• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Lingasugur: ಕೈಗೆ ಕಗ್ಗಂಟಾಗಿದ್ದೇಕೆ ಲಿಂಗಸುಗೂರು ಟಿಕೆಟ್? ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ನಿಲ್ಲೋರು ಯಾರು?

Lingasugur: ಕೈಗೆ ಕಗ್ಗಂಟಾಗಿದ್ದೇಕೆ ಲಿಂಗಸುಗೂರು ಟಿಕೆಟ್? ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ನಿಲ್ಲೋರು ಯಾರು?

ಲಿಂಗಸುಗೂರಿನಲ್ಲಿಲ್ವಾ ಡಿ.ಎಸ್. ಹೊಲಗೇರಿಗೆ ಟಿಕೆಟ್?

ಲಿಂಗಸುಗೂರಿನಲ್ಲಿಲ್ವಾ ಡಿ.ಎಸ್. ಹೊಲಗೇರಿಗೆ ಟಿಕೆಟ್?

Karnataka Assembly Election: ಕಾಂಗ್ರೆಸ್ ತನ್ನ 3ನೇ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಎಸ್ಸಿ ಮೀಸಲು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ.

  • News18 Kannada
  • 4-MIN READ
  • Last Updated :
  • Raichur, India
  • Share this:

    ಲಿಂಗಸುಗೂರು, ರಾಯಚೂರು: ರಾಜ್ಯದಲ್ಲಿ ಚುನಾವಣಾ (Election) ಕಾವು ದಿನೇ ದಿನೇ ರಂಗೇರುತ್ತಿದೆ. ಕಾಂಗ್ರೆಸ್ (Congress), ಬಿಜೆಪಿ (BJP), ಜೆಡಿಎಸ್ (JDS) ಮೂರು ಪಕ್ಷಗಳು ಅಳೆದು ತೂಗಿ ತಮ್ಮ ಅಭ್ಯರ್ಥಿಗಳನ್ನು (Candidates) ಘೋಷಣೆ ಮಾಡ್ತಿವೆ. ಕಾಂಗ್ರೆಸ್‌ ತನ್ನ 3ನೇ ಪಟ್ಟಿ ಬಿಡುಗಡೆ ಮಾಡಿದ್ದು, 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಆದ್ರೆ ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasugur) ಎಸ್‌ಸಿ ಮೀಸಲು ಕ್ಷೇತ್ರಕ್ಕೆ (SC reserved) ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ. ಹೀಗಾಗಿ ಲಿಂಗಸುಗೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ (Congress Candidate) ಯಾರಾಗ್ತಾರೆ ಅನ್ನೋ ಕುತೂಹಲ ಕ್ಷೇತ್ರದ ಮತದಾರರಲ್ಲಿ ಹೆಚ್ಚಾಗಿದೆ. ಯಾಕಂದ್ರೆ ಈಗಾಗಲೇ ಬಿಜೆಪಿ, ಜೆಡಿಎಸ್‌ ಲಿಂಗಸುಗೂರು ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿದೆ. ಬಿಜೆಪಿಯಿಂದ ಮಾಜಿ ಶಾಸಕ ಮಾನಪ್ಪ ವಜ್ಜಲ್ (Manappa Vajjal) ಹಾಗೂ ಜೆಡಿಎಸ್‌ನಿಂದ ಸಿದ್ದು ಬಂಡಿ (Siddu Bandi) ಕಣದಲ್ಲಿದ್ದು, ಭರ್ಜರಿ ಪ್ರಚಾರ ಮಾಡ್ತಿದ್ದಾರೆ.


    ಕಾಂಗ್ರೆಸ್‌ ಟಿಕೆಟ್‌ಗಾಗಿ ಭಾರೀ ಪೈಪೋಟಿ!


    ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಬೋವಿ ಸಮಾಜದ ಹಾಲಿ ಕಾಂಗ್ರೆಸ್ ಶಾಸಕ ಡಿ.ಎಸ್. ಹೂಲಗೇರಿ ಇದ್ರೂ ಕಾಂಗ್ರೆಸ್‌ ಹೈಕಮಾಂಡ್‌ ಟಿಕೆಟ್‌ ಘೋಷಿಸಿಲ್ಲ. ಎಡಗೈ, ಬಲಗೈ ಹೆಸರಲ್ಲಿ ಕಾಂಗ್ರೆಸ್‍ ಟಿಕೆಟ್‍ ಪಡೆಯಲು ಬಣ ರಾಜಕೀಯ ಜೋರಾಗಿದೆ.




    ಕಾಂಗ್ರೆಸ್ ಹೈಕಮಾಂಡ್ ನಡೆ ಇನ್ನೂ ನಿಗೂಢ


    ಬೋವಿ ಸಮಾಜದ ಶಾಸಕ ಡಿ.ಎಸ್‍. ಹೂಲಗೇರಿ, ಎಡಗೈ ಬಣದಿಂದ ಎಚ್‍.ಬಿ. ಮುರಾರಿ, ಪಾಮಯ್ಯ ಮುರಾರಿ, ಹನುಮಂತಪ್ಪ ಆಲ್ಕೋಡ್‍, ಬಲಗೈ ಬಣದ ಆರ್. ರುದ್ರಯ್ಯ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರೀ ಕಸರತ್ತು ನಡೆಸಿದ್ದಾರೆ. ಆದ್ರೆ ಕಾಂಗ್ರೆಸ್‌ ಹೈಕಮಾಂಡ್‌ ನಡೆ ಮಾತ್ರ ಇನ್ನೂ ನಿಗೂಢವಾಗಿದೆ.


    ಹಾಲಿ ಶಾಸಕರಿಗೆ ಟಿಕೆಟ್‌ ಕೈತಪ್ಪುತ್ತಾ?


    ಲಿಂಗಸುಗೂರು ಕ್ಷೇತ್ರದ ಹಾಲಿ ಶಾಸಕ ಡಿ.ಎಸ್. ಹೂಲಗೇರಿಗೆ ಟಿಕೆಟ್‌ ಕೊಡಬೇಡಿ ಅನ್ನೋ ಕೂಗು ಜೋರಾಗಿದೆ. ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಸ್ಥಳೀಯ ಮುಖಂಡರು, ಕಾಂಗ್ರೆಸ್‌ ಹೈಕಮಾಂಡ್‌ ಮನೆ ಬಾಗಿಲ ಕದತಟ್ಟಿದ್ದಾರೆ.  ಅಲ್ಲದೇ ಕ್ಷೇತ್ರದಲ್ಲಿ ಮಾದಿಗ ಸಮುದಾಯದವರೇ ನಿರ್ಣಯಕವಾಗಿದ್ದು, ಮಾದಿಗ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು ಆಗ್ರಹಿಸಿದ್ದಾರೆ. ಹೀಗಾಗಿ ಹೈಕಮಾಂಡ್‌ ಇಕ್ಕಟ್ಟಿಗೆ ಸಿಲುಕಿದೆ.


    ಇದನ್ನೂ ಓದಿ: Madhu Bangarappa: ಅಣ್ಣನ ಎದುರು ತೊಡೆ ತಟ್ಟಿರುವ ಮಧು ಯಾರು? ಇಲ್ಲಿದೆ ಬಂಗಾರಪ್ಪ ಪುತ್ರನ ರಾಜಕೀಯ ಕಹಾನಿ


    ಲಿಂಗಸುಗೂರು ಕಾಂಗ್ರೆಸ್ ಟಿಕೆಟ್ ಯಾರಿಗೆ?


    ಒಟ್ಟಿನಲ್ಲಿ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗ ಭಾರೀ ಪೈಪೋಟಿ ಶುರುವಾಗಿದೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಹಾಲಿ ಶಾಸಕರಿಗೆ ಟಿಕೆಟ್ ನೀಡುತ್ತಾ ಅಥವಾ ಹೊಸ ಮುಖಂಡರಿಗೆ ಟಿಕೆಟ್ ನೀಡುತ್ತಾರಾ ಎಂಬುವುದು ಕಾದು ನೋಡಬೇಕಾಗಿದೆ.

    top videos


      (ವರದಿ: ಬಸವರಾಜ್ ದೊಡ್ಮನಿ, ನ್ಯೂಸ್ 18 ಕನ್ನಡ)

      First published:

      ಸುದ್ದಿ 18ಕನ್ನಡ ಟ್ರೆಂಡಿಂಗ್

      ಮತ್ತಷ್ಟು ಓದು