• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Chikkaballapura Election Result 2023: ಡಾ ಕೆ ಸುಧಾಕರ್​ಗೆ ಸೋಲು! ಗೆಲುವಿನ ಬಾವುಟ ಹಾರಿಸಿದ ‘ಕೈ’ ಅಭ್ಯರ್ಥಿ

Chikkaballapura Election Result 2023: ಡಾ ಕೆ ಸುಧಾಕರ್​ಗೆ ಸೋಲು! ಗೆಲುವಿನ ಬಾವುಟ ಹಾರಿಸಿದ ‘ಕೈ’ ಅಭ್ಯರ್ಥಿ

ಸಚಿವ ಸುಧಾಕರ್​ಗೆ ಸೋಲು

ಸಚಿವ ಸುಧಾಕರ್​ಗೆ ಸೋಲು

Chikkaballapura Election Result 2023: ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಚಿವ ಡಾ ಕೆ ಸುಧಾಕರ್​ ಸೋಲುಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್​ ಈಶ್ವರ್​ ಗೆಲುವು ಪಡೆದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಚಿಕ್ಕಬಳ್ಳಾಪುರ: ಬಿಜೆಪಿ (BJP) ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ ಕೆ ಸುಧಾಕರ್​ಗೆ (Dr K Sudhakar) ಕಾಂಗ್ರೆಸ್​ ಅಭ್ಯರ್ಥಿ ಸೋಲುಣಿಸಿದ್ದಾರೆ. ಕೈ ಅಭ್ಯರ್ಥಿ ಪ್ರದೀಪ್ ಈಶ್ವರ್ (Pradeep Eshwar)​ ಗೆಲುವು ಸಾಧಿಸಿದ್ದು, ಬಿಜೆಪಿ ನಾಯಕರಿಗೆ ಶಾಕ್ ಎದುರಾಗಿದೆ. ಇಂದು ಬೆಳಗ್ಗೆ ಮತ ಎಣಿಕೆ ಆರಂಭವಾದ ಸಮಯದಿಂದಲೂ ಈಶ್ವರ್​ ಅವರಿಗೆ ಮುನ್ನಡೆ ಲಭ್ಯವಾಗಿತ್ತು. ಹಾವು-ಏಣಿ ಆಟದಂತೆ ನಡೆದ ಮತ ಎಣಿಕೆಯಲ್ಲಿ ಕೊನೆಗೂ ಭರ್ಜರಿ ಮುನ್ನಡೆಯೊಂದಿಗೆ ಪ್ರದೀಪ್​ ಈಶ್ವರ್ ಗೆಲುವು ಪಡೆದಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ (Karnataka) ವಿಧಾನಸಭಾ ಚುನಾವಣೆಯ (Assembly Election) ಸಂಪೂರ್ಣ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಅಂತಿಮಗೊಳ್ಳಲಿದ್ದು, ಸ್ಪಷ್ಟ ಬಹುಮತ ಪಡೆದುಕೊಳ್ಳುವತ್ತ ಕಾಂಗ್ರೆಸ್ ದಾಪುಗಾಲಿಟ್ಟಿದೆ.


ಸರ್ಕಾರ ರಚನೆಗೆ ಕಾಂಗ್ರೆಸ್​ ಕಸರತ್ತು


ಕರ್ನಾಟಕ ವಿಧಾನಸಭಾ ಚುನಾವಣೆ 2023 ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​ ಹಾಗೂ ಬಿಜೆಪಿಗೆ ಬಹುಮಖ್ಯವಾಗಿದೆ. ಮುಂದಿನ ಲೋಕಸಭಾ ಚುನಾವಣೆಯ ದೃಷ್ಠಿಯಿಂದ ಹಾಗೂ ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷದ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲೇಬೇಕಿದೆ. ಇತ್ತ ಕಾಂಗ್ರೆಸ್​​​ಗೆ ಕರ್ನಾಟಕದಲ್ಲಿ ಅಧಿಕಾರ ಪಡೆದರೆ ದೇಶದಾದ್ಯಂತ ಪಕ್ಷದ ಕಾರ್ಯಕರ್ತರಿಗೆ ನೈತಿಕ ಸ್ಪೂರ್ತಿ ಲಭ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕು ಎಂಬ ಉದ್ದೇಶದೊಂದಿಗೆ ಚುನಾವಣೆ ಎದುರಿಸಿದೆ.


ಈ ನಡುವೆ ಮತದಾನ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಿದ್ದ ವಿವಿಧ ಮಾಧ್ಯಮ ಸಂಸ್ಥೆಗಳು ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗಲಿದೆ ಎಂದು ವರದಿ ನೀಡಿದ್ದವು. ಈ ಹಿನ್ನೆಲೆಯಲ್ಲಿ ಫಲಿತಾಂಶಕ್ಕೂ ಮುನ್ನವೇ ಕಾರ್ಯತಂತ್ರಗಳನ್ನು ರೂಪಿಸಿರುವ ಎರಡು ಪಕ್ಷಗಳು ಅಧಿಕಾರಕ್ಕೆ ಹೇರುವ ಉತ್ಸಾಹದಲ್ಲಿದೆ.


ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ 2615 ಅಭ್ಯರ್ಥಿಗಳು


ರಾಜ್ಯದ 37,777 ಸ್ಥಳದಲ್ಲಿ ಸ್ಥಾಪನೆಯಾಗಿದ್ದ 58,545 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಚುನಾವಣಾ ಅಖಾಡದಲ್ಲಿ 2615 ಅಭ್ಯರ್ಥಿಗಳು ರಾಜಕೀಯ ಭವಿಷ್ಯದ ಪರೀಕ್ಷೆ ಎದುರಿಸಿದ್ದಾರೆ. ಅಭ್ಯರ್ಥಿಗಳಲ್ಲಿ 2430 ಮಂದಿ ಪುರುಷರು, 184 ಮಂದಿ ಮಹಿಳಾ ಅಭ್ಯರ್ಥಿಗಳು ಹಾಗೂ ಓರ್ವ ತೃತೀಯ ಲಿಂಗಿ ಅಭ್ಯರ್ಥಿಗಳಿದ್ದಾರೆ.


ಇನ್ನು ಪಕ್ಷವಾರು ನೋಡುವುದಾದರೆ ಬಿಜೆಪಿಯಿಂದ 224, ಕಾಂಗ್ರೆಸ್​ನಿಂದ 223, ಜೆಡಿಎಸ್​ನಿಂದ 209 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಉಳಿದಂತೆ 918 ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದಾರೆ. ಇನ್ನು ಎಎಪಿಯಿಂದ 209, ಸಿಪಿಐಎಂನಿಂದ 4, ಬಿಎಸ್​ಪಿಯಿಂದ 133 ಹಾಗೂ ಎನ್​​ಸಿಪಿಯಿಂದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.




ಮತದಾನದ ಪ್ರಮಾಣ

top videos


    ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ದಾಖಲೆಯ ಮತದಾನವಾಗಿದ್ದು, ಶೇಕಡಾ 73.19 ರಷ್ಟು ಮತದಾನದೊಂದಿಗೆ ಸಾರ್ವಕಾಲಿಕ ದಾಖಲೆಯನ್ನು ನಿರ್ಮಾಣ ಮಾಡಿದೆ. ವಿಶೇಷ ಎಂದರೆ ಶೇಕಡಾ 85.56 ಮತದಾನದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಬೆಂಗಳೂರು ದಕ್ಷಿಣದಲ್ಲಿ ಅತಿ ಕಡಿಮೆ ಅಂದರೆ ಶೇಕಡಾ 52.33 ರಷ್ಟು ಮತದಾನ ನಡೆದಿದೆ. ಇನ್ನು ರಾಜ್ಯದಲ್ಲಿರುವ 5.30 ಕೋಟಿ ಮತದಾರರಲ್ಲಿ 3.88 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

    First published: