ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ (Karnataka assembly elections) ಮುಗಿದಿದೆ. ರಾಜ್ಯದ 2615 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಯಲ್ಲಿ (ballot box) ಭದ್ರವಾಗಿದೆ. ಚುನಾವಣೋತ್ತರ ಸಮೀಕ್ಷಾ ಫಲಿತಾಂಶವೂ ಬಂದಿದೆ. ಕೆಲವು ಕಡೆ ಗಲಾಟೆ, ಕಾರ್ಯಕರ್ತರ ನಡುವೆ ಘರ್ಷಣೆ, ಕೈಕೊಟ್ಟ ಮತಯಂತ್ರ, ಕೆಲವೆಡೆ ಗೊಂದಲ ಹೊರತುಪಡಿಸಿ, ಬಹುತೇಕ ಶಾಂತಿಯುತವಾಗಿ ಚುನಾವಣೆ ಮುಕ್ತಾಯವಾಗಿದೆ. ಕೆಲವು ನವ ಜೋಡಿಗಳು ಮದುವೆ ಮುಗಿಸಿ ನೇರವಾಗಿ ಮತಗಟ್ಟೆಗೆ ಬಂದು ಮತಚಲಾಯಿಸಿದ್ರೆ, ಕೆಲವೆಡೆ ರೋಗಿಗಳು ಆ್ಯಂಬುಲೆನ್ಸ್‌ನಲ್ಲಿ ಬಂದು ವೋಟ್ ಮಾಡಿದ್ದಾರೆ. ಹಾಗಾದರೆ ಈ ಬಾರಿ ರಾಜ್ಯದಲ್ಲಿ ಎಷ್ಟು ಮಂದಿ ಮತ ಚಲಾಯಿಸಿದ್ದಾರೆ? ಅತೀ ಹೆಚ್ಚು ಮತದಾನ ಎಲ್ಲಿ ನಡೆದಿದೆ? ಯಾವ ಜಿಲ್ಲೆಯಲ್ಲಿ ಕಡಿಮೆ ಮತದಾನವಾಗಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ…
ಶೇಕಡಾ 71ರಷ್ಟು ಮತದಾನ!
ಎಂದಿನಂತೆ ಈ ಬಾರಿ ಕರ್ನಾಟಕದಾದ್ಯಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ರಾಜ್ಯಾದ್ಯಂತ ವೋಟಿಂಗ್‌ಗಾಗಿ ಒಟ್ಟು 58,282 ಮತಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಚಿಕ್ಕಪುಟ್ಟ ಗಲಾಟೆ, ಕೆಲವೊಂದು ಘರ್ಷಣೆ ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಎಲೆಕ್ಷನ್ ಮುಗಿದಿದೆ. ಈ ಬಾರಿ ರಾಜ್ಯಾದ್ಯಂತ ಶೇಕಡಾ 71ರಷ್ಟು ಮತದಾನವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನ 28 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇಕಡಾ 54.53 ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್ ಶೇಕಡಾ 55.63 ಮತದಾನವಾಗಿದೆ. ಬೆಂಗಳೂರು ಉತ್ತರ ಶೇಕಡಾ 53.03 ಮತದಾನವಾಗಿದೆ. ಬೆಂಗಳೂರು ದಕ್ಷಿಣ ಶೇಕಡಾ 52.28 ಮತದಾನವಾಗಿದೆ. ಬೆಂಗಳೂರು ನಗರದಲ್ಲಿ ಶೇಕಡಾ 57.17 ಮತದಾನವಾಗಿದೆ.
ಕೋಲಾರ ಜಿಲ್ಲೆಯಲ್ಲಿ ಶೇಕಡಾ 81.22 ಮತದಾನ
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮುಕ್ತಾಯ
ಶಿರಹಟ್ಟಿ -ಶೇಕಡಾ 71
ಗದಗ -ಶೇಕಡಾ 75.68
ರೋಣ -ಶೇಕಡಾ75.49
ನರಗುಂದ -ಶೇಕಡಾ79.46
ಉಡುಪಿ ಜಿಲ್ಲೆಯಲ್ಲಿ ಒಟ್ಟು ಶೇಕಡಾ 78.39 ಮತದಾನ
ಉಡುಪಿ -75.84%
ಕುಂದಾಪುರ -78.94%
ಕಾಪು -78.79%
ಕಾರ್ಕಳ -81.25%
ಬೈಂದೂರು -77.64%
ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 75.47 ಮತದಾನ
ಕಾರವಾರ & ಅಂಕೋಲಾ ಕ್ಷೇತ್ರದಲ್ಲಿ ಶೇಕಡಾ 70.81 ಮತದಾನ
ಕುಮಟಾ ಕ್ಷೇತ್ರದಲ್ಲಿ ಶೇಕಡಾ 70.28 ಮತದಾನ
ಭಟ್ಕಳ ಕ್ಷೇತ್ರದಲ್ಲಿ ಶೇಕಡಾ 77.47 ಮತದಾನ
ಶಿರಸಿ ಕ್ಷೇತ್ರದಲ್ಲಿ ಶೇಕಡಾ 78.62 ಮತದಾನ
ಯಲ್ಲಾಪುರ ಕ್ಷೇತ್ರದಲ್ಲಿ ಶೇಕಡಾ 79.65 ಮತದಾನ
ಹಳಿಯಾಳ ಕ್ಷೇತ್ರದಲ್ಲಿ ಶೇಕಡಾ 74.90 ಮತದಾನ
ವಿಜಯಪುರ ಜಿಲ್ಲೆಯಲ್ಲಿ ಮತದಾನ ಮುಕ್ತಾಯವಾಗಿದ್ದು, ಜಿಲ್ಲೆಯಲ್ಲಿ ಸಂಜೆ 6 ಗಂಟೆಯವರೆಗೆ ಶೇಕಡಾ 67.77 ರಷ್ಟು ಮತದಾನವಾಗಿದೆ. ವಿಜಯಪುರ ಜಿಲ್ಲೆಯ 08 ವಿಧಾನಸಭಾ ಮತಕ್ಷೇತ್ರಗಳ ಮತದಾನ ವಿವರ ಇಂತಿದೆ.
ಮಂಡ್ಯ ಜಿಲ್ಲೆಯಲ್ಲಿ ಒಟ್ಟಾರೆ ಶೇಕಡಾ 82.30% ಮತದಾನ
ಮಂಡ್ಯ ಜಿಲ್ಲೆಯಲ್ಲಿ ಮತದಾನ ಅಂತ್ಯವಾಗಿದ್ದು, ಸಂಜೆ 6 ಗಂಟೆವರೆಗೆ ಒಟ್ಟಾರೆ ಶೇಕಡಾ 82.30 % ರಷ್ಟು ಮತದಾನವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ