ಜೆಡಿಎಸ್ ಭದ್ರಕೋಟೆ ಮಂಡ್ಯ (Mandya) ಕ್ಷೇತ್ರದಲ್ಲಿ ಬೇರೆ ಪಕ್ಷಗಳು ಕಮಾಲ್ ಮಾಡಬೇಕು ಅಂದರೆ ಅಲ್ಲಿ ಪ್ರಬಲ ಅಭ್ಯರ್ಥಿಗಳೇ ಸ್ಪರ್ಧಿಸಬೇಕು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಇದೇ ತಂತ್ರವನ್ನು ಬಳಸಿದ ʻಕೈʼ ಪಕ್ಷ ಒಂದು ಕಾಲದಲ್ಲಿ ಜೆಡಿಎಸ್‌ನ (JDS) ನಿಷ್ಠಾವಂತ ನಾಯಕನಾಗಿ ಪಕ್ಷ ಸಂಘಟಿಸಿ ಕಾಂಗ್ರೆಸ್ ಸೇರ್ಪಡೆಯಾದ ಎನ್. ಚೆಲುವರಾಯಸ್ವಾಮಿ (N Cheluvarayaswamy) ಅವರನ್ನು ಕಣಕ್ಕಿಳಿಸಿದೆ.
ಮಂಡ್ಯದಲ್ಲಿ ಕನಿಷ್ಠ ಐದಾರು ಸೀಟ್‌ಗಳನ್ನು ಗೆಲ್ಲಲೇ ಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್, ನಾಗಮಂಗಲ ಕ್ಷೇತ್ರದಲ್ಲಿ ಎನ್. ಚೆಲುವರಾಯಸ್ವಾಮಿ ಅವರಿಗೆ ಟಿಕೆಟ್‌ನೀಡಿದೆ.
ಹಾಗಾದರೆ ನಾಗಮಂಗಲ ಕ್ಷೇತ್ರದ ಅಭ್ಯರ್ಥಿ ಎನ್. ಚೆಲುವರಾಯಸ್ವಾಮಿ ಅವರು ನಡೆದು ಬಂದ ದಾರಿ, ರಾಜಕೀಯ ಪ್ರಯಾಣದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Dr K Annadani: ಗೆದ್ದೇ ಗೆಲ್ಲುವ ಛಲದಲ್ಲಿರುವ ಮಳವಳ್ಳಿ ಶಾಸಕ ಡಾ ಕೆ ಅನ್ನದಾನಿಯವರ ಬಗ್ಗೆ ನಿಮಗೆಷ್ಟು ಗೊತ್ತು?
ಚೆಲುವರಾಯಸ್ವಾಮಿ ಹಿನ್ನೆಲೆ:
ಎನ್. ಚೆಲುವರಾಯ ಸ್ವಾಮಿಯವರು 1 ಜೂನ್ 1960ರಂದು ಮಂಡ್ಯ ಜಿಲ್ಲೆಯ ಇಜ್ಜಲ-ಘಟ್ಟದಲ್ಲಿ ನಾಗಮಂಗಲ ತಾಲೂಕಿನ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದರು. ವಿದ್ಯಾವಂತ ರಾಜಕಾರಣಿಗಳ ಪಟ್ಟಿಗೆ ಸೇರುವ ಇವರು 1978-1983 ಸಾಲಿನಲ್ಲಿ ಮಂಡ್ಯದ ಕೆಆರ್ ಪೇಟೆಯ ಪಾಲಿಟೆಕ್ನಿಕ್ ಕಾಲೇಜ್‌ನಿಂದ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಪೂರೈಸಿದರು.
ತಂದೆ ನರಸಿಂಹೇಗೌಡ ಮತ್ತು ತಾಯಿ ಸಾಕಮ್ಮ. ಶ್ರೀಮತಿ. ಬಿ.ಕೆ.ಧನಲಕ್ಷ್ಮಿ ಅವರನ್ನು ವಿವಾಹವಾದ ಚೆಲುವರಾಯಸ್ವಾಮಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ರಾಜಕೀಯ ಪಯಣ
ರಾಜಕೀಯದಲ್ಲಿ ಹಲವು ವರ್ಷಗಳಿಂದ ಪಳಗಿರುವ ಚೆಲುವರಾಯ ಸ್ವಾಮಿ ರಾಜಕಾರಣದ ಆಳ-ಅಗಲ ತಿಳಿದವರು. 1994ರಿಂದ ಚುನಾವಣೆಗೆ ಸ್ಫರ್ಧಿಸುತ್ತಾ ಬಂದ ಇವರು 1994 ರಿಂದ 1999 ರವರೆಗೆ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು.
ನಂತರ 1996 ಮತ್ತು 1997ರ ನಡುವೆ ಉಪಾಧ್ಯಕ್ಷರಾಗಿದ್ದರು. ಬಳಿಕ 1999 ಮತ್ತು 2008ರ ನಡುವೆ ಎರಡು ಅವಧಿಗೆ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿ ಕ್ಯಾಬಿನೆಟ್‌ಮಿನಿಸ್ಟರ್‌ಕೂಡ ಆಗಿದ್ದರು. ಹೀಗೆ ಸಾಗಿದ ರಾಜಕೀಯ ಪಯಣ 2009 ರಲ್ಲಿ ಮಂಡ್ಯ (ಲೋಕಸಭಾ ಕ್ಷೇತ್ರ) ದಿಂದ 15 ನೇ ಲೋಕಸಭೆಗೆ ಸ್ಪರ್ಧಿಸುವಂತೆ ಮಾಡಿತು.
ಹೀಗೆ ರಾಜಕಾರಣದಲ್ಲಿ ಸಕ್ರೀಯ ನಾಯಕನಾಗಿ ಮತ್ತು ಜೆಡಿಎಸ್‌ನ ಕಟ್ಟಾ ಲೀಡರ್ ಆಗಿದ್ದರು ಚೆಲುವರಾಯ ಸ್ವಾಮಿ. 2013 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಗಮಂಗಲದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದಾಗ ಲೋಕಸಭೆಗೆ ರಾಜೀನಾಮೆ ನೀಡಿದರು.
ಜೆಡಿಎಸ್ ಪಕ್ಷವನ್ನೇ ಜೀವ ಎಂದುಕೊಂಡವರು 2018ರಲ್ಲಿ ʻತೆನೆʼ ಇಳಿಸಿ ʻಕೈʼ ಹಿಡಿದರು. ಆದರೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದ ಇವರು ಪ್ರಸ್ತುತ ಈ ಬಾರಿಯ ಎಲೆಕ್ಷನ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇದನ್ನೂ ಓದಿ: Nisarga Narayana Swamy: ಶತಕೋಟಿ ಒಡೆಯ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಕುರಿತ ಫುಲ್ ಡೀಟೇಲ್ಸ್ ಇಲ್ಲಿದೆ
2018ರ ಚುನಾವಣೆಯಲ್ಲಿ ಸೋತಿದ್ದ ಚೆಲುವರಾಯ ಸ್ವಾಮಿ
ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ವಿರುದ್ಧ 47,667 ಮತಗಳ ಅಂತರದಿಂದ ಚೆಲುವರಾಯ ಸ್ವಾಮಿ ಸೋಲು ಕಂಡಿದ್ದರು. ಬಿಜೆಪಿಯಿಂದ ಇಲ್ಲಿ ಡಾ. ಪಾರ್ಥಸಾರಥಿ ಎಂಬ ಅಭ್ಯರ್ಥಿ ಸ್ಪರ್ಧಿಸಿದ್ದರು. ಕಳೆದ ಬಾರಿ ಮಂಡ್ಯದ ಏಳು ಕ್ಷೇತ್ರದಲ್ಲೂ ಕಾಂಗ್ರೆಸ್ ಹೀನಾಯವಾಗಿ ಸೋಲನ್ನು ಅನುಭವಿಸಿತ್ತು.
ಈ ಸೋಲನ್ನು ಮತ್ತೆ ಗೆಲುವನ್ನಾಗಿಸಲು ಮಂಡ್ಯದಲ್ಲಿ ರಾಹುಲ್, ಭಾರತ ಜೋಡೋ ಯಾತ್ರೆಯನ್ನು ಭರ್ಜರಿಯಾಗಿ ನಡೆಸಿದರು. ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್ ಪಣ ತೊಟ್ಟಿದ್ದು, ನಾಗಮಂಗಲದ ಅಭ್ಯರ್ಥಿ ಗೆಲುವಿಗಾಗಿ ಪ್ರಯತ್ನಿಸುತ್ತಿದ್ದಾರೆ.
ಆಸ್ತಿ ಮೌಲ್ಯ
ಈ ಬಾರಿ ತಮ್ಮ ಆಸ್ತಿ ಮೌಲ್ಯವನ್ನು ಚೆಲುವರಾಯ ಸ್ವಾಮಿ ಅವರು 28 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ನಗದು, ವೈಯಕ್ತಿಕ ಸಾಲ, ಎಲ್‌ಐಸಿ, ಆಭರಣ ಎಲ್ಲವನ್ನೂ ಲೆಕ್ಕಹಾಕಿ ಈ ಮೌಲ್ಯವನ್ನು ಬಹಿರಂಗಪಡಿಸಿದ್ದಾರೆ.
ದೇವೇಗೌಡ್ರು ಮತ್ತು ಕುಮಾರಣ್ಣನ ಕಟ್ಟಾ ಶಿಷ್ಯರಾಗಿದ್ದ ಚೆಲುವರಾಯ ಸ್ವಾಮಿ ಈ ವಿಧಾನಸಭಾ ಚುನಾವಣೆಯಲ್ಲಿ ಗೆಲ್ತಾರಾ? ಜೆಡಿಎಸ್ ವಿರುದ್ಧ ಗೆಲುವಿನ ಕೇಕೆ ಹಾಕ್ತಾರ? ನಾಗಮಂಗಲದಲ್ಲಿ ʻಕೈʼ ಮೈಲುಗೈ ಸಾಧಿಸುತ್ತಾ ಎಂಬುದನ್ನು ಕಾದು ನೋಡಬೇಕಷ್ಟೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ