Karnataka Assembly Election 2023: ಖ್ಯಾತ ರಾಜಕೀಯ ಮುಖಂಡರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಕರ್ನಾಟಕ ಚುನಾವಣೆಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರ ಆರೋಗ್ಯ ಈಗ ಹೇಗಿದೆ?#KannadaNews #HDKumaraswamy #JDS #Bengaluru #KarnatakaELection2023
— News18 Kannada (@News18Kannada) April 23, 2023
ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಸಿದ್ದಗಂಗಾ ಮಠದ ನೂತನ ಉತ್ತರಾಧಿಕಾರಿ ಶಿವಸಿದ್ದೇಶ್ವರ ಅವರನ್ನು ಭೇಟಿ ಮಾಡಿದ್ದು, ಸನ್ಮಾನ ಮಾಡಿ ಆಶಿರ್ವಾದ ಪಡೆದುಕೊಂಡಿದ್ದಾರೆ. ಕಂಚುಗಲ್ ಮಠದ ಮಹಾಲಿಂಗ ಸ್ವಾಮಿಜಿ, ವಿಜಯಪುರ ಟೌನ್ ಬಸವಕಲ್ಯಾಣ ಮಠದ ಶ್ರೀ ಸದಾಶಿವ ಸ್ವಾಮೀಜಿಗಳನ್ನು ಸಿಎಂ ಭೇಟಿ ಮಾಡಿದ್ದರು. ಆ ಬಳಿಕ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದುಕೊಂಡಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನು ಬೈಂದೂರಿಗೆ ಸ್ವಾಗತಿಸಲು ಆಗಮಿಸಿದ್ದ ಉದ್ಯಮಿ ಯುಬಿ ಶೆಟ್ಟಿ ಅವರ ಕಾರಿನಲ್ಲಿ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ 50 ಸಾವಿರ ರೂಪಾಯಿ ಪತ್ತೆಯಾಗಿದೆ. ಬೈಂದೂರು ಹರೇ ಶಿರೂರು ಹೆಲಿಪ್ಯಾಡ್ ಬಳಿ ಘಟನೆ ನಡೆದಿದ್ದು, ಯುಬಿ ಶೆಟ್ಟಿ ಕಾರು ಪರಿಶೀಲನೆ ನಡೆಸಿದ ಚುನಾವಣಾ ಅಧಿಕಾರಿಗಳಿಗೆ 50,000 ನಗದು ಸಿಕ್ಕಿತ್ತು. ಈ ವೇಳೆ ಅಧಿಕಾರಿಗಳು ಹಣದ ಬಗ್ಗೆ ದಾಖಲೆ ಕೇಳಿ ಸೀಜ್ ಮಾಡಿದ್ದಾರೆ.
ದಳಪತಿಗಳ ಭದ್ರಕೋಟೆಗೆ ಲಗ್ಗೆಯಿಡಲು ಕಮಲ ಪಡೆ ಸಜ್ಜಾಗಿದ್ದು, ನಾಳೆ ಹಾಸನ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಕಮಲ ನಾಯಕರು ಪ್ರಚಾರ ನಡೆಸಲಿದ್ದಾರೆ. ಇಂದು ಅರಸೀಕೆರೆ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಮತ್ತು ಸುದೀಪ್ ರೋಡ್ ನಡೆಸಿ ಅರಸೀಕೆರೆ ಬಿಜೆಪಿ ಅಭ್ಯರ್ಥಿ ಜಿ.ವಿ ಬಸವರಾಜು ಪರ ಮತಯಾಚನೆ ಮಾಡಲಿದ್ದಾರೆ. ನಾಳೆ ಜಿಲ್ಲೆಗೆ ಬಿಜೆಪಿ ಚುನಾವಣಾ ಚಾಣಾಕ್ಷ ಅಮಿತ್ ಶಾ ಆಗಮಿಸಲಿದ್ದು, ಆಲೂರು ಸಕಲೇಶಪುರ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಪರ ಮತ ಬೇಟೆ ನಡೆಸಲಿದ್ದಾರೆ.
ಮಂಡ್ಯದಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರವಾಗಿ ಮಗ, ಸೊಸೆಯ ಪ್ರಚಾರ ನಡೆಸಿ ಎದುರಾಳಿ ಮನೆಯಲ್ಲಿ ಮತಯಾಚನೆ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಿಎಸ್ ಪುಟ್ಟರಾಜು ಮಗ ಶಿವರಾಜ್ ಮತ್ತು ಸೊಸೆ, ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರ ಮನೆಗೆ ತೆರಳಿ ಮತಯಾಚನೆ ಮಾಡಿದರು. ಸುನಿತಾ ಪುಟ್ಟಣ್ಣಯ್ಯ ಅವರನ್ನ ಆಲಿಂಗಿಸಿ ಪುಟ್ಟರಾಜು ಸೊಸೆ ಮತಯಾಚಿಸಿದರು. ಪುಟ್ಟರಾಜು ಮಗ ಶಿವರಾಜ್, ಸುನೀತಾ ಪುಟ್ಟಣ್ಣಯ್ಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.
ನೀತಿ ಸಂಹಿತೆ ಜಾರಿ ಬಳಿಕ ಈವರೆಗೆ ಬೆಂಗಳೂರಿನಲ್ಲಿ 75 ಕೋಟಿ ದಾಟಿದ ಚುನಾವಣಾ ಆಕ್ರಮ ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದರಲ್ಲಿ 11.35 ಕೋಟಿ ನಗದು ಹಣ, 25.91 ಕೋಟಿ ಮೌಲ್ಯದ 5.95 ಲಕ್ಷ ಲೀಟರ್ ಮದ್ಯ, 10.26 ಕೋಟಿ ಮೌಲ್ಯದ 377 ಕೆ.ಜಿ ಡ್ರಗ್ಸ್, 17 ಕೋಟಿ ಮೌಲ್ಯದ ಚಿನ್ನ, ಗಿಫ್ಟ್ ಗಳು ಹಾಗೂ 5.74 ಕೋಟಿ ಮೌಲ್ಯದ 49937 ವಸ್ತುಗಳು ಸೀಜ್ ಮಾಡಲಾಗಿದೆ. ಈ ಸಂಬಂಧ 2,894 ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಒಟ್ಟಾರೆ ಒಟ್ಟು 76.30 ಕೋಟಿ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ.
ರಾಹುಲ್ ಗಾಂಧಿ ಕೂಡಲಸಂಗಮಕ್ಕೆ ಆಗಮಿಸಿ, ಬಸವಣ್ಣನವರ ಐಕ್ಯ ಮಂಟಪದ ದರ್ಶನ ಪಡೆದರು. ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ, ಎಂಬಿ ಪಾಟೀಲ್ ಸೇರಿ ಪ್ರಮುಖರು ಸಾಥ್ ನೀಡಿದ್ದರು.
ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಭರ್ಜರಿ ಪ್ರಚಾರ ನಡೆಸಿದ್ದಾರೆ. ಜನವಾಹಿನಿ ವಾಹನದಲ್ಲಿ ಶಾಸಕ ವಿಶ್ವನಾಥ್ ಅವರೊಂದಿಗೆ ಸಿಎಂ ರೋಡ್ ಶೋ ನಡೆಸಿದ್ದು, ಸಾವಿರಾರರು ಕಾರ್ಯಕರ್ತರು ಭಾಗಿಯಾಗಿದ್ದರು. ಕಾರ್ಯಕರ್ತರ ನಡುವೆ ಸಿಎಂ ವಾಹನದ ಮೇಲೆ ನಿಂತು ಹಾಡಿಗೆ ಡ್ಯಾನ್ಸ್ ಮಾಡಿ ಶಿಳ್ಳೆ ಹೊಡೆದು ಹುರಿದುಂಬಿಸಿದ್ದಾರೆ.
ಎಲ್ಲಿಂದ ಬೇಕಾದ್ರೂ ವಿಸ್ತಾರಕರು ಬರಲಿ. ಆದ್ರೆ ಅರ್ಎಸ್ಎಸ್ ಕೇಂದ್ರ ಸ್ಥಾನವಿರುವ ನಾಗಪುರದಲ್ಲಿಯೇ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಸೋತಿತ್ತು. ಹಾಗಿದ್ರೆ ವಿಸ್ತಾರಕರ ತಂತ್ರಗಾರಿಕೆ ಅಲ್ಲೇಕೆ ವಿಫಲವಾಯ್ತು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟೆರ್ ಪ್ರಶ್ನೆ ಮಾಡಿದ್ದಾರೆ.
ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ಸಿಗ್ತಿದೆ. ಚರ್ಚ್‌ನಲ್ಲಿ ಫಾದರ್ ಆಶೀರ್ವಾದ ಪಡೆದು, ಕ್ರಿಶ್ಚಿಯನ್ ಬಾಂಧವರ ಮತಯಾಚನೆ ಮಾಡಿದ್ದೇನೆ. ಕುಮಾರಣ್ಣರ ಪಂಚರತ್ನ ಯೋಜನೆ ಹಾಗೂ ಪ್ರಣಾಳಿಕೆಯಲ್ಲಿರುವ ಭರವಸೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದೀನಿ. ನಿನ್ನೆ ರಂಜಾನ್ ಹಬ್ಬದ ದಿನ ಮಸೀದಿಗಳಿಗೆ ಹೋಗಿ ಶುಭಕೋರಿ ಮತಯಾಚನೆ ಮಾಡಿದ್ದೀನಿ. ಮುಸ್ಲಿಂ ಬಾಂಧವರು ಅಭೂತಪೂರ್ವವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಬಹಳ ಒಮ್ಮತವಾಗಿ ಎಲ್ಲರೂ ಕೂಡ ಜೆಡಿಎಸ್ ಅಭ್ಯರ್ಥಿಯಾದ ನನಗೆ ಸಹಕಾರ ಮಾಡ್ತಿನಿ ಅಂತ ಆಶ್ವಾಸನೆ ಕೊಟ್ಟಿದ್ದಾರೆ ಎಂದು ಹಾಸನ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಹೇಳಿದ್ದಾರೆ.
ಚುನಾವಣಾ ಅಧಿಕಾರಿಗಳು ಸಿಎಂ ಬೊಮ್ಮಾಯಿ ಅವರ ಜಯವಾಹನಿ ವಾಹನವನ್ನು ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಹೊಸಹುಡ್ಯ ಕ್ರಾಸ್ ಬಳಿ ತಪಾಸಣೆ ಮಾಡಿದ್ದಾರೆ. ಜಯವಾಹನಿ ಸಿಎಂ ಪ್ರಚಾರದ ವಾಹನವಾಗಿದೆ.
ಕೂಡಲಸಂಗಮದ ಸಂಗಮನಾಥ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಸಂಗಮನಾಥನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿಯವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ವೇಣುಗೋಪಾಲ ಸಾಥ್ ನೀಡಿದ್ದಾರೆ.
ಚುನಾವಣೆಗೆ ದಿನಗಣನೆ ಆರಂಭವಾಗಿದ್ದು. ಇಬ್ಬರು ಐಪಿಎಸ್ ಆಫೀಸರ್ ಗಳ ವರ್ಗಾವಣೆಗೊಳಿಸಲಾಗಿದೆ. ಧರ್ಮೇಂದ್ರ ಕುಮಾರ್ ಮೀನಾ – ಸುಪರ್ಡೆಂಡ್ ಆಫ್ ಪೊಲೀಸ್ ಆ್ಯಂಡ್ ಡೈರೆಕ್ಟರ್ ಫೋರೆನ್ಸಿನ್ ಲ್ಯಾಬ್ ಬೆಂಗಳೂರಿನಿಂದ ವೈಟ್ ಫೀಲ್ಡ್ ನ ಡೆಪ್ಯುಟಿ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.
ಅರುಣ್ ಕುಮಾರ್ (ಸುಪರ್ಡೆಂಟ್ ಆಫ್ ಪೊಲೀಸ್ ಆ್ಯಂಡ್ ಪ್ರಿನ್ಸಿಪಾಲ್, ಪೊಲೀಸ್ ಟ್ರೈನಿಂಗ್ ಸ್ಕೂಲ್ ಕಲಬುರಗಿ) ಸುಪರ್ಡೆಂಟ್ ಆಫ್ ಪೊಲೀಸ್ ದಾವಣಗೆರೆ ಆಗಿ ನೇಮಕ ಮಾಡಲಾಗಿದೆ.
ಬಿಜೆಪಿಯ ದುರಾಡಳಿತ, 40% ಕಮಿಷನ್, ಕೋಮುವಾದಿ ಬಿಜೆಪಿ ವಿರುದ್ದದ ನಮ್ಮ ಹೋರಾಟಕ್ಕೆ ಸಿಪಿಐ ಬೆಂಬಲ ನೀಡುತ್ತಿದೆ. 215 ಕ್ಷೇತ್ರಗಳಲ್ಲಿ ಯಾವುದೇ ಷರತ್ತು ಇಲ್ಲದೆ ಬೆಂಬಲ ನೀಡುತ್ತಿರುವ ವಿಷಯವನ್ನು ನಡೆಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ ತಿಳಿಸಿದರು.
ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ (Shivaji Nagar Assembly Constituency) ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಫರ್ ಅಲಿ (Abdul Zafar Ali) ನಾಮಪತ್ರ ತಿರಸ್ಕೃತಗೊಂಡಿದೆ.
ಕೂಡಲಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಕೆಲವೇ ಸಮಯದಲ್ಲಿ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಬಸವ ಮಂಟಪದ ಬಸವ ವೇದಿಕೆಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಆಗಮಿಸಿದ್ದು, ವೇದಿಕೆ ತಯಾರಿ ಕುರಿತು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.