ಕೊಪ್ಪಳ: ಮಾಜಿ ಸಚಿವ (ex-minister), ಮಾಜಿ ಗಣಿಧಣಿ ಜನಾರ್ದನ ರೆಡ್ಡಿ (Janardhan Reddy) ಅಂದರೆ ಶ್ರೀಮಂತಿಕೆಗೆ ಉದಾಹರಣೆ ಎನ್ನುವಂತೆ ಜನರು ಅವರನ್ನು, ಅವರ ಮಗಳ ಅದ್ಧೂರಿ ಮದುವೆಯನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಶ್ರೀಮಂತಿಕೆಯಲ್ಲಿ ಅವರಿಗಿಂತ ಅವರ ಪತ್ನಿ ಅರುಣ ಲಕ್ಷ್ಮೀ ಅವರೇ ಶ್ರೀಮಂತೆಯಂತೆ! ಜನಾರ್ದನ ರೆಡ್ಡಿಯವರ ಹೊಸ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ದಿಂದ (KRPP) ಬಳ್ಳಾರಿ ನಗರ (Bellary City) ಕ್ಷೇತ್ರದಿಂದ ಕಣಕ್ಕಿಳಿದಿರುವ ಅರುಣ ಲಕ್ಷ್ಮೀ (Aruna Lakshmi) ತಮ್ಮ ಆಸ್ತಿ ಘೋಷಿಸಿದ್ದಾರೆ. ಅಂದಹಾಗೆ ಅರುಣ ಲಕ್ಷ್ಮೀ ಅವರು ತಮ್ಮ ಪತಿ ಜನಾರ್ದನ ರೆಡ್ಡಿ ಅವರಿಗಿಂತ ಪತ್ನಿ ಅರುಣ ಲಕ್ಷ್ಮೀಯವರೇ ಶ್ರೀಮಂತೆಯಂತೆ!
ಜನಾರ್ದನ ರೆಡ್ಡಿಗಿಂತ ಪತ್ನಿ ಶ್ರೀಮಂತೆ!
ಜನಾರ್ದನ ರೆಡ್ಡಿ ಪತ್ನಿ, ಬಳ್ಳಾರಿ ನಗರ ಕೆಆರ್‌ಪಿಪಿ ಪಕ್ಷದ ಅಭ್ಯರ್ಥಿ ಅರುಣ ಲಕ್ಷ್ಮೀ ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ಆಸ್ತಿ ಘೋಷಣೆ ಮಾಡಿದ್ದಾರೆ. ಅಂದಹಾಗೆ ಪತಿ ಜನಾರ್ದನ ರೆಡ್ಡಿಅವರಿಗಿಂತ ಅವರ ಪತ್ನಿ ಅರುಣ ಲಕ್ಷ್ಮೀ ಅವರೇ ಶ್ರೀಮಂತೆಯಾಗಿದ್ದಾರೆ.
ಅರುಣ ಲಕ್ಷ್ಮೀ ಅವರ ಆಸ್ತಿ ಎಷ್ಟು?
ಅರುಣ ಲಕ್ಷ್ಮೀ ಅವರ ಒಟ್ಟೂ ಚರಾಸ್ತಿ 96.26 ಕೋಟಿ ರೂಪಾಯಿ, ಲಕ್ಷ್ಮೀ ಅರುಣಾ 104.38 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರೆ, ಜನಾರ್ದನ ರೆಡ್ಡಿ ಹೆಸರಿನಲ್ಲಿ 8 ಕೋಟಿ ಮೌಲ್ಯದ ಸ್ಥಿರಾಸ್ತಿ ಮಾತ್ರ ಇರುವುದಾಗಿ ಹೇಳಿಕೊಂಡಿದ್ದಾರೆ. ಮಗ ಕಿರೀಟಿ ರೆಡ್ಡಿ ಬಳಿ 1.24 ಕೋಟಿ ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Janardhana Reddy: ಚುನಾವಣೆ ಬ್ಯುಸಿಯಲ್ಲಿದ್ದ ರೆಡ್ಡಿಗೆ ಬಿಗ್ಶಾಕ್! ಕ್ರಿಮಿಕಲ್ ಮೊಕದ್ದಮೆ ದಾಖಲಿಸಲು ಕೋರ್ಟ್ ಆದೇಶ
ರೆಡ್ಡಿ ಫ್ಯಾಮಿಲಿಯ ಚಿನ್ನ-ಬೆಳ್ಳಿ ವಿವರ
ಅಂದಹಾಗೆ ರಡ್ಡಿ ಕುಟುಂಬದಲ್ಲಿ ಯಾರು ಸಾಲ ಹೊಂದಿಲ್ಲವಂತೆ. ಹೆಂಡ್ತಿ ಹೆಸರಿನಲ್ಲಿ ಒಟ್ಟು 2528 ಕೆ.ಜಿ ಬೆಳ್ಳಿ, ಜನಾರ್ಧನ್ ರಡ್ಡಿ ಹೆಸರಿನಲ್ಲಿ 178 ಕೆ.ಜಿ ಬೆಳ್ಳಿ, ಅರುಣ ಲಕ್ಷ್ಮೀ ಹೆಸರಿನಲ್ಲಿ ಒಟ್ಟು 3.84 ಕೆ.ಜಿ ಬಂಗಾರ ಹಾಗೂ ಜನಾರ್ಧನ್ ರಡ್ಡಿ ಬಳಿ 4 ಕೆ.ಜಿ ಬಂಗಾರ ಇದೆಯಂತೆ. ಇನ್ನು ಜನಾರ್ದನ ರೆಡ್ಡಿ ಮೇಲೆ ವಿವಿಧ ಠಾಣೆಯಲ್ಲಿ 7 ಕೇಸ್ ಗಳು, ಹೆಂಡ್ತಿಯ ಮೇಲೆ 3 ಠಾಣೆಯಲ್ಲಿ ಕೇಸ್ ಗಳು ಇವೆ. ಇನ್ನು ಜನಾರ್ದನ ರೆಡ್ಡಿ ಮಗಮ ಮೇಲೆ ವಿವಿಧ ಠಾಣೆಯಲ್ಲಿ 3 ಕೇಸ್ ಗಳು ಇವೆ. ಜನಾರ್ದನ ರೆಡ್ಡಿ, ಹೆಂಡ್ತಿ ಹಾಗೂ ಮನಗ ಮೇಲಿನ ಕೇಸ್ ಗಳು ತನಿಖೆ ಹಂತದಲ್ಲಿ ಇವೆ.
1124 ಕೋಟಿ ರೂಪಾಯಿ ಆಸ್ತಿ ಒಡೆಯ ಡಿಕೆಶಿ
ಡಿಕೆ ಶಿವಕುಮಾರ್ ಅವರ ಸ್ಥಿರಾಸ್ತಿ, ಚರಾಸ್ತಿ ಒಟ್ಟು ಮೌಲ್ಯ 1214 ಕೋಟಿ ರೂಪಾಯಿ ಇದ್ದು, ಪತ್ನಿ ಆಸ್ತಿ ಮೌಲ್ಯ 153.30 ಕೋಟಿ ರೂಪಾಯಿ ಹಾಗೂ ಅವಿಭಜಿತ ಕುಟುಂಬದ (Family) ಆಸ್ತಿ 61 ಕೋಟಿ ರೂಪಾಯಿ ಇದೆ. ಡಿಕೆ ಶಿವಕುಮಾರ್ ಅವರು ಎಂಎ ಪದವೀಧರರಾಗಿದ್ದು, ಒಟ್ಟು 226 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದಾರೆ. ಡಿಕೆ ಶಿವಕುಮಾರ್ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಎಷ್ಟೆಲ್ಲಾ ಆಸ್ತಿ, ಚಿನ್ನ ಇದೇ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Lingayat: ಶೆಟ್ಟರ್, ಸವದಿಗೆ ಕಾಂಗ್ರೆಸ್‌ನಲ್ಲಿ ಜೈ! ಲಿಂಗಾಯತ ಮತಬುಟ್ಟಿಗೆ ಹಾಕಿದ್ರಾ 'ಕೈ'?
ಸಚಿವ ಎಂಟಿಬಿ ಆಸ್ತಿ 1510 ಕೋಟಿ
ರಾಜ್ಯದ ರಾಜಕಾರಣಿಗಳಲ್ಲಿ ಅತ್ಯಂತ ಸಿರಿವಂತ ರಾಜಕಾರಣಿಗಳಲ್ಲಿ ಎಂಟಿಬಿ ನಾಗರಾಜ್ ಅವರು ಒಬ್ಬರಾಗಿದ್ದಾರೆ. ಒಟ್ಟಾರೆ ಈ ಬಾರಿ ಅವರು 1,510 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ