• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Leaders Profile: ವೈದ್ಯ ವೃತ್ತಿಯ ಜೊತೆ ರಾಜಕಾರಣದಲ್ಲಿರುವ ಶಾಸಕಿ ಅಂಜಲಿ ನಿಂಬಾಳ್ಕರ್ ಕಿರು ಪರಿಚಯ

Leaders Profile: ವೈದ್ಯ ವೃತ್ತಿಯ ಜೊತೆ ರಾಜಕಾರಣದಲ್ಲಿರುವ ಶಾಸಕಿ ಅಂಜಲಿ ನಿಂಬಾಳ್ಕರ್ ಕಿರು ಪರಿಚಯ

ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಶಾಸಕಿ

ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಶಾಸಕಿ

Anjali Nimbalkar: ರೂ 1 ಕೋಟಿ ಬೆಲೆಯ ಕೃಷಿ ಭೂಮಿಯನ್ನು ಶಾಸಕಿ ಹೊಂದಿದ್ದು ರೂ 2 ಕೋಟಿಮೌಲ್ಯದ ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

  • Trending Desk
  • 2-MIN READ
  • Last Updated :
  • Belgaum, India
  • Share this:

ಬೆಂಗಳೂರು: ಚುನಾವಣೆ (Election) ಪ್ರಚಾರದಲ್ಲಿ ಭರ್ಜರಿಯಾಗಿಯೇ ತೊಡಗಿಸಿಕೊಂಡಿರುವ ಅಭ್ಯರ್ಥಿಗಳು (Candidates) ನಾನಾ ವಿಧದಲ್ಲಿ ಶ್ರೀ ಸಾಮಾನ್ಯರ ಮನ ಓಲೈಸುವ ನಿಟ್ಟಿನಲ್ಲಿ ನಿರತರಾಗಿದ್ದಾರೆ. ಈ ನಡುವೆ ವಿಧ ವಿಧವಾದ ಆಮಿಷಗಳನ್ನು ಕೂಡ ಒಡ್ಡಿ ಅವರನ್ನು ತಮ್ಮ ಪಕ್ಷದತ್ತ (Political Party) ಓಲೈಸಿಕೊಳ್ಳುವ ಹುನ್ನಾರವನ್ನು ಅಭ್ಯರ್ಥಿಗಳು ನಡೆಸುತ್ತಿದ್ದಾರೆ. ಮತ ಹಾಕುವುದಕ್ಕೂ ಮುನ್ನ ಅಭ್ಯರ್ಥಿಗಳ ರಾಜಕೀಯ ಜೀವನ (Political Career) ಹಾಗೂ ಶಿಕ್ಷಣ, ವೈಯಕ್ತಿಕ ವಿವರಗಳನ್ನು ತಿಳಿದುಕೊಳ್ಳುವ ಆಸಕ್ತಿ ಜನಸಾಮಾನ್ಯರಲ್ಲಿರುತ್ತದೆ. ಅದಕ್ಕೆಂದೇ ಈ ಲೇಖನದಲ್ಲಿ ಅಭ್ಯರ್ಥಿಗಳ ಕಿರುಪರಿಚಯವನ್ನು ನೀಡುತ್ತಿದ್ದೇವೆ.


ಬೆಳಗಾವಿ ಜಿಲ್ಲೆಯ ಖಾನಾಪುರ ಅಂಜಲಿ ನಿಂಬಾಳ್ಕರ್


ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ವಕ್ತಾರರಾದ ಅಂಜಲಿ ನಿಂಬಾಳ್ಕರ್ ಕರ್ನಾಟಕ ವಿಧಾನಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರವನ್ನು ಪ್ರತಿನಿಧಿಸುತ್ತಿದ್ದಾರೆ.


ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಶಾಸಕಿ


ನಿಂಬಾಳ್ಕರ್ ಅವರು 2018 ರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರದಿಂದ ಚುನಾವಣೆಗೆ ಸ್ಪರ್ಧಿಸಿದರು ಮತ್ತು ಬಿಜೆಪಿಯ ವಿಠಲ್ ಹಲಗೇಕರ್ ವಿರುದ್ಧ ಜಯಭೇರಿ ಬಾರಿಸಿದರು.


ರಾಜಕೀಯ ಜೀವನ


ಕರ್ನಾಟಕ ಸರ್ಕಾರದಿಂದ ಕರ್ನಾಟಕ ಮಂತ್ರಿಗಳ ಸಂಬಳ ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ, 2022 ರ ಅಡಿಯಲ್ಲಿ ವೇತನ ಹೆಚ್ಚಳವನ್ನು ಪ್ರತಿಭಟಿಸಿದರು ಮತ್ತು ನಾಗರಿಕರಿಗೆ ಉತ್ತಮ ಸೌಲಭ್ಯಗಳನ್ನು ನೀಡಲು ಅದೇ ಹಣವನ್ನು ಖರ್ಚು ಮಾಡಲು ಸರಕಾರವನ್ನು ವಿನಂತಿಸಿದರು.


ತಮ್ಮ ಕ್ಷೇತ್ರದ ಬಡ ಹಾಗೂ ನಿರ್ಲಕ್ಷಿತ ಸಮುದಾಯಗಳ ಸಮಸ್ಯೆಗಳನ್ನು ಸಂಬಂಧಿತರ ಮುಂದೆ ತರುವುದಕ್ಕಾಗಿ ಪಾದಯಾತ್ರೆಗಳನ್ನು ಆಯೋಜಿಸಿದವರು.


ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಶಾಸಕಿ


ಓದು ಹಾಗೂ ವೈಯಕ್ತಿಕ ಜೀವನ


ಅಂಜಲಿ ನಿಂಬಾಳ್ಕರ್ ಸ್ತ್ರೀರೋಗ ಶಾಸ್ತ್ರ ಮತ್ತು ಲ್ಯಾಪರೊಸ್ಕೋಪಿಯಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಎಮ್‌ಬಿಬಿಎಸ್ ಪದವಿ ಪುರಸ್ಕೃತರು. ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಹತ್ತು ವೈದ್ಯರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.


ಅಂಜಲಿ ನಿಂಬಾಳ್ಕರ್ ಅವರು ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಹಿಂದೂ ಮರಾಠಾ ಕುಟುಂಬದಲ್ಲಿ 22 ಆಗಸ್ಟ್ 1976 ರಂದು ಜನಿಸಿದರು. ಅವರ ಪತಿ ಹೇಮಂತ್ ನಿಂಬಾಳ್ಕರ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ (ಐಜಿಪಿ) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 41 ರ ಹರೆಯದ ಅಂಜಲಿ ನಿಂಬಾಳ್ಕರ್ ವೈದ್ಯ ವೃತ್ತಿಯೊಂದಿಗೆ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.


ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಶಾಸಕಿ


ಅಂಜಲಿ ನಿಂಬಾಳ್ಕರ್ ಆಸ್ತಿಪಾಸ್ತಿ ವಿವರ


ಅಂಜಲಿಯವರು ಒಟ್ಟು ರೂ 14 ಕೋಟಿ ಆಸ್ತಿಪಾಸ್ತಿಗಳ ವಿವರಗಳನ್ನು ಉಲ್ಲೇಖಿಸಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ನಮೂದಿಸಿರುವ ಆದಾಯದ ವಿವರದ ಪ್ರಕಾರ ರೂ 12 ಲಕ್ಷ ಆದಾಯವನ್ನು ಅಂಜಲಿ ಹೊಂದಿದ್ದು ಅವರ ಪತಿ ಹೇಮಂತ್ ರೂ 17 ಲಕ್ಷ ಆದಾಯವನ್ನು ಹೊಂದಿದ್ದಾರೆ.


ಚರಾಸ್ತಿ ವಿವರ


ಅಂಜಲಿಯವರು ನಗದು ಮೊತ್ತ ರೂ 65 ಸಾವಿರವನ್ನು ಬ್ಯಾಂಕ್‌ನಲ್ಲಿ ಜಮೆ ಮಾಡಿದ್ದು, ಫಿಕ್ಸೆಡ್ ಡಿಪಾಸಿಟ್ ಆಗಿ ರೂ 56 ಲಕ್ಷವನ್ನು ಹೊಂದಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.


ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಶಾಸಕಿ


ಬಾಂಡ್‌ಗಳ ರೂಪದಲ್ಲಿ ಇವರ ಬಳಿ ರೂ 75,000 ನಗದು ಇರಿಸಿಕೊಂಡಿದ್ದಾರೆ. ಎಲ್‌ಐಸಿ ಹಾಗೂ ಇನ್ನಿತರ ವಿಮೆ ಮೊತ್ತವಾಗಿ ರೂ 13 ಲಕ್ಷದಷ್ಟು ನಗದು ಜಮಾವಣೆಯಾಗಿದೆ.




ಪರ್ಸನಲ್ ಲೋನ್ ಆಗಿ ರೂ 67 ಲಕ್ಷ ಮೌಲ್ಯ ಶಾಸಕಿಯ ಹೆಸರಿನಲ್ಲಿದೆ. ಆಭರಣಗಳ ಮೌಲ್ಯಗಳ ವಿವರಗಳನ್ನು ನೀಡಿದ್ದು ರೂ 23 ಲಕ್ಷ ಬೆಲೆಯ ಚಿನ್ನಾಭರಣಗಳನ್ನು ಹೊಂದಿದ್ದಾರೆ.


ಸ್ಥಿರಾಸ್ತಿ ವಿವರ ಈ ರೀತಿ ಇದೆ


ರೂ 1 ಕೋಟಿ ಬೆಲೆಯ ಕೃಷಿ ಭೂಮಿಯನ್ನು ಶಾಸಕಿ ಹೊಂದಿದ್ದು ರೂ 2 ಕೋಟಿಮೌಲ್ಯದ ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ:  Eshwar Khandre: ಭಾಲ್ಕಿ ಕ್ಷೇತ್ರದಿಂದ ಸ್ಪರ್ಧೆಗಿಳಿದಿರುವ ಈಶ್ವರ್ ಖಂಡ್ರೆ ಬಗ್ಗೆ ನಿಮಗೆಷ್ಟು ಗೊತ್ತು?


ರೂ 8 ಕೋಟಿ ಬೆಲೆಯ ವಸತಿ ಕಟ್ಟಡಗಳನ್ನು ಅಂಜಲಿ ಹೊಂದಿದ್ದಾರೆ. ಅಫಿಡವಿತ್ ಪ್ರಕಾರ ಎರಡು ಭೂಮಿಯ ಅಂದಾಜು ಮೌಲ್ಯ ರೂ 12 ಕೋಟಿ ಎಂಬ ವಿವರನ್ನು ಶಾಸಕಿ ನೀಡಿದ್ದಾರೆ.

First published: