• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Result: ನಿಜವಾಯ್ತಾ ಮೈಲಾರಲಿಂಗೇಶ್ವರ ಭವಿಷ್ಯವಾಣಿ? ಕುರುಬ ಸಮುದಾಯದ ನಾಯಕ ರಾಜ್ಯಭಾರ ಮಾಡ್ತಾರಾ?

Karnataka Result: ನಿಜವಾಯ್ತಾ ಮೈಲಾರಲಿಂಗೇಶ್ವರ ಭವಿಷ್ಯವಾಣಿ? ಕುರುಬ ಸಮುದಾಯದ ನಾಯಕ ರಾಜ್ಯಭಾರ ಮಾಡ್ತಾರಾ?

ಕಾರ್ಣಿಕ ಕುತೂಹಲ

ಕಾರ್ಣಿಕ ಕುತೂಹಲ

ಇಬ್ಬರು ನಾಯಕರು ಮೈಲಾರೇಶನ ದರ್ಶನ ಪಡೆದಿದ್ದಾರೆ. ಇಬ್ಬರಲ್ಲಿ ಖಂಡಿತವಾಗಿ ಯಾರಾದರೂ ಒಬ್ಬರು ಮುಖ್ಯಮಂತ್ರಿಗಳಾಗುತ್ತಾರೆಂದು ಧರ್ಮದರ್ಶಿಗಳು ಹೇಳಿದ್ದಾರೆ.

  • News18 Kannada
  • 5-MIN READ
  • Last Updated :
  • Haveri, India
  • Share this:

ಹಾವೇರಿ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮೈಲಾರಲಿಂಗೇಶ್ವರನ (Mylareshwara) ಭವಿಷ್ಯವಾಣಿ ಚರ್ಚೆಗೆ ಕಾರಣವಾಗಿದೆ. ಮೈಲಾರೇಶನ ಕಾರ್ಣಿಕ (Mylara Karnika) ದತ್ತ ಎಲ್ಲರು ಚಿತ್ತ ಹರಿಸಿದ್ದು, ಮತ್ತೊಮ್ಮೆ ನಿಜವಾಗಿ ಬಿಡುತ್ತಾ ಮೈಲಾರಲಿಂಗೇಶ್ವರನ ಭವಿಷ್ಯವಾಣಿ (Prophecy) ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಪ್ರಸಕ್ತ ವರ್ಷ ಸುಕ್ಷೇತ್ರ ಮೈಲಾರ ಗ್ರಾಮದಲ್ಲಿ ನುಡಿಯಲಾಗಿದ್ದ ಕಾರ್ಣಿಕೋತ್ಸವದಲ್ಲಿ ‘ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್’ ಎಂದು ಗೊರವಪ್ಪ (Goravappa) ಕಾರ್ಣಿಕ ನುಡಿದಿದ್ದರು.


ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗುತ್ತಾರಾ?


ಇದರ ನಡುವೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದುಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆದಿದೆ. ಇದರ ನಡುವೆ ಮತ್ತೊಮ್ಮೆ ಕುರುಬ ಸಮುದಾಯದ ನಾಯಕ ರಾಜ್ಯಾಭಾರ ಮಾಡ್ತಾರಾ? ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗುತ್ತಾರೆ ಎನ್ನುತ್ತಿದೆ ಕಾರ್ಣಿಕ ನುಡಿಯ ವಿಶ್ಲೇಷಣೆ ಮಾಡಿದ್ದಾರೆ.




ಇದನ್ನೂ ಓದಿ: Nikhil Kumaraswamy: ಸೋಲಿನ ಬೆನ್ನಲ್ಲೇ ನಿಖಿಲ್​ ಕುಮಾರಸ್ವಾಮಿ ಭಾವುಕ ಪೋಸ್ಟ್​​!


ಮೈಲಾರ ಕ್ಷೇತ್ರದ ಧರ್ಮಧರ್ಶಿ ವೆಂಕಪ್ಪಯ್ಯ ಓಡೆಯರ್ ಅವರು ಮೈಲಾರ ಗ್ರಾಮದಲ್ಲಿ ಮತ್ತೆ ಕಾರ್ಣಿಕ ವಿಶ್ಲೇಷಣೆ ಮಾಡಿದ್ದಾರೆ. ಅಂದು ಕಾರ್ಣಿಕ ನುಡಿ ವಿಮರ್ಶೆ ಮಾಡಿದ್ದ ಧರ್ಮಧರ್ಶಿಗಳಿಂದ ಇಂದು ಮತ್ತೊಮ್ಮೆ ವಿಶ್ಲೇಷಣೆ ಮಾಡಿದ್ದು, ಕಾರ್ಣಿಕ ನುಡಿಯ ವಿಶ್ಲೇಷಣೆಯಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ. ಪ್ರಾಮಾಣಿಕ ನಿಷ್ಠಾವಂತ ವ್ಯಕ್ತಿ ಈ ರಾಜ್ಯ ಹಾಗೂ ದೇಶ ಆಳುತ್ತಾನೆ. ಮತದಾರರಿಂದಲೇ ಹಳೆಯ ಸರ್ಕಾರ ಹೋಗಿದೆ ಎಂದು ತಿಳಿಸಿದ್ದಾರೆ.




ಕಂಬಳಿ ಎಂದರೆ ಶುಭ, ಶುದ್ಧವಾದ ಸರ್ಕಾರ ಬರುತ್ತದೆ. ಡಿಕೆ ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಮಧ್ಯಸ್ಥಿಕೆಯಲ್ಲಿ ಸರ್ಕಾರ ರಚನೆ. ಇಬ್ಬರು ನಾಯಕರು ಮೈಲಾರೇಶನ ದರ್ಶನ ಪಡೆದಿದ್ದಾರೆ. ಇಬ್ಬರಲ್ಲಿ ಖಂಡಿತವಾಗಿ ಯಾರಾದರೂ ಒಬ್ಬರು ಮುಖ್ಯಮಂತ್ರಿಗಳಾಗುತ್ತಾರೆಂದು ಧರ್ಮದರ್ಶಿಗಳು ಹೇಳಿದ್ದಾರೆ.

top videos
    First published: