• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mahesh Tenginkai: ಶೆಟ್ಟರ್ ವಿರುದ್ಧ ತೊಡೆ ತಟ್ಟಿರುವ ಮಹೇಶ್ ಟೆಂಗಿನಕಾಯಿ ಯಾರು? ಮೊದಲ ಯುದ್ಧದಲ್ಲಿ ಗುರುವಿನ ವಿರುದ್ಧ ಗೆಲ್ಲುತ್ತಾರಾ?

Mahesh Tenginkai: ಶೆಟ್ಟರ್ ವಿರುದ್ಧ ತೊಡೆ ತಟ್ಟಿರುವ ಮಹೇಶ್ ಟೆಂಗಿನಕಾಯಿ ಯಾರು? ಮೊದಲ ಯುದ್ಧದಲ್ಲಿ ಗುರುವಿನ ವಿರುದ್ಧ ಗೆಲ್ಲುತ್ತಾರಾ?

ಗುರು v/s ಶಿಷ್ಯ!

ಗುರು v/s ಶಿಷ್ಯ!

ಜಗದೀಶ್ ಶೆಟ್ಟರ್‌ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಹೇಶ್ ಟೆಂಗಿನಕಾಯಿ ಬಗ್ಗೆ ಒಂದಿಷ್ಟು ಸ್ವಾರಸ್ಯಕರ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

  • Trending Desk
  • 4-MIN READ
  • Last Updated :
  • Hubli-Dharwad (Hubli), India
  • Share this:

    ಭಾರಿ ವಿಶೇಷತೆಗಳೊಂದಿಗೆ ಕೂಡಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ (Hubli-Dharwad Central Constituency) ಗುರು-ಶಿಷ್ಯರ ಸವಾಲಿಗೆ ಸಜ್ಜಾಗಿದೆ. ಬಿಜೆಪಿ (BJP) ಕಟ್ಟಾ ನಿಷ್ಠಾವಂತ ನಾಯಕ ಜಗದೀಶ್‌ ಶೆಟ್ಟರ್‌ (Jagadish Shettar) ಕಾಂಗ್ರೆಸ್‌ಗೆ ಹಾರಿದ್ದು, ಕಾಂಗ್ರೆಸ್ (Congress) ಟಿಕೆಟ್ ಪಡೆದು, ಕದನ ಕಣಕ್ಕೆ ಧುಮುಕಿದ್ದಾರೆ. ಅತ್ತ ಅವರ ಎದುರಾಳಿ ಬಿಜೆಪಿ ಅಭ್ಯರ್ಥಿಯಾಗಿ ಈ ಬಾರಿ ಕ್ಷೇತ್ರದಿಂದ ಮಹೇಶ್ ಟೆಂಗಿನಕಾಯಿ (Mahesh Tenginkai) ಕಣಕ್ಕಿಳಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆ ಬಳಿಕ, ಬಿಜೆಪಿ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರಕ್ಕೆ ಅಚ್ಚರಿ ಎಂಬಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಹೇಶ್ ಟೆಂಗಿನಕಾಯಿ ಅವರಿಗೆ ಟಿಕೆಟ್‌ ನೀಡಿತ್ತು.


    ಜಗದೀಶ್‌ ಶೆಟ್ಟರ್‌ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಹೇಶ್ ಟೆಂಗಿನಕಾಯಿ ಬಗ್ಗೆ ಒಂದಿಷ್ಟು ಸ್ವಾರಸ್ಯಕರ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.


    ಮಹೇಶ್ ಟೆಂಗಿನಕಾಯಿ ಯಾರು?


    ಮಹೇಶ್ ಟೆಂಗಿನಕಾಯಿ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಇವರು ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಬಿ.ಎಲ್‌. ಸಂತೋಷ್‌ ಅವರ ಮಾನಸಪುತ್ರ ಅಂತಾನೂ ಜಗದೀಶ್‌ ಶೆಟ್ಟರ್‌ ಹೇಳಿದ್ದರು. ಟೆಂಗಿನಕಾಯಿ ಯುವ ಮೋರ್ಚಾದೊಂದಿಗೆ ಸಂಬಂಧ ಹೊಂದಿದ್ದು, ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟನಾ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾ ಬಂದಿದ್ದಾರೆ.




    33 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ


    ಆಟೋಮೊಬೈಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಮಾಡಿರುವ 52 ವರ್ಷದ ಮಹೇಶ್ ಟೆಂಗಿನಕಾಯಿ ಅವರು ಕಳೆದ 33 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ. 1989ರಲ್ಲಿ ಬೂತ್ ಮಟ್ಟದ ಕಾರ್ಯಕರ್ತರಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ಅವರು ಹಂತಹಂತವಾಗಿ ಬೆಳೆದು 2004ರಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಪ್ರಸ್ತುತ 2019ರಿಂದ ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


    ಇದನ್ನೂ ಓದಿ: Jagadish Shettar: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ತಪ್ಪಲು ಕಾರಣ ಯಾರು?


    ಮೊದಲ ವಿಧಾನಸಭಾ ಚುನಾವಣೆ


    ಮಹೇಶ್ ಟೆಂಗಿನಕಾಯಿ ಕೆಲಸಗಳನ್ನು ಗುರುತಿಸಿ ಪ್ರಸ್ತುತ ಕರ್ನಾಟಕ ಬಿಜೆಪಿ ಇವರಿಗೆ ಟಿಕೆಟ್‌ನೀಡಿದ್ದು, ಮಹೇಶ್ ಟೆಂಗಿನಕಾಯಿ ಅವರ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಮೊದಲ ಯುದ್ಧದಲ್ಲಿ ಗುರು ಜಗದೀಶ್ ಶೆಟ್ಟರ್ ಎದುರು ಮಹೇಶ್ ಟೆಂಗಿನಕಾಯಿ ಜಯಿಸಬೇಕಿದೆ.


    ಲಿಂಗಾಯತ ಸಮುದಾಯದ ಪ್ರಬಲ ನಾಯಕ


    ಮಹೇಶ್ ಟೆಂಗಿನಕಾಯಿ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದು, ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ಅವರಿಗೆ ಸಾಕಷ್ಟು ಹಿಡಿತವಿದೆ. ಟೆಂಗಿನಕಾಯಿ ಸುಮಾರು ದಶಕಗಳಿಂದ ಬಿಜೆಪಿ ಜೊತೆ ಒಡನಾಟ ಹೊಂದಿದ್ದಾರೆ. ಪಕ್ಷದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದಲ್ಲದೆ, ಅವರು ಉದ್ಯಮಿ ಮತ್ತು ಸಮಾಜ ಸೇವಕರೂ ಹೌದು.


    ಲಿಂಗಾಯತ ನಾಯಕರ ನಡುವೆ ಪೈಪೋಟಿ


    ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌, ಟೆಂಗಿನಕಾಯಿ ಮತ್ತು ಶೆಟ್ಟರ್ ನಡುವೆ ಕುತೂಹಲಕಾರಿ ಸ್ಪರ್ಧೆಗೆ ಕಾರಣವಾಗಬಹುದು. ಏಕೆಂದರೆ ಇಬ್ಬರೂ ಲಿಂಗಾಯತ ಸಮುದಾಯದ ಜನಪ್ರಿಯ ನಾಯಕರಾಗಿದ್ದು, ಇಬ್ಬರೂ ಜನಬೆಂಬಲ ಹೊಂದಿದ್ದಾರೆ. ಅಲ್ಲದೇ ಇಬ್ಬರೂ ಸುಮಾರು ವರ್ಷಗಳ ಕಾಲ ರಾಜಕೀಯದಲ್ಲಿ ಒಟ್ಟಿಗೆ ಕೆಲಸ ಮಾಡಿದವರು ಕೂಡ ಹೌದು. ಈ ಹಿಂದೆ ಜಗದೀಶ್ ಶೆಟ್ಟರ್ ಅವರ ಆರು ಚುನಾವಣೆಗಳಲ್ಲಿಯೂ ನಾನೂ ಕೆಲಸ ಮಾಡಿದ್ದೇನೆ ಎಂದು ಮಹೇಶ್‌ ಹೇಳಿದ್ದರು.


    ಹಿಂದಿನ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು


    2018 ರಲ್ಲಿ ಭಾರತೀಯ ಜನತಾ ಪಾರ್ಟಿಯ ಜಗದೀಶ್ ಶೆಟ್ಟರ್ ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಡಾ. ಮಹೇಶ್ ಸಿ ನಾಲವಾಡ್ 21306 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಈಗ ಅಭ್ಯರ್ಥಿಗಳು ಅವರೇ ಇದ್ದು ಪಕ್ಷ ಮಾತ್ರ ಬದಲಾಗಿದೆ. ಹೌದು ಈ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜಗದೀಶ್ ಶೆಟ್ಟರ್, ಬಿಜೆಪಿಯಿಂದ ಮಹೇಶ್‌ ಟೆಂಗಿನಕಾಯಿ, ಎಎಪಿಯಿಂದ ವಿಕಾಸ ಸೊಪ್ಪಿನ ಸ್ಪರ್ಧಿಸುತ್ತಿದ್ದಾರೆ.


    ಇದನ್ನೂ ಓದಿ: Lingayat: ಶೆಟ್ಟರ್, ಸವದಿಗೆ ಕಾಂಗ್ರೆಸ್‌ನಲ್ಲಿ ಜೈ! ಲಿಂಗಾಯತ ಮತಬುಟ್ಟಿಗೆ ಹಾಕಿದ್ರಾ 'ಕೈ'?

    top videos


      ಒಟ್ಟಾರೆ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರ, ರಾಜ್ಯ ರಾಜಕೀಯ ಚಿತ್ರಣವನ್ನು ಬದಲು ಮಾಡುವಂತೆ ಕಾಣುತ್ತಿದೆ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿದ್ದ ಮಹೇಶ್‌ ಟೆಂಗಿನಕಾಯಿ ಮೊದಲ ಚುನಾವಣೆಯಲ್ಲಿ ಗೆದ್ದು ಭರವಸೆ ಮೂಡಿಸ್ತಾರ ನೋಡಬೇಕಿದೆ.

      First published: