• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bangalore: ರಾಜ್ಯ ರಾಜಧಾನಿಯಲ್ಲಿ ರಾಜರಾದವರು ಯಾರು? ಗ್ರಾಮಾಂತರದಲ್ಲಿ ಗೆದ್ದು ಬೀಗಿದವರು ಯಾರು?

Bangalore: ರಾಜ್ಯ ರಾಜಧಾನಿಯಲ್ಲಿ ರಾಜರಾದವರು ಯಾರು? ಗ್ರಾಮಾಂತರದಲ್ಲಿ ಗೆದ್ದು ಬೀಗಿದವರು ಯಾರು?

ಬೆಂಗಳೂರು ಫಲಿತಾಂಶ

ಬೆಂಗಳೂರು ಫಲಿತಾಂಶ

ರಾಜ್ಯ ರಾಜಧಾನಿಯಲ್ಲಿ ಗೆದ್ದು ಬೀಗಿದವರು ಯಾರು? ಬೆಂಗಳೂರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನಿಂದ ಗೆದ್ದವರು ಯಾರು? ಸಂಪೂರ್ಣ ವಿವರ ಇಲ್ಲಿದೆ…

  • News18 Kannada
  • 3-MIN READ
  • Last Updated :
  • Karnataka, India
  • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ (Karnataka assembly election results) ಹೊರಬಿದ್ದಿದೆ. ಬಹುತೇಕ ಸಮೀಕ್ಷೆಗಳು (Survey) ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ ಅಂತ ವರದಿ ನೀಡಿತ್ತು. ಆದರೆ ಕಾಂಗ್ರೆಸ್‌ಗೆ (Congress) ಭರ್ಜರಿ ಬಹುಮತ ನೀಡಿದ್ದಾರೆ ರಾಜ್ಯದ ಮತದಾರರು. ಕಾಂಗ್ರೆಸ್ 136 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ. ಬಿಜೆಪಿ (BJP) 65 ಕ್ಷೇತ್ರಗಳಲ್ಲಿ ಗೆದ್ದಿದೆ. ಜೆಡಿಎಸ್‌ (JDS) 20 ಸ್ಥಾನಗಳನ್ನು ಪಡೆದಿದ್ದರೆ, 4 ಕಡೆ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಇನ್ನು ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಹೊರಬೀಳಬೇಕಿದೆ. ಇತ್ತ ರಾಜ್ಯ ರಾಜಧಾನಿಯಲ್ಲಿ ಗೆದ್ದು ಬೀಗಿದವರು ಯಾರು? ಬೆಂಗಳೂರಲ್ಲಿ (Bengaluru) ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಿಂದ ಗೆದ್ದವರು ಯಾರು? ಸಂಪೂರ್ಣ ವಿವರ ಇಲ್ಲಿದೆ…


ರಾಜಧಾನಿಯಲ್ಲಿ ಕಾಂಗ್ರೆಸ್, ಬಿಜೆಪಿ ಜೆಡಿಎಸ್‌ಗೆ ಎಷ್ಟು ಸ್ಥಾನ?


ರಾಜ್ಯ ರಾಜಧಾನಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 14 ಸ್ಥಾನಗಳನ್ನು ಗೆದ್ದಿದೆ, ಇನ್ನು ಜೆಡಿಎಸ್‌ಗೆ ಕೇವಲ ಒಂದೇ ಒಂದು ಸ್ಥಾನದಲ್ಲೂ ಗೆದ್ದಿಲ್ಲ.


ರಾಜಧಾನಿಯಲ್ಲಿ ಗೆದ್ದ ಕಾಂಗ್ರೆಸ್ ಕಲಿಗಳು?


ಆನೇಕಲ್ -  ಬಿ ಶಿವಣ್ಣ, ಬಿಟಿಎಂ ಲೇಔಟ್ – ರಾಮಲಿಂಗಾರೆಡ್ಡಿ, ಬ್ಯಾಟರಾಯನಪುರ - ಕೃಷ್ಣ ಬೈರೇಗೌಡ, ಚಾಮರಾಜಪೇಟೆ - ಜಮೀರ್ ಅಹಮದ್ ಖಾನ್, ಗಾಂಧಿನಗರ - ದಿನೇಶ್ ಗುಂಡೂರಾವ್, ಗೋವಿಂದರಾಜನಗರ – ಪ್ರಿಯಕೃಷ್ಣ, ಹೆಬ್ಬಾಳ - ಬೈರತಿ ಸುರೇಶ್, ಜಯನಗರ - ಸೌಮ್ಯ ರೆಡ್ಡಿ, ಮಹದೇವಪುರ - ನಾಗೇಶ್ ಟಿ, ಪುಲಕೇಶಿನಗರ - ಶ್ರೀನಿವಾಸ್, ಸರ್ವಜ್ಞ ನಗರ - ಕೆಜೆ ಜಾರ್ಜ್, ಶಾಂತಿನಗರ - ಎನ್ ಎ ಹ್ಯಾರಿಸ್, ಶಿವಾಜಿನಗರ - ರಿಜ್ವಾನ್ ಅರ್ಷದ್, ವಿಜಯನಗರ – ಎಂ. ಕೃಷ್ಣಪ್ಪ


ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಗೆಲುವಿನ ಬೆನ್ನಲ್ಲೇ ಅಲರ್ಟ್ ಆದ ಕಾಂಗ್ರೆಸ್ ಹೈಕಮಾಂಡ್, ಡಿಕೆಶಿಗೆ ರಾಹುಲ್ ಗಾಂಧಿ ಬುಲಾವ್


ಬಿಜೆಪಿ ಗೆದ್ದ ಕ್ಷೇತ್ರಗಳು


ಮಹದೇವಪುರ -ಮಂಜುಳಾ ಲಿಂಬಾವಳಿ, ಬೆಂಗಳೂರು ದಕ್ಷಿಣ – ಎಂ. ಕೃಷ್ಣಪ್ಪ, ಬಸವನಗುಡಿ - ರವಿ ಸುಬ್ರಹ್ಮಣ್ಯ, ಬೊಮ್ಮನಹಳ್ಳಿ - ಸತೀಶ್ ರೆಡ್ಡಿ, ಸಿವಿ ರಾಮನ್ ನಗರ – ಎಸ್. ರಘು, ಚಿಕ್ಕಪೇಟೆ - ಉದಯ ಗರುಡಾಚಾರ್, ಕೆ ಆರ್ ಪುರಂ -ಬೈರತಿ ಬಸವರಾಜ, ಮಹಾಲಕ್ಷ್ಮೀ ಲೇಔಟ್ - ಕೆ ಗೋಪಾಲಯ್ಯ, ಮಲ್ಲೇಶ್ವರಂ - ಡಾ ಅಶ್ವತ್ಥ್ ನಾರಾಯಣ, ಪದ್ಮನಾಭನಗರ - ಅಶೋಕ ಆರ್, ರಾಜಾಜಿನಗರ - ಎಸ್ ಸುರೇಶ್ ಕುಮಾರ್, ರಾಜರಾಜೇಶ್ವರಿ ನಗರ - ಮುನಿರತ್ನ ನಾಯ್ಡು, ಯಲಹಂಕ - ಎಸ್ ಆರ್ ವಿಶ್ವನಾಥ್, ಯಶವಂತಪುರ - ಎಸ್ ಟಿ ಸೋಮಶೇಖರ್,  ದಾಸರಹಳ್ಳಿ – ಮುನಿರಾಜು


ಇದನ್ನೂ ಓದಿ: Yathindra Siddaramaiah: ನನ್ನ ತಂದೆಯವರೇ ಸಿಎಂ ಆಗಬೇಕು! ಯತೀಂದ್ರ ಸಿದ್ದರಾಮಯ್ಯ ಆಗ್ರಹ


ಬೆಂಗಳೂರು ಗ್ರಾಮಾಂತರದಲ್ಲಿ ಗೆದ್ದಿದ್ದು ಯಾರು?

top videos


    ದೇವನಹಳ್ಳಿ ವಿಧಾನಸಭಾ ಕ್ಷೇತ್ರ – ಕಾಂಗ್ರೆಸ್‌ನ ಕೆಹೆಚ್ ಮುನಿಯಪ್ಪ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ – ಬಿಜೆಪಿಯ ಧೀರಜ್ ಮುನಿರಾಜು, ನೆಲಮಂಗಲ ವಿಧಾನಸಭಾ ಕ್ಷೇತ್ರ – ಕಾಂಗ್ರೆಸ್‌ನ ಎನ್ ಶ್ರೀನಿವಾಸ್ ಹಾಗೂ  ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದಾರೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು