Karnataka Assembly Election Results 2023 Live Updates in Kannada: ಬಹಳ ದಿನಗಳಿಂದ ರಾಜ್ಯದ ಜನ ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಚುನಾವಣೆಯ ಫಲಿತಾಂಶ ಇಂದು ಹೊರ ಬಿದ್ದಿದ್ದು. ಕಾಂಗ್ರೆಸ್ ಸುನಾಮಿಗೆ ಬಿಜೆಪಿ, ಜೆಡಿಎಸ್ ಕೊಚ್ಚಿ ಹೋಗಿದೆ. ಈ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ನಿಮ್ಮ ನ್ಯೂಸ್ 18ನಲ್ಲಿ ಲಭ್ಯವಾಗಲಿದೆ.
ಸಿದ್ದು ಬಣದ ಟೀಮ್ನಿಂದ ಮಹತ್ವದ ತಂತ್ರಗಾರಿಕೆ ನಡೆದಿದ್ದು, ಗೆದ್ದ ಶಾಸಕರಿಗೆ ದೂರವಾಣಿ ಕರೆ ಮಾಡಲಾಗಿದೆ. ಗೆದ್ದ ಎಲ್ಲಾ ಶಾಸಕರ ಸಂಪರ್ಕ ಮಾಡಿ ಸಂಜೆಯ ಸಭೆಯಲ್ಲಿ ಸಿದ್ದು ಪರ ಬೆಂಬಲ ಸೂಚಿಸಲು ಮನವಿ ಮಾಡಲಾಗಿದೆ. ಸಿದ್ದರಾಮಯ್ಯ ಆಪ್ತ ಶಾಸಕರಿಂದ ದೂರವಾಣಿ ಮೂಲಕ ಈ ಮನವಿ ಮಾಡಲಾಗಿದೆ.
ಈ ಚುನಾವಣೆಯಲ್ಲಿ ನನ್ನ ಸೋಲು ಸಿದ್ಧಾಂತದ ಸೋಲಲ್ಲ. ವೈಯಕ್ತಿಕ ಸೋಲು, ಜನಾದೇಶಕ್ಕೆ ತಲೆ ಬಾಗುತ್ತೇನೆ. ಜಿಲ್ಲೆಯ ಜನತೆ ನೀಡಿದ ಜನಾದೇಶಕ್ಕೆ ತಲೆಬಾಗುತ್ತೇನೆ. ಚುನಾವಣೆಯಲ್ಲಿ ಸೋಲು-ಗೆಲುವು ಸ್ವಾಭಾವಿಕ. ಗೆಲುವಿನಿಂದ ಬೀಗಿಲ್ಲ, ಸೋಲಿನಿಂದ ಕುಗ್ಗಲ್ಲ. ಆಗಿರುವ ತಪ್ಪುಗಳನ್ನ ಸರಿಪಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗೆದ್ದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಹಿಂದೆ ಸಿಕ್ಕ ಅಲ್ಪ ಸಮಯದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು, ತಾವು ತಂದ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಲಿ. ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಕಾರ್ಯಕರ್ತರು ಧೃತಿಗೆಡುವುದು ಬೇಡ. ಕಾರ್ಯಕರ್ತರಿಗೆ ಸದಾ ಬೆನ್ನೆಲುಬಾಗಿ ನಿಂತು ಧೈರ್ಯ ತುಂಬುವ ಕೆಲಸ ಮಾಡುತ್ತೇನೆ ಎಂದು ಭಾವನಾತ್ಮಕ ಪತ್ರ ಬರೆದಿದ್ದಾರೆ.
ನಾಳೆ ಡಿಕೆ ಶಿವಕುಮಾರ್ ರವರ 61ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆ ಡಿಕೆ ಶಿವಕುಮಾರ್ ಮನೆ ಬಳಿ ಫ್ಲೆಕ್ಸ್ ಹಾಕಿರುವ ಅಭಿಮಾನಿಗಳು. ಫ್ಲೆಕ್ಸ್ನಲ್ಲಿ ನೂತನ ಮುಖ್ಯಮಂತ್ರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಅಭಿಮಾನಿಗಳು ಬರೆದಿದ್ದು, ಈ ಆಸೆ ಈಡೇರುತ್ತಾ ಎಂಬ ಪ್ರಶ್ನೆ ಎದ್ದಿದೆ.
ಅಧಿಕಾರಿಯು ಒತ್ತಡದಿಂದ ಮರು ಮತ ಎಣಿಕೆ ಮಾಡಿದ್ದಾರೆ. ಅಸಿಂಧುವಾದ ಮತಗಳನ್ನು ಯಾಕೆ ಮತ್ತೆ ಎಣಿಕೆ ಮಾಡಲಾಯ್ತು. ಡೆಸಿಗ್ನೇಷನ್ ಸಹಿ ಇಲ್ಲದ್ದು, ರಿಜೆಕ್ಟ್ ಆಗಿತ್ತು. ಮತ್ತೆ ಒತ್ತಡದಿಂದ ಕೆಲಸ ಮಾಡಿದ್ದಾರೆ. ತೇಜಸ್ವಿ ಸೂರ್ಯ ಮತಗಟ್ಟೆಗೆ ಯಾಕೆ ಬಂದ್ರು? ಅವ್ರು ಬರುವ ಹಾಗಿಲ್ಲ. ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇನೆ ಎಂದಿದ್ದಾರೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಹಿನ್ನಾಳಿ ಶಾಸಕ ರೇಣುಕಾಚಾರ್ಯ ರಾಜಕೀಯ ನಿವೃತ್ತಿ ಘೋಷಿಸಲು ಮುಂದಾಗಿದ್ದಾರೆ.
ನಾನು ಕ್ಷೇತ್ರದ ಜನರಿಗಾಗಿ ಹಗಲಿರುಳು ಕೆಲಸ ಮಾಡಿದೆ. ಆದರೂ ಈ ರೀತಿ ಸೋಲು ಆಯ್ತಲ್ಲ ಅಂತ ಕಣ್ಣೀರು ಹಾಕಿದ್ದಾರೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ.
ಒಟ್ಟು 6 ಬಾರಿ ಜಯನಗರ ಕ್ಷೇತ್ರದ ಮತೆಣಿಕೆ ನಡೆದಿದ್ದು, ಸೌಮ್ಯಾ ರೆಡ್ಡಿ ರೀಕೌಂಟಿಂಗ್ 16 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿ. ಕೆ ರಾಮಮೂರ್ತಿ ಗೆದ್ದಿರುವುದಾಗಿ CEO ಮನೋಜ್ ಕುಮಾರ್ ಮೀನಾ ಘೋಷಿಸಿದ್ದಾರೆ.
ಈಗಾಗಲೇ ನಾವು ಏನು 5 ಗ್ಯಾರೆಂಟಿಗಳನ್ನು ನೀಡಿದ್ದೇವೆ ಅದನ್ನು ಮೊದಲ ಸಂಪುಟ ಸಭೆಯಲ್ಲೇ ಆದೇಶ ಹೊರಡಿಸಿ ಜಾರಿಗೆ ಕೊಡುತ್ತೇವೆ. ನರೇಂದ್ರ ಮೋದಿ ಅವರು ಈ ಗ್ಯಾರೆಂಟಿಗಳನ್ನು ಜಾರಿ ಮಾಡಲು ಆಗಲ್ಲ, ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು. ಸಾಲ ಮಾಡಿ ದೇಶವನ್ನು ದಿವಾಳಿ ಮಾಡಿರುವುದು ಮೋದಿ ಅವರೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇಂದು ಸಂಜೆ ವೇಳೆಗೆ ರಾಜ ಭವನಕ್ಕೆ ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದು, ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.
ಜನರಿಗೆ ಭರವಸೆ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಮೊದಲ ಕ್ಯಾಬಿನೇಟ್ ನಲ್ಲೇ ಈಡೇರಿಸುವಂತೆ ಹಿರಿಯ ನಾಯಕ ಖರ್ಗೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಮೊದಲ ಸಭೆಯನ್ನು ನಾಳೆ ಸಂಜೆ 5:30ಕ್ಕೆ ಕರೆಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಮೇಕೆದಾಟು, ಭಾರತ್ ಜೋಡೋ ಪಾದಯಾತ್ರೆಯೇ ನಮ್ಮ ಗೆಲುವಿಗೆ ಕಾರಣ. ಎಲ್ಲೆಲ್ಲಿ ಪಾದಯಾತ್ರೆ ಮಾಡಿದ್ದೇವೋ, ಅಲ್ಲೆಲ್ಲ ನಾವು ಗೆದ್ದಿದ್ದೇವೆ. ಮೋದಿ ಬಂದು ನಾನು ಗುಜರಾತ್ ಪುತ್ರ ವೋಟ್ ಕೊಡಿ ಅಂತಾ ಕೇಳಿದ್ದರು. ನಾನು ಕರ್ನಾಟಕದ ಪುತ್ರ ನನಗೆ ವೋಟ್ ಕೊಡಿ ಅಂತಾ ನಾನು ಕೇಳಿದ್ದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ ವಿಚಾರದ ಕುರಿತು ಮಾತನಾಡಿದ ಜೋಶಿ ಲೋಕಸಭೆ, ವಿಧಾಸಭೆ ಚುನಾವಣೆ ನಡೆಯೋದು ಬೇರೆ ಬೇರೆ ರೀತಿ ಆಗಿರಲ್ಲ, ನಮ್ಮ ಪಕ್ಷ ಗೆದ್ದಿದೆ ಎಂದಿದ್ದಾರೆ.
ಬಿಜೆಪಿಯ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಈ ಬಾರಿ ಅಚ್ಚರಿ ಎಂಬಂತೆ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಈ ರೀತಿ ಬಿಜೆಪಿ ಹೀನಾಯವಾಗಿ ಸೋಲಲು ಕಾರಣವೇನು ಎಂಬುದು ಇಲ್ಲಿದೆ.
ರಾಜ್ಯದ ಫಲಿತಾಂಶ ಘೋಷಣೆಯಾಗಿದೆ, ರಾಜ್ಯದ ಜನ ಕೊಟ್ಟ ತೀರ್ಪನ್ನು ವಿನಮ್ರವಾಗಿ ಸ್ವೀಕರಿಸ್ತೇವೆ ಎಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಜೋಶಿ ಹೇಳಿದ್ದಾರೆ. ಅಲ್ಲದೇ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಶ್ಚಿತವಾಗಿದೆ, ಕೊಟ್ಟ ಭರವಸೆಗಳನ್ನು ಈಡೇರಿಸಿತ್ತೆ ಅನ್ನೋ ಆಶಾಭಾವನೆ ಹೊಂದಿದ್ದೇವೆ. ಹೊಸ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಸಹ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಹೋಗಲಿರೋ ಸಿದ್ದರಾಮಯ್ಯ
ಒಬ್ಬೊಬ್ಬರಾಗಿ ಹೊರಟ ಮನೆ ಬಳಿ ಇದ್ದ ಕಾರ್ಯಕರ್ತರು
ಹೂ ಗುಚ್ಚ ಹಿಡಿದು ವಿಶ್ ಮಾಡಲು ಬಂದಿದ್ದ ಕೆಲ ಕಾರ್ಯಕರ್ತರು
ಕರ್ನಾಟಕದಲ್ಲಿ ಫಲ ಕೊಡದ ಗುಜರಾತಿ ಮಾಡೆಲ್
ಹೊಸ ಮುಖಗಳಿಗೆ ಟಿಕೆಟ್ ಕೊಡುವ ಬಿಜೆಪಿ ನಡೆಗೆ ಫಲಿತಾಂಶದಲ್ಲಿ ಭಾರೀ ಹಿನ್ನಡೆ
75 ಹೊಸ ಮುಖಗಳಲ್ಲಿ ಕೇವಲ 19 ಜನರು ಮಾತ್ರ ಗೆಲವು
ಉಳಿದ 56 ಹೊಸ ಅಭ್ಯರ್ಥಿಗಳಿಗೆ ಹೀನಾಯ ಸೋಲು
75ರಲ್ಲಿ ಕನಿಷ್ಠ 50 ಸ್ಥಾನಗಳನ್ನಾದ್ರು ಗೆಲ್ಲುವ ಗುರಿ ಹೊಂದಿದ್ದ ಬಿಜೆಪಿ
ಆದರೆ ಅದರಲ್ಲಿ ಅರ್ಧದಷ್ಟು ಗೆಲ್ಲದ ಹೊಸ ಮುಖಗಳು
ಮಹದೇವಪುರ – ಮಂಜುಳ ಲಿಂಬಾವಳಿ
ಹುಬ್ಬಳ್ಳಿ-ಧಾರವಾಡ ಕೇಂದ್ರ – ಮಹೇಶ್ ಟೆಂಗಿನಕಾಯಿ
ಹುಕ್ಕೇರಿ – ನಿಖಿಲ್ ಕತ್ತಿ
ಖಾನಾಪುರ – ವಿಠಲ್ ಹಲಗೇಕರ್
ಬೈಂದೂರು – ಗುರುರಾಜ್ ಗಂಟಿಹೊಳೆ
ಕಾಪು – ಗುರ್ಮೆ ಸುರೇಶ್ ಶೆಟ್ಟಿ
ಕುಂದಾಪುರ – ಕಿರಣ್ ಕುಮಾರ್ ಕೊಡ್ಗಿ
ಉಡುಪಿ – ಯಶಪಾಲ್ ಸುವರ್ಣ
ಬೇಲೂರು – ಹುಲ್ಲಳ್ಳಿ ಸುರೇಶ್
ಸಕಲೇಶಪುರ – ಸಿಮೆಂಟ್ ಮಂಜು
ಸುಳ್ಯ – ಭಾಗೀರಥಿ ಮುರುಳ್ಯ
ಶಿಕಾರಿಪುರ – ಬಿ.ವೈ. ವಿಜಯೇಂದ್ರ
ಕೃಷ್ಣರಾಜ – ಟಿ.ಎ. ಶ್ರೀವತ್ಸ
ದೊಡ್ಡಬಳ್ಳಾಪುರ – ಧೀರಜ್ ಮುನಿರಾಜು
ಜಮಖಂಡಿ – ಜಗದೀಶ್ ಗುಡಗಂಟಿ
ಬೀದರ್ ದಕ್ಷಿಣ – ಡಾ.ಶೈಲೇಂದ್ರ ಬೆಲ್ದಾಳೆ
ಶಿರಹಟ್ಟಿ – ಡಾ.ಚಂದ್ರು ಲಮಾಣಿ
ಶಿವಮೊಗ್ಗ ನಗರ- ಚನ್ನಬಸಪ್ಪ
ಶಿಕಾರಿಪುರ- ಬಿ.ವೈ. ವಿಜಯೇಂದ್ರ
ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿರೋ ಬ್ಯಾನರ್ ಗಳು
2 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡ್ತಾ ಇರೋ ಸಿದ್ದರಾಮಯ್ಯ ಗೆ ಅಭಿನಂದನೆಗಳು ಅಂತಿರೋ ಬ್ಯಾನರ್ ಗಳು
ಸಿದ್ದರಾಮಯ್ಯ ನಿವಾಸದ ಬಳಿ ಅಳವಡಿಕೆ ಮಾಡ್ತಾ ಇರೋ ಕಾರ್ಯಕರ್ತರು
ಜಯನಗರ ಕ್ಷೇತ್ರದ ಮರು ಎಣಿಕೆ ಹಿನ್ನೆಲೆ
ಮರು ಎಣಿಕೆಯಲ್ಲೂ ಸೌಮ್ಯರೆಡ್ಡಿ ಗೆಲುವು
150 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಗೆಲುವು
ಮೊದಲ ಎಣಿಕೆಯಲ್ಲಿ 160 ಮತ ಗಳಿಸಿದ್ದ ಸೌಮ್ಯ ರೆಡ್ಡಿ
ಅಂಚೆ ಮತಗಳಲ್ಲಿ ಸೀಲ್ ಅಂಡ್ ಸಿಗ್ನೇಚರ್ ಇಲ್ಲದ ಹತ್ತು ಮತಗಳು ತಿರಸ್ಕಾರ
ತಿರಸ್ಕಾರ ಹಿನ್ನೆಲೆ 150 ಮತಗಳು ಅಂತರ ಅಂತಿಮ.