Karnataka Assembly Election 2023: ಅಬ್ಬರದ ಭಾಷಣಗಳಲ್ಲಿ (Election Speech) ಒಬ್ಬರು ಮತ್ತೊಬ್ಬರಿಗೆ ಟಾಂಗ್ ನೀಡುತ್ತಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಇಂದಿನ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೋಲಿಸಲು ಬಿಜೆಪಿ ರಣತಂತ್ರ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಅಲರ್ಟ್ ಆಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಶೆಟ್ಟರ್ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಪ್ರಧಾನಿ ಮೋದಿ ಅವರನ್ನೂ ಕರೆಸುತ್ತಾರೆ, ನನ್ನ ವಿರುದ್ಧ ಪ್ರಚಾರ ಮಾಡುತ್ತಾರೆ. ಈ ಬಾರಿಯೂ ನಾನು ಕೂಲ್ ಆಗಿಯೇ ಪ್ರಚಾರ ಮಾಡುತ್ತೇನೆ. ಯಡಿಯೂರಪ್ಪನವರ ಬೈಗುಳ ಆಶೀರ್ವಾದದಿಂದಲೇ ನಾನು ಗೆದ್ದು ತೋರಿಸುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ಗೆಲ್ಲಲ್ಲ ರಕ್ತದಲ್ಲಿ ಬರೆದುಕೊಡ್ತೀನಿ ಎಂದಿದ್ದ ಡಿಕೆಶಿವಕುಮಾರ್ಗೆ ಸಿಎಂ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಬೊಮ್ಮಾಯಿ, ಡಿಕೆಶಿ ರಕ್ತ ಯಾರ ಉಪಯೋಗಕ್ಕೂ ಬರಲ್ಲ. 150 ಸ್ಥಾನ ಯಾರಿಗೆ ಕೊಡಬೇಕು ಅನ್ನೋದು ಜನ ತೀರ್ಮಾನ ಮಾಡುತ್ತಾರೆ. ನಮಗೆ ಜನರ ಮೇಲೆ ವಿಶ್ವಾಸ ಇದೆ. ಖಂಡಿತ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ನಮಗೇ ಮತ ಹಾಕಿದಂತೆ. ನಿಮಗೆ ಅರ್ಥ ಆಗಲಿ ಅಂತ ಬಿಡಿಸಿ ಬಿಡಿಸಿ ಹೇಳುತ್ತಿದ್ದೇನೆ. ದೇವೇಗೌಡರು, ಮೋದಿ ಸಾಹೇಬರು ಮಾತನಾಡಿಕೊಂಡಿದ್ದಾರೆ ಎಂದು ಪ್ರೀತಂಗೌಡ ಹೇಳಿದ್ದಾರೆ.
ನಟ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ನಾಳೆ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗದ ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲು ಗೀತಾ ಶಿವಕುಮಾರ್, ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಗೀತಾ ಶಿವಕುಮಾರ್ ಕುಮಾರ್ ಅವರ ಜೆಡಿಎಸ್ ಪಕ್ಷದಿಂದ ಈ ಹಿಂದೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.
ಪ್ರಧಾನಿ ಮೋದಿ ಕಾಂಗ್ರೆಸ್ ಗ್ಯಾರಂಟಿ ಕುರಿತಂತೆ ನೀಡಿದ್ದ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ನಾನು ಮುಖ್ಯಮಂತ್ರಿ ಇರುವಾಗ ಪರ್ಸೆಂಟ್ ಸರ್ಕಾರ ಅಂತ ಹೇಳಿದ್ದರು. ಯಾವ ಸರ್ಕಾರಕ್ಕೆ ಶೇಕಡಾ 40 ಸರ್ಕಾರ ಅಂತ ಹೇಳಿದ್ದು. ಬೊಮ್ಮಾಯಿ ಸರ್ಕಾರ, ಬಿಜೆಪಿ ಸರ್ಕಾರ ಅಲ್ವಾ? ಅದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅದಕ್ಕೆ ಸುಳ್ಳು ಹೇಳುತ್ತಿದ್ದಾರೆ. ಹೊರದೇಶಗಳಿಂದ ಮೋದಿ ಅವರು ಕಪ್ಪು ಹಣ ತಂದರಾ? ಬರಗಾಲ, ಪ್ರವಾಹ ಬಂದಾಗ ರಾಜ್ಯಕ್ಕೆ ಮೋದಿ ಬಂದಿದ್ದರಾ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಪರ ನಟ ಸುದೀಪ್ 2ನೇ ದಿನ ಮತಬೇಟೆ ಮುಂವರಿದಿದೆ. ವಿಜಯನಗರದ ಕೂಡ್ಲಿಗಿ, ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಪ್ರಚಾರದ ಬಳಿಕ ಹಿರೇಕೆರೂರಿನಲ್ಲಿ ಕ್ಯಾಂಪೇನ್ ಮಾಡಿದ್ರು.. ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ಪರ ಕಿಚ್ಚ ರೋಡ್ ಶೋ ಮಾಡಿದ್ದಾರೆ. ಈ ವೇಳೆ ಕಿಚ್ಚ, ಕಿಚ್ಚ ಅಂತ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಸುದೀಪ್ ಭಾವಚಿತ್ರದ ಬಾವುಟ ಹಿಡಿದು ಅಭಿಮಾನಿಗಳು ಸಂಭ್ರಮಿಸ್ತಿದ್ದಾರೆ.
ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರ ಖರ್ಗೆ ಕ್ಯಾಂಪೇನ್ ಮಾಡಿದ್ರು. ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ವಿರುದ್ಧ ಗುಡುಗಿದ್ರು.
ಜೆಡಿಎಸ್‌ಗೆ ರಾಜ್ಯದಲ್ಲಿ ಕೇವಲ 10ರಿಂದ 15 ಸ್ಥಾನ ಬರುತ್ತೆ ಎಂದಿದ್ದ ಪ್ರಹ್ಲಾದ್ ಜೋಶಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ತಿರುಗೇಟು ಕೊಟ್ಟಿದ್ದಾರೆ. ಜನರು ತೀರ್ಮಾನ ಮಾಡ್ತಾರೆ. 13ನೇ ತಾರೀಖಿನವರೆಗೂ ಕಾದು ನೋಡೋಣ ಅಂತ ಹೇಳಿದ್ರು. ನಾಳೆಯಿಂದ ನಾನು ಮೇ 8ರ ವರೆಗೂ ಸುಮಾರು 42 ಕಡೆ ಪ್ರಚಾರ ಮಾಡ್ತೀನಿ ಅಂತ ಹೇಳಿದ್ರು.
ಹಾಸನ ಬಿಟ್ಟು ಓಡಿಸುತ್ತೇವೆ ಅನ್ನೋ ಭವಾನಿ ರೇವಣ್ಣ ಹೇಳಿಕೆಗೆ ಶಾಸಕ ಪ್ರೀತಂಗೌಡ ತಿರುಗೇಟು ಕೊಟ್ಟಿದ್ದಾರೆ. ಹಾಸನ ಕ್ಷೇತ್ರದ ಮತದಾರರು ತೀರ್ಮಾನ ಮಾಡ್ತಾರೆ, ಪ್ರೀತಂಗೌಡ ಕೆಲಸ ಮಾಡಿದ್ದರೆ ಆಶೀರ್ವಾದ ಮಾಡ್ತಾರೆ. ಯಾರು ಹತಾಷರಾಗಿದಾರೆ ಎನ್ನೋದನ್ನ ಜನರು ನೋಡುತ್ತಿದ್ದಾರೆ ಅಂತ ಟಾಂಗ್ ಕೊಟ್ರು.
ಇಂದು ಮಧ್ಯಾಹ್ನ 3 ಗಂಟೆಗೆ ಜೆಡಿಎಸ್ ಅಧಿಕೃತ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ಇರಲಿದೆ. ಪಂಚರತ್ನ ಯೋಜನೆಗಳ ಜೊತೆ ಮತ್ತಷ್ಟು ಮಹತ್ವದ ಕಾರ್ಯಕ್ರಮಗಳ ಘೋಷಣೆ ಮಾಡಲಾಗುತ್ತದೆ.
ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬಂಡಾಯ ಅಭ್ಯರ್ಥಿ ಮಾಜಿ ಸಚಿವ ಶಂಕರೇಗೌಡರ ಮೊಮ್ಮಗ ವಿಜಯಾನಂದ ಹುಟ್ಟೂರು ಕೀಲಾರದಲ್ಲಿ ಮತಯಾಚನೆ ವೇಳೆ ಕಣ್ಣೀರು ಹಾಕಿದ್ದಾರೆ.ನಮ್ಮ ಜೀವನ ಪೂರ್ಣ ಹೋರಾಟವಾಗಿದೆ, ಮೂರು ತಲೆಮಾರಿನಿಂದ ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೀನಿ. ಸೋಲ್ತೀನೋ ಗೊಲ್ತೀನಿ ಗೊತ್ತಿಲ್ಲ. ನಾನು ಸತ್ತ ಮೇಲೆ ನನ್ನ ದೇಹ ಇಲ್ಲೇ ಮಣ್ಣಲ್ಲಿ ಮಣ್ಣಾಗುತ್ತೆ. ಈ ಬಾರಿ ನನ್ನ ಕೈ ಬಿಡಬೇಡಿ ಎಂದು ಕಣ್ಣೀರು ಹಾಕಿ ಮತಯಾಚನೆ ಮಾಡಿದರು.
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದಲಿತ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಂಬಲ, ಹದಿನಾರು ಗ್ರಾಮದ ಯುವಕರು ವಿಡಿಯೋ ರಿಲೀಸ್ ಮಾಡಿದ್ದು, ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಸಕನಾಗಿ, ಮಂತ್ರಿಯಾಗಿ ಹಾಗೂ ಮುಖ್ಯಮಂತ್ರಿಯಾಗಿ ನಿಮ್ಮ ಪರವಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗ ಕೊಡುವುದು ನನ್ನ ಗುರಿ. ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಹೋಗಬೇಕು ಎಂದು ಕಾರ್ಯಕರ್ತರಿಗೆ ಸಿಎಂ ಬೊಮ್ಮಾಯಿ ಸಲಹೆ ನೀಡಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆಲ್ಲುವುದಿಲ್ಲ ಎಂದು ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದ ಯಡಿಯೂರಪ್ಪ ಅವರಿಗೆ ಲಿಂಗಾಯತ ಯುವ ಮುಖಂಡ ತಿರುಗೇಟು ನೀಡಿದ್ದಾರೆ. ಜಗದೀಶ್ ಶೆಟ್ಟರ್ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಪತ್ರ ಬರೆದು ತಿರುಗೇಟು ನೀಡಿದ್ದಾರೆ. ಮಂಜುನಾಥ್ ಬರೆದಿರುವ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಮೋದಿ ಭರವಸೆಯಂತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರುತ್ತೇವೆ. ಮೋದಿ ಆಶಿಸಿದಂತೆ ಡಬಲ್ ಎಂಜಿನ್ ಸರ್ಕಾರವನ್ನು ಮತ್ತಷ್ಟು ಸದೃಢಗೊಳಿಸ್ತೇವೆ. ಕಾಂಗ್ರೆಸ್ ಆಶ್ವಾಸನೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತೆ. ಪ್ರತಿಯೊಂದು ಮನೆ ಮಾತಾಗಿದೆ. ಮೋದಿಯವರ ಒಂದೊಂದು ಮಾತು ಸತ್ಯವಾಗುತ್ತೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.