ಮೈಸೂರು: ಟಿಕೆಟ್ ಸಿಗದೇ ಬಿಜೆಪಿ ವಿರುದ್ಧ ಗರಂ ಆಗಿದ್ದ ಮೈಸೂರಿನ (Mysuru) ಕೃಷ್ಣರಾಜ ಕ್ಷೇತ್ರದ (Krishnaraja Constituency) ಶಾಸಕ, ಮಾಜಿ ಸಚಿವ ಎಸ್.ಎ. ರಾಮದಾಸ್ (SA Ramadas) ಈಗ ಸೈಲೆಂಟ್ ಆಗಿದ್ದಾರೆ. ನಿನ್ನೆ ಕೃಷ್ಣರಾಜ ಕ್ಷೇತ್ರದ ಟಿಕೆಟ್ ಅನ್ನು ಶ್ರೀವತ್ಸ ಎಂಬುವರಿಗೆ ಘೋಷಿಸಲಾಗಿತ್ತು. ಈ ವೇಳೆ ಪಕ್ಷದ ನಡೆ ವಿರುದ್ಧ ಆಕ್ರೋಶಗೊಂಡಿದ್ದ ರಾಮದಾಸ್, ಅಭಿಮಾನಿಗಳ ಜೊತೆ ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳೋದಾಗಿ ಹೇಳಿದ್ದರು. ಮಾತುಕತೆಗೆ ಬಂದಿದ್ದ ಪ್ರತಾಪ್ ಸಿಂಹ (Pratap Simha) ಜೊತೆ ಭೇಟಿಗೆ ನಿರಾಕರಿಸಿದ್ದರು. ನಿನ್ನೆ ರೆಬೆಲ್ ಆಗಿದ್ದ ರಾಮದಾಸ್, ಇದೀಗ ಸೈಲೆಂಟ್ ಆಗಿದ್ದಾರೆ. ಪಕ್ಷದಲ್ಲೇ ಉಳಿಯೋದಕ್ಕೆ ರಾಮದಾಸ್ ನಿರ್ಧರಿಸಿದ್ದಾರೆ. ಬೆಂಬಲಿಗರ ಸಭೆ ನಡೆಸಿ ಮಾತನಾಡಿದ ರಾಮದಾಸ್, ಶಾಸಕನಾಗುವುದಕ್ಕಿಂತ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಪ್ರೀತಿನೆ ಮುಖ್ಯ ಎಂದಿದ್ದು, ನಾನು ಪಕ್ಷ ಬಿಟ್ಟು ಹೋಗುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
ಶಾಸಕ ಸ್ಥಾನಕ್ಕಿಂತ ಮೋದಿ ಪ್ರೀತಿನೇ ಮುಖ್ಯ
ಹೀಗಂತ ರಾಮದಾಸ್ ಹೇಳಿದ್ದಾರೆ. ಶಾಸಕನಾಗುವುದಕ್ಕಿಂತ ಮೋದಿ ಅಂತವರ ಪ್ರೀತಿ ಮುಖ್ಯ ಅಂತ ರಾಮದಾಸ್ ಕಾರ್ಯಕರ್ತರ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ನಾನು ಬಿಜೆಪಿಯಲ್ಲೇ ಇರುತ್ತೇನೆ, ಪಕ್ಷ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ ಅಂತ ಅವರು ಹೇಳಿದ್ದಾರೆ.
ನಾನು ಸ್ಪರ್ಧೆ ಮಾಡಿದ್ರೆ 10-12 ಸಾವಿರ ಮತಗಳಿಂದ ಗೆಲ್ಲುತ್ತೇನೆ!
ನಾನು ಸ್ಪರ್ಧೆ ಮಾಡಿದರೆ 10 ರಿಂದ 12 ಸಾವಿರದಲ್ಲಿ ಗೆಲ್ಲುತ್ತೇನೆ ಅಂತ ರಾಮದಾಸ್ ಹೇಳಿದ್ರು. ಆದರೆ ನನಗೆ ಮಹಾನ್ ನಾಯಕನ ಜವಾಬ್ದಾರಿ ಇದೆ, ನಿಮ್ಮ ಶಾಸಕ ಇದುವರೆಗೂ ಯಾವುದೇ ತಪ್ಪು ಮಾಡಿಲ್ಲ. ನನ್ನ ಮೇಲೂ ಹಲವು ಆಪಾದನೆ ಬಂದವು. ಅದಕ್ಕೆ ಕಾಲವೇ ಉತ್ತರ ನೀಡುತ್ತದೆ. ಯಾವತ್ತು ಹುಟ್ಟುತ್ತಿವೋ ಯಾವತ್ತೋ ಸಾಯುತ್ತಿವೋ ಗೊತ್ತಿಲ್ಲ, ನನಗೆ ಮುಖ್ಯ ತಾಯಿ ಭಾರತಾಂಬೆ ಅಂತ ಹೇಳಿದ್ರು.
ಇದನ್ನೂ ಓದಿ: Lingayat: ಶೆಟ್ಟರ್, ಸವದಿಗೆ ಕಾಂಗ್ರೆಸ್‌ನಲ್ಲಿ ಜೈ! ಲಿಂಗಾಯತ ಮತಬುಟ್ಟಿಗೆ ಹಾಕಿದ್ರಾ 'ಕೈ'?
ನಾನು ಪಕ್ಷದಲ್ಲೇ ಇರುತ್ತೇನೆ
ಇಡೀ ದೇಶ ನಮ್ಮ ರಾಜ್ಯದ ಕಡೆ ನೋಡುತ್ತಿದೆ. ನಿಮ್ಮ ಶಾಸಕ ನಿಮ್ಮ ಜೊತೆಯೇ ಇರುತ್ತಾನೆ. ನಮ್ಮ ಉದ್ದೇಶ ರಾಜ್ಯ ಕೃಷ್ಣರಾಜ ಕ್ಷೇತ್ರವನ್ನು ಉಳಿಸಿಕೊಳ್ಳುವುದಾಗಿದೆ. ಹೀಗಾಗಿ ನಾನು ಪಕ್ಷದಲ್ಲೇ ಉಳಿಯುತ್ತೇನೆ ಅಂತ ರಾಮದಾಸ್ ಹೇಳಿದ್ದಾರೆ.
ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ
ಆರ್‌ಎಸ್‌ಎಸ್ ನನಗೆ ನೀನು ಸತ್ತು ಹೋಗ್ತಿದ್ರು ಪಕ್ಷ ಮುಖ್ಯ ಎನ್ನುವುದನ್ನು ಕಲಿಸಿದೆ. Vviz ದೇಶ ಮುಖ್ಯ. ನಾನು ಪಕ್ಷೇತರವಾಗಿ ಗೆದ್ದರೂ ಬಿಜೆಪಿಗೆ ಬರುತ್ತಿದ್ದೆ. ನಾನು ಪಕ್ಷೇತರವಾಗಿ ನಿಂತು ಗೆಲ್ಲುತ್ತೇನೆ. ಆದರೆ ಪ್ರಧಾನಿ ನರೇಂದ್ರ ಮೋದಿ ಪ್ರೀತಿ ಮುಖ್ಯ, ಅದನ್ನ ಕಳೆದುಕೊಳ್ಳಲ್ಲ. ನನ್ನ ಋಣ ಇಷ್ಟೇ ಇತ್ತೇನೋ ಎನ್ನುವಾಗ ದುಖಃ ಆಗುತ್ತಿದೆ. ನಾನು ಬಿಜೆಪಿ ಪಕ್ಷದ ಸಾಮಾನ್ಯ ಸದಸ್ಯನಾಗಿ ಮುಂದುವರಿಯಲು ನಿರ್ಧರಿಸಿದ್ದೇನೆ ಅಂತ ಹೇಳಿದ್ರು.
ಸಾಯೋವರೆಗೂ ಬಿಜೆಪಿಯಲ್ಲೇ ಇರುತ್ತೇನೆ
1996ರಿಂದ ಬಿಜೆಪಿಯಲ್ಲಿ ಇದ್ದೇನೆ. ನಾಲ್ಕು ಬಾರಿ ಆಯ್ಕೆಯಾಗಿದ್ದೇನೆ. ಮಂತ್ರಿ ಅಗದೇ ಇದ್ದರೂ ಪಕ್ಷ ಸಂಘಟನೆಯಲ್ಲಿ ನಂ.1 ಸ್ಥಾನದಲ್ಲಿ ಕ್ಷೇತ್ರ ಇದೆ. ನನಗೂ ಸಹಜವಾದ ನಿರೀಕ್ಷೆ ಇತ್ತು. ಎಲ್ಲ ಬೂತ್ ಬಿಜೆಪಿ ಬೂತ್ ಅಂತ ಪ್ರಯತ್ನ ಮಾಡಿದ್ದೆ. ನಾನು 50 ಸಾವಿರ ಮತ ಅಂತರದಲ್ಲಿ ಗೆಲ್ಲುವುದಕ್ಕಾಗಿ ತಯಾರಿ ನಡೆದಿತ್ತು. 265 ಬೂತ್ ಅಧ್ಯಕ್ಷರೂ ಪಕ್ಷೇತರ ಸ್ಪರ್ಧೆಗೆ ಒತ್ತಾಯ ಮಾಡಿದ್ದರು. ಪಕ್ಷೇತರವಾಗಿ ಸ್ಪರ್ಧೆ ಮಾಡಿದರೆ 12 ಸಾವಿರ ಮತ ಅಂತರದಲ್ಲಿ ಗೆಲ್ಲಬಹುದು. ಆದರೆ ನಾನು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ. ಸಾಯುವವರೆಗೆ ಸದಸ್ಯತ್ವ ಉಳಿಸಿಕೊಳ್ಳುತ್ತೇನೆ ಅಂತ ರಾಮದಾಸ್ ಹೇಳಿದ್ದಾರೆ.
ಇದನ್ನೂ ಓದಿ: Jagadish Shettar: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ತಪ್ಪಲು ಕಾರಣ ಯಾರು?
ಬಿಜೆಪಿ ಅಭ್ಯರ್ಥಿ ಪರ ಪ್ರಚಾರ
ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಹಾಜರಿರುತ್ತೇನೆ. ಏಪ್ರಿಲ್ 22 ರಿಂದ ಚುನಾವಣಾ ಪ್ರಚಾರ ಮಾಡುತ್ತೇನೆ. ಕೃಷ್ಣರಾಜ ಕ್ಷೇತ್ರದಲ್ಲಿ ಜನರ ಒಲವು ಯಾರ ಕಡೆಗಿದೆ, ಅವರು ಗೆಲ್ಲುತ್ತಾರೆ ಅಂತ ಇದೇ ಸಂದರ್ಭದಲ್ಲಿ ರಾಮದಾಸ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ