• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Assembly Election: ಚುನಾವಣೆಯಲ್ಲಿ ಭರ್ಜರಿ ಜಯ! ವಿಧಾಸಭೆ ಪ್ರವೇಶಿಸಿದ 6 ಅಪ್ಪ-ಮಕ್ಕಳ ಜೋಡಿ ಇವೇ ನೋಡಿ

Karnataka Assembly Election: ಚುನಾವಣೆಯಲ್ಲಿ ಭರ್ಜರಿ ಜಯ! ವಿಧಾಸಭೆ ಪ್ರವೇಶಿಸಿದ 6 ಅಪ್ಪ-ಮಕ್ಕಳ ಜೋಡಿ ಇವೇ ನೋಡಿ

ತಂದೆ-ಮಕ್ಕಳ ಗೆಲುವು

ತಂದೆ-ಮಕ್ಕಳ ಗೆಲುವು

Karnataka Election Results 2023 Live Updates: ಲಿಂಗಾಯತ ಪ್ರಬಲ ನಾಯಕರಾದ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣದಲ್ಲಿ ಜಯ ಸಾಧಿಸಿದರೆ, ಮಗ ಎಸ್​ಎಸ್​ ಮಲ್ಲಿಕಾರ್ಜುನ ಉತ್ತರ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು; ರಾಜ್ಯ ವಿಧಾನಸಭೆ ಚುನಾವಣಾ ಫಲಿತಾಂಶ (Karnataka Assembly Election) ಹೊರಬಿದ್ದಿದ್ದೂ, ಅಚ್ಚರಿ ಎಂಬಂತೆ ಟಿಕೆಟ್​ ಪಟೆದಿದ್ದ ಅಪ್ಪ ಮಕ್ಕಳು (Father-son) ಜಯ ಬೇರಿ ಬಾರಿಸಿದ್ದಾರೆ. ಕಾಂಗ್ರೆಸ್​ನಿಂದ (Congress) ಟಿಕೆಟ್​ ಪಡೆದಿದ್ದ ನಾಲ್ಕು ಅಪ್ಪ-ಮಕ್ಕಳ ಜೋಡಿ ಜಯ ಸಾಧಿಸಿದೆ. ಜೆಡಿಎಸ್​ನಿಂದ (JDS) ಟಿಕೆಟ್​ ಪಡೆದಿದ್ದ ಜಿಟಿ ದೇವೇಗೌಡ ಹಾಗೂ ಮಗ ಹರೀಶ್ ಗೌಡ ಭರ್ಜರಿ ಜಯ ಸಾಧಿಸಿದ್ದಾರೆ.


ಶಾಮನೂರು ಶಿವಶಂಕರಪ್ಪ-ಎಸ್​ಎಸ್​ ಮಲ್ಲಿಕಾರ್ಜುನ


ಲಿಂಗಾಯತ ಪ್ರಬಲ ನಾಯಕರಾದ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣದಲ್ಲಿ ಜಯ ಸಾಧಿಸಿದರೆ, ಮಗ ಎಸ್​ಎಸ್​ ಮಲ್ಲಿಕಾರ್ಜುನ ಉತ್ತರ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಮಲ್ಲಿಕಾರ್ಜುನ 78,345 ಮತಗಳನ್ನು ಪಡೆಯುವ ಗೆಲುವು ಸಾಧಿಸಿದ್ದರೆ, ಮತ್ತೊಂದೆಡೆ ದಕ್ಷಿಣದಲ್ಲಿ ತಂದೆ ಶಾಮನೂರು ಶಿವಶಂಕರಪ್ಪ 83,839 ಅವರು ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಗಳಿಸಿದ್ದಾರೆ.


ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 53,428 ಮತಗಳನ್ನು ಪಡೆಯುವ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಸೋಲುಂಡಿದ್ದು, ದಕ್ಷಿಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಜಿ. ಅಜಯ್‌ಕುಮಾರ್ 56,052 ಮತ ಪಡೆದು ಸೋಲುಂಡಿದ್ದಾರೆ‌.


ಇದನ್ನೂ ಓದಿ: Bharat Jodo Yatra: ಸಕ್ಸಸ್​ ಆದ ಭಾರತ್​ ಜೋಡೋ ಯಾತ್ರೆ! ರಾಹುಲ್ ಸಾಗಿದ್ದ 51 ಕ್ಷೇತ್ರಗಳ ಪೈಕಿ 36ರಲ್ಲಿ ಕಾಂಗ್ರೆಸ್ ಜಯಭೇರಿ​


ಕೃಷ್ಣಪ್ಪ-ಪ್ರಿಯ ಕೃಷ್ಣಗೆ ಗೆಲುವು


ಬೆಂಗಳೂರಿನ ವಿಜಯ ನಗರದಲ್ಲಿ ಕ್ಷೇತ್ರದಲ್ಲಿ ಟಿಕೆಟ್ ಪಡೆದಿದ್ದ ಕೃಷ್ಣಪ್ಪ ಗೆಲುವು ಸಾಧಿಸಿದ್ದರೆ, ಮಗ ಪ್ರಿಯಕೃಷ್ಣ ಗೋವಿಂದ ರಾಜ ನಗರದಲ್ಲಿ ಜಯ ಸಾಧಿಸಿದ್ದಾರೆ.


ಕೆಎಚ್​ ಮುನಿಯಪ್ಪ - ರೂಪ ಶಶೀಧರ್​ಗೆ ಗೆಲುವು


ಕಾಂಗ್ರೆಸ್​ನ ಹಿರಿಯ ನಾಯಕ ಕೆಎಚ್​ ಮುನಿಯಪ್ಪ ದೇವನಹಳ್ಳಿ ಕ್ಷೇತ್ರದಲ್ಲಿ ಅವರ ಮಗಳು ರೂಪ ಕಲಾ ಶಶೀಧರ್​ ಕೆಜಿಎಫ್​ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.


ಎ ಮಂಜು-ಮಂಥರ್​ ಗೌಡಗೆ ಗೆಲುವು


ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಎ ಮಂಜು ಅರಕಲಗೂಡು ಕ್ಷೇತ್ರದಿಂದ ಹಾಗೂ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಮಂಜು ಅವರ ಪುತ್ರ ಮಂಥರ್ ಗೌಡ ಮಡಿಕೇರಿ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.


ಇದನ್ನೂ ಓದಿ: Congress Promises: ಸರ್ಕಾರ ರಚನೆಯತ್ತ ಕಾಂಗ್ರೆಸ್ ದಾಪುಗಾಲು, ಮಹಿಳೆಯರಿಗೆ 2 ಸಾವಿರ,​ ಉಚಿತ ವಿದ್ಯುತ್, ಈಡೇರಬಹುದೇ ಗ್ಯಾರಂಟಿ?


 ದಾಖಲೆಯ ಮತದಾನ


ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10ರಂದು ನಡೆದಿತ್ತು. ರಾಜ್ಯದಲ್ಲಿ ಬರೋಬ್ಬರಿ 66 ವರ್ಷಗಳ ನಂತರ ಗರಿಷ್ಠ ಮತದಾನವಾಗಿತ್ತು. ಶೇಕಡಾ 72.81 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆ ಮೂಲಕ ಮತದಾನದಲ್ಲಿ ಕರ್ನಾಟಕ ತನ್ನದೇ ಆದ ಹೊಸ ಐತಿಹಾಸಿಕ ದಾಖಲೆ ಸೃಷ್ಟಿಸಿದೆ.


ರಾಜ್ಯದ 224 ಕ್ಷೇತ್ರಗಳಲ್ಲಿ ಒಟ್ಟು 2600ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯವನ್ನು 3 ಕೋಟಿಗೂ ಹೆಚ್ಚು ಮತದಾರರು ನಿರ್ಧರಿಸಿದ್ದಾರೆ. ರಾಜ್ಯದ 5,30,85,566 ಮತದಾರರ ಪೈಕಿ 3,88,51,807 ಮತದಾರರಿಂದ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಒಟ್ಟು 1,96,58,398 ಪುರುಷ ಮತದಾರರಿಂದ ಹಕ್ಕು ಚಲಾಯಿಸಿದರೆ, 1,91,92,372 ಮಹಿಳಾ ಮತದಾರರಿಂದ ಮತದಾನ ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟು 1037 ಇತರೆ ಮತದಾರರಿಂದ ಹಕ್ಕು ಚಲಾಯಿಸಲಾಗಿದೆ.


ಹೆಚ್ಚು ಮತ್ತು ಕಡಿಮೆ ಮತದಾನ ನಡೆದಿದ್ದೆಲ್ಲಿ?


ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ರಾಜ್ಯದ ಅತಿ ಹೆಚ್ಚು ಮತದಾನವಾಗಿದೆ. ಅಲ್ಲಿ ಶೇ.90.93ರಷ್ಟು ಮತದಾನವಾಗಿದ್ದು, ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಲ್ಲಿ ಶೇ.90.9ರಷ್ಟು ಮತದಾನವಾಗಿದೆ. ಬೆಂಗಳೂರಿನ ಸರ್​ ಸಿವಿ ರಾಮನ್ ಕ್ಷೇತ್ರದಲ್ಲಿ ಶೇಕಡಾ 42.1 ರಷ್ಟು ಮತದಾನವಾಗಿದ್ದು, ರಾಜ್ಯದಲ್ಲಿ ಅತ್ಯಂತ ಕಡಿಮೆ ಮತದಾನವಾದ ಕ್ಷೇತ್ರವಾಗಿದೆ.


ಈ ವರ್ಷವೂ ರಾಜಧಾನಿಯಲ್ಲಿ ಕಡಿಮೆ ಮತದಾನ

top videos


    ಬೆಂಗಳೂರು ಕೇಂದ್ರ- ಶೇ.54.45, ಬೆಂಗಳೂರು ಉತ್ತರ ಶೇ.50.02, ಬೆಂಗಳೂರು ದಕ್ಷಿಣ-ಶೇ.51.15, ಬೆಂಗಳೂರು ನಗರ ಶೇ.53.71ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಈ ಮೂಲಕ ರಾಜ್ಯ ರಾಜಧಾನಿಯ ಮತದಾರರು ಈ ಚುನಾವಣೆಯಲ್ಲೂ ಕಡಿಮೆ ಮತದಾನ ಮಾಡಿದ್ದಾರೆ.

    First published: