Karnataka Assembly Election 2023: ಕರ್ನಾಟಕ ವಿಧಾನಸಭಾ ಚುನಾವಣೆಯ ರಣಕಣದಲ್ಲಿ ರಾಜ್ಯದ ಮೂಲೆ ಮೂಲೆಯಲ್ಲಿ ಇಂದು ಏನೇನು ಬೆಳವಣಿಗೆಗಳು ಆಗಿವೆ ಅನ್ನೋದರ ಕುರಿತಾದ ಸಂಕ್ಷಿಪ್ತವಾದ ಮಾಹಿತಿ ಇಲ್ಲಿದೆ.
ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರ ಪರ ಹಣ ಹಂಚಿಕೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಜಮೀರ್ ಆಪ್ತ ಶಿವಕುಮಾರ್ ಎಂಬಾತ ಮತದಾರರಿಗೆ 500 ರೂಪಾಯಿ ಹಣ ಹಂಚುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರ ಪರ ಹಣ ಹಂಚಿಕೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಜಮೀರ್ ಆಪ್ತ ಶಿವಕುಮಾರ್ ಎಂಬಾತ ಮತದಾರರಿಗೆ 500 ರೂಪಾಯಿ ಹಣ ಹಂಚುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಿದ್ದಾರೆ. ಕಲಬುರಗಿ ಕೆಎಂಎಫ್‌ನಿಂದ ಪ್ರಧಾನಿ ಮೋದಿ ರೋಡ್ ಶೋ ನಡೆಸಿದರು. ಈ ವೇಳೆ ಮೋದಿಯನ್ನು ನೋಡಲು ಬಂದ ಜನರು ಮೋದಿ ಪರ ಜೈಕಾರ ಕೂಗಿದರು.
ಬಜರಂಗದಳ ಬ್ಯಾನ್ ಮಾಡೋದು ಆಮೇಲೆ, ಅಷ್ಟಕ್ಕೂ ಕಾಂಗ್ರೆಸ್ ಅಧಿಕಾರಕ್ಕೇ ಬರೋದಿಲ್ಲ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಗದಗದ ಶಿರಹಟ್ಟಿ ಪಟ್ಟಣದಲ್ಲಿ ಮಾತನಾಡಿದ ಅವರು, ಸಾಮಾಜಿಕವಾಗಿ, ಧಾರ್ಮಿಕವಾಗಿ ಕೆಲಸ ಮಾಡೋ ಸಂಘ ಅದು. ಆದರೆ ಪಿಎಫ್ಐ ಈ ದೇಶದ ವಿರೋಧಿ ಕೆಲಸ ಮಾಡಿದೆ, ಭಯೋತ್ಪಾದನೆ ಮಾಡಿದೆ. ಅದಕ್ಕೆ ಬಜರಂಗದಳವನ್ನು ಹೊಲಿಸೋದು ಸರಿಯಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗ ದಳ ಬ್ಯಾನ್ ವಿಚಾರಕ್ಕೆ ಡಿ.ಕೆ. ಶಿವಕುಮಾರ್ ಸಮರ್ಥನೆ ನೀಡಿದ್ದಾರೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಳುಮಾಡುವ. ನೆಮ್ಮದಿ ಕದಡುವ ಸಂಘಟನೆಗಳನ್ನ ಬ್ಯಾನ್ ಮಾಡುವ ಕುರಿತು ಹೇಳಿದ್ದೇವೆ ಅಂತ ಡಿಕೆಶಿ ಹೇಳಿದ್ದಾರೆ.
ಕೋಲಾರದ ಮುಳಬಾಗಿಲು ತಾಲೂಕಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಲಿಕಾಪ್ಟರ್ ಘಟನೆ ಬಗ್ಗೆ ಮಾತನಾಡಿದರು. ದೇವರ ದಯೆ, ನಿಮ್ಮೆಲ್ಲರ ಪ್ರೀತಿ ಇಂದು ನಾನು ಬದುಕಿ ಬಂದಿದ್ದೇನೆ. ಹೆಲಿಕಾಪ್ಟರ್‌ನಲ್ಲಿ ಬರುತ್ತಿದ್ದಾಗ ಹದ್ದು ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆಯಿತು. ಅದೃಷ್ಟ ವಶಾತ್ ಯಾರಿಗೆ ಏನೂ ಆಗಿಲ್ಲ, ಫೈಲೆಟ್ ಸಮಯ ಪ್ರಜ್ಞೆಯಿಂದ ಭೂಸ್ಪರ್ಶ ವಾಯಿತು. ಭಗವಂತನ ಆಶೀರ್ವಾದ ನಮ್ಮ ಮೇಲಿದೆ, ಜನರ ಕೋರಿಕೆಯಿದೆ ಅಂತ ಹೇಳಿದ್ರು.
ರಾಯಚೂರಿನ ಸಿಂಧನೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಲಾಯ್ತು. ಪ್ರಚಾರದ ವೇದಿಕೆಯ ಮೇಲೆ ಕಂಬಳಿ ಹೊದೆಸಿ, ಕನಕದಾಸ ಪ್ರತಿಮೆ ನೀಡಿ ಗೌರವಿಸಲಾಯ್ತು. ಸಿಂಧನೂರು ಬಿಜೆಪಿ ಅಭ್ಯರ್ಥಿ ಕೆ. ಕರಿಯಪ್ಪ ಮೋದಿಗೆ ಗೌರವ ಅರ್ಪಿಸಿದರು.
ಚಾಮರಾಜನಗರ ಸಂತೆಮಾರಹಳ್ಳಿಯಲ್ಲಿ ಅಮಿತ್ ಶಾ ಭಾಷಣ ಮಾಡಿದ್ರು. 2024ರಲ್ಲಿ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡ್ತೀರೋ ಇಲ್ವೋ ಎಂದು ಜೋರಾಗಿ ಘೋಷಣೆ ಕೂಗಿ ಹೇಳಿ ಅಂತ ಕರೆಕೊಟ್ಟರು. ಕಾಂಗ್ರೆಸ್ ಯಾವಾಗಲೂ ಅಂಬೇಡ್ಕರ್‌ಗೆ ಅಪಮಾನ ಮಾಡುವ ಕೆಲಸ ಮಾಡಿದೆ. ಬಿಜೆಪಿ ಅಂಬೇಡ್ಕರ್‌ಗೆ ಭಾರತ ರತ್ನ ಕೊಟ್ಟು ಗೌರವಿಸಿದೆ ಅಂತ ಹೇಳಿದ್ರು.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ವ್ಯಂಗ್ಯವಾಡಿದ್ದಾರೆ. ಸುಳ್ಳನ್ನು ಹೇಳೋದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಡಕೋಟಾ ಬಸ್ ಆಗಿದೆ. ಈಗ ಅದಕ್ಕೆೇ ಹತ್ತಿ ಹತ್ತಿ ಅಂತಾ ಕಾಂಗ್ರೆಸ್ ನಾಯಕರು ಹೇಳ್ತಾರೆ. ದೇವೇಗೌಡರನ್ನ ಪ್ರಧಾನಿ ಹುದ್ದೆಯಿಂದ ಅರ್ಧ ರಾತ್ರಿಯಲ್ಲಿ ಮನೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ನಿರ್ನಾಮ ಆಗಬೇಕು ಎಂದ್ರೆ ದೇವೆಗೌಡರ ಕಣ್ಣೀರು ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಧಮ್ಕಿ ಹಾಕಿದ್ದಾರೆ. ನಿನ್ನೆ ಬೆಂಗಳೂರಿನ ಯಲಹಂಕದಲ್ಲಿ ಕೇಶವ ಬಿ. ರಾಜಣ್ಣ ಪರ ಪ್ರಚಾರ ಮಾಡುವ ವೇಳೆ ನಿಮಗೆ ಖಾಕಿ ಧರಿಸಲು ಆಗದಿದ್ರೆ ರಾಜೀನಾಮೆ ಕೊಟ್ಬಿಡಿ. ತಾಕತ್ ಇದ್ರೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಕೆಲ್ಸ ಮಾಡಿ ಅಂತ ಪೊಲೀಸರಿಗೆ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ವಿಚಾರಕ್ಕೆ ಇಂಧನ ಸಚಿವ ಸುನಿಲ್ ಕುಮಾರ್ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಪ್ರಣಾಳಿಕೆ ರಾಜ್ಯಾದ್ಯಂತ ತೀವ್ರ ವಿವಾದ ಸೃಷ್ಟಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಹಾಗೂ ಎಸ್ಡಿಪಿಐ ಒಂದೇ ನಾಣ್ಯದ ಎರಡು ಮುಖ. ಭಜರಂಗದಳ ನಿಷೇಧಿಸುವುದು ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳುವ ವಿಚಾರ ಕಾಂಗ್ರೆಸ್ ಪ್ರಸ್ತಾಪಿಸಿದೆ. ಡಿಕೆ ಶಿವಕುಮಾರ್ ಸಿದ್ದರಾಮಯ್ಯನವರೇ ನಾವು ಪಿಎಫ್ಐ ನಿಷೇಧ ಮಾಡಿದ್ದೇವೆ. ಅದೇ ಸಂಕಟ ಹಾಗೂ ದ್ವೇಷವನ್ನು ಭಜರಂಗದಳ ನಿಷೇಧದ ಮೂಲಕ ತೀರಿಸಿಕೊಳ್ಳಲು ಹೊರಟಿದ್ದೀರಾ ಎಂದು ಸುನಿಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ರಾಮನಗರದಲ್ಲಿ ಮಂಡ್ಯ ಸಂಸದೆ ಸುಮಲತಾ ಅವರು ರಾಮನಗರ ಬಿಜೆಪಿ ಅಭ್ಯರ್ಥಿ ಗೌತಮ್ ಗೌಡ ಪರ ಮತಯಾಚಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮೋದಿ ಆಗಮನದಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಪಾಸಿಟಿವ್ ವಾತಾವರಣ ಇದೆ. ಜನ ಮೋದಿ ನಾಯಕತ್ವ ಮೆಚ್ಚಿದ್ದಾರೆ, ಇಲ್ಲಿ ಬದಲಾವಣೆಯ ಅಲೆ ಇದೆ. ಇಲ್ಲಿ ಬೇರೆ ಬೇರೆ ಪಕ್ಷಗಳಿಗೆ ಅಧಿಕಾರ ಕೊಟ್ಟು ನೋಡಿದ್ದಾರೆ. ಇಲ್ಲಿನ ಸ್ವಾರ್ಥ ರಾಜಕಾರಣ, ಕುಟುಂಬ ರಾಜಕಾರಣದಿಂದ ಜನ ಬೇಸತ್ತಿದ್ದಾರೆ. ಅದನ್ನ ಚೇಂಜ್ ಮಾಡಲು ಮನಸ್ಸು ಮಾಡಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಭದ್ರಕೋಟೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಬ್ಬರದ ಪ್ರಚಾರ ಮಾಡಿಸದ್ದಾರೆ. ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಪರ ಪ್ರಚಾರ ಮಾಡಿದ ಅಮಿತ್ ಶಾ, ಸೋಮಣ್ಣ ಜೊತೆ ನಾವಿದ್ದೇವೆ, ಪ್ರಚಂಡ ಮತದಿಂದ ಗೆಲ್ಲಿಸುತ್ತೇವೆ ಎಂದು ಎರಡು ಕೈ ಮುಷ್ಟಿ ಹಿಡಿದು ಘೋಷಣೆ ಕೂಗುವಂತೆ ಕಾರ್ಯಕರ್ತರಿಗೆ ಅಮಿತ್ ಶಾ ಕರೆ ಕೊಟ್ಟರು. ಮುಂದುವರಿದು ಮಾತನಾಡಿದ ಅಮಿತ್ ಶಾ, ಇಡೀ ರಾಜ್ಯದ ಚುನಾವಣೆ ಅತ್ಯಂತ ಪ್ರಮುಖ ಚುನಾವಣೆ ಆಗಿದೆ. ಅದರಲ್ಲೂ ವರುಣ ಕ್ಷೇತ್ರದ ಚುನಾವಣೆ ನಮಗೆ ಅತ್ಯಂತ ಪ್ರಮುಖವಾಗಿದೆ. ಹೀಗಾಗಿ ನಮ್ಮ ಅಭ್ಯರ್ಥಿ ಸೋಮಣ್ಣರನ್ನು ಗೆಲ್ಲಿಸಿಕೊಡಿ. ಅವರನ್ನು ದೊಡ್ಡ ವ್ಯಕ್ತಿಯಾಗಿ ನಾವು ಮಾಡ್ತೀವಿ ಎಂದು ಭರವಸೆ ನೀಡಿದರು.
ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಅಮಿತ್ ಶಾ ಸಮ್ಮುಖದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಸೋಮಣ್ಣ, ರಾತ್ರಿಯ ಪರಿಸ್ಥಿತಿ ನೋಡಿದ್ರೆ ಈ ಕಾರ್ಯಕ್ರಮ ಮಾಡ್ತೀವಿ ಅಂದುಕೊಂಡಿರಲಿಲ್ಲ. ನಾನು ಎರಡು ಪ್ರಶ್ನೆಗಳನ್ನು ಸಿದ್ದರಾಮಯ್ಯನವ್ರಿಗೆ ಕೇಳ್ತೇನೆ. ನಾನು ಇಲ್ಲಿ ಸ್ಪರ್ಧೆ ಮಾಡಲು ಕಾರಣ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರು. ಇದಕ್ಕೆ ಒತ್ತು ಕೊಟ್ಟವರು ಬಿಎಸ್ ಯಡಿಯೂರಪ್ಪನವ್ರು. ಗೋವಿಂದರಾಜನಗರ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಿದ್ದೀಯಾ. ಅದೇ ರೀತಿ ಹಾಗೇ ವರುಣಾವನ್ನು ಮಾದರಿ ಕ್ಷೇತ್ರ ಮಾಡುವಂತೆ ಅಮಿತ್ ಶಾ ಆದೇಶ ಮಾಡಿದ್ರು ಎಂದು ಹೇಳಿದರು.
ತೀರ್ಥಹಳ್ಳಿಯಲ್ಲಿ ನಡೆದ ಕಾಂಗ್ರೆಸ್‌ನ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಈ ವೇಳೆ ಜನರನ್ನು ಕಂಡು ಹರ್ಷ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಸಭೆ ಆಯೋಜನೆ ಮಾಡಿದ್ದನ್ನು ಕಂಡ್ರೆ ಖುಷಿಯಾಗುತ್ತೆ. ಕಾಂಗ್ರೆಸ್ ಕಾರ್ಯಕರ್ತರು ಜಗಳ ಮಾಡದೆ ಸಂತಸದ ವಾತಾವರಣ ಸೃಷ್ಟಿಸುತ್ತಾರೆ. ಭಾರತ್ ಜೋಡ್ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಾರೆ. ಕಾರ್ಯಕರ್ತರು ಜಾತ್ಯಾತೀತತೆಗೆ ಬೆಂಬಲ ನೀಡುತ್ತಾರೆ ಎಂದು ಹೇಳಿದರು.
ವಿವಿಐಪಿ ಸಂಚಾರ ಹಿನ್ನಲೆಯಲ್ಲಿ ಸುಗಮ ಪ್ರಯಾಣಕ್ಕೆ ಟ್ರಾಫಿಕ್ ಪೊಲೀಸರಿಂದ ಪರ್ಯಾಯ ಮಾರ್ಗಗಳ ಸಲಹೆ ಹೀಗಿದೆ#Statenews #Bengaluru #KannadaNews
— News18 Kannada (@News18Kannada) May 2, 2023
ರಾಜ್ಯದ 224 ಕ್ಷೇತ್ರದಲ್ಲೂ ಬಿಜೆಪಿ ಪ್ರಚಾರ ಆರಂಭಿಸಿದೆ. ಪ್ರಧಾನಿ ಮೋದಿ ರಾಜ್ಯದಾದ್ಯಂತ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂದು ಸಂಸದ ಡಿವಿ ಸದಾನಂದ ಗೌಡ ಹೇಳಿದ್ದಾರೆ. ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ, ಚಿಕ್ಕಬಳ್ಳಾಪುರದಂತಹ ಬಿಜೆಪಿ ಪ್ರಾಬಲ್ಯ ಕಡಿಮೆ ಇರುವ ಪ್ರದೇಶದಲ್ಲೂ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದ ವಾತಾವರಣ ಬಿಜೆಪಿ ಕಡೆಗಿದೆ. ಮೇ 6 ರಂದು ಪ್ರಧಾನಿ ಮೋದಿ ಬೆಂಗಳೂರಿನಲ್ಲಿ 32 ಕಿಲೋಮೀಟರ್ ರ್ಯಾಲಿ ನಡೆಸಲಿದ್ದಾರೆ. ಈ ಬಾರಿ 130 ಕ್ಕೆ ಒಂದು ಸೀಟ್ ಕೂಡಾ ಕಡಿಮೆಯಾಗುವುದಿಲ್ಲ. ಈ ಗೆಲುವಿನಲ್ಲಿ ಪುತ್ತೂರು ಕೂಡಾ ಸೇರುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಬೃಹತ್ ಪ್ರಚಾರ ಸಭೆ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತೀರ್ಥಹಳ್ಳಿಗೆ ಆಗಮಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ತೀರ್ಥಹಳ್ಳಿಗೆ ಆಗಮಿಸಿದ ರಾಹುಲ್ ಗಾಂಧಿಗೆ ವೇದಿಕೆಗೆ ಎಂಟ್ರಿ ನೀಡುತ್ತಿದ್ದಂತೆ ಅಭಿಮಾನಿಗಳು ರಾಹುಲ್ ಪರ ಘೋಷಣೆ ಕೂಗಿದರು. ಇದೇ ವೇಳೆ ವೇದಿಕೆ ಮೇಲೆ ಇದ್ದ ನಟ ಶಿವರಾಜ್ ಕುಮಾರ್ ಅವರನ್ನು ರಾಹುಲ್ ಗಾಂಧಿ ಅಪ್ಪಿದರು ಸ್ವಾಗತಿಸಿದರು.
ಚಿತ್ರದುರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಶೇಂಗಾದ ಹಾರ, ಪೇಟ ಹಾಕಿ ಗೌರವ ಸಲ್ಲಿಸಲಾಗಿದೆ. ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಮೋದಿ ಭಾಗಿಯಾಗಿದ್ದು, ಈ ವೇಳೆ ಮದಕರಿ ನಾಯಕ ವಿಗ್ರಹ ನೀಡಿ ಗೌರವ ಸಲ್ಲಿಸಲಾಯಿತು. ಜೊತೆಗೆ ತಾಯಿ ಮೋದಿ ಹಣೆಗೆ ತಿಲಕವಿಟ್ಟ ಪೇಂಟಿಂಗ್ ಗಿಫ್ಟ್ ಮಾಡಲಾಯಿತು. ಈ ವೇಳೆ ಪೇಂಟಿಂಗ್, ಶೇಂಗಾದ ಹಾರ ಮತ್ತು ಪೇಟವನ್ನು ಮೋದಿ ಕುತೂಹಲದಿಂದ ವೀಕ್ಷಿಸಿದರು.