Karnataka Assembly Election 2023: ಇಂದು ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಯ ಎಲ್ಲಾ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಕೊಪ್ಪಳಬಿಜೆಪಿ ಸುಂಟರಗಾಳಿಗೆ ಕಾಂಗ್ರೆಸ್ ಧೂಳಿಪಟವಾಗುತ್ತೆ, ಕಾಂಗ್ರೆಸ್ ಇಂಜಿನ್ ಫೇಲ್ ಆಗಿದೆ,ಟೈರ್ ಪಂಚರ್ ಆಗಿದೆ. ಕಾಂಗ್ರೆಸ್ ಪಕ್ಷವನ್ನ ಗುಜರಿಗೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿ. ಶ್ರೀರಾಮುಲು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಆರಂಭವಾಗಿದೆ. ಗೊಲ್ಲರಹಟ್ಟಿಯ ನೈಸ್ ರಸ್ತೆಯ ಜಂಕ್ಷನ್ ಗೆ ಆಗಮಿಸಿ ಮೋದಿ ಅವರು ಕಾರಿನಿಂದ ಇಳಿದು ತೆರೆದ ವಾಹನ ಏರಿ ರೋಡ್ ಶೋ ಆರಂಭ ಮಾಡಿದ್ದಾರೆ. ರೋಡ್ ಶೋ ನಲ್ಲಿ ಪರಿಷತ್ ಸದಸ್ಯ ಚಲವಾದಿ ನಾರಯಣಸ್ವಾಮಿ ಹಾಗೂ ಸಂಸದ ಸದಾನಂದ ಗೌಡ ಅವರಿಗೆ ಮೋದಿ ಜೊತೆ ಅವಕಾಶ ನೀಡಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ವಿಪಕ್ಷ ಸೋಲಿನ ಭಯದಲ್ಲಿ ಮೋದಿಯವರನ್ನ ಟೀಕಿಸುತ್ತಿದೆ. ರಾವಣ, ‘ಇಲಿ’ ಎಂದು ಕರೆದರು, ಈಗ ವಿಷಸರ್ಪ ಎಂದರು. ಅಧಿಕಾರ ಇಲ್ಲದೆ ಕಾಂಗ್ರೆಸ್ ವಿಲವಿಲ ಒದ್ದಾಡುತ್ತಿದೆ ಅಂತ ಲೇವಡಿ ಮಾಡಿದ್ದರು.
ನಾಳೆ ಚನ್ನಪಟ್ಟಣದಲ್ಲಿ ಪ್ರಧಾನಿ ಮೋದಿ ಸಮಾವೇಶ ಹಿನ್ನೆಲೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಿಯಾಕ್ಟ್ ಮಾಡಿದ್ದಾರೆ. ಮೋದಿ ಬರಲಿ ಬಿಡಿ, ಟಾಟಾ ಮಾಡಿ ಹೋಗ್ತಾರೆ. ನಮ್ಮ ಕ್ಷೇತ್ರವನ್ನು ಒಮ್ಮೆ ಬಂದು ನೋಡಿಕೊಂಡು ಹೋಗಲಿ, ಅವರು ಮುಖ ನೋಡಿ ಯಾರು ವೋಟ್ ಹಾಕಲ್ಲ ಅಂತ ಹೇಳಿದ್ದರು.
ಕೇಂದ್ರ ಗೃಹಸಚಿವ ಅಮಿತ್ ಶಾ ಇಂದು ಮತಬೇಟೆ ಮುಂದುವರಿಸಿದ್ದಾರೆ. ಉಡುಪಿಯ ಕಟ್ಟಪಾಡಿಯಲ್ಲಿ ಮಾತನಾಡಿದ ಅಮಿತ್ ಶಾ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಕಾಂಗ್ರೆಸ್‌ನವರು ಪ್ರಶ್ನಿಸುತ್ತಿದ್ದಾರೆ. ನೀವೇ ಹೇಳಿ ರಾಮಮಂದಿರ ನಿರ್ಮಾಣವಾಗಬೇಕೋ? ಬೇಡ್ವೋ? ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಐದು ಕೋಟಿ ರೂಪಾಯಿ ನಗದು ಹಣವನ್ನು ಜಿಲ್ಲೆಯ ಲೋಕಾಪುರ ಪೊಲೀಸರು ಜಪ್ತಿ ಮಾಡಿದ್ದಾರೆ. ಲೋಕಾಪುರ ಪಟ್ಟಣದ ಬಳಿ ನಿನ್ನೆ ರಾತ್ರಿ ಘಟನೆ ನಡೆದಿದೆ.
ಕಾಂಗ್ರೆಸ್ ಜಾತಿ ಆಧಾರದಲ್ಲಿ ಸಮಾಜ ಒಡೆದಿದೆ. 91 ಬಾರಿ ನನ್ನ ವಿರುದ್ಧ ಬೈಗುಳ ಪ್ರಯೋಗ ಮಾಡಿದೆ. ನನ್ನನ್ನು ಬೈದಷ್ಟೂ ಕಾಂಗ್ರೆಸ್ ದುರ್ಗತಿಗೆ ಹೋಗಿದೆ. ಇನ್ನು ಕಾಂಗ್ರೆಸ್ ನಾಯಕರು, ಬಾಬಾ ಸಾಹೇಬ್‌ರನ್ನ ರಾಷ್ಟ್ರದ್ರೋಹಿ, ರಾಕ್ಷಸ ಅಂದಿದ್ದರು. ಅಂದು ಮಹಾಪುರುಷರನ್ನ ಬೈದವರು, ಇಂದು ಮೋದಿಯನ್ನ ಬೈತಿದ್ದಾರೆ. ಅವರ ಬೈಗುಳಗಳೇ ನನಗೆ ಸನ್ಮಾನ ಅಂತ ಭಾವಿಸುತ್ತೇನೆ ಎಂದು ಮೋದಿ ಟಾಂಗ್ ಕೊಟ್ಟಿದ್ದಾರೆ.
ಬೆಳಗಾವಿಯ ಕುಡಚಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯದ ಬೀಡು ಕುಡಚಿ, ಕರ್ನಾಟಕಕ್ಕೆ ಏನನ್ನಾದರೂ ಮಾಡಬೇಕು ಅನ್ನಿಸುತ್ತಿದೆ. ಮಾತೃಶಕ್ತಿ ಮಾತಾಡೋವಾಗ ಬೆಳಗಾವಿ ನೆನಪಾಗುತ್ತೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಬಲಿದಾನ ನೆನಪಾಗುತ್ತದೆ. ಕರ್ನಾಟಕ ನಂಬರ್ ಮಾಡಲು, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ನೀಡಿ ಎಂದು ಕನ್ನಡಗಿರ ಬೆಂಬಲವನ್ನು ಕೇಳಿದ್ದಾರೆ.
ದೇಶ ಅಭಿವೃದ್ಧಿ ಹೊಂದುತ್ತಿರುವ ವೇಳೆ ಮೋದಿ ಜೊತೆ ಹೆಜ್ಜೆ ಹಾಕಬೇಕು. ದೇಶಕ್ಕೆ ಪ್ರಪಂಚದಲ್ಲೇ ಗೌರವ ಸ್ಥಾನಮಾನ ಸಿಕ್ಕಿದೆ. ಈ ಚುನಾವಣೆ ಮಾತ್ರವಲ್ಲ. ದೇವರು ಶಕ್ತಿ ಕೊಟ್ಟರೆ ಮುಂದಿನ ಚುನಾವಣೆಯಲ್ಲೂ ಬಿಜೆಪಿಯನ್ನ ಅಧಿಕಾರಕ್ಕೆ ತರಲು ಓಡಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮೆಗಾ ರೋಡ್ಶೋ ಮಾಡಲಿದ್ದಾರೆ. ರಾಜಧಾನಿಯಲ್ಲಿ ಮಳೆಯಾಗುತ್ತಿರುವ ಕಾರಣ ರೋಡ್ಶೋಗೆ ಅಡ್ಡಿಯುಂಟಾಗುವ ಸಾಧ್ಯತೆಗಳಿವೆ.
ಮೋದಿ ಎಂದರೆ ವಿಷದ ಹಾವಿದ್ದಂತೆ, ವಿಷದ ಹಾವು ಹೌದೋ ಅಲ್ವೋ ಎಂದು ನೆಕ್ಕಿ ನೋಡಿದ್ರೆ ನೀವು ಸಾಯ್ತೀರ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಖರ್ಗೆ ಹೇಳ್ತಾರೆ. ಮೋದಿಯವರ ಬಗ್ಗೆ ಅನೇಕ ವಿಚಾರಗಳ ಕುರಿತು ಏಕವಚನದಲ್ಲಿ ಸಂಭೋದನೆ ಮಾಡಿ ಮೋದಿಯವರ ಕುರಿತು ಖರ್ಗೆ ಮಾತನಾಡ್ತಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನ ಮೆಚ್ಚಿಸೋದಕ್ಕೆ ಈ ರೀತಿಯ ಮಾತುಗಳನ್ನ ಆಡೋದು ಖರ್ಗೆಯವರೇ ನಿಮಗೆ ಶೋಭೆ ತರೋದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಗುಡುಗಿದರು.
https://t.co/2BspQjS0VX
ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ. ಈಗ ಆರಾಮಾಗಿದ್ದೇನೆ#Siddaramaiah #KarnatakaElection2023 #AssemblyElection2023 #KarnatakaElections2023 #KannadaNews— News18 Kannada (@News18Kannada) April 29, 2023
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿಯೋಗೇಶ್ವರ್ ಬೆಂಬಲಿಗ ಶ್ರೀಕಂಠೇಗೌಡ ಎಂಬವರ ಮನೆಯಲ್ಲಿ 113 ಸೀರೆ ಮತ್ತು 90 ಸಾವಿರ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ತಂದಿದ್ದರು ಎನ್ನಲಾಗಿದೆ.
ಪ್ರಧಾನಿ ಮೋದಿ ಬರ್ತಾರೆ, ಟಾಟಾ ಮಾಡಿ ಹೋಗ್ತಾರೆ, ರಾಜ್ಯಕ್ಕೆ ಏನೂ ಪ್ರಯೋಜನ ಇಲ್ಲ. ರಾಜ್ಯದ ರೈತರಿಗೆ ಮೋದಿ ಕೊಡುಗೆ ಏನು ? ಫಸಲ್ ಭೀಮಾ ಯೋಜನೆ, ಖಾಸಗಿ ಕಂಪನಿಗಳಿಗೆ ದುಡ್ಡು ಮಾಡಿ ಕೊಡುವ ಯೋಜನೆ. ಮೋದಿ 10 ವರ್ಷದಲ್ಲಿ ಮಾಡಲು ಆಗದ್ದನ್ನ, ನಾನು 14 ತಿಂಗಳಲ್ಲೆ ಮಾಡಿದ್ದೇನೆ. ನಾನು ಸಿಎಂ ಆಗಿದ್ದಾಗ 25 ಸಾವಿರ ಕೋಟಿ ಸಾಲಮನ್ನಾ ಮಾಡಿದೆ. ಜೆಡಿಎಸ್ ಹಾಗು ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕೂಡ್ಲಿಗಿಗೆ ಹೆಲಿಕಾಪ್ಟರ್ನಲ್ಲಿ ಬಂದ ಸಿದ್ದರಾಮಯ್ಯನವರು ಅಭಿಮಾನಿಗಳತ್ತ ಕೈ ಬೀಸಿದರು. ನಂತರ ಕಾರ್ ಒಳಗೆ ಕುಳಿತುಕೊಳ್ಳಲು ಹೋಗುತ್ತಿರುವಾಗ ಹಿಂದಕ್ಕೆ ವಾಲಿದರು ಕೂಡಲೇ ಸಿದ್ದರಾಮಯ್ಯನವರ ಬೆಂಗಾವಲು ಸಿಬ್ಬಂದಿ ಮತ್ತು ಆಪ್ತರು ಸಿದ್ದರಾಮಯ್ಯವರನ್ನು ಹಿಡಿದರು. ನಂತರ ಆಪ್ತರು ನೀರು ನೀಡಿ ಕಾರ್ನಲ್ಲಿಯೇ ಉಪಚರಿಸಿದರು.
ಮಾಜಿ ಡಿಸಿಎಂ ಪರಮೇಶ್ವರ್ ಮೇಲಿನ ದಾಳಿಯನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಂಡಿಸಿದ್ದಾರೆ. ಪರಮೇಶ್ವರ್ ಓರ್ವ ಶಾಂತ ಸಜ್ಜನ ರಾಜಕಾರಣಿ. ಅಂತವರ ಮೇಲೆಯೆ ದಾಳಿ ನಡೆದಿದೆ ಅಂದ್ರೆ ಬೇರೆಯವರ ಕತೆ ಎನು ಎಂದು ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದರು .
https://t.co/sGmLqKT7K5
ಮಲ್ಲಿಕಾರ್ಜುನ ಖರ್ಗೆ ವಿಷಸರ್ಪ ಹೇಳಿಕೆ ಮೋದಿ ತಿರುಗೇಟು ನೀಡಿದ್ದು ಹೀಗೆ#PMModi #Modi #Bidar #KarnatakaElection2023 #AssemblyElection2023 #KarnatakaElections2023 #KannadaNews #Congress— News18 Kannada (@News18Kannada) April 29, 2023
ಪಿಎಂ ಕಿಸಾನ್ ಸಮ್ಮಾನ್ ನಿಧಿ ರೈತರಿಗೆ ಎಷ್ಟು ಲಾಭ ಸಿಕ್ಕಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಈ ಯೋಜನೆ ತಂದಾಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಫಲಾನುಭವಿಗಳ ಪಟ್ಟಿಯನ್ನೇ ನೀಡಲಿಲ್ಲ. ತಮ್ಮ ಕೈಗೆ ಏನು ಸಿಗ್ತಿಲ್ಲ ಅಂತ ಪಟ್ಟಿಯೇ ಕಳುಹಿಸಲು ಹಿಂದೇಟು ಹಾಕಿತ್ತು ಎಂದು ಮೋದಿ ಆರೋಪಿಸಿದರು.