• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Gokak Poll Result 2023: ಗೋಕಾಕ್ ‘ಸಾಹುಕರ್’​​ಗೆ ಸತತ 7ನೇ ಬಾರಿ ಗೆಲುವು; ಜಾರಕಿಹೊಳಿ ಆಪ್ತರಿಗೆ ಸೋಲು!

Gokak Poll Result 2023: ಗೋಕಾಕ್ ‘ಸಾಹುಕರ್’​​ಗೆ ಸತತ 7ನೇ ಬಾರಿ ಗೆಲುವು; ಜಾರಕಿಹೊಳಿ ಆಪ್ತರಿಗೆ ಸೋಲು!

ರಮೇಶ್​ ಜಾರಕಿಹೊಳಿ, ಮಾಜಿ ಸಚಿವ

ರಮೇಶ್​ ಜಾರಕಿಹೊಳಿ, ಮಾಜಿ ಸಚಿವ

ಮತ ಎಣಿಕೆ ಆರಂಭವಾದ ಕ್ಷಣದಿಂದಲೂ ಮುನ್ನಡೆ ಸಾಧಿಸಿದ್ದ ರಮೇಶ್​ ಜಾರಕಿಹೊಳಿ ಅವರ 21ನೇ ಸುತ್ತಿನ ಮತ ಎಣಿಕೆ ಮುಕ್ತಾಯ ವೇಳೆಗೆ 80,580 ಮತ ಗಳನ್ನು ಪಡೆದು ಎದುರಾಳಿ ವಿರುದ್ಧ 17,854 ಮತಗಳಿಂದ ಮುನ್ನಡೆ ಸಾಧಿಸಿ ಗೆಲುವು ಖಚಿತಪಡಿಸಿಕೊಂಡಿದ್ದರು.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಕುತೂಹಲ ಮೂಡಿಸಿದ್ದ ಬೆಳಗಾವಿಯ (Belagavi) ಗೋಕಾಕ್ (Gokak)​ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್​ ಜಾರಕಿಹೊಳಿ (Ramesh Jarkiholi) ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ. ಇದರೊಂದಿಗೆ ಸತತವಾಗಿ 7ನೇ ಬಾರಿಗೆ ಸಾಹುಕಾರ್​ ವಿಧಾನಸಭೆ ಪ್ರವೇಶ ಮಾಡಿದ್ದು, 24ನೇ ಸುತ್ತಿನ ಮತ ಎಣಿಕೆ ವೇಳೆಗೆ 21788 ಮತಗಳಿಂದ ಮುನ್ನಡೆ ಪಡೆದುಕೊಂಡಿದ್ದರು. ಉಳಿದಂತೆ ರಮೇಶ್​ ಜಾರಕಿಹೊಳಿ ಅವರಿಗೆ 93,642 ಮತಗಳು ಲಭಿಸಿದ್ದರೆ, ಎರಡನೇ ಸ್ಥಾನಕ್ಕೆ ಕಾಂಗ್ರೆಸ್​ ತೃಪ್ತಿಪಟ್ಟಿದೆ.


ಮತ ಎಣಿಕೆ ಆರಂಭವಾದ ಕ್ಷಣದಿಂದಲೂ ಮುನ್ನಡೆ ಸಾಧಿಸಿದ್ದ ರಮೇಶ್​ ಜಾರಕಿಹೊಳಿ ಅವರ 21ನೇ ಸುತ್ತಿನ ಮತ ಎಣಿಕೆ ಮುಕ್ತಾಯ ವೇಳೆಗೆ 80,580 ಮತ ಗಳನ್ನು ಪಡೆದು ಎದುರಾಳಿ ವಿರುದ್ಧ 17,854 ಮತಗಳಿಂದ ಮುನ್ನಡೆ ಸಾಧಿಸಿ ಗೆಲುವು ಖಚಿತಪಡಿಸಿಕೊಂಡಿದ್ದರು. ಆ ವೇಳೆ ಕಾಂಗ್ರೆಸ್ ಅಭ್ಯರ್ಥಿ 62,726 ಮತಗಳನ್ನು ಪಡೆದುಕೊಂಡಿದ್ದರು. ಆದರೆ ರಮೇಶ್​ ಜಾರಕಿಹೊಳಿ ಆಪ್ತರಾದ ನಾಗೇಶ್​ ಮುನ್ನೋಳ್ಕರ್, ಮಹೇಶ್ ಕುಮಟಳ್ಳಿ ಸೋಲುಂಡಿದ್ದಾರೆ.


ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ 2615 ಅಭ್ಯರ್ಥಿಗಳು


ರಾಜ್ಯದ 37,777 ಸ್ಥಳದಲ್ಲಿ ಸ್ಥಾಪನೆಯಾಗಿದ್ದ 58,545 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಚುನಾವಣಾ ಅಖಾಡದಲ್ಲಿ 2615 ಅಭ್ಯರ್ಥಿಗಳು ರಾಜಕೀಯ ಭವಿಷ್ಯದ ಪರೀಕ್ಷೆ ಎದುರಿಸಿದ್ದಾರೆ. ಅಭ್ಯರ್ಥಿಗಳಲ್ಲಿ 2430 ಮಂದಿ ಪುರುಷರು, 184 ಮಂದಿ ಮಹಿಳಾ ಅಭ್ಯರ್ಥಿಗಳು ಹಾಗೂ ಓರ್ವ ತೃತೀಯ ಲಿಂಗಿ ಅಭ್ಯರ್ಥಿಗಳಿದ್ದಾರೆ.


ಇನ್ನು ಪಕ್ಷವಾರು ನೋಡುವುದಾದರೆ ಬಿಜೆಪಿಯಿಂದ 224, ಕಾಂಗ್ರೆಸ್​ನಿಂದ 223, ಜೆಡಿಎಸ್​ನಿಂದ 209 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಉಳಿದಂತೆ 918 ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದಾರೆ. ಇನ್ನು ಎಎಪಿಯಿಂದ 209, ಸಿಪಿಐಎಂನಿಂದ 4, ಬಿಎಸ್​ಪಿಯಿಂದ 133 ಹಾಗೂ ಎನ್​​ಸಿಪಿಯಿಂದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.




ಮತದಾನದ ಪ್ರಮಾಣ


ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ದಾಖಲೆಯ ಮತದಾನವಾಗಿದ್ದು, ಶೇಕಡಾ 73.19 ರಷ್ಟು ಮತದಾನದೊಂದಿಗೆ ಸಾರ್ವಕಾಲಿಕ ದಾಖಲೆಯನ್ನು ನಿರ್ಮಾಣ ಮಾಡಿದೆ. ವಿಶೇಷ ಎಂದರೆ ಶೇಕಡಾ 85.56 ಮತದಾನದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಬೆಂಗಳೂರು ದಕ್ಷಿಣದಲ್ಲಿ ಅತಿ ಕಡಿಮೆ ಅಂದರೆ ಶೇಕಡಾ 52.33 ರಷ್ಟು ಮತದಾನ ನಡೆದಿದೆ. ಇನ್ನು ರಾಜ್ಯದಲ್ಲಿರುವ 5.30 ಕೋಟಿ ಮತದಾರರಲ್ಲಿ 3.88 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

top videos
    First published: