• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Sowmya Reddy-Jayanagar: ಜಯನಗರದಲ್ಲಿ ಗೆದ್ದಿದ್ದು ಕಾಂಗ್ರೆಸ್ಸೋ? ಬಿಜೆಪಿಯೋ? ಸೌಮ್ಯಾ ರೆಡ್ಡಿಗೆ ಫುಲ್ ಟೆನ್ಶನ್!

Sowmya Reddy-Jayanagar: ಜಯನಗರದಲ್ಲಿ ಗೆದ್ದಿದ್ದು ಕಾಂಗ್ರೆಸ್ಸೋ? ಬಿಜೆಪಿಯೋ? ಸೌಮ್ಯಾ ರೆಡ್ಡಿಗೆ ಫುಲ್ ಟೆನ್ಶನ್!

ಸೌಮ್ಯಾ ರೆಡ್ಡಿ

ಸೌಮ್ಯಾ ರೆಡ್ಡಿ

ಗೆಲುವಿನ ಅಂತರ ಕಡಿಮೆ ಇದ್ದು, ಇನ್ನೊಮ್ಮೆ ಮತ ಎಣಿಕೆಗೆ ಬಿಜೆಪಿ ನಾಯಕರು ಮನವಿ ಮಾಡಿದ್ದರು. ಬಳಿಕ ಮತ್ತೊಮ್ಮೆ ಎಣಿಕೆ ಮಾಡಿದಾಗ, ಗೆಲುವಿನ ಅಂತರ 150ಕ್ಕೆ ಇಳಿಯಿತು. ಇದೀಗ ಇನ್ನೂ ಜಯನಗರ ಫಲಿತಾಂಶದಲ್ಲಿ ಗೊಂದಲ ಮುಂದುವರೆದಿದೆ.

 • News18 Kannada
 • 3-MIN READ
 • Last Updated :
 • Karnataka, India
 • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ (Karnataka assembly election result) ಹೊರಬಿದ್ದಿದ್ದು, ಕಾಂಗ್ರೆಸ್ (Congress) ಭರ್ಜರಿ ಗೆದ್ದು ಬೀಗಿದೆ. 136 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆದರೆ ಬೆಂಗಳೂರಿನ (Bengaluru) ಜಯನಗರ (Jayanagar) ಕ್ಷೇತ್ರದ ಫಲಿತಾಂಶದ ವಿಚಾರವಾಗಿ ಭಾರೀ ಗೊಂದಲ ಏರ್ಪಟ್ಟಿದೆ. ಮೊದಲು ಫಲಿತಾಂಶ ಘೋಷಣೆಯಾದಾಗ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ (Sowmya Reddy) ಗೆಲುವು ಸಾಧಿಸಿದ್ದಾರೆ ಎನ್ನಲಾಗಿತ್ತು. ಬಿಜೆಪಿಯ ಸಿ.ಕೆ. ರಾಮಮೂರ್ತಿ (CK Ramamurthy) ವಿರುದ್ಧ ಸೌಮ್ಯಾ ರೆಡ್ಡಿ ಕೇವಲ 160 ಮತಗಳಿಂದ ಗೆಲುವು ಸಾಧಿಸಿದ್ದಾಗಿ ಘೋಷಿಸಲಾಗಿತ್ತು. ಆದರೆ ಗೆಲುವಿನ ಅಂತರ ಕಡಿಮೆ ಇದ್ದು, ಇನ್ನೊಮ್ಮೆ ಮತ ಎಣಿಕೆಗೆ ಬಿಜೆಪಿ ನಾಯಕರು ಮನವಿ ಮಾಡಿದ್ದರು. ಬಳಿಕ ಮತ್ತೊಮ್ಮೆ ಎಣಿಕೆ ಮಾಡಿದಾಗ, ಗೆಲುವಿನ ಅಂತರ 150ಕ್ಕೆ ಇಳಿಯಿತು. ಇದೀಗ ಇನ್ನೂ ಜಯನಗರ ಫಲಿತಾಂಶದಲ್ಲಿ ಗೊಂದಲ ಮುಂದುವರೆದಿದೆ.


ಸೌಮ್ಯಾ ರೆಡ್ಡಿಗೆ ಸೋಲೋ? ಗೆಲುವೋ?


ಜಯನಗರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹಾಲಿ ಶಾಸಕಿ ಸೌಮ್ಯಾ ರೆಡ್ಡಿ 160 ಮತಗಳಿಂದ ಬಿಜೆಪಿಯ ಸಿ.ಕೆ. ರಾಮಮೂರ್ತಿ ವಿರುದ್ಧ ಗೆದ್ದಿದ್ದಾಗಿ ಅಧಿಕೃತ ಘೋಷಣೆ ಹೊರಬಿದ್ದಿತ್ತು. ಆರಂಭದಲ್ಲಿ ಸೌಮ್ಯಾ ರೆಡ್ಡಿ ಸಿ.ಕೆ. ರಾಮಮೂರ್ತಿ ವಿರುದ್ಧ ಕೇಲವ 160 ಮತಗಳ ಅಂತರದಲ್ಲಿ ಗೆದ್ದಿದ್ದರು. ಹೀಗಾಗಿ ರಾಮಮೂರ್ತಿ ಅವರು ಮರು ಮತ ಎಣಿಕೆಗೆ ಮನವಿ ಮಾಡಿದ್ದು, 2ನೇ ಬಾರಿಯೂ ಸೌಮ್ಯಾ ಅವರ ಮತಗಳ ಸಂಖ್ಯೆ ಕಡಿಮೆಯಾದವು. 160ರಿಂದ150ಕ್ಕೆ ಇಳಿಯಿತು. ಆದರೆ ಮೂರನೇ ಬಾರಿ ನಡೆದ ಮರು ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಸಿಕ್ಕಿದೆ.


ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಸಿಎಂ ಕುರ್ಚಿ ಯಾರಿಗೆ? ಖರ್ಗೆ ನಿವಾಸದಲ್ಲಿ ಡಿಕೆಶಿ ಬ್ರದರ್ಸ್ ಮೀಟಿಂಗ್


ಬಿಜೆಪಿ ನಾಯಕರ ಜಮಾವಣೆ


ಮತ ಎಣಿಕೆಯಲ್ಲಿ ಗೊಂದಲ ಆಗ್ತಾ ಇರುವಂತೆ ಜಯನಗರ ಮತಗಟ್ಟೆಯಲ್ಲಿ ಬಿಜೆಪಿ ನಾಯಕರು ಆಗಮಿಸಿದ್ರು. ಆರ್. ಅಶೋಕ್, ತೇಜಸ್ವಿ ಸೂರ್ಯ, ರವಿಸುಬ್ರಮಣ್ಯ  ಸೇರಿದಂತೆ ಪ್ರಮುಖರು ಅಲ್ಲಿ ಸೇರಿದ್ದರು.


ಸೌಮ್ಯಾ ರೆಡ್ಡಿಗೆ ಭಾರೀ ಟೆನ್ಶನ್


ಇನ್ನು ಭಾರೀ ಗೊಂದಲ ಇರೋದ್ರಿಂದ ಕೈ ಅಭ್ಯರ್ಥಿ ಸೌಮ್ಯಾ ರೆಡ್ಡಿ ಟೆನ್ಷನ್ ಆದ್ರು. ಅಲ್ಪ ಮತಗಳ ಅಂತರದ ಗೆಲುವು ಅಂತ ಸಂಭ್ರಮಿಸೋ ಮೊದಲೆ ಗೊಂದಲ ನಿರ್ಮಾಣವಾಗಿದ್ದು, ಟೆನ್ಶನ್ ಮತ್ತಷ್ಟು ಹೆಚ್ಚಾಯ್ತು. ಎಣಿಕೆ ಆಗ್ತಿರೋ ಮತಗಳು ಕೊನೆಯ ಬಾರಿ ಎಣಿಕೆ ಆದಾಗ ಬಿಜೆಪಿ ಗೆಲುವು ಎಂದು ಘೋಷಿಸಿರೋ ಹಿನ್ನೆಲೆ ಸೌಮ್ಯ ರೆಡ್ಡಿ ಆತಂಕಕ್ಕೆ ಒಳಗಾಗಿದ್ರು.


ಗೇಟು ಹಿಡಿದು ತಳ್ಳಾಡಿದ ಡಿಕೆ ಸುರೇಶ್


ಇನ್ನು ಮತ ಎಣಿಕಾ ಕೇಂದ್ರಕ್ಕೆ ಆಗಮಿಸಿದ ಸಂಸದ ಡಿಕೆ ಸುರೇಶ್ಸ ಡಿಕೆ ಸುರೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು  ಮತ ಎಣಿಕಾ ಕೇಂದ್ರದ ಮುಂಬಾಗದಲ್ಲಿ ಗೇಟು ಹಿಡಿದು ತಳ್ಳಾಡಿದ್ರು, ಈ ವೇಳೆ  ಪೋಲಿಸ್ ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.


ಇದನ್ನೂ ಓದಿ: BJP Defeat: ಬಿಜೆಪಿ ಹೀನಾಯ ಸೋಲಿಗೆ ಕಾರಣಗಳೇನು? ಅತಿ ವಿಶ್ವಾಸವೋ, 40 ಪರ್ಸೆಂಟ್ ಆರೋಪವೋ?


ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ


ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್ ಪರಿಶೀಲನೆ ನಡೆಸಿದ್ರು. ಜಯನಗರ ಮತ ಎಣಿಕೆ ಕೇಂದ್ರದ ಮುಂದೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ನ್ಯಾಯ ಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಿಸಿದ್ರು. ಮತ ಎಣಿಕೆ ಕೇಂದ್ರದ ಮುಂಭಾಗಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮುನ್ನುಗ್ಗದಂತೆ ಅಡ್ಡಲಾಗಿ ಪೊಲೀಸರು ನಿಂತ್ರು.

top videos
  First published: