Karnataka Election 2023: ಚುನಾವಣೆ ಘೋಷಣೆಯಾದಾಗಿನಿಂದ ಇಡೀ ರಾಷ್ಟ್ರದ ಚಿತ್ತ ಕರ್ನಾಟಕದತ್ತ ನೆಟ್ಟಿದೆ. ಮುಂದಿನ ಲೋಕಸಭಾ ಚುನಾವಣೆಗೆ ನಾಂದಿ ಹಾಡಲಿದೆ ಎನ್ನಲಾಗುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಎಲ್ಲರನ್ನೂ ಕುತೂಹಲದಿಂದ ರಾಜ್ಯದಂತೆ ನೋಡುವಂತೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಪ್ರತಿದಿನ ನಡೆಯುವ ರಾಜಕೀಯ ಘಟನಾವಳಿಗಳ ಸಂಕ್ಷಿಪ್ತ ವಿವರವನ್ನು ನ್ಯೂಸ್ 18 ಕನ್ನಡ ಓದುಗರಿಗೆ ಇಲ್ಲಿ ಕೊಡಲಾಗಿದೆ
ಮೋದಿಯವರನ್ನು ಜನರು, ಅವರ ಪಕ್ಷದದವರು ಸರ್ವಶಕ್ತಿವಂತ, ಸರ್ವಾಂತರ್ಯಾಮಿ, ಸರ್ವಶ್ರೇಷ್ಠ, ಅಭಿವೃದ್ಧಿ ಹರಿಕಾರ ಎನ್ನುತ್ತಿದ್ದಾರೆ. ಆದರೆ ಈ ವಿಕಾಸ ಪುರುಷ ಕರ್ನಾಟಕಕ್ಕೆ ಬಂದು ಕರ್ನಾಟಕದಲ್ಲಿ ಅಭಿವೃದ್ಧಿ ಮಾಡುತ್ತೇನೆ ಅಂತಾರೆ. ದೇಶದಲ್ಲಿ ನಂಬರ್ 1 ಮಾಡ್ತೀನಿ ಅಂತಾರೆ. ಆದರೆ ಇಷ್ಟು ದಿನ ಯಾಕೆ ಮಾಡಿಲ್ಲ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳವು ಬ್ಯಾನ್ ವಿಚಾರವನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಪ್ರಣಾಳಿಕೆ ತಯಾರು ಮಾಡಿದ ಸಮಿತಿ ಜನರಿಗೆ ಹೇಳಿ ಅದರ ಬಗ್ಗೆ ಕ್ಲಾರಿಫೈ ಮಾಡಿದ್ದಾರೆ. ಬೇರೆಯವರು ರಾತ್ರಿ ನಾನ್ ವೇಜ್ ತಿಂದು ಹಗಲು ಹೊತ್ತಲ್ಲಿ ನಾನ್ ವೆಜ್ ತಿನ್ನುವವರಿಗೆ ಬೈಯುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಪ್ರಣಾಳಿಕೆ ಹೇಗೆ ಅನುಷ್ಠಾನ ಮಾಡುತ್ತೇವೆ ಅಂತಾ ತೋರಿಸುತ್ತೇವೆ ಎಂದಿದ್ದಾರೆ.
ಇದು ನನ್ನ ಕೊನೆ ಚುನಾವಣೆ ಎಂದು ಹುಬ್ಬಳ್ಳಿಯಲ್ಲಿ ಕರಪತ್ರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಘೋಷಿಸಿದ್ದಾರೆ. ಇದು ನನ್ನ ಕಟ್ಟ ಕಡೆಯ ಚುನಾವಣೆ, ಏಳನೇ ಬಾರಿ ಚುನಾವಣೆ ಎದುರಿಸುತ್ತಿರೋ ನಾನು ಗೆಲ್ಲೋ ವಿಶ್ವಾಸ ಇದೆ. ಕುಲಗೆಟ್ಟು ಹೋಗಿರುವ ವ್ಯವಸ್ಥೆಯಲ್ಲಿ ಪರಿವರ್ತನೆ ತರಬೇಕು ಅನ್ನೋ ಉದ್ದೇಶವಿದೆ ಅಂತ ಸುದೀರ್ಘ ಕರ ಪತ್ರದ ಮೂಲಕ ಮತ ಹಾಕುವಂತೆ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಎಂದು ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ 80 ವರ್ಷ ವಯಸ್ಸಾಗಿದೆ. ದೇವರು ಯಾವಾಗ ಬೇಕಾದರೂ ಮೇಲೆ ಕರೆದುಕೊಳ್ಳಬಹುದು ಎಂದು ರಾಜಸ್ಥಾನ ಬಿಜೆಪಿ ಶಾಸಕರದ್ದು ಎನ್ನಲಾದ ವಿಡಿಯೋವನ್ನ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ವೇಳೆ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಮೇ 5ರಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ವರುಣಾದಲ್ಲಿ ಪ್ರಚಾರ ನಡೆಸಲಿದ್ದಾರೆ. ಸಿಎಂ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಇನ್ನು ಮಾಜಿ ಸಿಎಂ, ತಮ್ಮ ಪರವಾಗಿ ನಾಳೆ ಹಾಗೂ ನಾಡಿದ್ದು ಎರಡು ದಿನ ಮತಬೇಟೆ ನಡೆಸಲಿದ್ದಾರೆ. ಉಳಿದಂತೆ ನಾಳೆ ಇಡೀ ದಿನ ತವರು ಕ್ಷೇತ್ರ ಶಿಗ್ಗಾಂಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಸ್ಟಾರ್ ನಟನರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಮಾಜಿ ಸಂಸದೆ ರಮ್ಯಾ, ನಟ ದುನಿಯಾ ವಿಜಯ್ ಪ್ರಚಾರ ಮಾಡಲಿದ್ದಾರೆ. ನಾಳೆ ಒಂದೇ ದಿನ ಮೂರು ಬಿಗ್ ಸ್ಟಾರ್ ಗಳು ಸಿದ್ದರಾಮಯ್ಯ ಪರ ಮತ ಬೇಟೆ ಮಾಡಲಿದ್ದಾರೆ. ಶಿವಣ್ಣ, ರಮ್ಯಾ, ದುನಿಯಾ ವಿಜಯ್ ರೋರ್ ಶೋದಲ್ಲಿ ಭಾಗಿಯಾಗಲಿದ್ದಾರೆ.
ಬಜರಂಗದಳ ನಿಷೇಧ ಮಾಡುತ್ತೇವೆ ಎಂದು ಹೇಳಿಲ್ಲ. ಸಮಾಜದ ಶಾಂತಿ ಸುವ್ಯವಸ್ಥೆ ಹದಗಡಿಸುವಂತಹ ಸಂಘಟನೆಗಳನ್ನ ಬ್ಯಾನ್ ಮಾಡುತ್ತೇವೆ ಎಂದು ಹೇಳಿದ್ದೇವೆ. ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸ ಇಲ್ಲ, ಹೀಗಾಗಿ ಈ ರೀತಿ ಚೆರ್ಚೆ ಮಾಡುತ್ತಿದ್ದಾರೆ. ನೀರಾವರಿ ಇಲಾಖೆ ಸೇರಿದಂತೆ ಬೇರೆ ಏನಾದರೂ ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದು ಹೇಳಲು ಅವರಿಂದ ಸಾಧ್ಯವಿಲ್ಲ. ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನ ನೇರವಾಗಿ ನೋಡಿದ ಅಜ್ಜಿಯೊಬ್ಬರು ಸಂತೋಷದಿಂದ ಕಣ್ಣೀರಿಟ್ಟ ಘಟನೆ ಅಂಕೋಲದ ಮೂಲ್ಕಿ ಹೆಲಿಪ್ಯಾಡ್ನಲ್ಲಿ ನಡೆಯಿತು. ಪಕ್ಷದ ಕಾರ್ಯಕ್ರಮ ಮುಗಿದ ಬಳಿಕ ಹೆಲಿಕಾಪ್ಟರ್ ಹೊರಡುವ ಮುನ್ನ ಮಹಿಳೆಯರು ಮೋದಿ ಅವರಿಗೆ ಶುಭ ಕೋರಿದ್ದರು. ಹೆಲಿಕ್ಯಾಪಟರ್ನಲ್ಲಿ ಮೋದಿ ಹರಾಡುತ್ತಿದ್ದಂತೆ ಜನರು ಕೈಬೀಸಿ ಅವರು ಹೇಳಿದ್ದಾರೆ.
ಉತ್ತರ ಕನ್ನಡದಲ್ಲಿ ಚುನಾವಣಾ ಪ್ರಚಾರ ಭಾಷಣ ಮುಗಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಬೈಲಹೊಂಗಲದಲ್ಲಿ ನಡೆಯಲಿರುವ ಬಿಜೆಪಿ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆಲವೇ ಹೊತ್ತಿನಲ್ಲಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದು, ಇನ್ನು ಈ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರಿಗೆ ಗೌರವ ಸಲ್ಲಿಕೆಯೂ ನಡೆಯಲಿದೆ. ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಡಿ ಬಿ ಇನಾಮದಾರ್ ಅವರಿಗೆ ಗೌರವ ಸಲ್ಲಿಸಲು ಒಂದು ನಿಮಿಷ ಮೌನಾಚರಣೆ ಮಾಡಲಿದ್ದಾರೆ.
ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಭಾಷಣ ಮುಗಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರಿಗೆ ಯಕ್ಷಗಾನದ ಕಿರೀಟ ತೊಡಿಸಿ, ಇಡಗುಂಜಿ ಗಣಪನ ವಿಗ್ರಹ ಕೊಟ್ಟು ಗೌರವಿಸಲಾಯಿತು.
https://t.co/bHXeJSF708
ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಗೆ ಅಗ್ನಿಪರೀಕ್ಷೆ#Puttur #BJP #KarnatakaElection2023 #AssemblyElection2023 #KarnatakaElections2023 #KannadaNews #KarnatakaAssemblyElection2023— News18 Kannada (@News18Kannada) May 3, 2023
ಪ್ರಧಾನಿ ನರೇಂದ್ರ ಮೋದಿ ಭೇಟಿ ಬೆನ್ನಲ್ಲೇ ಕಲಬುರಗಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಕಲಬುರಗಿ ನಗರದಲ್ಲಿನ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದ ವರೆಗೆ ರೋಡ್ ಶೋ ನಡೆಯಲಿದ್ದು, ಸಂಜೆ 5 ಗಂಟೆಗೆ ಆರಂಭಗೊಂಡು ಕಿರಣಾ ಬಜಾರ್, ಬಾಂಡೆ ಬಜಾರ್, ಸುಪರ್ ಮಾರ್ಕೆಟ್ ಮೂಲಕ ಆಗಮಿಸಿ ಜಗತ್ ವೃತ್ತದಲ್ಲಿ ಕೊನೆಗೊಳ್ಳಲಿದೆ. ಬಳಿಕ ಅಲ್ಲೇ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಿಯಾಂಕಾ ಮಾತನಾಡಲಿದ್ದಾರೆ.
ಕಲಬುರ್ಗಿಯ ಚಿತ್ತಾಪುರ ಕ್ಷೇತ್ರದಲ್ಲಿ ನರೇಂದ್ರ ಮೋದಿ ಮಾಡಬೇಕಿದ್ದ ಅಭ್ಯರ್ಥಿ ಪರ ಪ್ರಚಾರ ಕಾರ್ಯ ರದ್ದುಗೊಂಡಿದೆ. ರೌಡಿಶೀಟರ್ ಅಭ್ಯರ್ಥಿ ಎಂದೇ ಗುರುತಿಸಲ್ಪಡುತ್ತಿರುವ ಮಣಿಕಂಠ ರಾಥೋಡ್ ಪರ ಮೇ 6ರಂದು ಮೋದಿ ಪ್ರಚಾರಕ್ಕೆ ಬರಬೇಕಿತ್ತು. ಆದರೆ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಮೇಲೆ 40 ಕ್ರಿಮಿನಲ್ ಕೇಸ್‌ಗಳು ಇರೋ ಕಾರಣ, ಮುಜುಗರ ತಪ್ಪಿಸಲು ಕೊನೇಕ್ಷಣದಲ್ಲಿ ಪ್ರಚಾರ ಕಾರ್ಯ ರದ್ದು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮಂಡ್ಯದಲ್ಲಿ ಫೈಟರ್ ರವಿ ಸ್ವಾಗತ ಪ್ರಕರಣ, ಚನ್ನಪಟ್ಟಣದಲ್ಲಿ ರೌಡಿ ಶೀಟರ್ ಮುದ್ದುಕೃಷ್ಣ ಮೋದಿ ಜೊತೆ ವೇದಿಕೆ ಹಂಚಿಕೆ ಬಳಿಕ ಬಿಜೆಪಿ ಎಚ್ಚೆತ್ತುಕೊಂಡಿದೆ.
https://t.co/cZCohi76FA
ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದು ಹೀಗೆ#PMModiCampaign #PMModi #Mangaluru #Elections2023— News18 Kannada (@News18Kannada) May 3, 2023
ಮಂಗಳೂರು ಸಮಾವೇಶದಲ್ಲಿ ತುಳು ಭಾಷೆಯಲ್ಲಿ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಬಳಿಕ ಬಿಜೆಪಿಯ ಸಂಕಲ್ಪ ಕರ್ನಾಟಕವನ್ನು ನಂಬರ್ ವನ್ ಮಾಡೋದು ಎಂದರು. ಮುಂದಿನ ಬುಧವಾರವೇ ಮತದಾನ. ಮತದಾನಕ್ಕೆ ತುಂಬಾ ದಿನವಿಲ್ಲ ಎಂದ ಮೋದಿ, ಬಿಜೆಪಿಯ ಸಂಕಲ್ಪ ಅತ್ಯಾಧುನಿಕ ತಂತ್ರಜ್ಞಾನವನ್ನು ಕರ್ನಾಟಕದಲ್ಲಿ ಅಳವಡಿಸೋದು. ಉತ್ಪಾದನಾ ಕ್ಷೇತ್ರದಲ್ಲಿ ಕರ್ನಾಟಕವನ್ನು ಸೂಪರ್ ಪವರ್‌ಗೊಳಿಸೋದು ಬಿಜೆಪಿ ಸಂಕಲ್ಪ. ದಕ್ಷಿಣ ಕನ್ನಡ ಮತ್ತು ಉಡುಪಿ ಶೈಕ್ಷಣಿಕವಾಗಿ ಟಾಪರ್ ಆಗಿದೆ. ಕರ್ನಾಟಕವನ್ನು ಉದ್ಯೋಗ ಸೃಷ್ಠಿಯಲ್ಲಿ ನಂಬರ್ ವನ್ ಮಾಡೋದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುಳು ಭಾಷೆಯಲ್ಲಿ ಭಾಷಣ ಆರಂಭಿಸಿದ್ದಾರೆ. ಬಿಜೆಪಿ ನಾಯಕರಿಂದ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಭಾಷಣ ಶುರು ಮಾಡಿದ ನರೇಂದ್ರ ಮೋದಿ ‘ಪರಶುರಾಮ ನೆಲದ ತುಳು ತಾಯಿಯ ಮಕ್ಕಳಿಗೆ ನನ್ನ ನಮಸ್ಖಾರಗಳು’ ಎಂದು ತುಳು ಭಾಷೆಯಲ್ಲಿ ಹೇಳುತ್ತಿದ್ದಂತೆ ನೆರೆದಿದ್ದ ಸಾವಿರಾರು ಮಂದಿ ಕರತಾಡನದ ಮೂಲಕ ಹರ್ಷ ವ್ಯಕ್ತಪಡಿಸಿದರು.
ಮಂಗಳೂರಿನ ಮೂಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಲ್ನಾಡ್‌ನಲ್ಲಿ ಇಂದು ಬಿಜೆಪಿ ಚುನಾವಣಾ ಪ್ರಚಾರ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸ್ಥಳಕ್ಕೆ ಆಗಮಿಸಿದ್ದಾರೆ. ನರೇಂದ್ರ ಮೋದಿ ಕೆಲವೇ ಕ್ಷಣದಲ್ಲಿ ಬೃಹತ್ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
https://t.co/DLG7hnnEPj
ಕಾಂಗ್ರೆಸ್ ನಾಯಕರ ನವರಂಗಿ ಆಟ ಜನರಿಗೆ ಗೊತ್ತಿದೆ ಎಂದ ಪ್ರತಾಪ್ ಸಿಂಹ#PratapSimha #Congress #BJP #CongressManifesto #KarnatakaElection2023 #AssemblyElection2023 #KarnatakaElections2023 #KannadaNews #KarnatakaAssemblyElection2023— News18 Kannada (@News18Kannada) May 3, 2023
ಕಾಂಗ್ರೆಸ್ ಪಕ್ಷ ಬೌದ್ಧಿಕವಾಗಿ, ನೈತಿಕವಾಗಿ ದಿವಾಳಿಯಾಗಿದೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿಕೆ ವ್ಯಂಗ್ಯವಾಡಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು, ದೇಶದ ಪ್ರಧಾನಿ ವಿಷ ಸರ್ಪ ಅಂತಾ ಹೇಳಿಕೆ ಕೊಡ್ತಾರೆ. ಕಾಂಗ್ರೆಸ್ ನಾಯಕರ ತಲೆಯಲ್ಲಿ ಹುಳು ಹೋಗಿದೆ, ಹಾಗಾಗಿ ಅಹಂಕಾರದಿಂದ ಮಾತನಾಡ್ತಿದ್ದಾರೆ. ಕಾಂಗ್ರೆಸ್ ಲಾಟರಿಯಲ್ಲೇ ಸರ್ಕಾರ ರಚನೆ ಮಾಡಿದ್ದಾರೆ. ಪೂರ್ಣ ಬಹುಮತದಲ್ಲಿ ಅವರು ಸರ್ಕಾರ ರಚನೆ ಮಾಡಿಲ್ಲ. ಈ ಬಾರಿ ಲಾಟರಿ ಸಕ್ಸಸ್ ಆಗಲ್ಲ. ಬಹುಮತವೂ ಬರಲ್ಲ ಎಂದು ಹೇಳಿದರು.