• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah: ನಾನು ಹೇಳಿದ್ದೇ ನಿಜವಾಯ್ತು ಎಂದ ಸಿದ್ದರಾಮಯ್ಯ! ಫಲಿತಾಂಶದ ಬಗ್ಗೆ ಸಿದ್ದು ಮಾತು

Siddaramaiah: ನಾನು ಹೇಳಿದ್ದೇ ನಿಜವಾಯ್ತು ಎಂದ ಸಿದ್ದರಾಮಯ್ಯ! ಫಲಿತಾಂಶದ ಬಗ್ಗೆ ಸಿದ್ದು ಮಾತು

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದೆ, ಎಲ್ಲಾ ಸಮೀಕ್ಷೆಗಳ ಫಲಿತಾಂಶವೂ ಬಂದಿದೆ. ಆದ್ರೆ ಅಸಲಿ ಆಟ ಈಗ ಶುರುವಾಗಿದೆ. ಕರುನಾಡ ರಣಕಣದಲ್ಲಿ ಗೆದ್ದು ಬೀಗುವವರು ಯಾರು? ಯಾರ ವಿರುದ್ಧ ಯಾರ ಗೆಲುವು? ಯಾರ ಸೋಲು? ಸಂಪೂರ್ಣ ಮಾಹಿತಿ ಇಲ್ಲಿದೆ...

  • News18 Kannada
  • 5-MIN READ
  • Last Updated :
  • Karnataka, India
  • Share this:

ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka assembly election) ಫಲಿತಾಂಶದ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಮ್ಯಾಜಿಕ್‌ ನಂಬರ್ (Magic Number) ಮೀರಿ, ಭರ್ಜರಿ ಜಯಭೇರಿ ಬಾರಿಸುತ್ತಿದೆ. ಈ ಕ್ಷಣದ ಮಾಹಿತಿಯಂತೆ ಕಾಂಗ್ರೆಸ್ (Congress) 134 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ 130ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಅಂತ ಹೇಳಿದ್ದೆ, ಇದೀಗ ನಿಜವಾಗಿದೆ ಅಂತ ಹೇಳಿದ್ದಾರೆ.       


ನಾವು ಅಂದಾಜಿಸಿದಂತೇ ಆಗಿದೆ


ಕಾಂಗ್ರೆಸ್​ ಪಕ್ಷ ನಮ್ಮ ಲೆಕ್ಕಾಚಾರದಂತೆ ಮುನ್ನಡೆ ಸಾಧಿಸಿದೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ನಾವು ಬಿಜೆಪಿಗೆ 65 ರಿಂದ 70 ಬರುತ್ತದೆ ಎಂದು ಅಂದಾಜು ಮಾಡಿದ್ದೆವು, ಈಗ ಅದೇ ರೀತಿಯ ಟ್ರೆಂಡ್​ ಇದೆ ಎಂದರು. ಜೆಡಿಎಸ್​ 25 ರಿಂದ 26 ಬರಬಹುದು ಎಂದು ಎಂದುಕೊಂಡಿದ್ದೆವು, ಅದೇ ರೀತಿಯಾಗಿದೆ ಅಂತ ಅಭಿಪ್ರಾಯಪಟ್ಟಿದ್ದಾರೆ.


2615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ


ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10ರಂದು ನಡೆದಿತ್ತು. 224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಚುನಾವಣೆ ಮುಕ್ತಾಯವಾಗಿತ್ತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌, ಇತರೇ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 2615 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಒಟ್ಟು 2615 ಅಭ್ಯರ್ಥಿಗಳಿದ್ದು, ಈ ಪೈಕಿ 2430 ಪುರುಷ ಅಭ್ಯರ್ಥಿಗಳು, 184 ಮಹಿಳಾ ಅಭ್ಯರ್ಥಿಗಳು ಹಾಗೂ ಒಬ್ಬರು ತೃತೀಯ ಲಿಂಗಿ ಅಭ್ಯರ್ಥಿ ಕಣದಲ್ಲಿದ್ದಾರೆ.


ಕುತೂಹಲ ಮೂಡಿಸಿದ ಕ್ಷೇತ್ರಗಳು


ಅಥಣಿ, ಗೋಕಾಕ್, ಬೆಳಗಾವಿ ಗ್ರಾಮೀಣ, ಗಂಗಾವತಿ, ಹುಬ್ಬಳ್ಳಿ-ಧಾರವಾಡ ಕೇಂದ್ರ, ಧಾರವಾಡ, ಶಿಗ್ಗಾಂವಿ, ಬಳ್ಳಾರಿ ನಗರ, ಶಿವಮೊಗ್ಗ ನಗರ, ಶಿಕಾರಿಪುರ, ತೀರ್ಥಹಳ್ಳಿ, ಸೊರಬ, ಸಾಗರ, ಕಾರ್ಕಳ, ಚಿಕ್ಕಮಗಳೂರು, ಕಡೂರು, ಮೂಡಿಗೆರೆ, ಕೊರಟಗೆರೆ, ಚಿಕ್ಕಬಳ್ಳಾಪುರ, ಕೋಲಾರ, ಮಲ್ಲೇಶ್ವರ, ಪುಲಕೇಶಿನಗರ, ರಾಮನಗರ, ಕನಕಪುರ, ಚನ್ನಪಟ್ಟಣ, ಮೇಲುಕೋಟೆ, ಕೃಷ್ಣರಾಜಪೇಟೆ, ಹಾಸನ, ಹೊಳೆನರಸೀಪುರ, ಪುತ್ತೂರು, ಚಾಮುಂಡೇಶ್ವರಿ, ವರುಣಾ, ಚಾಮರಾಜನಗರ ಸೇರಿದಂತೆ ಹಲವು ಕ್ಷೇತ್ರಗಳು ಈ ಬಾರಿ ತೀವ್ರ ಕುತೂಹಲ ಮೂಡಿಸಿವೆ.


ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಗೆದ್ದ 'ಕೈ' ಕಲಿಗಳಿಗೆ ಡಿಕೆಶಿ ಬುಲಾವ್, ಈಗಲೇ ಬೆಂಗಳೂರಿಗೆ ಬರುವಂತೆ ಸೂಚನೆ


ಈ ಅಭ್ಯರ್ಥಿಗಳ ಮೇಲೆ ಎಲ್ಲರ ಚಿತ್ತ


ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿಹೊಳಿ, ಬಸವರಾಜ ಬೊಮ್ಮಾಯಿ, ಜಿ. ಸೋಮಶೇಖರ ರೆಡ್ಡಿ, ಬಿ.ವೈ. ವಿಜಯೇಂದ್ರ, ಆರಗ ಜ್ಞಾನೇಂದ್ರ, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ವಿ. ಸುನೀಲ್ ಕುಮಾರ್, ಸಿ.ಟಿ. ರವಿ, ಡಾ. ಕೆ.ಸುಧಾಕರ್, ವರ್ತೂರು ಪ್ರಕಾಶ್, ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್, ಆರ್. ಅಶೋಕ್, ಸಿ.ಪಿ. ಯೋಗೇಶ್ವರ್, ಪ್ರೀತಂ ಗೌಡ, ವಿ. ಸೋಮಣ್ಣ ಸೇರಿದಂತೆ ಪ್ರಮುಖರು ಈ ಬಾರಿ ಕುತೂಹಲ ಕೆರಳಿಸಿದ್ದಾರೆ.

First published: