Karnataka Assembly Election 2023: ಅಭ್ಯರ್ಥಿಗಳಿಗೆ ಬಲ ತುಂಬಲು, ಮತದಾರರ ಓಲೈಕೆಗೆ ರಾಜಕೀಯ ಗಣ್ಯರು ಕರ್ನಾಟಕ ಪ್ರವಾಸ ಕೈಗೊಳ್ಳಲಾರಂಭಿಸಿದ್ದಾರೆ. ಹಾಗಾದ್ರೆ ಇಂದು ಉನಾವಣಾ ಕಣದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ
ಕಾರ್ಕಳದಲ್ಲಿ ಮುತಾಲಿಕ್ ಸ್ಪರ್ಧೆ ವಿಚಾರವಾಗಿ ತಿರುಗೇಟು ನೀಡಿರುವ ಸಚಿವ ಸುನೀಲ್ ಕುಮಾರ್, ಮುತಾಲಿಕ್ ಕಾಂಗ್ರೆಸ್ ನ ಬಿ ಟೀಂ. ಒಂದೇ ಒಂದು ಭಾಷಣ ಕಾಂಗ್ರೆಸ್ ವಿರುದ್ಧ ಮಾಡಿಲ್ಲ. ಬಿ ಟೀಮ್ ನಲ್ಲಿ ಇದ್ದವರೆ ಈಗ ಕಾಂಗ್ರೆಸ್ ಪಕ್ಷ ಎ ಟೀಂ ನಲ್ಲಿದ್ದಾರೆ. ಎಸ್ ಡಿ ಪಿಐ ಮತ್ತು ಪಿಎಫ್ ಐ ಒಂದೇ ನಾಣ್ಯದ ಎರಡು ಮುಖಗಳು. ಪಿಎಫ್ ಐನ ನಮ್ಮ ಸರ್ಕಾರವೇ ಬ್ಯಾನ್ ಮಾಡಿದ್ದು, ಕಾಂಗ್ರೆಸ್ ಪಿಎಫ್ಐ ಅನ್ನು ತಲೆ ಮೇಲೆ ಕೂರಿಸಿಕೊಂಡಿತ್ತು ಎಂದು ಆರೋಪಿಸಿದ್ದಾರೆ.
ಮಾಜಿ ಡಿಸಿಎಂ ಪರಮೇಶ್ವರ್ ಅವರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ತುಮಕೂರು ಜಿಲ್ಲೆಯ ಬೈರೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪ್ರಚಾರ ನಡೆಸುತ್ತಿದ್ದ ವೇಳೆ ಪರಮೇಶ್ವರ್ ಅವರಿಗೆ ಹೂವಿನ ಸುರಿಮಳೆ ಮಾಡಿದ್ದರು. ಈ ವೇಳೆ ಅವರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಂದು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಪರ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು ಸಿದ್ದರಾಮಯ್ಯ ಸರ್ಕಾರದಲ್ಲೇ ಅತಿ ಹೆಚ್ಚು ಭ್ರಷ್ಟಾಚಾರ ಆಗಿದೆ. ಡಿಕೆ ಶಿವಕುಮಾರ್ ಮೇಲೆ ಸಾಲು ಸಾಲು ಕೇಸ್ಗಳಿವೆ ಎಂದು ಆರೋಪ ಮಾಡಿದ್ದಾರೆ.
ಧಾರವಾಡದ ನವಲಗುಂದದಲ್ಲಿ ಏರ್ಪಡಿಸಿದ್ದ ನಟ ಸುದೀಪ್ ರೋಡ್ ಶೋ ರದ್ದು ಮಾಡಲಾಗಿದೆ. ಪಟ್ಟಣದ ಗಣೇಶ್ ದೇವಸ್ಥಾನದಿಂದ ರೋಡ್ ಶೋ ಏರ್ಪಡಿಸಲಾಗಿತ್ತು. ಆದರೆ ಸಮಯದ ಅಭಾವದ ಹಿನ್ನೆಲೆ ರೋಡ್ ಶೋ ಎರಡು ದಿನ ಮುಂದೂಡಲಾಗಿದೆ. ಈ ನಡುವೆ ಸುದೀಪ್ ನೋಡಲು ಕಾತುರಾಗಿ ಸೇರಿದ್ದ ಅಪಾರ ಪ್ರಮಾಣದ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.
ಆಟೋದಲ್ಲಿ 93ಲಕ್ಷ ಹಣ ವಶಕ್ಕೆ ಸಾಗಾಟ ಮಾಡುತ್ತಿದ್ದ ಸುಮಾರು 93 ಲಕ್ಷ ರೂಪಾಯಿ ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದ ಚೆಕ್ ಪೊಸ್ಟ್ ಬಳಿ ಘಟನೆ ನಡೆದಿದ್ದು, ಹಣವನ್ನು ಶಿವಮೊಗ್ಗದಿಂದ ಕುಮಟಾಕ್ಕೆ ಸಾಗಿಸುವ ವೇಳೆ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚುನಾವಣೆಯಲ್ಲಿ ಮತದಾರರಿಗೆ ಹಂಚಿಕೆ ಮಾಡಲು ಹಣ ತರಲಾಗುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ನಿನ್ನೆ ವರುಣಾ ಆಯ್ತು ಇಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ ನಡೆದಿದೆ. ಪ್ರಚಾರದ ವೇಳೆ ಸಿ.ಟಿ.ರವಿ ಹಾಗೂ ಹೆಚ್.ಡಿ.ತಮ್ಮಯ್ಯ ಮುಖಾಮುಖಿಯಾಗಿದ್ದರು. ಈ ವೇಳೆ ಹೆಚ್.ಡಿ.ತಮ್ಮಯ್ಯ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿದ್ದರಂತೆ. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಅವರು ಸಲ್ಲಿಕೆ ಮಾಡಿದ್ದ ನಿರೀಕ್ಷಣಾ ಜಾಮೀನಿಗೆ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಅಸ್ಸಾಂನಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಗೌರವಕ್ಕೆ ಧಕ್ಕೆ ತಂದ ಆರೋಪ ಶ್ರೀನಿವಾಸ್ ಅವರ ಕೇಳಿ ಬಂದಿತ್ತು. ಈ ಸಂಬಂಧ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ಅಸ್ಸಾಂ ಪೊಲೀಸರು, ಯೂತ್ ಕಾಂಗ್ರೆಸ್ ಅಧ್ಯಕ್ಷರ ಮನೆಗೆ ನೋಟಿಸ್ ಅಂಟಿಸಿದ್ದರು.
ರಾಹುಲ್ ಗಾಂಧಿ ಹುಚ್ಚ, ಸೋನಿಯಾ ಗಾಂಧಿ ವಿಷಕನ್ಯೆ ಯತ್ನಾಳ್ ಹೇಳಿಕೆ ವಿಚಾರವಾಗಿ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದು, ಯತ್ನಾಳ್ ಅವರ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಇಂತಹ ಹೇಳಿಕೆ ಬಿಜೆಪಿ ಸಂಸ್ಕೃತಿ ಅಲ್ಲ. ಯತ್ನಾಳ್ ಬೇರೆ ಪಕ್ಷಗಳ ನಾಯಕರ ಬಗ್ಗೆ ಇಂತಹ ಹೇಳಿಕೆ ನೀಡಬಾರದು. ಈ ಬಗ್ಗೆ ಅವರಿಗೆ ಸೂಚನೆ ನೀಡುವ ಕೆಲಸ ಪಕ್ಷ ಮಾಡಲಿದೆ ಎಂದು ಚಿಕ್ಕಮಗಳೂರಿನ ಕಳಸದಲ್ಲಿ ತಿಳಿಸಿದ್ದಾರೆ.
ಪರಮೇಶ್ವರ್ ಆಪ್ತ ಪಿಎನ್ ಕೃಷ್ಣಮೂರ್ತಿ ಆಪರೇಷನ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಪಿಎನ್ ಕೃಷ್ಣ ಮೂರ್ತಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿ ಶಾಲು ಹಾಕಿಕೊಂಡಿದ್ದಾರೆ. ಪಿಎನ್ ಕೃಷ್ಣಮೂರ್ತಿ ಕೊರಟಗೆರೆ ತಾಲೂಕಿನ ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡರಾಗಿದ್ದಾರೆ. ಈ ಹಿಂದೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೃಷ್ಣಮೂರ್ತಿ ಸೋತಿದ್ದರು.
ಜೆಡಿಎಸ್ ಅಭ್ಯರ್ಥಿ ಸಿಎಸ್ ಪುಟ್ಟರಾಜು ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಪಾಂಡವಪುರ ಪಟ್ಟಣದಲ್ಲಿ ನೂರಾರು ಮಂದಿ ಜೆಡಿಎಸ್ ಸೇರಿದ್ದಾರೆ. ಮನ್ ಮುಲ್ ಮಾಜಿ ಉಪಾಧ್ಯಕ್ಷ ರವಿಕುಮಾರ್, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸ್ವಾಮಿಗೌಡ ಸೇರಿದಂತೆ ನೂರಾರು ಮಂದಿ ಸೇರ್ಪಡೆಯಾಗಿದ್ದಾರೆ.
ಉಸ್ತುವಾರಿ ಸಚಿವ ಮುನಿರತ್ನ ಚುನಾವಣಾ ಘೋಷಣೆಯಾಗಿ ಇಲ್ಲಿಯವರೆಗೂ ಜಿಲ್ಲೆಯ ಕಡೆಗೆ ತಲೆಹಾಕಿಲ್ಲ. ಬಿಜೆಪಿ ಟಿಕೆಟ್ ಆಯ್ಕೆಯಲ್ಲಿ ಸಚಿವ ಮುನಿರತ್ನ ಕೋಲಾರ, ಮಾಲೂರು, ಕೆಜಿಎಫ್ ಮಹತ್ವದ ಪಾತ್ರ ವಹಿಸಿದ್ದರು. ಇದೀವ ಬಿಜೆಪಿ ಅಭ್ಯರ್ಥಿಗಳ ಪರವಾಗಿಯೂ ಪ್ರಚಾರಕ್ಕೆ ಬಾರದೆ ಸಚಿವ ಮುನಿರತ್ನ ನಿರಾಸಕ್ತಿ ತೋರಿದ್ದಾರೆ.
ದೇವಸ್ಥಾನಗಳಲ್ಲಿ ಪ್ರಚಾರ ಮಾಡಬಾರದು ಎಂದು ನಿಯಮ ಇದ್ದರೂ ನಿಯಮ ಗಾಳಿಗೆ ತೂರಿದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ ಕಾಗವಾಡ ಕ್ಷೇತ್ರದ ಖೀಲೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ ಪ್ರಚಾರ ನಡೆಸಿದ್ದಾರೆ. ಹೀಗಿದ್ದರೂ ಚುನಾವಣಾ ಅಧಿಕಾರಿಗಳು ಮೌನ ವಹಿಸಿದ್ದಾರೆ.
ರೋಡ್ ಶೋ ಹೆಚ್ಚು ಜನ ಸೇರದ ಹಿನ್ನಲೆ ಮತ್ತು ಭದ್ರತಾ ದೃಷ್ಟಿಯಿಂದ ಅಮಿತ್ ಶಾ ರೋಡ್ ಶೋ ಕ್ಯಾನ್ಸಲ್ ಮಾಡಲಾಗಿದೆ. ಸಿಎಂ ಬೊಮ್ಮಾಯಿ ಹರಿಹರದಲ್ಲಿ ನಡೆಸಿದ ರೋಡ್ ಶೋ ನಲ್ಲಿ ಕಡಿಮೆ ಜನ ಇದ್ದರು. ರಾಷ್ಟ್ರೀಯ ನಾಯಕ ಬಂದಾಗ ಅವಮಾನ ಆಗಬಾರದು ಅಂತ ರೋಡ್ ಶೋ ರದ್ದು ಮಾಡಿದ್ದಾರೆನ್ನಲಾಗಿದೆ.
ಮತ್ತೆ ಅಧಿಕಾರಕ್ಕೆ ಬಂದ್ರೆ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿ ವಾಪಾಸ್ ಪಡೆಯುತ್ತೇವೆ ಅಂತಾರೆ, ಅವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ಶಿಕ್ಷಣ ನೀತಿಯಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಡಿಕೆಶಿ ವಿರುದ್ದ ಅಶ್ವಥ್ ನಾರಾಯಣ್ ಗುಡುಗು
ಕರ್ನಾಟಕ ಚುನಾವಣಾ ಆಯೋಗ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಇಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯ ಮುಂಭಾಗದಲ್ಲಿ ಬಿಬಿಎಂಪಿಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ , ಬಿಎಂಟಿಸಿಯ ಸಾಂಸ್ಕೃತಿಕ ಕಲಾ ಕುಟೀರದ ಕಲಾವಿದರು ಮತ್ತು ಕೆ ಎಸ್ ಆರ್ ಟಿ ಸಿಯ ಸಿಬ್ಬಂದಿ ಗಳು ಮತದಾನ ಸಂಕಲ್ಪ ಬೀದಿ ನಾಟಕ ವನ್ನು ಟಿಎಂ ಬಾಲಕೃಷ್ಣರವರ ನಿರ್ದೇಶನದಲ್ಲಿ ಪ್ರದರ್ಶನ ನೀಡಲಾಯಿತು.
ಬಿಜೆಪಿಯಿಂದ ವಲಸೆ ಬಂದ ಎಂ ಪಿ ಕುಮಾರಸ್ವಾಮಿಗೆ ಜೆಡಿಎಸ್ ಟಿಕೆಟ್ ಹಿನ್ನೆಲೆ ಮೂಡಿಗೆರೆ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ನಿಂಗಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಬಸವನಗುಡಿ ಬಿಜೆಪಿ ಅಭ್ಯರ್ಥಿ ರವಿಸುಬ್ರಮಣ್ಯ ಪರ ನಾನು ಪ್ರಚಾರ ಮಾಡುತ್ತಿದ್ದೇನೆ. ಮೂರು ಬಾರಿ ಶಾಸಕರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ರವಿ ಸುಬ್ರಮಣ್ಯ ಅವರು ನಾಲ್ಕನೇ ಬಾರಿ ಗೆದ್ದು ಸಚಿವರಾಗಬೇಕು ಅನ್ನೋದು ಜನರ ಆಸೆ. ವಿದ್ಯಾವಂತರು, ಯುವಕರು ಮತದಾನ ಮಾಡಬೇಕು. ಆಗಲೇ ನಾವು ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯ. ನಾವು ನಮ್ಮ ಹಕ್ಕು ಚಲಾಯಿಸಿದ್ರೆ ಮಾತ್ರ, ಮುಂದೆ ಪ್ರಶ್ನೆ ಮಾಡಲು ಹಕ್ಕಿರುತ್ತದೆ.
ಡಬ್ಬಲ್ ಇಂಜಿನ್ ಸರ್ಕಾರ ಕೇವಲ ಸ್ಲೋಗನ್ ಅಲ್ಲ, ಅಭಿವೃದ್ಧಿ ಪರವಾದ ಡಬ್ಬಲ್ ಇಂಜಿನ್ ಸರ್ಕಾರಗಳು. ಪ್ರಧಾನಿ ಮೋದಿ ಇದನ್ನ ಕ್ಲಾರಿಟಿಯಾಗಿ ಹೇಳಿದ್ದಾರೆ. ಎಕನಾಮಿಕ್ಸ್ ಪಾಲಿಸಿಯಲ್ಲಿ ಕಾಂಗ್ರೆಸ್ ಪಾಲಿಟಿಕ್ಸ್ ಮಾಡುತ್ತಿದೆ. ಕೋವಿಡ್ ಟೈಂನಲ್ಲಿ ಪ್ರಧಾನಿ ಮೋದಿ ದಿಟ್ಟ ನಿರ್ಧಾರ ಕೈಗೊಂಡಿದ್ರು, ಆದರೆ ರಾಹುಲ್‌ಗಾಂಧಿ, ಚಿದಂಬರಂ ಬೇರೆ ರೀತಿ ಟ್ವಿಟ್ ಮಾಡಿದ್ರು. ರಾಜಸ್ತಾನ, ಛತ್ತೀಸ್‌ಘಡ್ ಪಂಜಾಬ್‌ನಲ್ಲಿ ಎಕನಾಮಿಕ್ಸ್ ಪಾಲಿಸಿ ದುರುಪಯೋಗ ಮಾಡಲಾಗಿದೆ ಎಂದು ಕಾಂಗ್ರೆಸ್ ವಿರುದ್ದ ರಾಜೀವ್ ಚಂದ್ರಶೇಖರ್ ಗುಡುಗು
ಡಬ್ಬಲ್ ಇಂಜಿನ್ ಸರ್ಕಾರ ಕೇವಲ ಸ್ಲೋಗನ್ ಅಲ್ಲ, ಅಭಿವೃದ್ಧಿ ಪರವಾದ ಡಬ್ಬಲ್ ಇಂಜಿನ್ ಸರ್ಕಾರಗಳು. ಪ್ರಧಾನಿ ಮೋದಿ ಇದನ್ನ ಕ್ಲಾರಿಟಿಯಾಗಿ ಹೇಳಿದ್ದಾರೆ. ಎಕನಾಮಿಕ್ಸ್ ಪಾಲಿಸಿಯಲ್ಲಿ ಕಾಂಗ್ರೆಸ್ ಪಾಲಿಟಿಕ್ಸ್ ಮಾಡುತ್ತಿದೆ. ಕೋವಿಡ್ ಟೈಂನಲ್ಲಿ ಪ್ರಧಾನಿ ಮೋದಿ ದಿಟ್ಟ ನಿರ್ಧಾರ ಕೈಗೊಂಡಿದ್ರು, ಆದರೆ ರಾಹುಲ್‌ಗಾಂಧಿ, ಚಿದಂಬರಂ ಬೇರೆ ರೀತಿ ಟ್ವಿಟ್ ಮಾಡಿದ್ರು. ರಾಜಸ್ತಾನ, ಛತ್ತೀಸ್‌ಘಡ್ ಪಂಜಾಬ್‌ನಲ್ಲಿ ಎಕನಾಮಿಕ್ಸ್ ಪಾಲಿಸಿ ದುರುಪಯೋಗ ಮಾಡಲಾಗಿದೆ ಎಂದು ಕಾಂಗ್ರೆಸ್ ವಿರುದ್ದ ರಾಜೀವ್ ಚಂದ್ರಶೇಖರ್ ಗುಡುಗು