Karnataka Assembly Election 2023: ರಾಜ್ಯದಲ್ಲಿ ದೆಹಲಿ ನಾಯಕರು ಬೀಡು ಬಿಟ್ಟಿದ್ದು, ಅಬ್ಬರದ ಪ್ರಚಾರದ ನಡೆಸುತ್ತಿದ್ದಾರೆ. ಪ್ರಚಾರದ ವೇಳೆ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದಾರೆ. ಇಂದಿನ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಇಲ್ಲಿದೆ.
ಎದೆತಟ್ಟಿ ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಪ್ರಧಾನಿ ಎಚ್ಡಿಡಿ ಅಬ್ಬರದ ಪ್ರಚಾರ #HDDevegowda #Congress #JDS #Tumakuru #Madhugiri #KarnatakaElections2023
— News18 Kannada (@News18Kannada) April 24, 2023
ಸಿಎಂ ಪಟ್ಟಕ್ಕಾಗಿ ಕೊಲ್ಲೂರಿನಲ್ಲಿ ಡಿ.ಕೆ ಶಿವಕುಮಾರ್ ನವಚಂಡಿಕಾಯಾಗ ನಡೆಸಿದ್ದಾರಂತೆ. ಹೌದು ನವಚಂಡಿಕಾಯಾಗದ ಕೊನೆಯಲ್ಲಿ ಪೂರ್ಣಾಹುತಿ ವೇಳೆ ಮುಖ್ಯಮಂತ್ರಿ ಹುದ್ದೆ ಪ್ರಾಪ್ತಿಗಾಗಿ ಪ್ರಾರ್ಥನೆ ಮಾಡಲಾಗಿದೆ. ಸಿಎಂ ಹುದ್ದೆ ವಿಚಾರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವಾಗ್ಲೂ ಡಿಕೆಶಿ ಸಿಎಂ ಆಗುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರುನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಕ್ತಾಯವಾಗುತ್ತಿರುವ ನಡುವೆಯೇ, ಮನೆಮನೆಗೆ ಅಭ್ಯರ್ಥಿಗಳನ್ನು ಪರಿಚಯಿಸುವ ಸಲುವಾಗಿ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಎರಡು ದಿನ ಮಹಾ ಪ್ರಚಾರ ಅಭಿಯಾನವನ್ನು ಬಿಜೆಪಿ ಹಮ್ಮಿಕೊಂಡಿದೆ. ಮಂಗಳವಾರ ಹಾಗೂ ಬುಧವಾರ ನಡೆಯುವ ಈ ಅಭಿಯಾನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡ ಸೇರಿ 98 ನಾಯಕರು ರಾಜ್ಯಕ್ಕೆ ಲಗ್ಗೆ ಇಡಲಿದ್ದಾರೆ.
ನಾವು ಲಿಂಗಾಯತರನ್ನು ಸಿಎಂ ಮಾಡ್ತೀವಿ ಅಂತ ಹೇಳಿಲ್ಲ. ನಾವು 3 ಜನ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದ್ದೇವೆ ಅಂತಾ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಫೋಟಕ ನೀಡಿದ್ದಾರೆ. ಚುನಾವಣೆಯ ನಂತರ ಲೀಡರ್ಶಿಪ್ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಹಾಗಾದರೆ ಬಸವರಾಜ್ ಬೊಮ್ಮಾಯಿ ಮತ್ತೆ ಸಿಎಂ ಆಗಲ್ವಾ? ಎಂಬ ಪ್ರಶ್ನೆ ಮೂಡಿದೆ.
ಹಾಸನದ ಆಲೂರು ಮೀಸಲು ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತಬೇಟೆ ನಡೆಸಿದ್ದಾರೆ. ಪಟ್ಟಣದ ಕೆಇಬಿ ವೃತ್ತದಿಂದ ಕೊನೆಪೇಟೆ ವರೆಗೆ ಸಾಗಲಿರೊ ರೋಡ್ ಶೋ ನಡೆಸಿದ್ದಾರೆ. ಇದಕ್ಕೂ ಮುನ್ನ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ಶೋ ನಡೆಸಿದ್ದರು. ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಸಿ.ಎಸ್ ನಿರಂಜನ್ ಕುಮಾರ್ ಪರ ಅಮಿತ್ ಶಾ ಪ್ರಚಾರ ಮಾಡಿದ್ದರು.
ಶಾಸಕ ಅಮೃತ ದೇಸಾಯಿ, ಹೋರಾಟಗಾರ ಬಸವರಾಜ ಕೊರವರ್ ಮಧ್ಯೆ ಪ್ರಹ್ಲಾದ್ ಜೋಶಿ ನಡೆಸಿದ್ದ ಸಂಧಾನ ಯಶಸ್ವಿಯಾಗಿದೆ. ಸಂಧಾನದ ಬಳಿಕ ಮಾತಾಡಿದ ಜೋಶಿ, ಕೊರವರ್ ಈಗ ನಾಮಪತ್ರ ಹಿಂಪಡೆಯುತ್ತಾರೆ. ಅವರು ಅಮೃತ ದೇಸಾಯಿಯವರನ್ನು ಬೆಂಬಲಿಸಲಿದ್ದಾರೆ ಎಂದರು.
ನಾಯಕರ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ವಾಪಸ್ ಪಡೆಯುತ್ತಿದ್ದೇವೆ. ನಮ್ಮದು ಯಾವುದೇ ಡಿಮ್ಯಾಂಡ್ ಇಲ್ಲ ಎಂದು ಗಂಗಾಂಬಿಕೆ ಪತಿ ಮಲ್ಲಿಕಾರ್ಜುನ ಹೇಳಿದ್ದಾರೆ.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರವ್ರ ಶಿವಮೊಗ್ಗದ ಮನೆಯಲ್ಲಿ ಮಹತ್ವದ ಚರ್ಚೆ ನಡೆದಿದೆ. ಬಿಎಸ್ವೈ ಮನೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ಎಸ್.ಎನ್ ಚನ್ನಬಸಪ್ಪ, ಸಂಸದ ರಾಘವೇಂದ್ರ, ನಗರ ಅಧ್ಯಕ್ಷ ಜಗದೀಶ್, ಪ್ರಮುಖರಾದ ಎ.ಜೆ.ರಾಮಚಂದ್ರ ಭಾಗಿಯಾಗಿದ್ರು. ಈ ಸಭೆಯಲ್ಲಿ ಲಿಂಗಾಯತ ಮತಗಳನ್ನು ಸೆಳೆಯೋ ಬಗ್ಗೆ ಚರ್ಚೆ ನಡೆಸಲಾಯ್ತು.
ಶಿರಾ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಅಭಿಮಾನಿಯೊಬ್ಬರು ಕುರಿ ಮರಿ ಗಿಫ್ಟ್ ಕೊಟ್ಟಿದ್ದಾರೆ. ಆರೋಗ್ಯ ಲೆಕ್ಕಿಸದೇ ಅಭಿಮಾನಿ ತಂದ ಕುರಿಮರಿಯನ್ನ ದೇವೇಗೌಡರು ಹೆಗಲ ಮೇಲೆ ಹೊತ್ತಿಕೊಂಡಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಯನ್ನು ತಿರುಚಿ ಹೇಳಲಾಗುತ್ತಿದೆ. ಬಿಜೆಪಿಯವರು ಭಾವನಗೆಳನ್ನು ಕೆರಳಿಸುವ ಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಮಲ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಸವನ ಬಾಗೇವಾಡಿ ಕ್ಷೇತ್ರದ ಕೊಲ್ಹಾರ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ಕೆ ಬೆಳ್ಳುಬ್ಬಿ ಪರ ಬಿವೈ ವಿಜಯೇಂದ್ರ ಮತಯಾಚನೆ ಮಾಡಿದ್ದಾರೆ. ಕೊಲ್ಹಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸುತ್ತಿದ್ದಾರೆ.
ನಮ್ಮ ಪಕ್ಷದಲ್ಲಿ ಚುನಾವಣೆ ಆದ ಮೇಲೆ ಸದಸ್ಯರಿಂದ ಅಭಿಪ್ರಾಯ ಅಂತಿಮ. ಈಗ ದಲಿತ, ಒಕ್ಕಲಿಗ, ಕುರುಬ, ಲಿಂಗಾಯುತ ಅನ್ನಲ್ಲ. ಪಕ್ಷದಲ್ಲಿ ನಡೆದುಕೊಂಡು ಬಂದ ರೀತಿಯೇ ಎಲ್ಲಾ ನಡೆಯೋದು. ಈಗ ಯಾವ ಘೋಷಣೆಯೂ ಮಾಡಲ್ಲ ಎಂದು ಲಿಂಗಾಯತ ಸಿಎಂ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಷದ ವರಿಷ್ಠರು ಏನು ಹೇಳ್ತಾರೋ ಅದರಂತೆ ನಡೆದುಕೊಳ್ತೇನೆ. ನನ್ನನ್ನು ಬೇರೆ ಬೇರೆ ಕ್ಷೇತ್ರಗಳಿಗೆ ಪ್ರಚಾರಕ್ಕೆ ಕಳುಹಿಸುತ್ತಿದ್ದಾರೆ. ಇದೇ ಕೊನೆಯ ಚುನಾವಣೆ ಅಲ್ಲವಲ್. ಇನ್ನೂ ಮುಂದೆ ಚುನಾವಣೆಗಳು ಬರುತ್ತವೆ ಎಂದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ ಪ್ರಮೋದ್ ಮಧ್ವರಾಜ್!
ಕಾಂಗ್ರೆಸ್ ಪಕ್ಷ ಸಿದ್ಧಾಂತ ಬಿಟ್ಟು ಕೆಲವರಿಗೆ ಟಿಕೆಟ್ ನೀಡಿದೆ. ಮದ್ದೂರು, ಚಿತ್ರದುರ್ಗದಲ್ಲಿ ಕ್ಯಾಸಿನೊ, ಇಸ್ಟೀಟ್ ಆಡಿಸುವವರಿಗೆ ಟಿಕೆಟ್ ನೀಡಲಾಗಿದೆ. 17ವರ್ಷದ ಯುವಕರು ಕ್ಯಾಸಿನೊಗೆ ಹೋದರೆ ಗತಿಯೇನು. ಕ್ಷೇತ್ರದ ಮತದಾರರು ಈ ಬಗ್ಗೆ ತೀರ್ಮಾನಿಸುತ್ತಾರೆ. ಇಸ್ಪೀಟ್ ಕ್ಲಬ್ ಬೇಕೋ, ಎಜುಕೇಶನ್ ಬೇಕೋ ಜನ ನಿರ್ಧರಿಸುತ್ತಾರೆ ಎಂದು ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವಿರೇಂದ್ರ ಪಪ್ಪಿಗೆ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಟಾಂಗ್ ನೀಡಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಹಾವೇರಿ ಜಿಲ್ಲೆಯ 3 ಕ್ಷೇತ್ರದಲ್ಲಿ ರೋಡ್ ಶೋ, ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಬೆಳಗ್ಗೆ 11:30 ಕ್ಕೆ ರಾಣೇಬೆನ್ನೂರು ಬಿಜೆಪಿ ಅಭ್ಯರ್ಥಿ ಪರವಾಗಿ ನಗರದಲ್ಲಿ ಬೃಹತ್ ರೋಡ್ ಶೋ ಹಾಗೂ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಹಾವೇರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ಮಾಡಲಿದ್ದಾರೆ. ಬಳಿಕ ತಮ್ಮ ತವರು ಕ್ಷೇತ್ರದ ಬಂಕಾಪೂರ ಹಾಗೂ ಸವಣೂರು ಪಟ್ಟಣದಲ್ಲಿ ಪ್ರಚಾರ ನಡೆಸಲಿದ್ದಾರೆ.
ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನನ್ನು ಸೆಳೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಮಲಕಾರಿ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ. ಶಾಸಕ ಅಮೃತ ದೇಸಾಯಿ ಮನವೊಲಿಕೆ ನಂತ್ರ ಬಿಜೆಪಿ ಸೇರ್ಪಡೆಗೆ ನಿರ್ಧಾರ ಮಾಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಯಾರು ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾರ್ಮಿಕ ಮಾತುಗಳನ್ನಾಡಿದ್ದಾರೆ. ನೋಡಪ್ಪ ನಾವು ರಾಜಕಾರಣಿಗಳು ಖಾವಿ ಹಾಕೊಂಡಿಲ್ಲ ಬಿಳಿ ಬಟ್ಟೆ ಹಾಕೊಂಡಿದ್ದೇವೆ ಎಂದು ಹೇಳಿದ್ದಾರೆ.