• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Eshwar Khandre: ಭಾಲ್ಕಿ ಕ್ಷೇತ್ರದಿಂದ ಸ್ಪರ್ಧೆಗಿಳಿದಿರುವ ಈಶ್ವರ್ ಖಂಡ್ರೆ ಬಗ್ಗೆ ನಿಮಗೆಷ್ಟು ಗೊತ್ತು?

Eshwar Khandre: ಭಾಲ್ಕಿ ಕ್ಷೇತ್ರದಿಂದ ಸ್ಪರ್ಧೆಗಿಳಿದಿರುವ ಈಶ್ವರ್ ಖಂಡ್ರೆ ಬಗ್ಗೆ ನಿಮಗೆಷ್ಟು ಗೊತ್ತು?

ಈಶ್ವರ್ ಖಂಡ್ರೆ, ಮಾಜಿ ಸಚಿವ

ಈಶ್ವರ್ ಖಂಡ್ರೆ, ಮಾಜಿ ಸಚಿವ

10 ಕೋಟಿಗೂ ಹೆಚ್ಚಿನ ಆಸ್ತಿ-ಪಾಸ್ತಿ ಹೊಂದಿರುವ ಇವರು ಬ್ಯಾಂಕ್​​ನಲ್ಲಿ 41 ಲಕ್ಷ ಹೊಂದಿದ್ದಾರೆ.

 • Share this:

ಬೆಂಗಳೂರು: ರಾಜ್ಯದಲ್ಲಿ ಎಲೆಕ್ಷನ್‌ನದ್ದೇ (Karnataka Election) ಸುದ್ದಿ. ಅಭ್ಯರ್ಥಿಗಳ ಪರ-ವಿರೋಧ, ರಾಜಕೀಯ ನಾಯಕರ (Political Leaders) ಕೆಸರೆರಚಾಟ, ಮತಬೇಟೆ, ಪ್ರಚಾರ, ಮತದಾರರ ಓಲೈಕೆ. ಹೀಗೆ ಟಿಕೆಟ್‌ ಸಿಕ್ಕ ಅಭ್ಯರ್ಥಿಗಳು ಗೆಲುವಿಗಾಗಿ, ಪಕ್ಷವನ್ನು ಆಡಳಿತ ಪಕ್ಷವನ್ನಾಗಿ ಮಾಡುವ ನಿಟ್ಟಿನಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ (Congress, BJP, JDS) ಹಾಗೂ ಇನ್ನಿತರ ಸ್ವತಂತ್ರ್ಯ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಆಯಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ತಿಳಿಯೋದು ಅಲ್ಲಿನ ಮತದಾರರಿಗೆ ಮುಖ್ಯವಾಗುತ್ತದೆ.


ಹಾಗಿದ್ದರೆ ನಾವಿಲ್ಲಿ ಇಂದು ಬೀದರ್ ಜಿಲ್ಲೆಯ ಭಾಲ್ಕಿ (Bhalki) ಕ್ಷೇತ್ರದ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ (Eshwar Khandre) ಬಗ್ಗೆ ತಿಳಿಯೋಣ.


ಭಾಲ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಸ್ಪರ್ಧೆ


ಹಲವು ವರ್ಷಗಳಿಂದ ಕಾಂಗ್ರೆಸ್‌ ಪಡೆಯಲ್ಲಿರುವ ಈಶ್ವರ್ ಖಂಡ್ರೆ ಪಕ್ಷಕ್ಕೆ ಒಂದು ರೀತಿ ಆನೆ ಬಲ ತುಂಬುವ ವ್ಯಕ್ತಿ. ಹಲವು ವರ್ಷಗಳಿಂದ ಕೈ ಪಕ್ಷದಲ್ಲಿಯೇ ಇದ್ದು, ಪಕ್ಷವನ್ನು ಸಂಘಟಿಸುತ್ತಿರುವ ಇವರು ಈ ಬಾರಿ ತಮ್ಮ ಕ್ಷೇತ್ರವಾದ ಭಾಲ್ಕಿಯಿಂದ ಎಲೆಕ್ಷನ್‌ ರಂಣರಂಗಕ್ಕೆ ಧುಮುಕಿದ್ದಾರೆ.‌


 karnataka-assembly-elections-2023-former-minister-eshwar-khandre-political-profile-stg-mrq
ಈಶ್ವರ್ ಖಂಡ್ರೆ


ಖಂಡ್ರೆ ಕುಟುಂಬಕ್ಕೆ ರಾಜಕೀಯ ನಂಟು


ಈಶ್ವರ್‌ ಖಂಡ್ರೆ ಅವರು ರಾಜಕೀಯಕ್ಕೆ ಬಂದಾಗಲೂ ಅವರಿಗೆ ರಾಜಕೀಯ ಕ್ಷೇತ್ರ ಹೊಸದಾಗಿರಲಿಲ್ಲ. ಏಕೆಂದರೆ ಇವರ ತಂದೆ ಮಾಜಿ ಸಚಿವರಾಗಿದ್ದರು ಮತ್ತು ಈ ಕ್ಷೇತ್ರದ ಪ್ರಭಾವಿ ರಾಜಕಾರಣಿಯಾಗಿದ್ದರು.


ಖಂಡ್ರೆ ಅವರ ಕುಟುಂಬಕ್ಕೂ ರಾಜಕೀಯಕ್ಕೂ ಅವಿನಾಭಾವ ಸಂಬಂಧ. ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದವರಲ್ಲಿ ಖಂಡ್ರೆ ಕುಟುಂಬದ ಮೂರನೇ ಸದಸ್ಯರಾಗಿದ್ದಾರೆ.


ತಂದೆಯ ನಂತರ ಸಹೋದರ ವಿಜಯಕುಮಾರ್ ಖಂಡ್ರೆ ಅವರು ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ತಂದೆಯ ಹಾದಿಯಲ್ಲಿ ಮುಂದುವರಿಯುತ್ತಿರುವ ಇವರು ತಂದೆ ಸ್ಪರ್ಧಿಸುತ್ತಿದ್ದ ಅದೇ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯುತ್ತಿದ್ದಾರೆ.


 karnataka-assembly-elections-2023-former-minister-eshwar-khandre-political-profile-stg-mrq
ಈಶ್ವರ್ ಖಂಡ್ರೆ


ರಾಜಕಾರಣಿಯಾಗಿ ಈಶ್ವರ್ ಖಂಡ್ರೆ ಬಗ್ಗೆ ಹಲವರಿಗೆ ತಿಳಿದಿರುತ್ತದೆ. ವೈಯಕ್ತಿಕ ಜೀವನ ರಾಜಕೀಯ, ಆಸ್ತಿ ಮೌಲ್ಯ, ಸೋಲು-ಗೆಲುವು ಈ ಬಗ್ಗೆಯೂ ಇಲ್ಲಿ ನೋಡೋಣ.


ಈಶ್ವರ್ ಖಂಡ್ರೆ ಹುಟ್ಟೂರು ಎಲ್ಲಿ, ವಿದ್ಯಾರ್ಹತೆ ಏನು?‌


ಪೂರ್ತಿ ಹೆಸರು ಈಶ್ವರ ಭೀಮಣ್ಣ ಖಂಡ್ರೆ. ಖಂಡ್ರೆ ಅವರು ಭಾಲ್ಕಿಯಲ್ಲಿ 15 ಜನವರಿ 1962 ರಂದು ಜನಿಸಿದರು. ತಂದೆ ಮಾಜಿ ಸಚಿವ ಭೀಮಣ್ಣ ಖಂಡ್ರೆ ಮತ್ತು ತಾಯಿ ಲಕ್ಷ್ಮೀಬಾಯಿ. ಇಬ್ಬರು ಮಕ್ಕಳಲ್ಲಿ ಈಶ್ವರ ಖಂಡ್ರೆ ಒಬ್ಬರು. ಅವರು 1985ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆದರು.


ಎಂಜಿನಿಯರಿಂಗ್‌ ಮುಗಿಸಿ ಕೃಷಿ, ಸಮಾಜ ಸೇವೆ ಅಂತಾ ತಲ್ಲೀನರಾಗಿದ್ದ ಈಶ್ವರ್‌ ಖಂಡ್ರೆ ರಾಜಕೀಯಕ್ಕೂ ಮುಖ ಮಾಡುತ್ತಾರೆ.


 karnataka-assembly-elections-2023-former-minister-eshwar-khandre-political-profile-stg-mrq
ಈಶ್ವರ್ ಖಂಡ್ರೆ


ರಾಜಕೀಯದಲ್ಲಿ ಸೋಲು-ಗೆಲುವು


2004ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಪರಾಭವಗೊಂಡ ನಂತರ, 2008ರಲ್ಲಿ ಖಂಡ್ರೆ ಅವರು ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಅವರನ್ನು 20,971 ಮತಗಳ ಅಂತರದಿಂದ ಸೋಲಿಸಿದ್ದರು.
ಮತ್ತೆ 2013 ಬೀದರ್‌ನ ಬಾಲ್ಕಿ ಕ್ಷೇತ್ರದಿಂದ 2ನೇ ಬಾರಿಗೆ ಗೆಲುವು ಸಾಧಿಸಿದರು. ನಂತರ 2016 ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡುತ್ತಾರೆ. ಕಳೆದ ಬಾರಿಯೂ ಈ ಕ್ಷೇತ್ರದ ಗೆಲುವಿನ ಅಭ್ಯರ್ಥಿಯಾಗಿರುವ ಇವರು ಮತ್ತದೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.


ಬಿಜೆಪಿ ಅಭ್ಯರ್ಥಿಗೆ ಟಕ್ಕರ್‌ ಕೊಟ್ಟಿದ್ದ ಖಂಡ್ರೆ


ಕಳೆದ ಬಾರಿಯ ಎಲೆಕ್ಷನ್‌ನಲ್ಲಿ ಈಶ್ವರ್‌ ಖಂಡ್ರೆ ಬಿಜೆಪಿ ಅಭ್ಯರ್ಥಿ ಡಿ ಕೆ ಸಿದ್ರಾಮ ಅವರನ್ನು 21,438 ಮತಗಳಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಬಾಲ್ಕಿಯಲ್ಲಿ ಪ್ರಕಾಶ್ ಖಂಡ್ರೆ ಅವರು ಈಶ್ವರ್‌ ಖಂಡ್ರೆ ವಿರುದ್ಧ ನಿಂತಿದ್ದಾರೆ.


ಇದನ್ನೂ ಓದಿ:  Leaders Profile: ಬಂಟ್ವಾಳದ ಕಲಿ, ಕಾಂಗ್ರೆಸ್‌ನ ಹಿರಿಯ ನಾಯಕ ಬೆಳ್ಳಿಪ್ಪಾಡಿ ರಮಾನಾಥ ರೈ ರಾಜಕೀಯ ಏಳುಬೀಳುಗಳ ಪರಿಚಯ ಹೀಗಿದೆ


 karnataka-assembly-elections-2023-former-minister-eshwar-khandre-political-profile-stg-mrq
ಈಶ್ವರ್ ಖಂಡ್ರೆ


ಆಸ್ತಿಪಾಸ್ತಿಗಳ ವಿವರ

top videos


  10 ಕೋಟಿಗೂ ಹೆಚ್ಚಿನ ಆಸ್ತಿ-ಪಾಸ್ತಿ ಹೊಂದಿರುವ ಇವರು ಬ್ಯಾಂಕ್​​ನಲ್ಲಿ 41 ಲಕ್ಷ ಹೊಂದಿದ್ದಾರೆ. 10 ಲಕ್ಷ ನಗದು ಹಣ, ಆಭರಣ ಅದು ಇದು ಅಂತಾ 69 ಲಕ್ಷದ ಮೌಲ್ಯದ ಆಸ್ತಿ ಹೊಂದಿದ್ದಾರೆ. ತಲಾ ಒಂದೊಂದು ಕೋಟಿ ಮೌಲ್ಯದ ಭೂಮಿ ಮತ್ತು ಕೃಷಿಯೇತರ ಭೂಮಿ ಒಡೆಯರಾಗಿದ್ದಾರೆ. ಇನ್ನೂ ಸಹ ಹಲವರು ಆಸ್ತಿಪಾಸ್ತಿಗಳ ಬಗ್ಗೆ ವಿವರ ನೀಡಿದ್ದಾರೆ.

  First published: