• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Congress Leader: ರಾಯರೆಡ್ಡಿ ಕೈ ಹಿಡಿತಾರಾ ಕೊಪ್ಪಳದ ಜನತೆ? ಇಲ್ಲಿದೆ ಶಾಸಕರ ರಾಜಕೀಯ ಜೀವನದ ಕಿರುಚಿತ್ರಣ

Congress Leader: ರಾಯರೆಡ್ಡಿ ಕೈ ಹಿಡಿತಾರಾ ಕೊಪ್ಪಳದ ಜನತೆ? ಇಲ್ಲಿದೆ ಶಾಸಕರ ರಾಜಕೀಯ ಜೀವನದ ಕಿರುಚಿತ್ರಣ

ಬಸವರಾಜ್ ರಾಯರೆಡ್ಡಿ, ಮಾಜಿ ಸಚಿವ

ಬಸವರಾಜ್ ರಾಯರೆಡ್ಡಿ, ಮಾಜಿ ಸಚಿವ

Basavaraj Rayareddy: ರಾಯರೆಡ್ಡಿ ಅವರು ಕರ್ನಾಟಕ ವಿಧಾನಸಭೆಯ ಐದು ಅವಧಿಯ ಸದಸ್ಯರಾಗಿದ್ದಾರೆ ಮತ್ತು 11 ನೇ ಲೋಕಸಭೆಯ ಒಂದು ಅವಧಿಯ ಸದಸ್ಯರಾಗಿದ್ದಾರೆ.

  • Trending Desk
  • 2-MIN READ
  • Last Updated :
  • Koppal, India
  • Share this:

ಮೇ 10 ರ ವಿಧಾನಸಭಾ ಚುನಾವಣೆಯು (Karnataka Assembly Election 2023) ಜನಪ್ರತಿನಿಧಿಗಳಿಗೆ ದೊಡ್ಡ ಅಗ್ನಿಪರೀಕ್ಷೆಯಾಗಿದೆ. ಮತದಾರರನ್ನು (Voters) ಓಲೈಸಲು ಅಭ್ಯರ್ಥಿಗಳು ಸಾಕಷ್ಟು ಕಸರತ್ತು ನಡೆಸುತ್ತಿದ್ದು ತಮ್ಮ ಪಕ್ಷಕ್ಕೆ ಮತ (vote) ಹಾಕುವಂತೆ ಮನವೊಲಿಸುವ ಕಾರ್ಯ ನಡೆಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಜನರು ಪಕ್ಷ ನೋಡಿ ಮತ ಹಾಕುತ್ತಿಲ್ಲ ಬದಲಿಗೆ ತಮ್ಮ ನಾಯಕ (Leaders) ತಮಗಾಗಿ ಎಷ್ಟು ಕೆಲಸ ಮಾಡಬಹುದು? ಈವರೆಗೆ ಅವರು ಮಾಡಿರುವ ಪ್ರಗತಿಗಳೇನು? ಮೊದಲಾದ ಅಂಶಗಳನ್ನು ಅರಿತುಕೊಂಡು ಅಳೆದು ಸುರಿದು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿದ್ದಾರೆ.


ಬಸವರಾಜ ರಾಯರೆಡ್ಡಿಯವರ ಕಿರುಪರಿಚಯ ಹೀಗಿದೆ


ಒಟ್ಟಿನಲ್ಲಿ ಅಭ್ಯರ್ಥಿಗಳಿಗೆ ಈ ಚುನಾವಣೆಯು ಅಗ್ನಿಪರೀಕ್ಷೆ ಎಂದೆನಿಸಿದ್ದು ಯಾರನ್ನು ಆಯ್ಕೆ ಮಾಡಬೇಕು ಎಂಬ ಚುಕ್ಕಾಣಿ ಇದೀಗ ಶ್ರೀಸಾಮಾನ್ಯನ ಕೈಯಲ್ಲಿದೆ.


ಇಂದಿನ ಲೇಖನದಲ್ಲಿ ಕಾಂಗ್ರೆಸ್ ಪಕ್ಷದ ಕೊಪ್ಪಳ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿಯವರ ಪರಿಚಯ ಮಾಡಿಕೊಳ್ಳೋಣ.


ಸಪ್ಟೆಂಬರ್ 6, 1956 ರಂದು ಜನಿಸಿದ ಬಸವರಾಜ ರಾಯರೆಡ್ಡಿ ಕಾಂಗ್ರೆಸ್‌ನ ಸದಸ್ಯರಾಗಿದ್ದಾರೆ. ಇವರ ತಂದೆ ಬಸಲಿಂಗಪ್ಪ. 53 ರ ಹರೆಯದ ಬಸವರಾಜ ಚುನಾವಣೆಯ ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದು, ತಮ್ಮನ್ನು ಗೆಲ್ಲಿಸಿಕೊಡಿ ಎಂದು ಮತದಾರರಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ.


ತಾನು ಗೆದ್ದುಬಂದರೆ ಜನಪರ ಕಾರ್ಯಗಳನ್ನು ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಬಿಎ ಎಎಲ್‌ಎಲ್‌ಬಿ ಪದವೀಧರರಾಗಿರುವ ರಾಯರೆಡ್ಡಿಯವರು ಧಾರವಾಡ ವಿಶ್ವೇಶ್ವರಯ್ಯ ಲಾ ಕಾಲೇಜಿನಲ್ಲಿ ಕಾನೂನು ಅಧ್ಯಯನ ಪೂರ್ಣಗೊಳಿಸಿದ್ದಾರೆ.


ರಾಜಕೀಯ ಪ್ರಯಾಣ ಹೇಗಿದೆ?


ರಾಯರೆಡ್ಡಿ ಅವರು ಕರ್ನಾಟಕ ವಿಧಾನಸಭೆಯ ಐದು ಅವಧಿಯ ಸದಸ್ಯರಾಗಿದ್ದಾರೆ ಮತ್ತು 11 ನೇ ಲೋಕಸಭೆಯ ಒಂದು ಅವಧಿಯ ಸದಸ್ಯರಾಗಿದ್ದಾರೆ. ಜೂನ್ 2016 ರಲ್ಲಿ ರಾಯರೆಡ್ಡಿ ಅವರು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಕ್ಯಾಬಿನೆಟ್ ಮಂತ್ರಿಯಾಗಿ ಸೇರ್ಪಡೆಗೊಂಡರು ಮತ್ತು ಉನ್ನತ ಶಿಕ್ಷಣ ಸಚಿವರಾಗಿದ್ದರು.


ರಾಯರೆಡ್ಡಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನವರು ಮತ್ತು ಕರ್ನಾಟಕದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2000 ರ ಆರಂಭದಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು.


ರಾಯರೆಡ್ಡಿ ಅವರು 1985 ರಲ್ಲಿ ಜನತಾ ದಳ ಟಿಕೆಟ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸುಭಾಶ್ಚಂದ್ರ ಬಸವಲಿಂಗನಗೌಡ ಪಾಟೀಲ್ ವಿರುದ್ಧ ಸುಮಾರು 5000 ಮತಗಳಿಂದ ಗೆದ್ದು ಕರ್ನಾಟಕ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು.


1989 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಯರೆಡ್ಡಿ ಜನತಾ ದಳ ಟಿಕೆಟ್‌ನಲ್ಲಿ ನಿಂತು ಮತ್ತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸುಭಾಶ್ಚಂದ್ರ ಬಸವಲಿಂಗನಗೌಡ ಪಾಟೀಲ್ ವಿರುದ್ಧ ಸುಮಾರು 2000 ಮತಗಳಿಂದ ಗೆದ್ದರು.




ಲೋಕಸಭೆ ಪ್ರವೇಶಿಸಿರುವ ರಾಯರೆಡ್ಡಿ


1996 ರಲ್ಲಿ ಅವರು 11 ನೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಜನತಾ ದಳ ಟಿಕೆಟ್‌ನಲ್ಲಿ ಸಂಸದರಾಗಿ ಆಯ್ಕೆಯಾದರು, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅನ್ವರಿ ಬಸವರಾಜ್ ಪಾಟೀಲ್ ಅವರನ್ನು ಸುಮಾರು 70000 ಮತಗಳಿಂದ ಸೋಲಿಸಿದರು.


ರಾಯರೆಡ್ಡಿ ಅವರು 2008 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದರು ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಈಶಣ್ಣ ಗುಳಗನ್ನವರ್ ವಿರುದ್ಧ ಸುಮಾರು 29,000 ಮತಗಳಿಂದ ಸೋತರು. 2018ರ ಚುನಾವಣೆಯಲ್ಲಿ ಬಿಜೆಪಿಯ ಆಚಾರ್ ಹಾಲಪ್ಪ ಬಸಪ್ಪ ಅವರನ್ನು 13,000 ಮತಗಳ ಅಂತರದಿಂದ ಸೋಲಿಸಿದ್ದರು.


ರಾಯರೆಡ್ಡಿಯವರ ಆಸ್ತಿಪಾಸ್ತಿ ವಿವರ


ಬಸವರಾಜ ರಾಯರೆಡ್ಡಿಯವರು ರೂ 3 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂಬ ಮಾಹಿತಿ ನೀಡಿದ್ದು ರೂ 29 ಲಕ್ಷದ ನಗದು ಹಣವನ್ನಿರಿಸಿಕೊಂಡಿದ್ದಾರೆ. ಬ್ಯಾಂಕ್‌ನಲ್ಲಿ ರೂ 15 ಲಕ್ಷ ಡಿಪಾಸಿಟ್ ಇರಿಸಿದ್ದಾರೆ ಎಂಬ ವಿವರ ನೀಡಿದ್ದಾರೆ. ಎಲ್‌ಐಸಿ ಇನ್ಶೂರೆನ್ಸ್‌ ಅನ್ನು ಹೊಂದಿದ್ದು ಅದರ ಮೌಲ್ಯ ರೂ 23 ಲಕ್ಷವಾಗಿದೆ.


ರೂ 30 ಲಕ್ಷದ ಚಿನ್ನಾಭರಣಗಳನ್ನು ಹೊಂದಿರುವುದಾಗಿಯೂ ಮಾಹಿತಿ ನೀಡಿದ್ದಾರೆ. ಇದೆಲ್ಲಾ ವಸ್ತುಗಳ ಒಟ್ಟು ಮೌಲ್ಯ ರೂ 75 ಲಕ್ಷ ಎಂಬುದಾಗಿ ರಾಯರೆಡ್ಡಿ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: Vijayanand Kashappanavar: ಹುನಗುಂದ ಮತ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಕುರಿತ ಪರಿಚಯ ಲೇಖನ ಇಲ್ಲಿದೆ


30 ಲಕ್ಷದ ವಾಣಿಜ್ಯ ಕಟ್ಟಡಗಳು


ರೂ 60 ಲಕ್ಷ ಬೆಲೆಯ ಕೃಷಿಭೂಮಿಯನ್ನು ಶಾಸಕರು ಹೊಂದಿದ್ದು, ರೂ 69 ಲಕ್ಷ ಬೆಲೆಯ ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ. ರೂ 30 ಲಕ್ಷದ ವಾಣಿಜ್ಯ ಕಟ್ಟಡಗಳು ಶಾಸಕರ ಹೆಸರಿನಲ್ಲಿದೆ. ರೂ 70 ಲಕ್ಷ ಮೌಲ್ಯದ ನಿವೇಶನಗಳನ್ನು ಹೊಂದಿದ್ದಾರೆ. ಈ ಎಲ್ಲಾ ಆಸ್ತಿಪಾಸ್ತಿಗಳ ಪ್ರಸ್ತುತ ಬೆಲೆ ರೂ 2 ಕೋಟಿ ಎಂಬ ಮಾಹಿತಿ ಲಭ್ಯವಾಗಿದೆ.

top videos
    First published: