ಚಿಕ್ಕೋಡಿ: ಅಥಣಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ (Amit Shah) ನೇತೃತ್ವದಲ್ಲಿ ಬಿಜೆಪಿ (BJP) ಬೃಹತ್ ಸಮಾವೇಶ ನಡೆಸಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಅಮಿತ್ ಶಾ ಅವರಿಗೆ ಹನುಮಾನ ಮೂರ್ತಿ (Hanuman Murti) ನೀಡಿ ಸನ್ಮಾನ ಮಾಡಿದರು. ಇದಕ್ಕೂ ಮುನ್ನ ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ (Krishna Sugar Factory) ನಡೆದ ಅವ್ಯವಹಾರ ತನಿಖೆಗೆ ಮಾಡುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಅವರು ಪತ್ರ ನೀಡಿ ಮನವಿ ಮಾಡಿದರು. ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ಐದನೂರು ಕೋಟಿ ಅವ್ಯವಹಾರ ಆಗಿದೆ. ಚುನಾವಣೆ (Election) ಮುಗಿದ ಕೂಡಲೇ ಸಿಬಿಐ (CBI) ತನಿಖೆಗೆ ಪತ್ರದಲ್ಲಿ ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಸೋತಾಗ ನಾನೇ ಸವದಿ ಜತೆಗೆ ಮಾತಾಡಿದೆ
ಕಾರ್ಯಕ್ರಮದಲ್ಲಿ ಮಾತನಾಡಿ ಅಮಿತ್ ಶಾ ಅವರು. ರಾಜ್ಯದ ಚುನಾವಣೆ ಬೇರೆ ಅಥಣಿ ಚುನಾವಣೆ ಬೇರೆ, ಡಬಲ್ ಇಂಜಿನ್ ಸರ್ಕಾರದ ಸಲುವಾಗಿ ಬಿಜೆಪಿಗೆ ಮತ ಹಾಕಿ. ಅಥಣಿಯಲ್ಲಿ ಪಕ್ಷಕ್ಕೆ ದ್ರೋಹ ಮಾಡಿದ ಸವದಿ ಸೋಲಿಸಲು ಮತ ಹಾಕಿ. ಲಕ್ಷ್ಮಣ ಸವದಿಯನ್ನ ಕಳೆದ ಚುನಾವಣೆಯಲ್ಲಿ ಸೋಲಿಸಿದ್ದು ಮಹೇಶ್ ಕುಮಟಳ್ಳಿ, ಆದರೂ ಸಹ ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಮಾಡಿದ್ದೆವು. ಸೋತಾಗ ನಾನೇ ಸವದಿ ಜತೆಗೆ ಮಾತಾಡಿದೆ ಅವರೇ ಎಂಎಲ್‌ಸಿ ಮಾಡಿ ಅಂತಾ ಹೇಳಿದ್ದರು. ನಾವು ಎಂಎಲ್‌ಸಿ ಮಾಡಿದ್ವಿ, ಮಂತ್ರಿ ಮಾಡಿದ್ವಿ. ಎಂಎಲ್‌ಸಿ ಅವಧಿ ಇದ್ದರೂ ಯಾಕೆ ಪಕ್ಷ ಬಿಟ್ಟು ಹೋಗಿದ್ದೀರಿ ಅಂತ ನೀವು ಪ್ರಶ್ನೆ ಮಾಡಬೇಕು ಎಂದು ಕರೆ ನೀಡಿದರು.
ಸೋನಿಯಾ ಗಾಂಧಿ ಕರ್ನಾಟಕಕ್ಕೆ ಮಹದಾಯಿ ನೀರು ಕೊಡಲ್ಲ
ಪಕ್ಷ ಬಿಟ್ಟು ಹೋಗಿ ಕಾಂಗ್ರೆಸ್ ಸೇರಿಕೊಂಡಿದ್ದಾರೆ, ಬಜರಂಗ ಬಲಿ ಅವಮಾನ ಮಾಡುವ ಪಕ್ಷ ಸೇರಿಕೊಂಡಿದ್ದಾರೆ. ಕಾಂಗ್ರೆಸ್ ನವರು ಮುಸ್ಲಿಂರಿಗೆ ಮೀಸಲಾತಿ ಕೊಡುತ್ತೇವೆ ಅಂತಿದ್ದಾರೆ. ಲಿಂಗಾಯತರ ಮೀಸಲಾತಿ ಕಿತ್ತುಕೊಂಡು ಮುಸ್ಲಿಂ ಸಮುದಾಯಕ್ಕೆ ಕೊಡುತ್ತೀರಾ? ಪದೇ ಪದೇ ನನ್ನ ಬಳಿ ಮಹದಾಯಿ ಯೋಜನೆಗಾಗಿ ಬರುತ್ತಿದ್ದೀರಿ. ನೀರಾವರಿ ಯೋಜನೆ ಸಲುವಾಗಿ ನನ್ನ ಬಳಿ ಬಂದಾಗ ಕಾಂಗ್ರೆಸ್‌ಗೆ ಬೈಯುತ್ತಿದ್ರಿ, ಸೋನಿಯಾ ಗಾಂಧಿ ಗೋವಾ ಚುನಾವಣೆ ವೇಳೆ ಕರ್ನಾಟಕಕ್ಕೆ ಮಹದಾಯಿ ನೀರು ಕೊಡಲ್ಲ ಎಂದಿದ್ದರು. ಆದರೆ ಸೋನಿಯಾ ಗಾಂಧಿನೂ ಹೋದರೂ ಅವರ ಪಕ್ಷವೂ ಗೋವಾದಿಂದ ಹೋಯಿತು.
ಕರ್ನಾಟಕದಲ್ಲಿ ನಿಮ್ಮ ಗ್ಯಾರಂಟಿ ನಂಬಲ್ಲ
ಮೋದಿ ಬಂದ ಮೇಲೆ ಉತ್ತರ ಕರ್ನಾಟಕಕ್ಕೆ ಮಹದಾಯಿ ನೀರು ಕೊಡುವ ಕೆಲಸ ಆಗಿದೆ. ಜಾರಕಿಹೊಳಿ ಮತ್ತು ಮಹೇಶ್ ಬಂದ ಮೇಲೆ ಯಡಿಯೂರಪ್ಪ ಸರ್ಕಾರ ಬಂದಿದೆ. ರಾಹುಲ್ ಬಾಬಾ ಐದು ಗ್ಯಾರಂಟಿ ಕೊಟ್ಟಿದ್ದಾರೆ. ಗುಜರಾತ್, ಯುಪಿ, ಉತ್ತರಾಖಂಡ, ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್, ತ್ರಿಪುರದಲ್ಲಿ ಐದು ಗ್ಯಾರಂಟಿ ಕೊಟ್ಟಿದ್ದೀರಿ. ಎಲ್ಲಾ ಕಡೆ ನಿಮ್ಮನ್ನ ಜನ ಸೋಲಿಸಿದ್ದಾರೆ, ಕರ್ನಾಟಕದಲ್ಲಿ ನಿಮ್ಮ ಗ್ಯಾರಂಟಿ ನಂಬಲ್ಲ. ಮೋದಿಯವರುನ್ನ ನಂಬುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ