ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Elections ) ಮತದಾನಕ್ಕೆ ಕೌಂಟ್ಡೌನ್ ಶುರುವಾಗಿದೆ. ಈ ನಡುವೆ ಮತದಾನಕ್ಕೆ (Voting) ಪ್ರೇರಣೆ ನೀಡಲು ಹೋಟೆಲ್ (Hotel) ಮಾಲೀಕರ ನೀಡಿದ್ದ ಆಫರ್ಗೆ ಬಿಬಿಎಂಪಿ (BBMP) ಅಪಸ್ವರ ಎತ್ತಿ, ಚುನಾವಣೆ ನೀತಿಯ ಸಂಹಿತೆ ಕಾರಣ ನೀಡಿ ಉಚಿತ ಘೋಷಣೆ ಮಾಡುವಂತಿಲ್ಲ ಎಂದು ಆದೇಶ ನೀಡಿತ್ತು. ಆದರೆ ಬಿಬಿಎಂಪಿ ಆದೇಶದ ವಿರುದ್ಧ ಹೈಕೋರ್ಟ್ (High Court) ಮೊರೆ ಹೋಗಿದ್ದರು. ಹೋಟೆಲ್ ಮಾಲೀಕರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಬಿಬಿಎಂಪಿ ಆದೇಶಕ್ಕೆ ತಡೆ ನೀಡಿದ್ದು, ಮತದಾನ ಉತ್ತೇಜನಕ್ಕೆ ಉಚಿತ ಊಟ (Free Food) ನೀಡಲು ಅವಕಾಶ ನೀಡಿ ಆದೇಶ ನೀಡಿದೆ.
ಮೇ 10ರ ಬುಧವಾರದಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಸದುದ್ದೇಶ ದಿಂದ ಕೆಲವೊಂದು ಹೋಟೆಲ್ಗಳು
ಮತ ಚಲಾಯಿಸಿ ಬಂದವರಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಆಹಾರ ನೀಡಿ ಪ್ರೋತ್ಸಾಹಿಸಲು ನಿರ್ಧರಿಸಿದ್ದವು.
ಇದನ್ನೂ ಓದಿ: IT Raid: ಹಿರಿಯೂರು ಜೆಡಿಎಸ್ ಅಭ್ಯರ್ಥಿಗೆ ಐಟಿ ಶಾಕ್! ಅತ್ತ ರಘು ಆಚಾರ್ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ
ಆದರೆ ಕೊನೆಯ ಗಳಿಗೆಯಲ್ಲಿ ಬಿಬಿಎಂಪಿಯವರು ಈ ಉತ್ತಮ ಕಾರ್ಯಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಅಲ್ಲದೇ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು. ಇದರಿಂದ ಅನಿವಾರ್ಯವಾಗಿ ಬಿಬಿಎಂಪಿ ನಡೆ ಪ್ರಶ್ನಿಸಿಹೋಟೆಲ್ ಮಾಲೀಕರ ಸಂಘಟನೆ ಹೈಕೋರ್ಟ್ಗೆ ತುರ್ತು ಅರ್ಜಿಸಿ ಸಲ್ಲಿಕೆ ಮಾಡಿತ್ತು.
ನಾಳೆಯೇ ಮತದಾನ ನಡೆಯುವ ಹಿನ್ನೆಲೆಯಲ್ಲಿ ನ್ಯಾಯಾಧೀಶರಿಂದ ರಾತ್ರಿಯೇ ತುರ್ತುವಿಚಾರಣೆ ಅರ್ಜಿ ಪರಿಶೀಲನೆ ನಡೆಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಶಿವಶಂಕರೇ ಗೌಡ ಅವರು, ಬಿಬಿಎಂಪಿ ಆದೇಶ ರದ್ದು ಮಾಡಿ ಆದೇಶ ನೀಡಿದರು. ಅಲ್ಲದೆ, ಮತದಾನದ ನಂತರ ಉಚಿತ ಊಟ ನೀಡಲು ಅವಕಾಶ ನೀಡಿ ಆದೇಶ ಹೊರಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ