Karnataka Election 2023: ಚುನಾವಣಾ ರಂಗದಲ್ಲಿ ಕೊನೇ ಕ್ಷಣದ ಕಸರತ್ತು; ಏನೇನಿದೆ ಇವತ್ತಿನ ಮಸಲತ್ತು?

Karnataka Assembly Election 2023: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಇನ್ನೇನು 48 ಗಂಟೆ ಕಳೆದ್ರೆ ಮತದಾನ ಶುರುವಾಗಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿ ಮತಪೆಟ್ಟಿಗೆಗೆ ಸೇರುತ್ತೆ. ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ಅಧಿಕೃತವಾಗಿ ತೆರೆ ಬೀಳಲಿದೆ. ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ಕೊನೇ ಕ್ಷಣದ ಕಸರತ್ತು ಶುರು ಮಾಡ್ತಿದ್ದಾರೆ. ಈ ಮಧ್ಯೆ ಇಂದು ರಾಜ್ಯದಲ್ಲಿ ಏನೇನೆಲ್ಲ ಬೆಳವಣಿಗೆಗಳು ನಡೆಯುತ್ತೆ ಅನ್ನೋದರ ಕುರಿತ ಲೈವ್‌ ಅಪ್‌ಡೇಟ್ಸ್‌ ಇಲ್ಲಿದೆ.

ಬೆಂಗಳೂರು: ಭಾರೀ ಕುತೂಹಲ ಮೂಡಿಸಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Election 2023) ಕ್ಲೈಮಾಕ್ಸ್‌ ಹಂತಕ್ಕೆ ಬಂದು ತಲುಪಿದೆ. ಎರಡು ರಾತ್ರಿ ಕಳೆದು ಬೆಳಗಾಗೋವಷ್ಟರಲ್ಲಿ ಮತದಾನ (Karnataka Poll) ಶುರುವಾಗಲಿದೆ. ಅಭ್ಯರ್ಥಿಗಳ ಎದೆಯಲ್ಲಿ ಈಗಲೇ ಲಬ್‌ಡಬ್‌ ಶುರುವಾಗಿದೆ. ಇದೆಲ್ಲದರ ನಡುವೆ ಇಂದು ರಾಜ್ಯದಲ್ಲಿ ಏನೇನೆಲ್ಲ ರಾಜಕೀಯ ಬೆಳವಣಿಗೆಗಳು ನಡೆದಿವೆ ಅನ್ನೋದರ ಕುರಿತಾದ ಕಂಪ್ಲೀಟ್‌ ಲೈವ್ ಅಪ್‌ಡೇಟ್ಸ್‌ ಇಲ್ಲಿದೆ.

ಮತ್ತಷ್ಟು ಓದು ...
08 May 2023 18:57 (IST)

Karnataka Election 2023 Live: ಮೋದಿ, ನಡ್ಡಾ ವಿರುದ್ಧ ಕಾಂಗ್ರೆಸ್ ದೂರು

ಕಾಂಗ್ರೆಸ್​​ ಪಕ್ಷದ ನಿಯೋಗ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಕೇಂದ್ರದ ಯೋಜನೆಗಳನ್ನ ರದ್ದು ಮಾಡ್ತೀವಿ ಎಂದಿದ್ದಾರೆಂದು ಆರೋಪ ಮಾಡಿ, ನಡ್ಡಾ ಹೇಳಿಕೆ ಉಲ್ಲೇಖಿಸಿ ಕ್ರಮಕ್ಕೆ ಆಗ್ರಹಿಸಿದೆ.

08 May 2023 18:11 (IST)

Karnataka Election 2023 Live: ರಾಜ್ಯ ವಿಧಾನಸಭೆ ಚುನಾವಣೆಗೆ ಸಕಲ ಸಿದ್ಧತೆ

ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 1.56 ಲಕ್ಷ ಪೊಲೀಸರ ನಿಯೋಜನೆ ಮಾಡಲಾಗಿದ್ದು, 84,119 ಸಾವಿರ ರಾಜ್ಯ ಪೊಲೀಸರು, 304 DySP, 991 ಇನ್ಸ್‌ಪೆಕ್ಟರ್, 20610 ಪಿಎಸ್ಐ, 8500 ಹೊರ ರಾಜ್ಯ ಪೊಲೀಸರು, 650 ಸಿಎಪಿಎಫ್ ತುಕಡಿಗಳು ನಿಯೋಜನೆ ಮಾಡಲಾಗಿದೆ.

08 May 2023 18:09 (IST)

Karnataka Election 2023 Live: ಆರ್ ಆರ್ ನಗರದಲ್ಲಿ ಬಿಜೆಪಿ ಪ್ರಚಾರದ ವೇಳೆ ಗಲಾಟೆ

ಆರ್ ಆರ್ ನಗರದಲ್ಲಿ ಬಿಜೆಪಿ ಪ್ರಚಾರದ ವೇಳೆ ಗಲಾಟೆ ನಡೆದಿದ್ದು, ಮಂಜುಳಾ ನಾರಾಯಣಸ್ವಾಮಿ‌ ಮೇಲೆ ಹಲ್ಲೆ ಯತ್ನ ಮಾಡಿದ್ದಾರಂತೆ. ಬಿಜೆಪಿ ಪ್ರಚಾರದ ವೇಳೆ ನೀರಿನ ಬಾಟಲ್ ಎಸೆದು ಹಲ್ಲೆಗೆ ಯತ್ನ ಆರೋಪ ಕೇಳಿ ಬಂದಿದೆ. ಲಗ್ಗೆರೆಯ ನರಸಿಂಹಸ್ವಾಮಿ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಮುನಿರತ್ನ ಬೆಂಬಲಿಗರ ವಿರುದ್ಧ ಆರೋಪ ಕೇಳಿ ಬಂದಿದ್ದು, ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಬಿಜೆಪಿಯಲ್ಲೇ ಇರೋ ಮಂಜುಳಾ ನಾರಾಯಣಸ್ವಾಮಿ ಕಾಂಗ್ರೆಸ್​ಗೆ ಬೆಂಬಲ ನೀಡ್ತಿದ್ದಾರೆಂಬ ಆರೋಪದ ಮೇಲೆ ಹಲ್ಲೆ ಯತ್ನ ನಡೆದಿದೆಯಂತೆ.

08 May 2023 17:19 (IST)

Karnataka Election 2023 Live: ಉಸಿರು ಇರೋವರೆಗೆ ಬಡವರಿಗಾಗಿ ದುಡಿಯುತ್ತೇನೆ: ಖರ್ಗೆ

ನನ್ನ ಮುಗಿಸಲು ಬಿಜೆಪಿಯವರು ಪ್ಲ್ಯಾನ್ ಮಾಡುತ್ತಿದ್ದಾರೆ. ನನ್ನನ್ನ ಮುಗಿಸೋದಾದ್ರೆ ಮುಗಿಸಿ ಬಿಡಿ, ನಿಮಗೆ ಶಾಂತಿ ಸಿಗೋದಾದ್ರೆ ಸಿಗಲಿ ಎಂದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅಲ್ಲದೆ, ಉಸಿರು ಇರೋವರೆಗೆ ಬಡವರಿಗಾಗಿ ದುಡಿಯುತ್ತೇನೆ. ನನ್ನ ಕುಟುಂಬ ಮುಗಿಸಬೇಕು ಅಂತಾ ಬಹಿರಂವಾಗಿ ಒಬ್ಬ ಹೇಳಿದ್ದಾನೆ. ಆದರೆ ಯಾರಿಂದಲೂ ನನ್ನ ಟಚ್ ಮಾಡಲು ಸಾಧ್ಯವಿಲ್ಲ ಎಂದು ಖರ್ಗೆ ಹೇಳಿದ್ದಾರೆ.

08 May 2023 16:48 (IST)

KARNATAKA ELECTION 2023 LIVE: ಜನಾರ್ದನ ರೆಡ್ಡಿ ನಮ್ಮ ಕಾರ್ಪೊರೇಟರ್​​​ಗಳಿಗೆ ಬೆದರಿಸ್ತಿದ್ದಾರೆ; ಸೋಮಶೇಖರ್ ರೆಡ್ಡಿ ವಾಗ್ದಾಳಿ

ಇಲ್ಲಿ ಬ್ಲಾಕ್ ಮೇಲ್ ರಾಜಕಾರಣಿಗಳು ಇದ್ದಾರೆ. ಕಾಂಗ್ರೆಸ್, ಕೆಆರ್​​ಪಿಪಿ ಅಭ್ಯರ್ಥಿಗಳಲ್ಲಿ ಹಣ ಬಲ ಇದೆ. ಬಿಜೆಪಿ ಕಾರ್ಪೊರೇಟರ್​ಗಳಿಗೆ ಆಮಿಷ ಒಡ್ಡುತ್ತಿದ್ದಾರೆ. ಜನಾರ್ದನರೆಡ್ಡಿ ನಮ್ಮ ಕಾರ್ಪೊರೇಟ್ ಗಳಿಗೆ ಬೆದರಿಸ್ತಿದ್ದಾರೆ. ಕೆಲವರ ಆಸ್ತಿಯನ್ನ ಬರೆಸಿಕೊಂಡಿದ್ದಾರೆ. ಜನಾರ್ದನ ರೆಡ್ಡಿ ನಮ್ಮಿಂದ ದೂರವಾಗಿರಬಹುದು. ಆದರೆ ದೇವರು ನನಗೆ ಶ್ರೀರಾಮುಲು ಅವರನ್ನ ಸಹೋದರನಾಗಿ ಕೊಟ್ಟಿದ್ದಾರೆ. ನನಗೆ ಪ್ರತಿಸ್ಪರ್ಧಿ ಕಾಂಗ್ರೆಸ್ ಕೆಆರ್ ಪಿಪಿ ಅಲ್ಲ ಎಂದು ಜನಾರ್ದನ ರೆಡ್ಡಿ ವಿರುದ್ಧ ಸೋಮಶೇಖರ್ ರೆಡ್ಡಿ ವಾಗ್ದಾಳಿ ಮಾಡಿದ್ದಾರೆ.

08 May 2023 16:41 (IST)

Karnataka Election 2023 Live: ಆರ್.ವಿ ದೇವರಾಜ್ ಪುತ್ರ ಹಾಗೂ KGF ಬಾಬು ನಡುವೆ ಗಲಾಟೆ

ಚುನಾವಣಾ ಪ್ರಚಾರದ ವೇಳೆ ಆರ್.ವಿ ದೇವರಾಜ್ ಪುತ್ರ ಹಾಗೂ KGF ಬಾಬು ಬೆಂಬಲಿಗರ ನಡುವೆ ಕಿತ್ತಾಟ ನಡೆದಿದೆ. ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ನಡುವೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕೆಜಿಎಫ್ ಬಾಬು ಬೆಂಬಲಿಗರು ಆರ್ ವಿ ದೇವರಾಜು ಮಗ ಯುವರಾಜ್ ವಿರುದ್ಧ ದೂರು ನೀಡಿದ್ದಾರೆ. ಜೆ.ಸಿ.ರಸ್ತೆಯಲ್ಲಿ ಕೆ.ಜಿ.ಎಫ್ ಬಾಬು ಪ್ರಚಾರಕ್ಕೆ ಆರ್ ವಿ ಯುವರಾಜ್ ಅಡ್ಡಿ ಪಡಿಸಿದ್ದಾರೆ ಎನ್ನಲಾಗಿದ್ದು, ಈ ರಸ್ತೆಯಲ್ಲಿ ಹಾರ ಹಾಕಿಸಿಕೊಳ್ಳಬಾರದೆಂದು ತಾಕೀತು ಮಾಡಿದ್ದಂತೆ. ಆಗ ಬೆಂಬಲಿಗರ ಮಧ್ಯೆ ಜೋರು ಜಗಳ ಹಾಗೂ ತಳ್ಳಾಟ ಶುರುವಾಗಿದೆ ಎನ್ನಲಾಗಿದೆ.

08 May 2023 16:00 (IST)

Karnataka Election 2023 Live: ಬಹುಮತದೊಂದಿಗೆ ಅಧಿಕಾರಕ್ಕೆ ಬರೋದು ನಿಶ್ಚಿತ; ಬಿಎಸ್​​ವೈ

ಬೆಂಗಳೂರಿನಲ್ಲಿ ಬಿಎಸ್​​ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ದು, ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಅಗತ್ಯ ಇದೆ. ಈ ಬಾರಿ 135 ಸೀಟು ಗೆಲ್ಲೋದು‌ ನಿಶ್ಚಿತ. ಈ ಬಾರಿ ಸ್ವಂತ ಬಲದಲ್ಲಿ ಅಧಿಕಾರ ರಚಿಸೋದು ನಿಶ್ಚಿತ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಪ್ರತಿ ಲೀಟರ್​ ಹಾಲಿಗೆ 5 ರಿಂದ 7ರೂಪಾಯಿಗೆ ಸಹಾಯಧನ ಹೆಚ್ಚಳ ಮಾಡುತ್ತೇವೆ ಎಂದು ಹೇಳಿದ್ದಾರೆ.

08 May 2023 15:36 (IST)

Karnataka Election 2023 Live: ಜೆಪಿ ನಡ್ಡಾ ವಿರುದ್ಧ ಗುಡುಗಿದ ಡಿ.ಕೆ ಶಿವಕುಮಾರ್

ಮಿಸ್ಟರ್ ನಡ್ಡಾ ಜಿ, ನಮಗೆ ಹೆದರಿಸಬೇಡಿ. ಕೇಂದ್ರದ ಯೋಜನೆಗಳನ್ನು ನಿಲ್ಲಿಸ್ತೇವೆ ಅಂತೀರಾ? ನಿಮ್ಮ ಶಾಸಕರು, ಸಂಸದರು ಸುಮ್ಮನಿರಬಹುದು, ಕಾಂಗ್ರೆಸ್ ನಾಯಕರು ನಿಮ್ಮ ಬೆದರಿಕೆಗೆ ಹೆದರಲ್ಲ ಎಂದು ಡಿಕೆ ಶಿವಕುಮಾರ್, ನಡ್ಡಾ ವಿರುದ್ಧ ಹರಿಹಾಯ್ದಿದ್ದಾರೆ.

08 May 2023 15:27 (IST)

Karnataka Election 2023 Live: ಬಹಿರಂಗ ಪ್ರಚಾರದ ಅಂತಿಮ ಹಂತದ ಪ್ರಚಾರದಲ್ಲಿ ಸೋಮಶೇಖರ್

ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನ. ಈ ಹಿನ್ನೆಲೆಯಲ್ಲಿ ಯಶವಂತಪುರ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ಅದ್ಧೂರಿ ರೋಡ್​ ಶೋ ನಡೆಸಿದರು. ವಾಜರಹಳ್ಳಿ, ತಲಘಟ್ಟಪುರ ಸೇರಿದಂತೆ ಹಲವು ಹಳ್ಳಿಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯ ಹೆಮ್ಮಿಗೆಪುರ ವಾರ್ಡ್​ನಲ್ಲಿ ರೋಡ್ ಶೋ ನಡೆಸಿದ್ದಾರೆ.

08 May 2023 14:44 (IST)

Karnataka Election 2023 Live: ಮೋದಿ ಬಗ್ಗೆ ಬಿಎಸ್‌ವೈ ಮೆಚ್ಚುಗೆಯ ಮಾತು

ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಅಗತ್ಯ ಇದೆ. ಪ್ರಧಾನಿ ನರೇಂದ್ರ ಮೋದಿಯಂತಹ ಮುತ್ಸದ್ದಿ ಪ್ರಧಾನಿ ದೇಶದ ಅಭಿವೃದ್ಧಿ ಬಗ್ಗೆ ಹಗಲಿರುಳು ಕೆಲಸ ಮಾಡ್ತಿದ್ಸಾರೆ ಎಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.

08 May 2023 14:22 (IST)

Karnataka Election 2023 Live: ಬಿಎಸ್‌ವೈ ಮಾತುಗಳ ವಿವರ ಇಲ್ಲಿದೆ

08 May 2023 13:58 (IST)

Karnataka Election 2023 Live: ಶ್ರೀರಾಮುಲು ಅಬ್ಬರದ ಪ್ರಚಾರ

ಬಹಿರಂಗ ಚುನಾವಣಾ ಪ್ರಚಾರಕ್ಕೆ ಇಂದು ತೆರೆ ಬೀಳಲಿರುವ ಹಿನ್ನಲೆ ಬಳ್ಳಾರಿ ನಗರದಲ್ಲಿ ಸಚಿವ ಶ್ರೀರಾಮುಲು ಅಬ್ಬರದ ಪ್ರಚಾರ ಮಾಡಿದ್ದಾರೆ. ಬಳ್ಳಾರಿ ನಗರದ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ಪರ ಬಿರುಸಿನ ಪ್ರಚಾರ ನಡೆಸಿದ ಸೋಮಶೇಖರ ರೆಡ್ಡಿ, ಬಳ್ಳಾರಿ ನಗರದ ವಿವಿಧ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಿದರು.

08 May 2023 13:30 (IST)

Karnataka Election 2023 Live: ಸಿದ್ದರಾಮಯ್ಯಗೆ ಟಗರು ಗಿಫ್ಟ್

ಚಾಮರಾಜನಗರಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಿದ್ದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾರ್ಯಕರ್ತರು ಟಗರು ಗಿಫ್ಟ್ ನೀಡಿ ಹಾಗೂ ಕಂಬಳಿ ಹೊದಿಸಿ ಸನ್ಮಾನಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ನೆಹರು ಪಾರ್ಕ್ ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡಿದ್ದು, ಈ ವೇಳೆ ಸಿದ್ದರಾಮಯ್ಯ ಅವರನ್ನು ಹತ್ತಿರದಿಂದ ನೋಡಲು ಕಾರ್ಯಕರ್ತರು ಮುಗಿಬಿದ್ದ ಪ್ರಸಂಗವೂ ನಡೆಯಿತು.

08 May 2023 13:17 (IST)

Karnataka Election 2023 Live: ಕಾಂಗ್ರೆಸ್‌ ವಿರುದ್ಧ ಬಿಎಸ್‌ವೈ ಕಿಡಿ

ನಾವು ಕೊಟ್ಟ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಅಕ್ಷರಶಃ ಕಾರ್ಯರೂಪಕ್ಕೆ ತರುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಹಿಂದೆ ಅಧಿಕಾರಕ್ಕೆ ಬಂದಾಗ ಏನು ಮಾತಾಡಿಲ್ಲ. ಇವಾಗ ಅಧಿಕಾರದಲ್ಲಿ ಇಲ್ಲದೇ ಇರುವಾಗ ಮಾತಾಡ್ತಿದ್ದಾರೆ. ಚುನಾವಣೆ ಬಂದಾಗ ಓಲೈಕೆ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

08 May 2023 12:53 (IST)

Karnataka Election 2023 Live: ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ದೂರು!

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಶೋಭಾ ಕರಂದ್ಲಾಜೆ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಶೋಭಾ ಕರಂದ್ಲಾಜೆ, ಇಂದು ಎಲೆಕ್ಷನ್ ಕಮೀಷನ್‌ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ್ದೇವೆ. ಕರ್ನಾಟಕದ ಸಾರ್ವಭೌಮತ್ವದ ವಿರುದ್ಧ ಮಾತಾಡಿದ್ದಾರೆ. ದೇಶದ ಏಕತೆ ಅಂತ ಮಾತಾಡ್ತೀವಿ. ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಅಂತ ನಾವೆಲ್ಲಾ ಬಾಳ್ತಿದ್ದೀವಿ. ಆದ್ರೆ ಅದನ್ನ ಹೊಡೆಯುವ ಕೆಲಸ ಮಾಡಿದ್ರಿ ಎಂದು ಆರೋಪಿಸಿದರು.

08 May 2023 12:22 (IST)

Karnataka Election 2023 Live: ಮಾಜಿ ಐಪಿಎಸ್ ಭಾಸ್ಕರ್ ರಾವ್ ಆಸ್ತಿ ವಿವರ ಇಲ್ಲಿದೆ

08 May 2023 11:49 (IST)

Karnataka Election 2023 Live: ಎಣ್ಣೆ ಅಂಗಡಿ ಬಂದ್‌!

ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಇಂದು ಸಂಜೆ 5 ಗಂಟೆಯಿಂದಲೇ ಪಬ್, ಬಾರ್, ಎಂಆರ್‌ಪಿ ಔಟ್‌ಲೆಟ್‌ಗಳು ಬಂದ್ ಆಗಲಿದೆ. ಇಂದು ಸಂಜೆ ಐದು ಗಂಟೆಯಿಂದ ಚುನಾವಣೆ ಮುಗಿಯುವ ತನಕ ಮದ್ಯದಂಗಡಿಗಳು ಬಂದ್ ಆಗಲಿದ್ದು, ಈ ಬಗ್ಗೆ ಅಬಕಾರಿ ಇಲಾಖೆ ಹಾಗೂ ಚುನಾವಣಾ ಆಯೋಗದಿಂದ ಬಾರ್ ಮಾಲೀಕರಿಗೆ ಪತ್ರ ಬರೆಯಲಾಗಿದೆ.

08 May 2023 11:26 (IST)

Karnataka Election 2023 Live: ಬಿಎಂಟಿಸಿ ಬಸ್‌ನಲ್ಲಿ ಸಂಚರಿಸಿದ ರಾಗಾ ಹೇಳಿದ್ದೇನು?

08 May 2023 11:02 (IST)

Karnataka Election 2023 Live: ಸಿಎಂ ಕೊನೇ ಕ್ಷಣದ ಮತಬೇಟೆ

ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ ಆಗಿರೋದ್ರಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ತಾಲೂಕಿನ ಹಲವು ಹಳ್ಳಿಗಳಲ್ಲಿ ಸಿಎಂ ಮತಯಾಚನೆ ಮಾಡುತ್ತಿದ್ದು, ವನಹಳ್ಳಿ ಗ್ರಾಮದಲ್ಲಿನ ರೋಡ್ ಶೋ ದಲ್ಲಿ ಭಾಗಿಯಾಗಿ ಮತಭೇಟೆ ಮಾಡಲಿದ್ದಾರೆ.

08 May 2023 10:46 (IST)

Karnataka Election 2023 Live: ಬಿಜೆಪಿ ಅಭ್ಯರ್ಥಿ ಗೆಲುವಿಗೆ ದೀರ್ಘದಂಡ ನಮಸ್ಕಾರ

ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪ್ರಾರ್ಥಿಸಿ ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಗೆಲುವಿಗೆ ಪ್ರಾರ್ಥಿಸಿ ವೀರನಗೌಡ ಅಮರೇಗೌಡ ಪಾಟೀಲ್ ಎಂಬ ಅಭಿಮಾನಿ 6 ಕಿಲೋ ಮೀಟರ್ ದೂರದವರೆಗೆ ದೀರ್ಘದಂಡ ನಮಸ್ಕಾರ ಮಾಡಿದ್ದು, ಕೊರಡಕೇರಾ ಗ್ರಾಮದಿಂದ ಮದಲಗಟ್ಟಿ ಆಂಜನೇಯ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಮಾಡಿದ್ದಾರೆ.