ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಅಭ್ಯರ್ಥಿಗಳು (Candidates) ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ ಚುನಾವಣಾ ಆಯೋಗಕ್ಕೆ (Election Commission ) ಈಗ ಟೆನ್ಶನ್ ಆಗಿದೆ. ಏನದು ಟೆನ್ಶನ್ ಎನ್ನವುದರ ಜೊತೆಗೆ ಚುನಾವಣಾ ಆಯೋಗ ವೋಟಿಂಗ್ (Voting) ಹೆಚ್ಚಳ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಹೌದು, ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Elections ) ದಿನ ಆಮ್ ಆದ್ಮಿ ಪಕ್ಷದ ಪೊರಕೆ (Jhaadu) ಗುರುತನ್ನು ಮತದಾರರಿಗೆ ಕಾಣದಂತೆ ಮುಚ್ಚಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಎಲ್ಲಾ ಕ್ಷೇತ್ರಗಳಿಂದಲೂ ಆಮ್ ಆದ್ಮಿ ಪಾರ್ಟಿ ಅಖಾಡಕ್ಕೆ ಇಳಿದಿದ್ದು, ಮತದಾನದ ದಿನ ಮರೆಮಾಚಬೇಕಾದ ಅನಿವಾರ್ಯತೆ ಇದೆ.
ಮತಗಟ್ಟೆಯಲ್ಲಿ ಪೊರಕೆಯನ್ನು ಏಕೆ ಇಡಬೇಕು? ಕೆಲಸ ಮಾಡುತ್ತಿರುವ ಫ್ಯಾನ್ಅನ್ನು ಹೇಗೆ ತೆಗೆಯಲು ಬರುತ್ತದೆ. ಅದನ್ನು ಒಂದು ಚಿಹ್ನೆಯಾಗಿ ಬಳಕೆ ಮಾಡಿದರೆ ಮಾತ್ರ ಕ್ರಮಕೈಗೊಳ್ಳಬೇಕಾಗುತ್ತದೆ. ಚುನಾವನಾ ಆಯೋಗ ಚಿಹ್ನೆಯನ್ನು ಮಾತ್ರ ಇಡುವಂತೆ ಇಲ್ಲ ಅಂತ ಹೇಳುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಫ್ಯಾನ್ ಕೆಲ ಪಕ್ಷೇತರ ಅಭ್ಯರ್ಥಿಗಳ ಅಧಿಕೃತ ಚಿಹ್ನೆ
ಪೊರಕೆ ಜೊತೆಗೆ ಫ್ಯಾನ್ ಕೂಡ ಪೋಲಿಂಗ್ ಬೂತ್ನಿಂದ ಗೇಟ್ ಪಾಸ್ ಕೊಡಬೇಕಿದೆ. ಫ್ಯಾನ್ ಕೂಡ ಕೆಲವು ಪಕ್ಷೇತರ ಅಭ್ಯರ್ಥಿಗಳ ಅಧಿಕೃತ ಚಿಹ್ನೆಯಾಗಿದ್ದು ಮತದಾನದ ವೇಳೆ ಇದೂ ಕೂಡ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ 48 ಗಂಟೆ ಮೊದಲೇ ಮತಗಟ್ಟೆ ಸುತ್ತಮುತ್ತ ಪೊರಕೆ ಬಳಸಿ ಕಸಗುಡಿಸದಂತೆ, ಮತಗಟ್ಟೆಗಳಲ್ಲಿ ಪೊರಕೆ ಇಡದಂತೆ ಮತ್ತು ಫ್ಯಾನ್ ಕೂಡ ತೆರವು ಮಾಡಲು ಸಿಬ್ಬಂದಿಗಳಿಗೆ ಸೂಚಿಸಿದೆ. ಇದನ್ನು ಹಾಸ್ಯಾಸ್ಪದ ಎಂದಿದೆ ಆಮ್ ಆದ್ಮಿ ಪಾರ್ಟಿ.
ಮತದಾನ ಕೇಂದ್ರಗಳಲ್ಲಿ ಪೊರಕೆಯನ್ನು ಇಡುವಂತಿಲ್ಲ ಎಂದು ಆಯೋಗ ಹೇಳಿದೆ ಎನ್ನಲಾಗಿದೆ. ಆದರೆ ಇದು ಒಂದು ಹಾಸ್ಯಸ್ಪದವಾದ ಸಂಗತಿಯಾಗಿದೆ. ಇಂತಹ ಬಾಲಿಶ ಕಾರ್ಯವನ್ನು ಆಯೋಗ ಮಾಡುತ್ತೆ ಎಂದರೆ ವಿಷಾದನೀಯ ಎನಿಸುತ್ತದೆ ಎಂದು ಪುಲಕೇಶಿನಗರದ ಆಪ್ ಅಭ್ಯರ್ಥಿ ಪ್ರಕಾಶ್ ರಾಠೋಡ್ ಅಭಿಪ್ರಾಯಪಟ್ಟಿದೆ.
ಪ್ರತಿ ಚುನಾವಣೆಯಲ್ಲಿ ವೋಟಿಂಗ್ ಪರ್ಸೆಂಟೇಜ್ ಕಡಿಮೆ ಆಗುತ್ತೆ. ಆದರೆ ಈ ಬಾರಿ ಶೇಕಡಾ 70ರಷ್ಟು ಮತದಾನ ಆಗಬೇಕು ಎನ್ನುವ ಕಾರಣಕ್ಕೆ ಚುನಾವಣಾ ಆಯೋಗ ಜಾಗೃತಿ ಕಾರ್ಯಕ್ರಮ ಹೆಚ್ಚಳ ಮಾಡಿದೆ. ಯುವ ಮತದಾರರ ಮೇಲೆ ಫೋಕಸ್ ಮಾಡಿದ್ದು, ಬೆಂಗಳೂರಿನಲ್ಲಿ 1.47 ಲಕ್ಷ ಯುವ ಮತದಾರರು ಇದ್ದು, 30 ವರ್ಷ ಒಳಗಿನ ಯುವ ಮತದಾರರಿಂದ ಶೇಕಡಾ 80ರಷ್ಟು ಮತದಾನ ಮಾಡಿಸುವ ಗುರಿ ಹೊಂದಲಾಗಿದೆ.
ಈಗಾಗಲೇ 80 ವರ್ಷ ಮೇಲ್ಪಟ್ಟವರು ಮತದಾನ ಮಾಡುತ್ತಿದ್ದು, 9,152 ಮತದಾರರ ಪೈಕಿ ಈವರೆಗೂ ಶೇಕಡಾ 80 ರಷ್ಟು ಮಂದಿ ಮತದಾನ ಮಾಡಿದ್ದಾರೆ. ಈ ಬಾರಿ ಹುಮ್ಮಸ್ಸಿನಿಂದ ಹಿರಿಯ ಜೀವಗಳು ಮತದಾನ ಮಾಡುವುದರ ಮೂಲಕ ಯುವಕರಿಗೆ ಆರ್ದಶವಾಗಿದ್ದಾರೆ. ಈ ಬಾರಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಇದೂ ಕಾರಣ ಆಗುವ ಸಾಧ್ಯತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ