• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Cash Seize: ಬೆಂಗಳೂರಲ್ಲಿ 7 ಕೋಟಿ ಕ್ಯಾಶ್ ಸೀಜ್, ಮತ್ತೊಂದೆಡೆ 1 ಕೋಟಿ ನಗದು ಜಪ್ತಿ! ಯಾರದ್ದು ಗೊತ್ತಾ ಆ ಹಣ?

Cash Seize: ಬೆಂಗಳೂರಲ್ಲಿ 7 ಕೋಟಿ ಕ್ಯಾಶ್ ಸೀಜ್, ಮತ್ತೊಂದೆಡೆ 1 ಕೋಟಿ ನಗದು ಜಪ್ತಿ! ಯಾರದ್ದು ಗೊತ್ತಾ ಆ ಹಣ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Karnataka Assembly Election: ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಒಂದೆಡೆ 7 ಕೋಟಿ ಹಣ ಸಿಕ್ಕಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಮತ್ತೊಂದೆಡೆ 1 ಕೋಟಿ ಹಣವನ್ನು ಸೀಜ್ ಮಾಡಲಾಗಿದೆ.

  • News18 Kannada
  • 3-MIN READ
  • Last Updated :
  • Bangalore, India
  • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ (Karnataka assembly election) ಕಣದಲ್ಲಿ ಝಣ ಝಣ ಕಾಂಚಾಣದ ಸದ್ದು ಜೋರಾಗಿದೆ. ಪೊಲೀಸರು (Police), ಚುನಾವಣಾ ಅಧಿಕಾರಿಗಳ (election officers) ಕಟ್ಟುನಿಟ್ಟಿನ ಕ್ರಮದ ನಡುವೆಯೂ ಹಣ ಹಂಚಿಕೆ ಸದ್ದಿಲ್ಲದೇ ನಡೆಯುತ್ತಿದೆ. ಆದರೂ ಹಲವೆಡೆ ಚುನಾವಣಾಧಿಕಾರಿಗಳು, ಪೊಲೀಸರು ಹಣ ಹಾಗೂ ಮತದಾರರಿಗೆ ಹಂಚಲು ತಂದಿದ್ದ ವಸ್ತುಗಳನ್ನು ಜಪ್ತಿ ಮಾಡುತ್ತಿದ್ದಾರೆ. ಅದೇ ರೀತಿ ರಾಜ್ಯ ರಾಜಧಾನಿ ಬೆಂಗಳೂರಲ್ಲಿ (Bengaluru) ನಿನ್ನೆ ರಾತ್ರಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ನಿನ್ನೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ (Bengaluru South Assembly Constituency) ವ್ಯಾಪ್ತಿಯಲ್ಲಿ 7 ಕೋಟಿ ಹಣ ಸಿಕ್ಕಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಮತ್ತೊಂದೆಡೆ ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆ (SJ Park Police Limit) ವ್ಯಾಪ್ತಿಯಲ್ಲಿ 1 ಕೋಟಿ ಹಣವನ್ನು ಸೀಜ್ ಮಾಡಲಾಗಿದೆ.


ಬೆಂಗಳೂರಲ್ಲಿ ತಡರಾತ್ರಿ ಸಿಕ್ತು 7 ಕೋಟಿ ಹಣ!
ತಡರಾತ್ರಿ ಬೆಂಗಳೂರಿನಲ್ಲಿ ಸಿಕ್ತು ಏಳು ಕೋಟಿ ನಗದು ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 7 ಕೋಟಿ ಹಣ ಸಿಕ್ಕ ಬಗ್ಗೆ ಮಾಹಿತಿ ಸಿಕ್ಕಿದೆ.




ತಡರಾತ್ರಿ ಸಿಕ್ಕ ಹಣ ಏನಾಯ್ತು?


ಇನ್ನು ಹಣ ಸಿಕ್ಕ ಕೆಲವೇ ಕ್ಷಣದಲ್ಲಿ ಸ್ಥಳಕ್ಕೆ ಓರ್ವ ಹಿರಿಯ ಐಎಎಸ್ ಅಧಿಕಾರಿ ಆಗಮಿಸಿದ್ದರು ಎನ್ನಲಾಗಿದೆ. ಬಳಿಕ ಸಿಕ್ಕಿದ್ದ 7 ಕೋಟಿ ಹಣ ಏನಾಗಿದೆ ಎಂಬ ಮಾಹಿತಿಯೇ ಯಾರಿಗೂ ಗೊತ್ತಿಲ್ವಂತೆ. ಅಷ್ಟೇ ಅಲ್ಲ ಸ್ಥಳೀಯ ಪೊಲೀಸರಿಗೂ ಈ ಬಗ್ಗೆ ಯಾವ ಮಾಹಿತಿ ಇಲ್ಲ್ವಂತೆ. ಇನ್ನು ಈ ಬಗ್ಗೆ ಮಾಹಿತಿ ಪಡೆದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸೆಕ್ಟರ್ ಐಟಿ ಅಧಿಕಾರಿಯಿಂದ ಹಿರಿಯ ಐಟಿ ಅಧಿಕಾರಿಗಳು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.


ಹಣದ ಬಗ್ಗೆ ತಲೆ ಕೆಡಿಸಿಕೊಂಡ ಐಟಿ ಅಧಿಕಾರಿಗಳು!
ಹೀಗೆ ಬೆಂಗಳೂರಲ್ಲಿ ತಡರಾತ್ರಿ ಸಿಕ್ಕ ಹಣ ಮಾಯವಾಗಿದ್ದು ಅಧಿಕಾರಿಗಳಿಗೆ ತಲೆ ನೋವು ತರಿಸಿದೆ. ಸಿಕ್ಕ ಹಣ ಯಾರ ಕೈಗೂ ಸಿಗದೆ ಕಣ್ತಪ್ಪಿಸಿ ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅಧಿಕಾರಿಗಳು ಟೆನ್ಶನ್ ಆಗಿದ್ದಾರೆ. ರಾಜ್ಯದಲ್ಲಿ ಸಿಕ್ಕ ಅತಿದೊಡ್ಡ ಮೊತ್ತ ಅಂದ್ರೆ ಅದು ಏಳು ಕೋಟಿ ಹಣ. ಇದುವರೆಗೆ ಚುನಾವಣೆ ಹಿನ್ನಲೆ ಒಟ್ಟಿಗೆ ಏಳು ಕೋಟಿ ಹಣ ಎಲ್ಲಿಯೂ ಸಿಕ್ಕಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ತಲೆ ಕೆಡಿಸಿಕೊಂಡಿರುವ ಐಟಿ ಅಧಿಕಾರಿಗಳು ಪರಿಶೀಲಿಸ್ತಿದ್ದಾರೆ.


ಇದನ್ನೂ ಓದಿ: Currency Note: ನಮ್ಮ ದೇಶಕ್ಕೆ ಎಷ್ಟು ಬೇಕೋ ಅಷ್ಟು ನೋಟ್ ಏಕೆ ಪ್ರಿಂಟ್ ಹಾಕಿಸುವುದಿಲ್ಲ? ನೋಟು ಮುದ್ರಣದ ರೂಲ್ಸ್‌ಗಳೇನು?


ಎಸ್‌ಜೆ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ಸಿಕ್ತ 1 ಕೋಟಿ ಕ್ಯಾಶ್!


ಮತ್ತೊಂದೆಡೆ ನಿನ್ನೆ ತಡರಾತ್ರಿ ನಗರದ ಎಸ್‌ಜೆ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಕೋಟಿ ಹಣ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಐಟಿ ಉನ್ನತ ಮೂಲಗಳಿಂದ ನ್ಯೂಸ್ 18ಗೆ ಮಾಹಿತಿ ಲಭ್ಯವಾಗಿದೆ.

top videos
    First published: