Karnataka Election 2023: ಚುನಾವಣೆಗೆ ಸಂಬಂಧಿಸಿದ ಪ್ರತಿಕ್ಷಣದ ಮಾಹಿತಿ ಇಲ್ಲಿದೆ

Karnataka Assembly Election 2023: ಚುನಾವಣೆ ಘೋಷಣೆಯಾದಾಗಿನಿಂದ ಇಡೀ ರಾಷ್ಟ್ರದ ಚಿತ್ತ ಕರ್ನಾಟಕದತ್ತ ನೆಟ್ಟಿದೆ. ಮುಂದಿನ ಲೋಕಸಭಾ ಚುನಾವಣೆಗೆ ನಾಂದಿ ಹಾಡಲಿದೆ ಎನ್ನಲಾಗುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಎಲ್ಲರನ್ನೂ ಕುತೂಹಲದಿಂದ ರಾಜ್ಯದಂತೆ ನೋಡುವಂತೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಪ್ರತಿದಿನ ನಡೆಯುವ ರಾಜಕೀಯ ಘಟನಾವಳಿಗಳ ಸಂಕ್ಷಿಪ್ತ ವಿವರವನ್ನು ನ್ಯೂಸ್ 18 ಕನ್ನಡ ಓದುಗರಿಗೆ ಇಲ್ಲಿ ಕೊಡಲಾಗಿದೆ

ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ (Karnataka Election 2023) ಮತದಾನಕ್ಕೆ ಕೌಂಟ್‌ಡೌನ್ ಶುರುವಾಗುತ್ತಿದೆ. ಚುನಾವಣೆಗೆ ಬರೀ ನಾಲ್ಕು ದಿನ ಮಾತ್ರ ಬಾಕಿ ಉಳಿದಿದೆ. ಈ ಮಧ್ಯೆ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಅಬ್ಬರದ ಸ್ವರೂಪ ಪಡೆಯುತ್ತಿದೆ. ಕೊನೇ ಕ್ಷಣದಲ್ಲಿ ಮತದಾರರನ್ನು ಹೇಗೆಲ್ಲ ಓಲೈಸಬಹುದು ಅನ್ನೋದರ ಬಗ್ಗೆ ಪ್ಲಾನ್ ಮೇಲೆ ಪ್ಲಾನ್ ಮಾಡ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಪ್ರತಿ ದಿನ ಚುನಾವಣೆಗೆ ಸಂಬಂಧಿಸಿದಂತೆ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತಿವೆ ಅನ್ನೋದರ ಲೈವ್‌ ಅಪ್‌ಡೇಟ್ಸ್‌ ಇಲ್ಲಿದೆ.

ಮತ್ತಷ್ಟು ಓದು ...
05 May 2023 19:38 (IST)

Karnataka Election 2023 Live: ಇಂದು ರಾಜಭವನದಲ್ಲಿ ಮೋದಿ ವಾಸ್ತವ್ಯ

ಬಳ್ಳಾರಿ, ತುಮಕೂರಿನ ಸಮಾವೇಶದ ಬಳಿಕ ಮೋದಿ ಬೆಂಗಳೂರಿಗೆ ಬಂದಿದ್ದಾರೆ. ರಾಜಭವನದಲ್ಲೇ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಹೆಚ್​ಎಎಲ್​ ಏರ್​ಪೋರ್ಟ್​ಗೆ ಬಂದಿಳಿದ ಮೋದಿ ರಾಜಭವನ ಸೇರಿಕೊಂಡಿದ್ದಾರೆ.

05 May 2023 19:33 (IST)

Karnataka Election 2023 Live: ಕಾಂಗ್ರೆಸ್​ ವಿರುದ್ದ ಮೋದಿ ವಾಗ್ದಾಳಿ

ತುಮಕೂರು ಸಮಾವೇಶದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್​ ವಿರುದ್ದ ವಾಗ್ದಾಳಿ ನಡೆಸಿದರು. 85% ಪರ್ಸೆಂಟ್ ಕಮಿಷನ್ ಇಲ್ಲದೆ ಆಗ ಯಾವುದೇ ಕೆಲಸ ಆಗುತ್ತಿರಲಿಲ್ಲ. ಅಂದಿನ ಪ್ರಧಾನಿ ರಾಜೀವ್ ಗಾಂಧಿಯೇ ಭ್ರಷ್ಟಾಚಾರ ಒಪ್ಪಿಕೊಂಡಿದ್ದರು. ದೆಹಲಿಯಿಂದ 1 ರೂಪಾಯಿ ಕಳಿಸಿದರೆ ಹಳ್ಳಿ ಜನರಿಗೆ ಕೇವಲ 15 ಪೈಸೆ ತಲುಪುತ್ತಿತ್ತು, ಇದನ್ನ ರಾಜೀವ್ ಗಾಂಧಿ ಅವರೇ ಒಪ್ಪಿದ್ದರು ಅಂತ ಮೋದಿ ಗುಡುಗಿದ್ದಾರೆ.

05 May 2023 19:31 (IST)

Karnataka Election 2023 Live: ಗುಜರಾತ್​ ಬಳಿಕ 2ನೇ ಅತಿದೊಡ್ಡ ರೋಡ್​ ಶೋ

ನಾಳೆ, ನಾಡಿದ್ದು ರಾಜಧಾನಿಯಲ್ಲಿ ನರೇಂದ್ರ ಮೋದಿ ಭರ್ಜರಿ ರೋಡ್​ ಶೋ ನಡೆಸಲಿದ್ದಾರೆ. ಗುಜರಾತ್​ನ ಬಳಿಕ ಇದು 2ನೇ ಅತಿದೊಡ್ಡ ರೋಡ್ ಶೋ ಆಗಲಿದೆ. 33 ಕಿಲೋ ಮೀಟರ್, 13 ಕ್ಷೇತ್ರಗಳಲ್ಲಿ ಅತಿದೊಡ್ಡ ರೋಡ್​ ಶೋ ನಡೆಸಲಿದ್ದಾರೆ.

05 May 2023 18:09 (IST)

Karnataka Election 2023 Live: ಕಾಂಗ್ರೆಸ್​ ಪರವಾಗಿ ಕೇರಳ, ಮಂಗಳೂರಿನಿಂದ ಬಂದು ಹಣ ಹಂಚಿಕೆ; ಕಾಂಗ್ರೆಸ್​ ವಿರುದ್ಧ ಸುಧಾಕರ್ ಆರೋಪ

ಕೇರಳ ಹಾಗೂ ಮಂಗಳೂರಿನಿಂದ ಆಗಮಿಸಿ ಕಾಂಗ್ರೆಸ್​ ಪರವಾಗಿ ಹಣ ಹಂಚುತ್ತಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆಗೆ ಹಣ ಹಂಚುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಹಣ ಹಂಚುತ್ತಿದ್ದಾರೆ. ಸಮ್ಮಿಸ್ರ ಸರ್ಕಾರ ಪಥನಗೊಳಿಸಿದ್ದಕ್ಕೆ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ರಾಜ್ಯ ಮಟ್ಟದ ಕೆಲವು ಪ್ರಭಾವಿ ವ್ಯಕ್ತಿಗಳು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಕೆಲವು ರಾಜಕೀಯ ಪ್ರಭಾವಿಗಳು ಹಾಗೂ ಹಣವಂತರು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಗಂಭೀರ ಆರೋಪ ಮಾಡಿದ್ದಾರೆ.

05 May 2023 17:30 (IST)

Karnataka Election 2023 Live: ಚನ್ನಪಟ್ಟಣದಲ್ಲಿ ಎಚ್​ಡಿ ಕುಮಾರಸ್ವಾಮಿ ಪರ ಎಚ್​​ಡಿ ದೇವೇಗೌಡ ಪ್ರಚಾರ

ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮತನಾಡಿದ ದೇವೇಗೌಡ ಅವರು, ನಾನು ನಿಖಿಲ್ ಹಾಗೂ ಕುಮಾರಸ್ವಾಮಿ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಈ ವಯಸ್ಸಿನಲ್ಲಿ ನಾನು ಬೆಳಗ್ಗೆ 6 ರಿಂದ 7 ಕಾರ್ಯಕ್ರಮ ಮುಗಿಸಿ ಬಂದಿದ್ದೇನೆ. ನಾನೇನು, ನನ್ನ ವಯಸ್ಸೇನು. ಬಿಜೆಪಿ ಮತ್ತು ಕಾಂಗ್ರೆಸ್ ಗೊತ್ತಿದೆ, ನಾನು ಪ್ರಾದೇಶಿಕ ಪಕ್ಷ ಉಳಿಸಲು ಬಂದಿದ್ದೇನೆ. ಯಾರು ತಪ್ಪು ಮಾಡಿದರು ಅದು ನನಗೆ ಕೇಳಬಾರದು, ನನಗೆ ಸಂಬಂಧವಿಲ್ಲ ಎಂದು ಸುಮಲತಾ ಕುರಿತಂತೆ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

05 May 2023 17:04 (IST)

Karnataka Election 2023 Live: ಚಾಮರಾಜನಗರದ ಹನೂರು ಕ್ಷೇತ್ರದಲ್ಲಿ ಕಿಚ್ಚನ ಹವಾ!

ಹನೂರು ಬಿಜೆಪಿ ಅಭ್ಯರ್ಥಿ ಪ್ರೀತನ್ ನಾಗಪ್ಪ ಪರ ನಟ ಕಿಚ್ಚ ಸುದೀಪ್​ ಭರ್ಜರಿ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರೀತನ್ ನಾಗಪ್ಪ ಗೆಲ್ಲಿಸುವಂತೆ ಕಿಚ್ಚ ಮನವಿ ಮಾಡಿದ್ದು, ಮತ ಕೊಟ್ಟ ಜನರನ್ನು ಮರೆಯಬೇಡಿ ಎಂದು ಪ್ರೀತನ್‌ ನಾಗಪ್ಪಗೆ ಸುದೀಪ್ ಸಲಹೆ ನೀಡಿದರು. ಅಲ್ಲದೆ, ಜನರಿಂದ ನಿಮಗೆ ಒಳ್ಳೇದಾಗಬೇಕು, ನಿಮ್ಮಿಂದ ಜನರಿಗೆ ಒಳ್ಖೇದಾಗಬೇಕು. ನೀವು ಮರೆತರೆ ಮತ ಕೇಳಲು ಬಂದಿರುವ ನಾವು ಚಿಕ್ಕರಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

05 May 2023 16:47 (IST)

Karnataka Election 2023 Live: ಪ್ರಧಾನಿ ಮೋದಿ ರೋಡ್​​ ಶೋಗೆ ಹೈಕೋರ್ಟ್​ ಗ್ರೀನ್ ಸಿಗ್ನಲ್​​

ಬೆಂಗಳೂರಿನಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ನಡೆಯಲಿರುವ ಪ್ರಧಾನಿ ಮೋದಿ ರೋಡ್​ ಶೋ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ. ಪ್ರಧಾನಿಗಳ ರೋಡ್ ಶೋಗೆ ಗ್ರೀನ್ ಸಿಗ್ನಲ್​ ನೀಡಿರುವ ಕೋರ್ಟ್​​, ವಿದ್ಯಾರ್ಥಿಗಳ ಪರೀಕ್ಷೆಗೆ ಯಾವುದೇ ತೊಂದರೆ ಆಗದಂತೆ ಹಾಗೂ ಯಾವುದೇ ಅಹಿತಕರ ಘಟನೆ ನಡೆದಂತೆ ಮುನ್ನೆಚ್ಚರಿಕ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಸೂಚನೆ  ನೀಡಿದೆ.

05 May 2023 15:59 (IST)

Karnataka Election 2023 Live: ಗಡಿಪಾರಾಗಿದ್ದ ರೌಡಿಶೀಟರ್ ಬಿಜೆಪಿ ಪ್ರಚಾರದಲ್ಲಿ ಪ್ರತ್ಯಕ್ಷ

ದಕ್ಷಿಣಕನ್ನಡ ಜಿಲ್ಲೆಯಿಂದ ಗಡಿಪಾರಾಗಿದ್ದ ರೌಡಿಶೀಟರ್ ಬಿಜೆಪಿ ಪ್ರಚಾರದಲ್ಲಿ ಪ್ರತ್ಯಕ್ಷವಾಗಿರುವ ಘಟನೆ ಬೆಳ್ತಂಗಡಿಯ ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ. ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ಪ್ರಚಾರ ರೌಡಿಶೀಟರ್ ಲೋಕೇಶ್ ಯಾನೆ ಲೋಕು ಮನೆ ಮನೆಗೆ ಭೇಟಿ ನೀಡಿ ಮತಯಾಚಿಸುತ್ತಿದ್ದಾನೆ. ಲೋಕೇಶ್ ಪ್ರಚಾರ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸುವುದರೊಳಗೆ ಲೋಕೇಶ್​ ಸ್ಥಳದಿಂದ ಪರಾರಿಯಾಗಿದ್ದನಂತೆ, ನಂತರ ಆತನನ್ನು ಸುರತ್ಕಲ್ ನಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಲೋಕೇಶ್​ನನ್ನು ದ.ಕ. ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿತ್ತು.

05 May 2023 15:54 (IST)

Karnataka Election 2023 Live: ಪೊರಕೆ‌ ಜೊತೆಗೆ ಫ್ಯಾನ್ ಕೂಡ ಪೋಲಿಂಗ್ ಬೂತ್​ನಿಂದ ಗೇಟ್ ಪಾಸ್

05 May 2023 15:53 (IST)

Karnataka Election 2023 Live: ನಾಳೆ ಕಾರ್ಕಳದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರ

ಕರಾವಳಿಯಲ್ಲಿ 13 ಸೀಟುಗಳನ್ನ ಬಿಜೆಪಿ ಗೆಲ್ಲಲಿದೆ. ಬಿಜೆಪಿ ಪರ ಪೂರಕ ವಾತಾವರಣ ಕರಾವಳಿಯಲ್ಲಿದೆ. ಯೋಗಿ ಹಾಗೂ ಮೋದಿ ಇವೆರಡು ನಮಗೆ ಪ್ರೇರಣಾ ಶಕ್ತಿಗಳು. ಈ ಎರಡು ಪ್ರೇರಣಾ ಶಕ್ತಿಗಳಿಂದಲೇ ಚುನಾವಣೆ ವೇಳೆ ನಮಗೆ ಲಾಭ ಆಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ನಾಳೆ ಮಧ್ಯಾಹ್ನ 1:30ಕ್ಕೆ ಯೋಗಿ ಆಗಮಿಸಲಿದ್ದಾರೆ ಎಂದು ಸಚಿವ ಸುನೀಲ್​ ಕುಮಾರ್ ಮಾಹಿತಿ ನೀಡಿದ್ದಾರೆ.

05 May 2023 14:27 (IST)

Karnataka Election 2023 Live: ಬಳ್ಳಾರಿಗೆ ಬಂದಿಳಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಳ್ಳಾರಿಗೆ ಆಗಮಿಸಿದ ಮೋದಿ, ಇದೀಗ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ದೇಶದಲ್ಲಿ ಕರ್ನಾಟಕವನ್ನು ನಂಬರ್ ವನ್ ಮಾಡುವ ಗುರಿ ನಮಗಿದೆ. ಆದರೆ ಕಾಂಗ್ರೆಸ್ ತುಷ್ಠೀಕರಣದ ರಾಜಕೀಯ ಮಾಡುತ್ತಿದೆ ಎಂದು ಹರಿಹಾಯ್ದರು.

05 May 2023 14:10 (IST)

Karnataka Election 2023 Live: ಅರುಣ್ ಕುಮಾರ್ ಪುತ್ತಿಲ ವಿರುದ್ಧ ಬಿಜೆಪಿ ದೂರು

ಪುತ್ತೂರಿನ ಪಕ್ಷೇತರ ಅಭ್ಯರ್ಥಿ, ಸಂಘ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಬಿಜೆಪಿ ಚುನಾವಣಾಧಿಕಾರಿಗೆ ದೂರು ನೀಡಿದೆ. ನಾಳೆ ಪುತ್ತೂರಿಗೆ ಯೋಗಿ ಆದಿತ್ಯನಾಥ್ ಆಗಮಿಸುತ್ತಿರುವುದರಿಂದ ಅವರನ್ನು ಸ್ವಾಗತಿಸಿ ಅರುಣ್ ಕುಮಾರ್ ಪುತ್ತಿಲ ಬ್ಯಾನರ್ ಹಾಕಿದ್ದರು. ಯೋಗಿ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಆದರೆ ಪಕ್ಷೇತರ ಅಭ್ಯರ್ಥಿ ಯೋಗಿ ಪರವಾಗಿ ಬ್ಯಾನರ್ ಹಾಕಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣಾಧಿಕಾರಿಗೆ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ದೂರು ನೀಡಿದ್ದಾರೆ.

05 May 2023 13:49 (IST)

Karnataka Election 2023 Live: ರೋಡ್‌ಶೋನಿಂದ ವಿದ್ಯಾರ್ಥಿಗಳಿಗಾಗುತ್ತಾ ತೊಂದರೆ?

05 May 2023 13:32 (IST)

Karnataka Election 2023 Live: ಶಿರಸಿಯಲ್ಲಿ ಶಿವಣ್ಣ ಅಬ್ಬರದ ಪ್ರಚಾರ

ಶಿರಸಿ ಕಾಂಗ್ರೆಸ್ ಅಭ್ಯರ್ಥಿ ಭಿಮಣ್ಣ ನಾಯ್ಕ್ ಪರ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಭರ್ಜರಿ ಪ್ರಚಾರ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಶಿವರಾಜ್ ಕುಮಾರ್ ದಂಪತಿ, ಅಜ್ಜಿ ಮನೆ ಊರಲ್ಲಿ ರೋಡ್ ಶೋ ಮೂಲಕ ಮತ ಬೇಟೆ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಭಿಮಣ್ಣ ನಾಯ್ಕ್ ಮತ್ತು ಶಿವರಾಜ್ ಕುಮಾರ ಸೋದರ ಸಂಭಂದಿಯಾಗಿದ್ದಾರೆ.

05 May 2023 13:05 (IST)

Karnataka Election 2023 Live: ಪ್ರೀತಂ ಗೌಡ ಪರ ವಿಜಯೇಂದ್ರ ಪ್ರಚಾರ

ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಪರ ಪ್ರಚಾರಕ್ಕೆ ಬಿಜೆಪಿ ಮುಖಂಡ ಬಿ.ವೈ ವಿಜಯೇಂದ್ರ ಆಗಮಿಸಿದ್ದಾರೆ. ಪ್ರೀತಂಗೌಡ ಜೊತೆ ಬೈಕ್ ರ್ಯಾಲಿಯಲ್ಲಿ ಬಿ.ವೈ ವಿಜಯೇಂದ್ರ ಭಾಗಿಯಾಗಿದ್ದು, ಭೂವನಹಳ್ಳಿ ಹೆಲಿಪ್ಯಾಡ್‌ನಿಂದ ಬೈಕ್ ರ್ಯಾಲಿ ಪ್ರಾರಂಭಗೊಂಡಾಗಿನಿಂದ ಸ್ವತಃ ತಾನೇ ಬುಲೆಟ್ ಬೈಕ್ ಓಡಿಸಿಕೊಂಡು ಕಾರ್ಯಕರ್ತರಿಗೆ ಹುರುಪು ತುಂಬಿದರು.

05 May 2023 12:41 (IST)

Karnataka Election 2023 Live: ಪ್ರಚಾರ ವೇಳೆ ಎಡವಿಬಿದ್ದ ವಿ ಸೋಮಣ್ಣ!

ಚಾಮರಾಜನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಸಚಿವ ವಿ ಸೋಮಣ್ಣ ಅವರು ಎಡವಿ ಬಿದ್ದಿರುವ ಘಟನೆ ನಡೆದಿದೆ. ನಟ ಸುದೀಪ್‌ ಅವರು ಸೋಮಣ್ಣ ಪರ ಪ್ರಚಾರಕ್ಕೆ ಬಂದಿದ್ದರು. ಈ ವೇಳೆ ಸುದೀಪ್ ಮತ್ತು ವಿ ಸೋಮಣ್ಣ ಕಾರ್‌ನ ಟಾಪ್‌ ಮೇಲೆ ನಿಂತುಕೊಂಡು ಅಭಿಮಾನಿಗಳತ್ತ ಕೈ ಬೀಸುತ್ತಿದ್ದರು. ಆಗ ಸುದೀಪ್ ಹತ್ತಿರ ಹೋಗಲು ಅಭಿಮಾನಿಯೊಬ್ಬ ಏಕಾಏಕಿ ಕಾರ್‌ ಮೇಲೆ ಬಂದಿದ್ದು, ಆಗ ಎಡವಿ ಕೆಳಗೆ ಬೀಳುವ ವೇಳೆ ಸೋಮಣ್ಣರನ್ನು ಹಿಡಿದುಕೊಂಡಿದ್ದಾನೆ. ಇದರಿಂದ ಸೋಮಣ್ಣ ಕೂಡ ಆಯತಪ್ಪಿ ಕೆಳಗೆ ಬಿದ್ದರು. ಆದರೂ ನೆಲಕ್ಕೆ ಬೀಳದಂತೆ ನಟ ಸುದೀಪ್ ಮತ್ತು ಅಲ್ಲಿದ್ದ ಸಿಬ್ಬಂದಿ ಸೋಮಣ್ಣರನ್ನು ಹಿಡಿದುಕೊಂಡರು.

05 May 2023 12:20 (IST)

Karnataka Election 2023 Live: ಮಾಜಿ ಸಿಎಂ ಸಿದ್ದರಾಮಯ್ಯಗೆ ಸಾಥ್​ ಕೊಟ್ಟ ಸಿನಿತಾರೆಯರು.

05 May 2023 12:00 (IST)

Karnataka Election 2023 Live: ಕುಮಾರ್ ಬಂಗಾರಪ್ಪ ಪುತ್ರಿ ಲಾವಣ್ಯರಿಂದ ಮತ ಬೇಟೆ

05 May 2023 11:38 (IST)

Karnataka Election 2023 Live: ಪ್ರಧಾನಿ ಮೋದಿಗೆ ಬನಶಂಕರಿ ದೇವಿ ಉಡುಗೊರೆ

ಮೇ 6 ರಂದು ಪ್ರಧಾನಿ ನರೇಂದ್ರ ‌ಮೋದಿ ಬೃಹತ್ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿರುವುದರಿಂದ ಬಾದಾಮಿ ಹೊರವಲಯದ ಬನಶಂಕರಿ ಲೆಔಟ್‌ನಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಈ ವೇಳೆ ನರೇಂದ್ರ ಮೋದಿಗೆ ಬನಶಂಕರಿ ದೇವಿ ಬೆಳ್ಳಿ ಮೂರ್ತಿ ಉಡುಗೊರೆ ನೀಡಲು ಬನಶಂಕರಿ ದೇವಸ್ಥಾನದ ಮಂಡಳಿ ನಿರ್ಧರಿಸಿದೆ. ದೇವಸ್ಥಾನದ ವತಿಯಿಂದ ಸಿಂಹವಾಹಿನಿಯಾಗಿರುವ ಬನಶಂಕರಿ ದೇವಿಯ ಬೆಳ್ಳಿ ಮೂರ್ತಿ ಉಡುಗೊರೆಯನ್ನು ನರೇಂದ್ರ ಮೋದಿಗೆ ಬಿಜೆಪಿ ಮುಖಂಡರು ನೀಡಲಿದ್ದಾರೆ. ಈ ಮೂರ್ತಿ 1900 ಗ್ರಾಂ ತೂಕ ಇದ್ದು, ಎಂಟೂವರೆ ಇಂಚು ಎತ್ತರ ಇದೆ. ಐದು ಇಂಚು ಅಗಲದ ಇದೆ ಎಂದು ಹೇಳಲಾಗಿದೆ.

05 May 2023 11:20 (IST)

Karnataka Election 2023 Live: ಪ್ರಧಾನಿ ಮೋದಿ ರೋಡ್‌ಶೋನಿಂದ ಬೀದಿನಾಯಿಗಳಿಗೆ ಬಂಧನದ ಭೀತಿ!