ಈ ಬಾರಿ ಬಹುತೇಕ ಕಾಂಗ್ರೆಸ್ (Congress) ಕರುನಾಡಿನ ಚುಕ್ಕಾಣಿ ಹಿಡಿಯಲಿದೆ. ಬಿಜೆಪಿ (BJP) ಪಕ್ಷಕ್ಕೆ ಹಿನ್ನಡೆಯಾಗಿದೆ. 2013ರ ರಾಜ್ಯದ ಸ್ಥಿತಿ ಮತ್ತೆ ಮರುಕಳಿಸಿದೆ. ನಾವೇ ಗೆಲ್ತೇವೆ ಎಂದುಕೊಂಡಿದ್ದ ಬಿಜೆಪಿಗೂ ಜೊತೆಗೆ ನಾವೇ ಕಿಂಗ್ ಮೇಕರ್ ಆಗ್ತೇವೆ ಎಂದುಕೊಂಡಿದ್ದ ಜೆಡಿಎಸ್ಗೂ (JDS) ಕಾಂಗ್ರೆಸ್ ಬಿಗ್ ಶಾಕ್ ಕೊಟ್ಟಿದೆ. ಆರಂಭಿಕ ಟ್ರೆಂಡ್ ಅನ್ವಯ ಕಾಂಗ್ರೆಸ್ ಮ್ಯಾಜಿಕ್ ನಂಬರ್ (Magic Number) ದಾಟಿ ಸರಳ ಬಹುಮತ ಪಡೆದಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಹೌದು ಕಾಂಗ್ರೆಸ್ 114 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 86 ಕ್ಷೇತ್ರಗಳಲ್ಲಿ ಮುಂದಿದೆ. ಇನ್ನು ಜೆಡಿಎಸ್ 20 ಸ್ಥಾನ ಹಾಗೂ ಇತರರು 3 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದಾರೆ. ಆದರೆ ಇದರ ನಡುವೆಯೂ ಸಾಕಷ್ಟು ರೋಚಕ ಟ್ವಿಸ್ಟ್ ಮತ್ತು ಟರ್ನ್ಗಳಿವೆ.
ವಿದ್ಯಾವಂತರಿರೋ ಕ್ಷೇತ್ರಗಳಲ್ಲಿ 'ಕಮಲ' ಕರಾಮತ್ತು!
ಹಲವೆಡೆ ಬಿಜೆಪಿ ಲೆಕ್ಕಾಚಾರ ಊಲ್ಟಾ ಆಗಿರಬಹುದು. ಆದರೆ ವಿದ್ಯಾವಂತರಿರೋ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಪಾರುಪತ್ಯ ಮೆರೆಯುತ್ತಿದೆ. 35 ರಿಂದ 56 ಕ್ಷೇತ್ರಗಳಲ್ಲಿ 80ಕ್ಕೂ ಹೆಚ್ಚಿನ ಪರ್ಸೆಂಟ್ ಜನರು ಬುದ್ಧಿವಂತರಿದ್ದಾರೆ. ಇಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಕಾಂಗ್ರೆಸ್ ಇಷ್ಟು ಕ್ಷೇತ್ರಗಳಲ್ಲಿ 18 ಪಕ್ಷಗಳಲ್ಲಿ ಮುನ್ನಡೆ ಸಾಧಿಸಿಕೊಂಡಿದೆ.
ಸಣ್ಣ-ಪುಟ್ಟ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು!
ಮತ್ತೊಂದು ವಿಚಾರ ಅಂದ್ರೆ ಬಿಜೆಪಿ ಸಣ್ಣ ಪುಟ್ಟ ಕ್ಷೇತ್ರಗಳನ್ನೂ ತನ್ನ ವಶ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ 100 ಚದುರ ಕಿಲೋ ಮೀಟರ್ ವ್ಯಾಪಿ ಹೊಂದಿರುವ 33 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ 23ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಕೈ ಪಾರುಪತ್ಯದ 23 ಕ್ಷೇತ್ರದಲ್ಲೂ ಬಿಜೆಪಿ ದರ್ಬಾರ್!
ಇನ್ನೂ ಈ ಹಿಂದೆ 2018ರಲ್ಲಿ ಕಾಂಗ್ರೆಸ್ ಗೆದ್ದಿದ್ದ 23 ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಆ ಕ್ಷೇತ್ರಗಳನ್ನು ತನ್ನ ವಶ ಮಾಡಿಕೊಂಡಿದೆ. ಇನ್ನೂ 2018ರಲ್ಲಿ ಜೆಡಿಎಸ್ ಗೆದ್ದಿದ್ದದ 7 ಕ್ಷೇತ್ರಗಳನ್ನೂ ಬಿಜೆಪಿ ವಶಪಡಿಸಿಕೊಂಡಿದೆ.
ಇನ್ನೂ 80 ಪರ್ಸೆಂಟ್ಗಿಂತ ಹೆಚ್ಚು ಮತದಾನ ನಡೆದಿದ್ದ 75 ಕ್ಷೇತ್ರಗಳಲ್ಲಿ ಕಾಂಗ್ರೆಸ್ 41 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇದನ್ನೂ ಓದಿ: ಕಾಂಗ್ರೆಸ್ ಪರ ಮತದಾರರ ತೀರ್ಪು, ಬಿಜೆಪಿಗೆ ಭಾರೀ ಆಘಾತ
ಡಿಕೆಶಿ ಡಿಚ್ಚಿಗೆ ಬಿಜೆಪಿ ಪುಡಿ ಪುಡಿ!
ಭಾರೀ ಕುತೂಹಲ ಮೂಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಭದ್ರಕೋಟೆ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಆರ್ ಅಶೋಕ್‌ಗೆ ತೀವ್ರ ಮುಖಭಂಗ ಉಂಟಾಗಿದೆ. ಬಿಜೆಪಿ ಹೈಕಮಾಂಡ್ ನಿರ್ದೇಶನದಂತೆ ಕನಕಪುರ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದ ಆರ್ ಅಶೋಕ್ ವಿರುದ್ಧ ಡಿಕೆ ಶಿವಕುಮಾರ್ ಅವರು ಬರೋಬ್ಬರಿ 1 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದು, ಆ ಮೂಲಕ ಡಿಕೆಶಿ ವಿರುದ್ಧ ತೊಡೆ ತಟ್ಟಿದ್ದ ಬಿಜೆಪಿ ಹೈಕಮಾಂಡ್‌ಗೆ ಕನಕಪುರ ಕ್ಷೇತ್ರದ ಜನರೇ ಆ ಕಡೆ ತಲೆಯೂ ಹಾಕದಂತೆ ಸೋಲಿನ ರುಚಿ ತೋರಿಸಿದ್ದಾರೆ.
ಅಂದ ಹಾಗೆ ಕನಕಪುರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕೇವಲ ಒಂದೇ ಒಂದು ದಿನ ಪ್ರಚಾರ ನಡೆಸಿದ್ದರು. ಆ ನಂತರ ಕ್ಷೇತ್ರದಲ್ಲಿ ಪ್ರಚಾರ ನಡೆಸದೆ ಪಕ್ಷ ಅಭ್ಯರ್ಥಿಗಳ ಪರ ಪ್ರವಾಸ ಹೊರಟಿದ್ದರು. ಆದರೆ ಅಚ್ಚರಿ ಎಂಬಂತೆ ಕೇವಲ ಒಂದೇ ದಿನ ಪ್ರಚಾರ ನಡೆಸಿ ಬರೋಬ್ಬರಿ ಒಂದು ಲಕ್ಷ ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.
ಕಳಚಿದ ಕೊನೆ ಕರ್ನಾಟಕ ಕೊಂಡಿ!
ಇಲ್ಲಿಯವರೆಗೂ ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ದಕ್ಷಿಣ ಭಾರತಕ್ಕೂ ಬಿಜೆಪಿ ಹೈಕಮಾಂಡ್‌ಗೆ ಇದ್ದ ಒಂದೇ ಒಂದು ಕೊಂಡಿಯಂದರೆ ಕರ್ನಾಟಕ. ಅದು ಕೂಡ ಈಗ ಕಳಚಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ