• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Leaders Profile: ಬಂಟ್ವಾಳದ ಹುಲಿ, ಕಾಂಗ್ರೆಸ್‌ನ ಹಿರಿಯ ನಾಯಕ ಬೆಳ್ಳಿಪ್ಪಾಡಿ ರಮಾನಾಥ ರೈ ರಾಜಕೀಯ ಏಳುಬೀಳುಗಳ ಪರಿಚಯ ಹೀಗಿದೆ

Leaders Profile: ಬಂಟ್ವಾಳದ ಹುಲಿ, ಕಾಂಗ್ರೆಸ್‌ನ ಹಿರಿಯ ನಾಯಕ ಬೆಳ್ಳಿಪ್ಪಾಡಿ ರಮಾನಾಥ ರೈ ರಾಜಕೀಯ ಏಳುಬೀಳುಗಳ ಪರಿಚಯ ಹೀಗಿದೆ

ರಮಾನಾಥ ರೈ

ರಮಾನಾಥ ರೈ

ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಚಿವರಾದ ಬಿ. ರಮಾನಾಥ ರೈಯವರ ಕಿರು ಪರಿಚಯ ಮಾಡಿಕೊಳ್ಳೋಣ.

  • Trending Desk
  • 2-MIN READ
  • Last Updated :
  • Bantval (Bantwal), India
  • Share this:

ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections) ಎಲ್ಲಾ ಅಭ್ಯರ್ಥಿಗಳು ಭರ್ಜರಿಯಿಂದಲೇ ತಯಾರಿ ನಡೆಸುತ್ತಿದ್ದಾರೆ. ಜನಸಾಮಾನ್ಯರು ಈ ಬಾರಿ ತಮಗೇ ಮತಹಾಕಬೇಕೆಂಬ ನಿಟ್ಟಿನಲ್ಲಿ ಅವಿರತ ಪರಿಶ್ರಮ ಪಡುತ್ತಿರುವ ಅಭ್ಯರ್ಥಿಗಳು ತಮ್ಮನ್ನು ಜನನಾಯಕರಾಗಿ ಜನರು ಒಪ್ಪಿಕೊಳ್ಳಬೇಕೆಂಬ ಆಶಯದಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ.


ಕಂಡೂ ಕೇಳರಿಯದ ಆಶ್ವಾಸನೆಗಳು, ತನಗೇ ಓಟು ನೀಡಿ ಎಂಬ ವಿನಂತಿ, ಮನೆ ಮನೆಗೆ ತೆರಳಿ ಮತಯಾಚನೆ, ಮನೆಯ ಸದಸ್ಯರೊಂದಿಗೆ ಫೋಟೋ ತೆಗೆಸಿಕೊಳ್ಳುವುದು, ಅವರೊಂದಿಗೆ ಕುಳಿತು ಭೋಜನ ಮಾಡುವುದು ಹೀಗೆ ಬಗೆ ಬಗೆಯ ಸರ್ಕಸ್‌ಗಳನ್ನು ಮಾಡುತ್ತಿದ್ದಾರೆ. ಆದರೆ ಬುದ್ಧಿವಂತರಾಗಿರುವ ಜನತೆ ತಮಗೆ ಯಾರು ಸೂಕ್ತ ಎಂಬುದನ್ನು ಮೊದಲೇ ಆಯ್ಕೆ ಮಾಡಿಕೊಂಡಿರುತ್ತಾರೆ.


ಇದನ್ನೂ ಓದಿ: Bhagirathi Murulya: ಹಾಲಿ ಸಚಿವ ಅಂಗಾರ ಜಾಗಕ್ಕೆ ಹೊಸ ಮುಖ ಎಂಟ್ರಿ! ಯಾರಿದು ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ?


ಬಿ. ರಮಾನಾಥ ರೈಯವರ ಕಿರು ಪರಿಚಯ


ಇಂದಿನ ಲೇಖನದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಚಿವರಾದ ಬಿ. ರಮಾನಾಥ ರೈಯವರ ಕಿರು ಪರಿಚಯ ಮಾಡಿಕೊಳ್ಳೋಣ. ಬಂಟ್ವಾಳ ಕ್ಷೇತ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿರುವಂತೆಯೇ ಚುನಾವಣಾ ಕಾವು ಏರುತ್ತಿದೆ.


ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಸ್ಪರ್ಧೆಗೆ ಸಜ್ಜಾಗಿವೆ. ಬಿಜೆಪಿಯಿಂದ ರಾಜೇಶ್ ನಾಯ್ಕ್ ಸ್ಪರ್ಧಿಸಲಿದ್ದು ಕಾಂಗ್ರೆಸ್‌ನಿಂದ ರಮಾನಾಥ ರೈ ಬಂಟ್ವಾಳ ಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ.


ರಾಜಕೀಯ ಜೀವನ


ಬೆಳ್ಳಿಪ್ಪಾಡಿ ರಮಾನಾಥ್ ರೈ ಅವರು ಮೇ 23, 2013 ರಿಂದ ಮೇ 15, 2018 ರವರೆಗೆ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಭಾರತೀಯ ರಾಜಕಾರಣಿಯಾಗಿದ್ದಾರೆ.


1985 ರಿಂದ ಕರ್ನಾಟಕ ವಿಧಾನಸಭೆಯಲ್ಲಿ ಬಂಟ್ವಾಳ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ರಾಜೇಶ್ ನಾಯ್ಕ್ ವಿರುದ್ಧ 15,000 ಮತಗಳ ಅಂತರದಿಂದ ಸೋತಿದ್ದರು.


ಇದನ್ನೂ ಓದಿ: Nisarga Narayana Swamy: ಶತಕೋಟಿ ಒಡೆಯ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಕುರಿತ ಫುಲ್ ಡೀಟೇಲ್ಸ್ ಇಲ್ಲಿದೆ


ಕರ್ನಾಟಕ ವಿಧಾನಸಭೆಯಲ್ಲಿ ಶಾಸಕರಾಗಿ ಸುದೀರ್ಘ ವೃತ್ತಿಜೀವನದಲ್ಲಿ ಅವರು ವಿವಿಧ ಖಾತೆಗಳನ್ನು ಹೊಂದಿರುವ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಬಂಟ್ವಾಳದಿಂದ ಗೆದ್ದಿದ್ದರು. ಅವರಿಗೆ ಅರಣ್ಯ ಮತ್ತು ಪರಿಸರ ಸಚಿವರ ಖಾತೆಯನ್ನು ನೀಡಲಾಯಿತು.


ಪಕ್ಷಗಳ ಭರ್ಜರಿ ಪೈಪೋಟಿ


ಕಾಂಗ್ರೆಸ್ ನೀಡಿದ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಜನಸೇವೆ ಮಾಡಿರುವ ರಮಾನಾಥ ರೈ ಬಂಟ್ವಾಳದಿಂದ ಈವರೆಗೆ ಎಂಟು ಬಾರಿ ಶಾಸಕರಾಗಿ ಸ್ಪರ್ಧಿಸಿದ್ದಾರೆ ಹಾಗೂ ಇದು ತಮ್ಮ ಕೊನೆಯ ಚುನಾವಣೆ ಎಂದು ತಿಳಿಸಿದ್ದಾರೆ. ರೈ ಅವರು ಬಂಟ್ವಾಳ ಕ್ಷೇತ್ರದಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡಿ ಬೆಂಬಲ ಪಡೆಯುತ್ತಿದ್ದಾರೆ.


ಇತರ ಕ್ಷೇತ್ರಗಳಂತೆ ಬಂಟ್ವಾಳದಲ್ಲಿ ಕೂಡ ಈ ಬಾರಿ ಚುನಾವಣೆ ಅತ್ಯಂತ ಪೈಪೋಟಿಯಲ್ಲಿದ್ದು, ಎರಡೂ ಪಕ್ಷಗಳ ಅಭ್ಯರ್ಥಿಗಳು ಭರ್ಜರಿಯಾಗಿಯೇ ಮತಯಾಚನೆ ನಡೆಸುತ್ತಿವೆ.


ರಮಾನಾಥ ರೈ ಬಾಲ್ಯ ಹಾಗೂ ಶಿಕ್ಷಣ


66 ರ ಹರೆಯದ ರಮಾನಾಥ ರೈಯವರು ಪುಟಿಯುವ ಉತ್ಸಾಹ ಚಿಲುಮೆ ಎಂದೇ ಖ್ಯಾತರಾದವರು. ಕೃಷಿ ಇವರ ಕಾಯಕವಾಗಿದೆ. ಇವರ ತಂದೆಯ ಹೆಸರು ನಾರಾಯಣ್ ರೈ. 1997 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಗಳಿಸಿದ್ದಾರೆ.


ಆಸ್ತಿಪಾಸ್ತಿಗಳ ವಿವರ


ರೂ 6 ಕೋಟಿಯ ಆಸ್ತಿಪಾಸ್ತಿಗಳ ವಿವರಗಳನ್ನು ರಮಾನಾಥ ರೈ ನೀಡಿದ್ದು ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಸಲ್ಲಿಸಿರುವ ಮಾಹಿತಿಯ ಪ್ರಕಾರ ಇವರ ಒಟ್ಟು ಆದಾಯ ರೂ 72 ಲಕ್ಷ ಎಂಬುದಾಗಿ ಉಲ್ಲೇಖಗೊಂಡಿದೆ. ರೂ 10 ಲಕ್ಷದ ಆದಾಯ ಪತ್ನಿಯ ಹೆಸರಿನಲ್ಲಿದೆ.




ರಮಾನಾಥ ರೈಯವರು ವಿಜಯಾ ಬ್ಯಾಂಕ್‌ನಲ್ಲಿ ತಮ್ಮ ಹೆಸರಿನಲ್ಲಿ ರೂ 2 ಲಕ್ಷ ಹಣ ಜಮೆ ಮಾಡಿದ್ದು ಪತ್ನಿಯ ಹೆಸರಿನಲ್ಲಿ ರೂ 1 ಲಕ್ಷ ಅಂತೆಯೇ ಇನ್ನಿತರ ಅವಲಂಬಿತರ ಹೆಸರಿನಲ್ಲಿ ರೂ 1 ಲಕ್ಷ ಹಾಗೂ ರೂ 90,000, ಹೀಗೆ ಒಟ್ಟು ರೂ 6,60,000 ಹಣ ಜಮೆ ಮಾಡಿದ್ದಾರೆ.

top videos


    ಆಭರಣದ ಮಾಹಿತಿಯನ್ನು ನೀಡಿದ್ದು ರೂ 61 ಲಕ್ಷ ಬೆಲೆಯ ಚಿನ್ನಾಭರಣಗಳನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ರೂ 1 ಕೋಟಿ ಬೆಲೆ ಬಾಳುವ ಕೃಷಿ ಭೂಮಿಯನ್ನು ರೈ ಹೊಂದಿದ್ದು ರೂ 3 ಲಕ್ಷ ಬೆಲೆಬಾಳುವ ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

    First published: