• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Election Results: ಶ್ರೀರಾಮುಲು, ಸುಧಾಕರ್ ಸೇರಿ ಹಲವು ಹಾಲಿ ಸಚಿವರಿಗೆ ಸೋಲು! ಬಿಜೆಪಿಗೆ ಆಘಾತದ ಮೇಲೆ ಆಘಾತ

Karnataka Election Results: ಶ್ರೀರಾಮುಲು, ಸುಧಾಕರ್ ಸೇರಿ ಹಲವು ಹಾಲಿ ಸಚಿವರಿಗೆ ಸೋಲು! ಬಿಜೆಪಿಗೆ ಆಘಾತದ ಮೇಲೆ ಆಘಾತ

ಹಾಲಿ ಸಚಿವರಿಗೆ ಸೋಲು

ಹಾಲಿ ಸಚಿವರಿಗೆ ಸೋಲು

Karnataka Election Results 2023 : ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Election) ಫಲಿತಾಂಶ (Election Results) ಹೊರಬಿದ್ದಿದ್ದು, ಆಡಳಿತರೂಢ ಬಿಜೆಪಿಗೆ ಭಾರಿ ಮುಖಭಂಗವಾಗಿದ್ದು, ಹಲವು ಹಾಲಿ ಸಚಿವರು ಸೋಲು ಕಂಡಿದ್ದಾರೆ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Election) ಫಲಿತಾಂಶ (Election Results) ಹೊರಬಿದ್ದಿದ್ದು, ಆಡಳಿತರೂಢ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಹಿರಿಯ ನಾಯಕರಿಗೆ ಮತದಾರರು ಸೋಲುಣಿಸಿದ್ದಾರೆ. ಹಾಲಿ ಸಚಿವರಾದ ಬಿಸಿ ಪಾಟೀಲ್, ಗೋವಿಂದ ಕಾರಜೋಳ, ಡಾ. ಕೆ ಸುಧಾಕರ್​, ಎಂಟಿಬಿ ನಾಗರಾಜು, ಬಿ.​ ಶ್ರೀರಾಮುಲು, ನಾರಾಯಣಗೌಡ, ಮುರುಗೇಶ್ ನಿರಾಣಿ ಸೇರಿದಂತೆ ಹಲವಾರು ಹಾಲಿ ಸಚಿವರು ಸೋಲು ಕಂಡಿದ್ದಾರೆ. ವಿಧಾನಸಭಾ ಸ್ಪೀಕರ್​ ವಿಶ್ವೇಶ್ವರ್​ ಹೆಗಡೆ ಕಾಗೇರಿ ಕೂಡ ಸೋಲು ಕಂಡಿದ್ದಾರೆ.


ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ   223 ಕ್ಷೇತ್ರಗಳ ಪೈಕಿ​ 136 ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಆಡಳಿತರೂಢ ಬಿಜೆಪಿ 65ಕ್ಕೆ ಕುಸಿದಿದೆ. ಜೆಡಿಎಸ್​ 19 ಸ್ಥಾನಗಳಿಸಿದೆ. ಪಕ್ಷೇತರರು 4 ರಲ್ಲಿ ಜಯ ಸಾಧಿಸಿದ್ದಾರೆ.


ಸೋಲುಕಂಡ ಸಚಿವರ ಪಟ್ಟಿ


ಶ್ರೀರಾಮುಲು - ಬಳ್ಳಾರಿ ಗ್ರಾಮಾಂತರ
ವಿ ಸೋಮಣ್ಣ - ಚಾಮರಾಜನಗರ, ವರುಣಾ
ಗೋವಿಂದ ಕಾರಜೋಳ - ಮುಧೋಳ
ಮುರುಗೇಶ್ ನಿರಾಣಿ - ಬೀಳಗಿ
ಡಾ ಕೆ ಸುಧಾಕರ್‌ - ಚಿಕ್ಕಬಳ್ಳಾಪುರ
ಮಾಧುಸ್ವಾಮಿ - ಚಿಕ್ಕನಾಯಕನಹಳ್ಳಿ
ಬಿಸಿ ನಾಗೇಶ್‌ - ತಿಪಟೂರು
ಬಿಸಿ ಪಾಟೀಲ್‌ - ಹಿರೇಕೆರೂರು
ಎಂಟಿಬಿ ನಾಗರಾಜ್‌ - ಹೊಸಕೋಟೆ
ಕೆಸಿ ನಾರಾಯಣಗೌಡ - ಕೆಆರ್‌ ಪೇಟೆ
ಹಾಲಪ್ಪ ಆಚಾರ್‌ - ಯಲಬುರ್ಗಾ
ಶಂಕರ್‌ ಪಾಟೀಲ್‌ ಮುನೇನಕೊಪ್ಪ - ನವಲಗುಂದ


ಸೋಲು ಕಂಡ ಪ್ರಮುಖ ನಾಯಕರು


ವಿಶ್ವೇಶ್ವರ ಹೆಗಡೆ ಕಾಗೇರಿ- ಶಿರಸಿ


ಸಿಟಿ ರವಿ- ಚಿಕ್ಕಮಗಳೂರು


ಮಹೇಶ್ ಕುಮಟಳ್ಳಿ- ಅಥಣಿ


ಸಿಪಿ ಯೋಗೇಶ್ವರ್​- ಚನ್ನಪಟ್ಟಣ

ಶೇ. 72 ಪರ್ಸೆಂಟ್​ ಮತದಾನ


ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10ರಂದು ನಡೆದಿತ್ತು. ರಾಜ್ಯದಲ್ಲಿ ಬರೋಬ್ಬರಿ 66 ವರ್ಷಗಳ ನಂತರ ಗರಿಷ್ಠ ಮತದಾನವಾಗಿತ್ತು. ಶೇಕಡಾ 72.81 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆ ಮೂಲಕ ಮತದಾನದಲ್ಲಿ ಕರ್ನಾಟಕ ತನ್ನದೇ ಆದ ಹೊಸ ಐತಿಹಾಸಿಕ ದಾಖಲೆ ಸೃಷ್ಟಿಸಿತ್ತು.


ರಾಜ್ಯದ 224 ಕ್ಷೇತ್ರಗಳಲ್ಲಿ ಒಟ್ಟು 2600ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯವನ್ನು 3 ಕೋಟಿಗೂ ಹೆಚ್ಚು ಮತದಾರರು ನಿರ್ಧರಿಸಿದ್ದಾರೆ. ರಾಜ್ಯದ 5,30,85,566 ಮತದಾರರ ಪೈಕಿ 3,88,51,807 ಮತದಾರರಿಂದ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಒಟ್ಟು 1,96,58,398 ಪುರುಷ ಮತದಾರರಿಂದ ಹಕ್ಕು ಚಲಾಯಿಸಿದರೆ, 1,91,92,372 ಮಹಿಳಾ ಮತದಾರರಿಂದ ಮತದಾನ ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟು 1037 ಇತರೆ ಮತದಾರರಿಂದ ಹಕ್ಕು ಚಲಾಯಿಸಲಾಗಿದೆ.


ಹೆಚ್ಚು ಮತ್ತು ಕಡಿಮೆ ಮತದಾನ ನಡೆದಿದ್ದೆಲ್ಲಿ?


ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ರಾಜ್ಯದ ಅತಿ ಹೆಚ್ಚು ಮತದಾನವಾಗಿದೆ. ಅಲ್ಲಿ ಶೇ.90.93ರಷ್ಟು ಮತದಾನವಾಗಿದ್ದು, ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಲ್ಲಿ ಶೇ.90.9ರಷ್ಟು ಮತದಾನವಾಗಿದೆ. ಬೆಂಗಳೂರಿನ ಸರ್​ ಸಿವಿ ರಾಮನ್ ಕ್ಷೇತ್ರದಲ್ಲಿ ಶೇಕಡಾ 42.1 ರಷ್ಟು ಮತದಾನವಾಗಿದ್ದು, ರಾಜ್ಯದಲ್ಲಿ ಅತ್ಯಂತ ಕಡಿಮೆ ಮತದಾನವಾದ ಕ್ಷೇತ್ರವಾಗಿದೆ.


ಈ ವರ್ಷವೂ ರಾಜಧಾನಿಯಲ್ಲಿ ಕಡಿಮೆ ಮತದಾನ


ಬೆಂಗಳೂರು ಕೇಂದ್ರ- ಶೇ.54.45, ಬೆಂಗಳೂರು ಉತ್ತರ ಶೇ.50.02, ಬೆಂಗಳೂರು ದಕ್ಷಿಣ-ಶೇ.51.15, ಬೆಂಗಳೂರು ನಗರ ಶೇ.53.71ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಈ ಮೂಲಕ ರಾಜ್ಯ ರಾಜಧಾನಿಯ ಮತದಾರರು ಈ ಚುನಾವಣೆಯಲ್ಲೂ ಕಡಿಮೆ ಮತದಾನ ಮಾಡಿದ್ದಾರೆ.

top videos
  First published: