Karnataka Assembly Election 2023: ಇವತ್ತು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಇಂದು ಯಾರು? ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋದರ ಕ್ಷಣ ಕ್ಷಣದ ಮಾತಿ ಇಲ್ಲಿದೆ.
ಜಯನಗರ , ಬೆಂಗಳೂರುಜಯನಗದಲ್ಲಿ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ… ಜಯನಗರದಲ್ಲಿ ಮಗಳು ಸೌಮ್ಯರೆಡ್ಡಿ ಗೆಲ್ಲಿಸಲು ರಾಮಲಿಂಗಾರೆಡ್ಡಿ ಫೀಲ್ಡ್ಗೆ ಇಳಿದಿದ್ದಾರೆ. ಬಿಜೆಪಿಯ ಬೂತ್ ಮಟ್ಟದ ನಾಯಕರು, ಯುವಮೋರ್ಚಾ ಮುಖಂಡರು ಸೇರಿದಂತೆ 5000 ಸಾವಿರ ಮಂದಿಯನ್ನ ಕಾಂಗ್ರೆಸ್ಗೆ ಆಪರೇಷನ್ ಮಾಡಿದ್ದಾರೆ. ಇಂದು ಸಾಂಕೇತಿಕವಾಗಿ ಜಯನಗರದ ಭೈರಸಂಧ್ರ ವಾರ್ಡ್‌ನ 150 ಮಂದಿ ಸೇರ್ಪಡೆ ಆಗಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ಹೊರಬಿದ್ದಿದೆ. 2019ರಲ್ಲಿ ಬಿಎಸ್ವೈ ಸರ್ಕಾರ ಡಿಕೆಶಿ ವಿರುದ್ದ ತನಿಖೆಗೆ ಅನುಮತಿ ನೀಡಿತ್ತು. ರಾಜ್ಯಸರ್ಕಾರದ ಅನುಮತಿ ಮೇರೆಗೆ ಸಿಬಿಐ ಎಫ್ಐ ಆರ್ ದಾಖಲಿಸಿತ್ತು.
ಹೊಸದುರ್ಗದಲ್ಲಿ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬೃಹತ್ ಮೆರವಣಿಗೆ ಮೂಲಕ ಆಗಮಿಸಿದ ಗೂಳಿಹಟ್ಟಿ ಶೇಖರ್, ಕೆಂಪು ಶಲ್ಯ ಧರಿಸಿ, ಬರಿಗಾಲಲ್ಲಿ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಸತೀಶ್ ಜಾರಕಿಹೋಳಿ ಮೌಡ್ಯಕ್ಕೆ ಸೆಡ್ಡು ಹೊಡೆದು ನಾಮಿನೇಷನ್ ಸಲ್ಲಿಸಿದ್ದಾರೆ. ಯಮಕನಮರಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಹು ಕಾಲದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಲ್ಕನೇ ಬಾರಿಗೆ ಚುನಾವಣೆಗೆ ಸತೀಶ್ ಜಾರಕಿಹೋಳಿ ಸ್ಪರ್ಧಿಸುತ್ತಿದ್ದಾರೆ.
ಗುರುಮಿಠಕಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಪರವಾಗಿ ಅವರ ಪತ್ನಿ ಅಮರೇಶ್ವರಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಪಘಾತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್ ಗಾಯಗೊಂಡಿದ್ದು, ಈ ಹಿನ್ನೆಲೆಯಲ್ಲಿ ‘ದೇವರು ಜೀವದಾನ ನೀಡಿದ್ದಾನೆ. ನೀವು ಮತದಾನ ಮಾಡಿ’ ಎಂದು ಪತಿ ಪರವಾಗಿ ಸೆರಗೊಡ್ಡಿ ಅಮರೇಶ್ವರಿ ಚಿಂಚನಸೂರ್ ಮತ ಭಿಕ್ಷೆ ಕೇಳಿದ್ದಾರೆ.
ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಡಾಳ್ ವಿರೂಪಾಕ್ಷಪ್ಪ, ನಾನು ಬಿಜೆಪಿಯಲ್ಲಿದ್ದೆ, ಪಕ್ಷದಿಂದ ಹೊರಹಾಕಿದ್ದಾರೆ. ನನ್ನ ಮಗ 1 ಲಕ್ಷ ಅಂತರದಿಂದ ಗೆಲ್ಲುತ್ತಾನೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನ್ನ ಮನೆ ಮುಂದೆ 10 ಸಾವಿರಕ್ಕೂ ಹೆಚ್ಚು ಜನರು ಬಂದಿದ್ದರು. ಸ್ಪರ್ಧಿಸದಿದ್ದರೆ ವಿಷ ಕುಡಿತೀವಿ ಅಂತ ಬೆದರಿಕೆ ಹಾಕಿದ್ದರು. ಸ್ವಾಭಿಮಾನದಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಮಾಡಾಳ್ ಮಲ್ಲಿಕಾರ್ಜುನ್ ಹೇಳಿದ್ದಾರೆ.
ರಾಮನಗರ: ಸಂಸದ ಡಿಕೆ ಸುರೇಶ್ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿ ಗೆದ್ರೆ ಲಿಂಗಾಯತರನ್ನೇ ಸಿಎಂ ಮಾಡುವ ವಿಚಾರದ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಾತಾಡಿದ್ದಾರೆ. ಕಾಂಗ್ರೆಸ್ನವರು ವೀರೇಂದ್ರ ಪಾಟೀಲರನ್ನ ಎಷ್ಟು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಕಾಂಗ್ರೆಸ್ ಕೇವಲ ಮೊಸಳೆ ಕಣ್ಣೀರು ಹಾಕುತ್ತದೆ ಎಂದು ವಾಗ್ದಳಿ ನಡೆಸಿದರು.
ಮಾಜಿ ಸಚಿವ ಯು ಟಿ ಖಾದರ್ ನಾಮಪತ್ರ ಸಲ್ಲಿಕೆ ಮುಂಚೆ ಮೂರೂ ಧರ್ಮದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರು. ನಂತರ ಸಾವಿರಾರು ಕಾರ್ಯಕರ್ತರೊಂದಿಗೆ ಉಳ್ಳಾಲ ಬೈಲ್ ನಿಂದ ಮೆರವಣಿಗೆ ಮೂಲಕ ಬಂದು ಉಳ್ಳಾಲ ನಗರಸಭೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ವರುಣಾದಲ್ಲಿ ಜೆಡಿಎಸ್- ಬಿಜೆಪಿ ಒಳ ಮೈತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. ಸಿದ್ದರಾಮಯ್ಯ ಜೆಡಿಎಸ್-ಬಿಜೆಪಿ ಎಂದು ಹೇಳಿದ್ರೆ ಸಿಎಂ ಬೊಮ್ಮಾಯಿ ಜೆಡಿಎಸ್-ಕಾಂಗ್ರೆಸ್ ಒಳಮೈತ್ರಿ ಎಂದು ಹೇಳ್ತಾರೆ. ಆದರೆ ಇದೆಲ್ಲವನ್ನು ತೀರ್ಮಾನ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ನಮ್ಮ ನಾಯಕರು ಹೇಳಿದಂತೆ 60 ಸಾವಿರ ಮತಗಳಿಂದ ಗೆಲ್ಲುತ್ತೇವೆ. ಈಶ್ವರಪ್ಪನವರು ಸ್ಟಾರ್ ಕ್ಯಾಂಪೇನರ್ ಆಗಿದ್ದು, ಎಲ್ಲಾ ಕಡೆ ಪ್ರಚಾರಕ್ಕೆ ಹೋಗ್ತಾರೆ. ಅದರಂತೆ ಶಿವಮೊಗ್ಗದಲ್ಲೂ ಸಹ ಪ್ರಚಾರ ನಡೆಸುತ್ತಾರೆ. ಈಶ್ವರಪ್ಪನವರು ಸಹ ಸಂಘಟನೆ ಮಾತನ್ನು ಮೀರಲ್ಲ ನಾವು ಮೀರಲ್ಲ. ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಹುಟ್ಟುವ ಮುಂಚೆನೂ ಸಹ ಕೋಮುಗಲಭೆ ನಡೆದಿತ್ತು.
ಅದನ್ನು ಅವರು ಮರೆಯಬಾರದು ಎಂದು ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಹೇಳಿದರು.
ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಗೌಡ ನಾಮಪತ್ರ ಸಲ್ಲಿಕೆ ಮಾಡಿದರು. ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಿದ್ದರು.
ಅತ್ಯಂತ ಆತ್ಮ ವಿಶ್ವಾಸದಿಂದ ಈ ಚುನಾವಣೆಯಲ್ಲಿ ಗೆಲ್ಲಲು ನಾಮಪತ್ರ ಸಲ್ಲಿಸಿದ್ದೇನೆ. ಶಿವಮೊಗ್ಗದ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಅದರ ಅನುಭವ ನಮಗೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಬಹುಮತದಿಂದ ಪ್ರಾಂತೀಯ ಪಕ್ಷವಾಗಿ ನಾವು ಹೊರಹೊಮ್ಮುತ್ತೇವೆ. ಶಿವಮೊಗ್ಗದಲ್ಲಿ ಹೊಸ ರೀತಿಯ ಶಿವಮೊಗ್ಗ ಕಟ್ಟೋಣ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.
ಜೆಡಿಎಸ್ ಅಭ್ಯರ್ಥಿ ವೈಎಸ್ವಿ ದತ್ತಾ ವಿರುದ್ಧ 41 ಚೆಕ್ ಬೌನ್ಸ್ ಕೇಸ್ ಗಳಿವೆ. 2014 ರಿಂದ 2023 ರ ವರೆಗೆ 41 ಚೆಕ್ ಬೌನ್ಸ್ ಕೇಸ್ ದಾಖಲಾಗಿವೆ. ರಾಜ್ಯ ಹೊರರಾಜ್ಯಗಳಲ್ಲಿ ದತ್ತಾ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲಾಗಿವೆ.
ಮಂಡ್ಯದಲ್ಲಿ ನಿಲ್ಲುವಂತೆ ಒತ್ತಡ ಇತ್ತು ಆದ್ರೆ 2 ಕಡೆ ಸ್ಪರ್ಧೆ ಕುಮಾರಸ್ವಾಮಿ ಮಾಡಲ್ಲ. ಚನ್ನಪಟ್ಟಣ ಒಂದೇ ಕಡೆ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
https://t.co/u7iAUKIfmB
ಪ್ರೀತಂಗೌಡ ಹೇಳಿಕೆ ಮಾಧ್ಯಮ ಕ್ಯಾಮೆರಾದಲ್ಲಿ ಸೆರೆಯಾಗಿದೆ.#PreethamGowda #JDS #Hassan #HDRevanna #KannadaNews #KarnatakaElection2023 #KarnatakaAssemblyElections2023— News18 Kannada (@News18Kannada) April 20, 2023
ಇಂದು ಯಮಕಣಮರಡಿ ಕ್ಷೇತ್ರದಿಂದ KPCC ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. 2 ಗಂಟೆಗೆ ರಾಹುಕಾಲದಲ್ಲಿ ಜನರನ್ನ ಸೇರಿಸದೇ ಐವರು ಜೊತೆಯಲ್ಲಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಟಿಕೆಟ್ ಸಿಗದ ಹಿನ್ನೆಲೆ ಡಿ.ಕೆ.ಶಿವಕುಮಾರ್ – ಡಿ.ಕೆ.ಸುರೇಶ್ ವಿರುದ್ಧ ಗುರುಚರಣ್ ವಾಗ್ದಾಳಿ ನಡೆಸಿದರು. ಮದ್ದೂರಿನ ಸೋಮನಹಳ್ಳಿ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಗುರುಚರಣ್, ಇವತ್ತು ಕಾಂಗ್ರೆಸ್ ಪಕ್ಷದಲ್ಲಿ ಟೆರರಿಸ್ಟ್ ಗಳು ಹಣ ತಂದರೆ ಅವರಿಗೂ ಟಿಕೆಟ್ ಸಿಗಲಿದೆ ಎಂದು ಆರೋಪಿಸಿದರು.