ಚಿಕ್ಕಮಗಳೂರು: ನಾನೇ ಸಿಎಂ ನಾನೇ ಸಿಎಂ ಎನ್ನುವುದು ಕಾಂಗ್ರೆಸ್ ನಾಯಕರ (Congress leaders) ಸಾಮಾನ್ಯ ಚಾಳಿ ಎನ್ನುವಂತಾಗಿತ್ತು. ಇದೀಗ ಬಿಜೆಪಿ (BJP) ನಾಯಕರೂ ತಮ್ಮೊಳಗಿನ ಸಿಎಂ ಹುದ್ದೆಯ ಕನಸನ್ನು ತೆರೆದಿಡುತ್ತಿದ್ದಾರೆ. ನಿನ್ನೆ ಮೈಸೂರಿನಲ್ಲಿ (Mysuru) ಮಾತನಾಡಿದ್ದ ಸಿ.ಟಿ. ರವಿ ತಾವು ಸಿಎಂ ಆಗುವ ಕನಸನ್ನು ತೆರೆದಿಟ್ಟಿದ್ದರು. ಇದೀಗ ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಅವರು ಸಿಟಿ ರವಿ ಪರ ಬ್ಯಾಟಿಂಗ್ ಮಾಡಿದ್ದು, ಸಿಟಿ ರವಿ ಕರ್ನಾಟಕದ ಮುಂದಿನ ಸಿಎಂ ಆಗಲಿ (next CM of Karnataka) ಅಂತ ಹೇಳಿದ್ದಾರೆ.
“ಸಿಟಿ ರವಿ ಮುಂದಿನ ಸಿಎಂ ಆಗಲಿ”
ಹೀಗಂತ ಮಾಜಿ ಸಚಿವ ಕೆಎಸ್ ಈಶ್ವರಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನ ನಿಡಘಟ್ಟದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಮುಂದಿನ ಸಿಎಂ ಎಂದ ಈಶ್ವರಪ್ಪ, ಚಿಕ್ಕಮಗಳೂರಿನಿಂದ ಸಿ.ಟಿ. ರವಿಯನ್ನು ಗೆಲ್ಲಿಸಿ, ಅವರೇ ಮುಂದಿನ ಸಿಎಂ ಆಗಲಿ ಅಂತ ಹೇಳಿದ್ರು.
“ನನಗೂ ಸಿಎಂ ಆಗುವ ಆಸೆ ಇದೆ” ಎಂದಿದ್ದ ರವಿ
ನಿನ್ನೆ ಮೈಸೂರಿನಲ್ಲಿ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಅಭ್ಯರ್ಥಿ ಸಿ.ಟಿ. ರವಿ ಸಿಎಂ ಆಗುವ ಇಂಗಿತವನ್ನು ಹೊರ ಹಾಕಿದ್ದರು. ನನಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ, ಮುಖ್ಯಮಂತ್ರಿ ರೇಸ್‌ನಲ್ಲಿ ನಾನೂ ಇದ್ದೀನಿ ಎನ್ನುವ ಮೂಲಕ ಮುಖ್ಯಮಂತ್ರಿ ಆಗಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: HD Kumaraswamy: 'ಗ್ರಾಮವಾಸ್ತವ್ಯ'ದ ಮೂಲಕ ಜನಮನ ತಲುಪಿದ ಮಾಜಿ ಸಿಎಂ! ಇಲ್ಲಿದೆ ಎಚ್‌ಡಿಕೆ ರಾಜಕೀಯ ಹಾದಿ
ಸಿಟಿ ರವಿಯನ್ನು ಗೆಲ್ಲಿಸಿ ಕಳಿಸಿ ಅಂತ ಈಶ್ವರಪ್ಪ ಮನವಿ
ಇಂದು ಸಭೆಯಲ್ಲಿ ಮಾತನಾಡಿದ ಕೆಎಸ್ ಈಶ್ವರಪ್ಪ, ಚಿಕ್ಕಮಗಳೂರಿನಿಂದ ಸಿಟಿ ರವಿ ಅವರನ್ನು ಗೆಲ್ಲಿಸಿ ಕಳಿಸಿ, ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಬೇಕು ಅಂತ ಹೇಳಿದ್ರು.
ಯಾರಾಗ್ತಾರೆ ಸಿಎಂ? ಭವಿಷ್ಯ ನುಡಿದ ಮಂಡ್ಯದ ನಾಯಿ!
ಕರ್ನಾಟಕದ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿವೆ. ಈ ಬಾರಿ ಯಾರು ಗೆಲ್ಲುತ್ತಾರೆ? ಯಾವ ಪಕ್ಷಕ್ಕೆ ಬಹುಮತ ಬರಲಿದೆ? ಕೊನೆಗೆ ಯಾರು ಮುಖ್ಯಮಂತ್ರಿ ಗದ್ದುಗೆ ಏರುತ್ತಾರೆ? ಸದ್ಯ ಚುನಾವಣೆ ಫಲಿತಾಂಶ (Karnataka Elections Results) ಬರುವವರೆಗೂ ಇದು ಮಿಲಿಯನ್ ಡಾಲರ್ ಪ್ರಶ್ನೆ! ಆದರೆ ಮಂಡ್ಯದಲ್ಲಿ (Mandya Viral Video) ನಾಯಿಯೊಂದು ಈ ಬಾರಿ ಯಾರು ಸಿಎಂ (Karnataka Next CM) ಆಗ್ತಾರೆ (Dog Prediction) ಎಂದು ಭವಿಷ್ಯ ನುಡಿದಿದೆ.
ಇದನ್ನೂ ಓದಿ: Roopali Naik: ಮತ್ತೊಮ್ಮೆ ಗೆದ್ದು ಬೀಗುತ್ತಾರಾ ರೂಪಾಲಿ ನಾಯ್ಕ್? ಕಾರವಾರ ಶಾಸಕಿಯ ಪರಿಚಯ ಇಲ್ಲಿದೆ
ಮುಂದಿನ ಸಿಎಂ ಆಗ್ತಾರಾ ಎಚ್‌ಡಿಕೆ?
ಕಳೆದ ಎರಡು ವರ್ಷಗಳಿಂದ ಭೈರವ ಎಂಬ ಈ ನಾಯಿಯ ಸೂಚಿಸುವ ಭವಿಷ್ಯ ನಿಜವಾಗುತ್ತಿದೆ ಎಂಬ ನಂಬಿಕೆಯಿದೆಯಂತೆ. ಬಸವರಾಜ ಬೊಮ್ಮಾಯಿ, ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಅವರ ಮೂರು ಫೋಟೋಗಳನ್ನು ಇಟ್ಟು ಅಪ್ಪಣೆ ಕೇಳಿದ್ದಾರೆ. ಈ ವೇಳೆ ಭೈರವ ನಾಯಿ ಎಚ್. ಡಿ.ಕುಮಾರಸ್ವಾಮಿ ಅವರ ಫೋಟೋವನ್ನು ಬಾಯಲ್ಲಿ ಕಚ್ಚಿ ಇವರೇ ಮುಂದಿನ ಸಿಎಂ ಆಗ್ತಾರೆ ಎಂದು ಸೂಚನೆ ನೀಡಿದೆ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ