ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ (Karnataka Assembly Election) ದಿನಾಂಕ ಘೋಷಣೆ ಬೆನ್ನಲ್ಲೇ ಚುನಾವಣಾ ಪೂರ್ವ ಸಮೀಕ್ಷೆಗಳು (Pre-Election Poll) ಹೊರಬಿದ್ದಿದೆ. ದೇಶದ ಖ್ಯಾತ ಸಂಸ್ಥೆಗಳಾದ ಎಬಿಪಿ - ಸಿ ವೋಟರ್ (CVoter Survey ), ಝೀ ನ್ಯೂಸ್ (Zee News Survey) ಸಮೀಕ್ಷೆಗಳನ್ನು ನಡೆಸಿವೆ. ಎಬಿಪಿ- ಸಿ ವೋಟರ್ ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ (Congress) ಬಹುಮತ ಬಂದಿದೆ. ಝೀ ನ್ಯೂಸ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ರಾಜ್ಯದಲ್ಲಿ ಅತಂತ್ರ ಫಲಿತಾಂಶ ಲಭ್ಯವಾಗಲಿದೆ ಅಂತ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಅತಂತ್ರ ಫಲಿತಾಂಶ ಎಂದ ಜೀ ನ್ಯೂಸ್ ಸಮೀಕ್ಷೆ
ಝೀ ನ್ಯೂಸ್ ಸಮೀಕ್ಷೆಯಲ್ಲಿ 56 ಸಾವಿರ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡಲಾಗಿದೆ. ಮಾರ್ಚ್ ರಿಂದ 28ರ ವರೆಗೂ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡಲಾಗಿದೆ. ಇಂದಿನಿಂದ 42 ದಿನಗಳ ಬಳಿಕ ರಾಜ್ಯದಲ್ಲಿ ಹೊಸ ಸರ್ಕಾರ ಆಯ್ಕೆ ಮಾಡಲು ಮತದಾನ ನಡೆಯಲಿದ್ದು, 45 ದಿನಗಳ ಬಳಿಕ ಯಾವ ಸರ್ಕಾರ ರಚನೆಯಾಗಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ. ಝೀ ನ್ಯೂಸ್ ಸಮೀಕ್ಷೆಯಂತೆ ರಾಜ್ಯದಲ್ಲಿ ಬಿಜೆಪಿಗೆ 96-106 ಸ್ಥಾನ ಸಿಗಲಿದೆಯಂತೆ. ಕಾಂಗ್ರೆಸ್ 88-98, ಜೆಡಿಎಸ್ 23-33 ಎಂದು ಸಮೀಕ್ಷೆ ತಿಳಿಸಿದೆ.
ಇದನ್ನೂ ಓದಿ: Karnataka Elections: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸ್ಪಷ್ಟ ಎಂದ ಸಿ-ವೋಟರ್ ಸಮೀಕ್ಷೆ, ಬಿಜೆಪಿಗೆಷ್ಟು ಸ್ಥಾನ?
ಸದ್ಯ ಬಿಜೆಪಿ 119 ಸ್ಥಾನ, ಕಾಂಗ್ರೆಸ್ 75 ಸ್ಥಾನ ಮತ್ತು ಜೆಡಿಎಸ್ 28 ಹೊಂದಿದೆ
ಕರ್ನಾಟಕವು 224 ಸದಸ್ಯರ ವಿಧಾನಸಭೆಯನ್ನು ಹೊಂದಿದೆ. ಸದ್ಯ ಬಿಜೆಪಿ 119 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್ 75 ಸ್ಥಾನಗಳನ್ನು ಹೊಂದಿದೆ. ಜೆಡಿಎಸ್ 28 ಶಾಸಕರನ್ನು ಹೊಂದಿದೆ. ಎರಡು ಸೀಟುಗಳು ಖಾಲಿ ಇವೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಲಭ್ಯವಾದ ಕಾರಣ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಸರ್ಕಾರವನ್ನು ರಚನೆ ಮಾಡಿದ್ದವು. ಆದರೆ ಆ ಸರ್ಕಾರ 14 ತಿಂಗಳ ಅವಧಿಗೆ ಮಾತ್ರ ಆಡಳಿತ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಸದ್ಯ ಚುನಾವಣೆಯ ಫಲಿತಾಂಶದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಮೂರು ಪಕ್ಷಗಳು ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲು ಭಾರೀ ಪೈಪೋಟಿ ನಡೆಸಿದೆ.
ರಾಜ್ಯ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದ್ದು, ಮೇ 10ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದೆ. ಈ ನಡುವೆ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬಿದ್ದಿದ್ದು, ಕರ್ನಾಟಕ ಚುನಾವಣೆಯ ಬಗ್ಗೆ ಅಚ್ಚರಿಯ ಫಲಿತಾಂಶಗಳನ್ನು ಸಮೀಕ್ಷೆಗಳು ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ