ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections) ಜೆಡಿಎಸ್ (JDS) ಮತ್ತೊಮ್ಮೆ ರಣಕಹಳೆ ಮೊಳಗಿಸಿದೆ. ಕಳೆದ ಬಾರಿ 2022ರ ಡಿಸೆಂಬರ್‌ನಲ್ಲೇ 93 ಅಭ್ಯರ್ಥಿಗಳ (Candidates) ಮೊದಲ ಪಟ್ಟಿ ಪ್ರಕಟಿಸಿದ್ದ ಜಾತ್ಯಾತೀತ ಜನತಾದಳ (JDS) ಇದೀಗ ಇನ್ನಷ್ಟು ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟಿಸಿದೆ. ಇಂದು 49 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಜೆಡಿಎಸ್ ರಿಲೀಸ್ ಮಾಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಹಾಸನ (Hassan) ಕ್ಷೇತ್ರದಲ್ಲಿ ಭವಾನಿ ರೇವಣ್ಣಗೆ (Bhavani Revanna) ಟಿಕೆಟ್ ಕೈತಪ್ಪಿದೆ. ಎಚ್‌ಡಿಕೆ (HD Kumaraswamy) ಹೇಳಿದಂತೆ ಸ್ವರೂಪ್‌ಗೆ (Swaroop) ಟಿಕೆಟ್ ಸಿಕ್ಕಿದೆ.
ಹಾಸನದಲ್ಲಿ ಭವಾನಿ ಕೈತಪ್ಪಿದ ಟಿಕೆಟ್
ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಕೊನೆಗೂ ಫೈನಲ್ ಆಗಿದೆ. ದೇವೇಗೌಡರ ಸೊಸೆ, ಎಚ್‌ಡಿ ರೇವಣ್ಣ ಪತ್ನಿ ಭವಾನಿ ಹಾಸನದ ಟೆಕೆಟ್‌ಗಾಗಿ ಪಟ್ಟು ಹಿಡಿದಿದ್ದರು. ಆದರೆ ಇದೀಗ ಹಾಸನ ಟಿಕೆಟ್ ಭವಾನಿ ಕೈತಪ್ಪಿದೆ. ಎಚ್‌ಡಿ ಕುಮಾರಸ್ವಾಮಿ ಬಯಸಿದಂತೆಯೇ ಸ್ವರೂಪ್‌ಗೆ ಹಾಸನ ಟಿಕೆಟ್ ನೀಡಲಾಗಿದೆ.
ಯಾರಿಗೆ ಜೆಡಿಎಸ್ ಟಿಕೆಟ್?
ರಾಯಭಾಗ್ - ಪ್ರದೀಪ್ ಮಾಳಗಿ, ಸವದತ್ತಿ - ಸೌರಭ್ ಆನಂದ್ ಚೋಪ್ರಾ, ಅಥಣಿ - ಶಶಿಕಾಂತ್ ಪಡಸಲಿಗಿ ಸ್ವಾಮೀಜಿ, ಹುಬ್ಬಳ್ಳಿ ಧಾರವಾಡ ಪೂರ್ವ - ವೀರಭದ್ರಪ್ಪ ಹಾಲಹರವಿ, ಕುಮಟಾ – ಸೂರಜ್ ನಾಯಕ್ ಸೋನಿ, ಹಳಿಯಾಳ – ಎಸ್.ಎಲ್. ಕೋಟ್ನೇಕರ್, ಭಟ್ಕಳ - ನಾಗೇಂದ್ರ ನಾಯಕ್, ಶಿರಸಿ-ಸಿದ್ದಾಪುರ - ಉಪೇಂದ್ರ ಪೈ ಹಾಗೂ ಯಲ್ಲಾಪುರ - ಡಾ. ನಾಗೇಶ್ ನಾಯ್ಕ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ.
ಇದನ್ನೂ ಓದಿ: Bhavani Revanna: ಗೌಡ್ರ ಮನೆಯಲ್ಲಿ ಸೊಸೆಯ ಟಿಕೆಟ್ ಗದ್ದಲ! ಭವಾನಿ ವಿಚಾರಕ್ಕೆ ಎಚ್‌ಡಿಕೆ-ರೇವಣ್ಣ ಸಂಘರ್ಷ!
ಹಲವರಿಗೆ ಜೆಡಿಎಸ್ ಟಿಕೆಟ್
ಇನ್ನು ಚಿತ್ರಾಪುರದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದರು ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಬಂದಿದ್ದ ಸುಭಾಷ್ ಚಂದ್ರ ರಾಠೋಡ್‌ಗೆ ಟಿಕೆಟ್ ನೀಡಲಾಗಿದೆ. ಇನ್ನು ಕಲಬುರಗಿ ಉತ್ತರ - ನಾಸಿರ್ ಹುಸೈನ್ ಉಸ್ತಾದ್, ಬಳ್ಳಾರಿ ನಗರ - ಅಲ್ಲಾ ಭಕ್ಷ್ ಅಲಿಯಾಸ್ ಮುನ್ನ, ಹಗರಿಬೊಮ್ಮನಗಳ್ಳಿ (SC) – ಪರಮೇಶ್ವರಪ್ಪ, ಹರಪ್ಪನಹಳ್ಳಿ - ನೂರ್ ಅಹಮ್ಮದ್, ಶಿರಗುಪ್ಪ - ಪರಮೇಶ್ವರ ನಾಯಕ್, ಕಂಪ್ಲಿ - ರಾಜ ನಾಯಕ್, ಕೊಳ್ಳೆಗಾಲದಿಂದ ಮಾಜಿ ಪೊಲೀಸ್ ಅಧಿಕಾರಿ ಪುಟ್ಟಸ್ವಾಮಿಗೆ ಟಿಕೆಟ್ ನೀಡಲಾಗಿದೆ.
ಗುಂಡ್ಲುಪೇಟೆ - ಕಡಬೂರ್ ಮಂಜುನಾಥ್, ಕಾಪು - ಸಬೀನಾ ಸಮದ್, ಕಾರ್ಕಳ - ಶ್ರೀಕಾಂತ್ ಕೊಚ್ಚೂರ್, ಉಡುಪಿ - ದಕ್ಷತ್ ಆರ್ ಶೆಟ್ಟಿ, ಬೈಂದೂರು - ಮನ್ಸೂರ್ ಇಬ್ರಾಹಿಂ, ಕುಂದಾಪುರ - ರಮೇಶ್ ಕುಂದಾಪುರ, ಮಂಗಳೂರು ದಕ್ಷಿಣ - ಸುಮತಿ ಹೆಗ್ಡೆ, ಕನಪುರ – ನಾಗರಾಜು, ಯಲಹಂಕ - ಎಮ್ ಮುನೇಗೌಡ, ಸರ್ವಜ್ಞ ನಗರ - ಮಹಮ್ಮದ್ ಮುಷ್ತಾಕ್, ಯಶವಂತಪುರ – ಜವರಾಯೇಗೌಡಗೆ ಟಿಕೆಟ್ ನೀಡಲಾಗಿದೆ.
ಇನ್ನು ತಿಪಟೂರು – ಶಾಂತಕುಮಾರ್, ಶಿರಾ - ಆರ್ ಉಗ್ರೇಶ್, ಹಾನಗಲ್ - ಮನಹೋರ್ ತಹಶೀಲ್ದಾರ್, ಸಿಂದಗಿ - ವಿಶಾಲಾಕ್ಷಿ ಶಿವಾನಂದ್, ಗಂಗಾವತಿ - ಹೆಚ್ ಆರ್ ಚನ್ನಕೇಶವ, ಜೇವರ್ಗಿ – ದೊಡ್ಡಪ್ಪಗೌಡ, ಕಾರವಾರ - ಚೈತ್ರಾ ಕೋಟೇಕಾರ್, ಪುತ್ತೂರು - ದಿವ್ಯಾ ಪ್ರಭಾಗೆ ಟಿಕೆಟ್ ನೀಡಲಾಗಿದೆ.
ಇದನ್ನೂ ಓದಿ: V Somanna: ಸಿದ್ದರಾಮಯ್ಯ ವಿರುದ್ಧ ಗೆದ್ದು ಬೀಗುತ್ತಾರಾ ಸೋಮಣ್ಣ? ಲಿಂಗಾಯತ ನಾಯಕನ ಏಳುಬೀಳು ಹೇಗಿತ್ತು?
ದತ್ತಾಗೆ ಕಡೂರ್ ಟಿಕೆಟ್
ಕಡೂರ್ - ವೈ ಎಸ್ ವಿ ದತ್ತಾ, ಹೊಳೆನರಸೀಪುರ – ರೇವಣ್ಣ, ಬೇಲೂರು – ಲಿಂಗೇಶ್, ಸಕಲೇಶಪುರ - ಹೆಚ್ ಕೆ ಕುಮಾರಸ್ವಾಮಿ, ಅರಕಲಗೂಡು - ಎ ಮಂಜು, ಶ್ರವಣಬೆಳಗೊಳ - ಎನ್ ಬಾಲಕೃಷ್ಣ, ಹಿರಿಯೂರು – ರವೀಂದ್ರಪ್ಪ, ಮಾಯಕೊಂಡ – ಆನಂದಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ