ಕರ್ನಾಟಕ ಚುನಾವಣಾ (karnataka Elerctions 2023) ದಿನಾಂಕ ಘೋಷಣೆಯಾಗಿದೆ. ಎಬಿಪಿ ನ್ಯೂಸ್ ಸಿವೋಟರ್ (CVoter Survey) ಈ ಕುರಿತು ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ 24 ಸಾವಿರದ 759 ಜನರ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಗಿದೆ. ಮತದಾರರ ಬಳಿ ವಿವಿಧ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಸಮೀಕ್ಷೆಯ ಫಲಿತಾಂಶಗಳು ತುಂಬಾ ಆಸಕ್ತಿದಾಯಕವಾಗಿವೆ. ಕರ್ನಾಟಕದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ (Karnataka Assembly Elections) ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಕುರಿತು ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ.
ಈ ಘೋಷಣೆಯೊಂದಿಗೆ, ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಮುನ್ನ, ದಕ್ಷಿಣದ ಈ ರಾಜ್ಯದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್ ನಡುವಿನ ಚುನಾವಣಾ ಸಮರ ಭಾರೀ ಸದ್ದು ಮಾಡಿದೆ. ಜನತಾ ದಳ (ಜಾತ್ಯತೀತ) ರಾಜ್ಯದಲ್ಲಿ ಮೂರನೇ ಪ್ರಮುಖ ಪಕ್ಷವಾಗಿದೆ. ಕರ್ನಾಟಕವು 224 ಸದಸ್ಯರ ವಿಧಾನಸಭೆಯನ್ನು ಹೊಂದಿದೆ. ಸದ್ಯ ಬಿಜೆಪಿ 119 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್ 75 ಸ್ಥಾನಗಳನ್ನು ಹೊಂದಿದೆ. ಜೆಡಿಎಸ್ 28 ಶಾಸಕರನ್ನು ಹೊಂದಿದೆ. ಎರಡು ಸೀಟುಗಳು ಖಾಲಿ ಇವೆ.
ಇದನ್ನೂ ಓದಿ: Karnataka Election 2023: ಮನೆಯಿಂದಲೇ ಮತದಾನ ಮಾಡುವವರಿಗೆ ಇಲ್ಲಿದೆ ಮಾಹಿತಿ; ನೀವು ಓದಲೇ ಬೇಕಾಗಿರುವ ಸುದ್ದಿ!
ಸಮೀಕ್ಷೆಯಲ್ಲಿ ಕರ್ನಾಟಕದ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮೊದಲ ಆಯ್ಕೆ ಎಂದು ಹೇಳಲಾಗಿದೆ. 39 ರಷ್ಟು ಜನರ ಮೊದಲ ಆಯ್ಕೆ ಸಿದ್ದರಾಮಯ್ಯ ಆಗಿದ್ದಾರೆ. ನಂತರದ ಸ್ಥಾನದಲ್ಲಿ ಬಸವರಾಜ ಬೊಮ್ಮಾಯಿ (31%), ಕುಮಾರಸ್ವಾಮಿ (21%) ಮತ್ತು ಡಿಕೆ ಶಿವಕುಮಾರ್ (3%) ಇದ್ದಾರೆ. ಸಮೀಕ್ಷೆಯಲ್ಲಿ ಬಯಲಾದ ಕುತೂಹಲಕಾರಿ ಅಂಶವೆಂದರೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಕ್ಕಿರುವುದು. 224 ಸ್ಥಾನಗಳಲ್ಲಿ ಕಾಂಗ್ರೆಸ್ 115-127 ಸ್ಥಾನಗಳನ್ನು ಪಡೆಯಲಿದೆಯಂತೆ. ಆದರೆ, ಬಿಜೆಪಿ 68 ರಿಂದ 80 ಸ್ಥಾನಗಳನ್ನು ಪಡೆದಿದೆ.
ಪಕ್ಷ | ಸ್ಥಾನಗಳು |
ಬಿಜೆಪಿ | 68-80 |
ಕಾಂಗ್ರೆಸ್ | 115-127 |
ಜೆಡಿಎಸ್ | 23-35 |
ಇತರೆ | 0-2 |
ಪಕ್ಷ | ಸ್ಥಾನಗಳು |
ಬಿಜೆಪಿ | 11-15 |
ಕಾಂಗ್ರೆಸ್ | 15-19 |
ಜೆಡಿಎಸ್ | 01-03 |
ಇತರೆ | 00-01 |
ಇದನ್ನೂ ಓದಿ: Karnataka Election 2023: ರಾಜ್ಯಕ್ಕೆ ಗುಜರಾತ್ EVM ಬೇಡ; ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದ ಡಿಕೆ ಶಿವಕುಮಾರ್
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ವಿಷಯ ಯಾವುದು? ಈ ಪ್ರಶ್ನೆಗೆ ಉತ್ತರವಾಗಿ, 29 ಪ್ರತಿಶತ ಸಾರ್ವಜನಿಕರು ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಮೂಲಭೂತ ಸೌಕರ್ಯಗಳು (22%), ಶಿಕ್ಷಣ (19%), ಭ್ರಷ್ಟಾಚಾರ (13%), ಕಾನೂನು ಮತ್ತು ಸುವ್ಯವಸ್ಥೆ (3%) ಮತ್ತು ಇತರರು (14%) ಸಹ ಜನರು ಸಮಸ್ಯೆಗಳಾಗಿ ಉಲ್ಲೇಖಿಸಿದ್ದಾರೆ.
ಸಮೀಕ್ಷೆಯಲ್ಲಿ ಹೆಚ್ಚಿನ ಜನರು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. 47 ರಷ್ಟು ಜನರು ಚೆನ್ನಾಗಿದೆ ಎಂದು ಹೇಳಿದ್ದಾರೆ. 19 ರಷ್ಟು ಜನರು ಸರಾಸರಿ ಎಂದು ಹೇಳಿದ್ದಾರೆ. 34 ರಷ್ಟು ಜನರು ಇದನ್ನು ಕೆಟ್ಟದಾಗಿದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ