬಿಜೆಪಿ-ಕಾಂಗ್ರೆಸ್ ಒಂದಾಗಿದೆ; ನಿಖಿಲ್​​ ಕುಮಾರಸ್ವಾಮಿ


ಚೈತನ್ಯಯೋಜನೆಗಳು-


ವಿರಳ ರೋಗಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ವಿಶೇಷ ಪರಿಹಾರವಾಗಿ ಮುಖ್ಯಮಂತ್ರಿಗಳ ಪರಿಹಾರ


ನಿಧಿಯಿಂದ 25 ಲಕ್ಷ ರೂ.ಗಳವರೆಗೆ ಪರಿಹಾರವನ್ನು24 ಗಂಟೆಗಳ ಒಳಗಾಗಿ ನೀಡಲಾಗುವುದು.


ರಾಜ್ಯದಲ್ಲಿ ಒಟ್ಟು13,24,205 ವಿಕಲಚೇತನರಿದ್ದು, ಪ್ರಸ್ತುತ ಅವರಿಗೆ ನೀಡಲಾಗುತ್ತಿರುವ 600 ರೂ.ಗಳ ಪಿಂಚಣಿಯನ್ನು2,500 ರೂ.ಗಳಿಗೆ ಹೆಚ್ಚಳ


ಸಾರಿಗೆ ಸಂಸ್ಥೆನೌಕರರು ಅಗತ್ಯ ಸೇವಾ ನಿರ್ವಹಣೆ (ESMA) ಕಾಯಿದೆ ಅಡಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ವೇತನ ಆಯೋಗ ಜಾರಿಯಾದಾಗ ಯಥಾವತ್ತು ಅಳವಡಿಸಿಕೊಂಡು ನಗದುರಹಿತ ವೈದ್ಯಕೀಯ ಸವಲತ್ತುಗಳನ್ನು ನೀಡಲಾಗುವುದು.


ಕಲಾವಿದರ ಮಾಶಾಸನವನ್ನು ಹಾಲಿ ಇರುವ ರೂ. 2000 ದಿಂದ ರೂ. 4000ಕ್ಕೆ ಹೆಚ್ಚಿಸಲಾಗುವುದು.


ವೃತ್ತಿನಿರತ ವಕೀಲರ ರಕ್ಷಣೆಗೆ ಕಾಯ್ದೆ - ವೃತ್ತಿಪರ ವಕೀಲರ ರಕ್ಷಣೆಗಾಗಿ ಕಾಯಿದೆ ಒಂದನ್ನು ಜಾರಿಗೊಳಿಸಲಾಗುವುದು. ನೂತನವಾಗಿ ನೋಂದಾಯಿತ ವಕೀಲರಿಗೆ ಈಗ ನೀಡುವ ಮಾಸಿಕ ಭತ್ಯೆ (Stipend) ಯನ್ನು2,000 ಸಾವಿರ ದಿಂದ 3,000 ರೂ.ಗಳಿಗೆ ಹೆಚ್ಚಿಸಲಾಗುವುದು.


ಕೋಮು ಸೌಹಾರ್ದ ಪ್ರಚಾರಕ್ಕೆ ಶ್ರಮಿಸುವ ಸಂಘಸಂಸ್ಥೆಗಳಿಗೆ ವಿಶೇಷ ಪ್ರೋತ್ಸಾಹ, ಕೋಮು ವೈಷಮ್ಯ ಹರಡುವವರ ವಿರುದ್ಧ ಕಠಿಣ ಕ್ರಮ ಮತ್ತು ಪ್ರಕರಣಗಳ ಕ್ಷಿಪ್ರ ತನಿಖೆಗೆ ಕ್ಷಿಪ್ರ ವಿಚಾರಣಾ ನ್ಯಾಯಾಲಯ ಸ್ಥಾಪನೆ ಮಾಡಲಾಗುವುದು.




ವಿದ್ಯಾ ಸ್ನೇಹಿಯೋಜನೆ


ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 6.8 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್​ಗಳನ್ನು ವಿತರಿಸಲಾಗುವುದು.


ವ್ಯಾಸಂಗ ಮಾಡುವ ಮತ್ತುಆರ್ಥಿಕವಾಗಿ ಹಿಂದುಳಿದಿರುವ ಹಾಗೂ 18 ವರ್ಷ ತುಂಬಿರುವ 60 ಸಾವಿರ ವಿದ್ಯಾರ್ಥಿನಿಯರಿಗೆ ವಿದ್ಯುತ್ ಚಾಲಿತ ಮೊಪೆಡ್​ ವಿತರಣೆ ಮಾಡಲಾಗುವುದು.


ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದ ಪದವಿ, ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಉಚಿತ ಪ್ರವೇಶದೊಂದಿಗೆ ವಿದ್ಯಾಭ್ಯಾಸ


ಆರೋಗ್ಯ ಸೌಲಭ್ಯ


ಮಾದರಿ ಆಸ್ಪತ್ರೆಕಟ್ಟಡ
❖ ದಿನದ 24 ಗಂಟೆಯೂ ಕಾರ್ಯನಿರ್ವಹಣೆ
❖ ಐ.ಸಿ.ಯು. ಮತ್ತು ವಿಶೇಷ ವಾರ್ಡ್ ವ್ಯವಸ್ಥೆ
❖ ಟೆಲಿ ಓ.ಪಿ.ಡಿ.
❖ ಸಿ.ಟಿ. ಸ್ಕ್ಯಾನಿಂಗ್
❖ ದಂತ ಚಿಕಿತ್ಸಾವಿಭಾಗ
❖ ನೇತ್ರಚಿಕಿತ್ಸಾವಿಭಾಗ
❖ ರಕ್ತಪರೀಕ್ಷಾ ಮತ್ತು ಸಂಗ್ರಹಣಾಲಯ ಲ್ಯಾಬ್
❖ ನುರಿತ ವೈದ್ಯರ ನೇಮಕ
❖ ಇ.ಸಿ.ಜಿ. ಸೇವೆ
❖ ಉಚಿತ ಔಷಧಾಲಯ
❖ ಉಚಿತ ಆಂಬುಲೆನ್ಸ್ ಸೇವೆ
❖ ಪ್ರತಿ ವರ್ಷ 1200 ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲು ಗುರಿ ಹೊಂದಲಾಗಿದೆ.
❖ ದುಬಾರಿ ವೆಚ್ಚದ ವೈದ್ಯಕೀಯ ಶಸ್ತ್ರಚಿಕಿತ್ಸೆಗಳಾದ ಮೂಳೆ ಮಜ್ಜೆ ಚಿಕಿತ್ಸೆ(Bone Marrow
Treatment) ಹೃದಯ, ಶ್ವಾಸಕೋಶ, ಯಕೃತ್ ಬದಲಾಯಿಸುವ ಶಸ್ತ್ರಚಿಕಿತ್ಸೆಗಳಿಗೆ (Heart, Lungs, Liver transplantation) ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ.ವರೆಗಿನ ಪರಿಹಾರವನ್ನು24 ಗಂಟೆಗಳಲ್ಲಿಯೇ ನೀಡಲಾಗುವುದು.
❖ ಆಯುಷ್ಮಾನ್ ಭಾರತ್, ಯಶಸ್ವಿನಿ ಯೋಜನೆಯಡಿಯಲ್ಲಿ ಸೇರ್ಪಡೆಯಾಗದ ಖಾಯಿಲೆಗಳಿಗೂ ಪರಿಹಾರ ನೀಡಲಾಗುವುದು.
❖ ರಾಜ್ಯದಲ್ಲಿ ನಿಮ್ಹಾನ್ಸ್ ಮಾದರಿಯಲ್ಲಿ500 ಹಾಸಿಗೆಯುಳ್ಳ ಆಧುನಿಕ ನರ ವಿಜ್ಞಾನ ವೈದ್ಯಕೀಯ ಸಂಸ್ಥೆಸ್ಥಾಪನೆ ಮಾಡಲಾಗುವುದು.

top videos


    ಇದಲ್ಲದೆ, ರೇಷ್ಮೆ ಕೃಷಿ, ಕಾರ್ಮಿಕರ ರಕ್ಷಣೆ, ಕೃಷಿ ಮತ್ತು ಹೈನುಗಾರಿಕೆ, ಪಶು ಸಂಗೋಪನೆ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ವಿಶಿಷ್ಟ ಯೋಜನೆಗಳನ್ನು ಜೆಡಿಎಸ್​ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ.

    First published: