ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ರಾತ್ರಿ ಮುಗಿದು ಬೆಳಗಾಗುವುದರೊಳಗೆ ಅಂದ್ರೆ ನಾಳೆ (ಮೇ 10) ಮತದಾನ ನಡೆಯಲಿದೆ. ರಾಜ್ಯದ ಸಾವಿರಾರು ಮತಗಟ್ಟೆಗಳಲ್ಲಿ ಏಕಕಾಕಲಕ್ಕೆ ಮತದಾನ ನಡೆಯಲಿದ್ದು, ನಾಳೆ ಸಂಜೆಯೊಳಗೆ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದೊಳಗೆ ಭದ್ರವಾಗಿ ಇರಲಿದೆ.
ಇದೆಲ್ಲದರ ಮಧ್ಯೆ ಅನೇಕರಿಗೆ ತಾವು ಯಾವ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕು, ತನ್ನ ಬೂತ್ ಯಾವ ಏರಿಯಾದಲ್ಲಿ ಬರುತ್ತೆ, ಮತದಾನ ಮಾಡುವ ಬಗೆ ಹೇಗೆ ಅನ್ನೋದೆಲ್ಲ ಗೊತ್ತಿರೋದಿಲ್ಲ. ಇದೀಗ ಅಂತವರಿಗೆಂದೇ ಚುನಾವಣಾ ಆಯೋಗ ವೋಟರ್ ಹೆಲ್ಪ್‌ಲೈನ್ ಎಂಬ ಚುನಾವಣಾ ಆಪ್ ಅನ್ನು ಪರಿಚಯ ಮಾಡಿದೆ. ಈ ಆಪ್ ಅನ್ನು ಇನ್ಸ್‌ಟಾಲ್ ಮಾಡಿಕೊಂಡರೆ ನಿಮಗೆ ಈ ಎಲ್ಲಾ ವಿವರಗಳು ಸಿಗಲಿವೆ. ಇದೇನೂ ಹೊಸ ಆಪ್ ಅಲ್ಲ, ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ವಿಶೇಷ ಅಂದ್ರೆ 224 ವಿಧಾನಸಭಾ ಕ್ಷೇತ್ರಗಳ ಬಗ್ಗೆಯೂ ಈ ಆಪ್‌ನಲ್ಲಿ ಸಂಪೂರ್ಣ ವಿವರಗಳು ಲಭ್ಯವಿದ್ದು, ಪ್ರತಿಯೊಬ್ಬ ಮತದಾರನ ಎಪಿಕ್ ನಂಬರ್ ಕೂಡ ಇದರಲ್ಲಿ ಸಿಗಲಿದೆ.
ನಮ್ಮ ವಿವರ ಪಡೆಯೋದು ಹೇಗೆ?
ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಬೇಕು ಮತ್ತು ಮತದಾನದ ಪ್ರಮಾಣ ಹೆಚ್ಚಾಗಬೇಕು ಎನ್ನುವ ದೃಷ್ಟಿಕೋನದಿಂದ ಚುನಾವಣಾ ಆಯೋಗ ಈ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಿತ್ತು. ಈ ಆಪ್‌ನ ಬಳಕೆ ಕರ್ನಾಟಕದಲ್ಲಿ ಮೊದಲಲ್ಲ, ಈ ಹಿಂದಿನ ಚುನಾವಣೆಗಳಲ್ಲಿಯೂ ಕೂಡ ಚುನಾವಣಾ ಆಯೋಗ ಬಳಸುವಂತೆ ಜನರಿಗೆ ತಿಳಿ ಹೇಳಿತ್ತು. ಈ ವರೆಗೆ 4 ಲಕ್ಷಕ್ಕೂ ಹೆಚ್ಚು ಮಂದಿ ವೋಟರ್ ಹೆಲ್ಪ್‌ಲೈನ್ ಆಪ್ ಬಳಕೆ ಮಾಡಿದ್ದಾರೆ.
ನಾಳೆ (ಮೇ 10) ಕರ್ನಾಟಕದ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮೇ 13ರಂದು (ಶನಿವಾರ) ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಪ್ರಚಾರ ಕಾರ್ಯ ಮುಕ್ತಾಯಗೊಂಡಿದ್ದು, ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ