• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • MB Patil: ಎಂಬಿ ಪಾಟೀಲ್ ಹಿನ್ನೆಲೆ ಏನು? ಬಬಲೇಶ್ವರ ಶಾಸಕರ ರಾಜಕೀಯ ಏಳು-ಬೀಳುಗಳೇನು?

MB Patil: ಎಂಬಿ ಪಾಟೀಲ್ ಹಿನ್ನೆಲೆ ಏನು? ಬಬಲೇಶ್ವರ ಶಾಸಕರ ರಾಜಕೀಯ ಏಳು-ಬೀಳುಗಳೇನು?

ಕಾಂಗ್ರೆಸ್ ಹಿರಿಯ ನಾಯಕ ಎಂ.ಬಿ. ಪಾಟೀಲ್

ಕಾಂಗ್ರೆಸ್ ಹಿರಿಯ ನಾಯಕ ಎಂ.ಬಿ. ಪಾಟೀಲ್

ಎಂ.ಬಿ. ಪಾಟೀಲ್ ಪ್ರಸ್ತುತ ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರು. ಕಾಂಗ್ರೆಸ್ ಹಿರಿಯ ನಾಯಕರು, ಮಾಜಿ ಸಚಿವರೂ ಆಗಿರುವ ಎಂ.ಬಿ. ಪಾಟೀಲ್ ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರೂ ಹೌದು.

  • News18 Kannada
  • 5-MIN READ
  • Last Updated :
  • Karnataka, India
  • Share this:

ಮಲ್ಲನಗೌಡ ಬಸನಗೌಡ ಪಾಟೀಲ್.. ಹೀಗಂದರೆ ಯಾರಿಗೂ ತಿಳಿಯಲಿಕ್ಕಿಲ್ಲ. ಯಾಕೆಂದರೆ ಅವರು ರಾಜ್ಯ ರಾಜಕೀಯದಲ್ಲಿ (Karnataka Politics) ಫೇಮಸ್ ಆಗಿರುವುದೇ ಎಂ.ಬಿ. ಪಾಟೀಲ್ (MB Patil) ಅಂತ. ಹೌದು, ರಾಜ್ಯದ ಹಿರಿಯ ಕಾರಣಿಗಳಲ್ಲಿ ಒಬ್ಬರಾಗಿರುವ ಎಂ.ಬಿ. ಪಾಟೀಲ್ ಪ್ರಸ್ತುತ ವಿಜಯಪುರ (Vijayapur) ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ (Babaleshwar assembly constituency) ಶಾಸಕರು. ಕಾಂಗ್ರೆಸ್ (Congress) ಹಿರಿಯ ನಾಯಕರು, ಮಾಜಿ ಸಚಿವರೂ ಆಗಿರುವ ಎಂ.ಬಿ. ಪಾಟೀಲ್ ವೀರಶೈವ ಲಿಂಗಾಯತ ಸಮುದಾಯದ (Veerashaiva Lingayat community) ಪ್ರಭಾವಿ ಮುಖಂಡರೂ ಹೌದು. ಹಾಗಾದರೆ ಎಂ.ಬಿ. ಪಾಟೀಲ್ ಹಿನ್ನೆಲೆ ಏನು? ಅವರು ರಾಜಕೀಯ ಪ್ರವೇಶಿಸಿದ್ದು ಹೇಗೆ? ರಾಜ್ಯ ರಾಜಕಾರಣದಲ್ಲಿ ಅವರು ಮೂಡಿಸಿದ್ದ ಹೆಜ್ಜೆ ಗುರುತು ಹೇಗಿತ್ತು? ಇಲ್ಲಿದೆ ಮಾಹಿತಿ…


ಎಂ.ಬಿ. ಪಾಟೀಲ್ ಯಾರು?


ಎಂಬಿ ಪಾಟೀಲ್ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರು. ಸದ್ಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು. ಅವರು ಶಾಸಕರಾಗಿ, ಸಂಸದರಾಗಿ, ರಾಜ್ಯ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆ, ಗೃಹ ಖಾತೆಯಂತ ಪ್ರಮುಖ ಖಾತೆಯನ್ನು ನಿರ್ವಹಿಸಿ, ರಾಜ್ಯ ರಾಜಕಾರಣದಲ್ಲಿ ಅಪಾರ ಅನುಭವ ಪಡೆದವರು.


ಎಂ.ಬಿ. ಪಾಟೀಲ್ ಹಿನ್ನೆಲೆ


ಮಲ್ಲನಗೌಡ ಬಸನಗೌಡ ಪಾಟೀಲ್ ಅಂದರೆ ಎಂ.ಬಿ. ಪಾಟೀಲ್ ಹುಟ್ಟಿದ್ದು  1964, ಅಕ್ಟೋಬರ್ 7ರಂದು. ವಿಜಯಪುರ ಜಿಲ್ಲೆಯ ತೊರವಿ ಎಂಬ ಪುಟ್ಟ ಗ್ರಾಮ ಇವರ ಹುಟ್ಟೂರು. ಬೆಂಗಳೂರಿನ ಪೂರ್ಣಪ್ರಜ್ಞ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ವಿಜಯಪುರದ ದರಬಾರ ಪ್ರೌಢ ಶಾಲೆಯಲ್ಲಿ ಪಡೆದಿದ್ದಾರೆ. ಬಳಿಕ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ವಿಜಯಪುರದ ಡಾ. ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಪಡೆದ್ರು.


ಇದನ್ನೂ ಓದಿ: Siddaramaiah: ಹಲವು 'ಭಾಗ್ಯ'ಗಳ ಸರದಾರ ಸಿದ್ದರಾಮಯ್ಯ! ಮಾಸ್ ಲೀಡರ್ ಹೆಜ್ಜೆ ಗುರುತು ಇಲ್ಲಿದೆ


27ನೇ ವಯಸ್ಸಿಗೆ ಶಾಸಕರಾಗಿ ಆಯ್ಕೆ


ಎಂ.ಬಿ. ಪಾಟೀಲ್‌ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರು. ಅವರ ತಂದೆ ಬಿ.ಎಂ. ಪಾಟೀಲ್ ಶಾಸಕರಾಗಿದ್ದರು. 1991ರಲ್ಲಿ ಬಿ.ಎಂ. ಪಾಟೀಲ್ ನಿಧನರಾದಾಗ, ಅನಿವಾರ್ಯವಾಗಿ ಎಂ.ಬಿ. ಪಾಟೀಲ್ ರಾಜಕೀಯಕ್ಕೆ ಬಂದ್ರು. ಆಗ ಅವರ ವಯಸ್ಸು ಬರೀ 27 ವರ್ಷ! ತಿಕೋಟಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಂ.ಬಿ. ಪಾಟೀಲರ್ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.


ಸಂಸತ್ ಸದಸ್ಯರಾಗಿಯೂ ಆಯ್ಕೆ


1994 ಮತ್ತು 1999ರಲ್ಲಿ ನಡೆದ ತಿಕೋಟಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಲ್ಲಿನ ಪ್ರಭಾವಿ ನಾಯಕ ಶಿವಾನಂದ ಪಾಟೀಲರ ವಿರುದ್ಧ ಎಂಬಿ ಪಾಟೀಲ್ ಸೋತಿದ್ದರು. ಬಳಿಕ ವಿಜಯಪುರ ಲೋಕಸಭಾ ಕ್ಷೇತ್ರದಿಂದ 1998ರಲ್ಲಿ ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಗೆದ್ದು, ಸಂಸದರಾಗಿ ಸಂಸತ್ ಪ್ರವೇಶಿಸಿದರು.


ಹ್ಯಾಟ್ರಿಕ್‌ ಗೆಲುವಿನಲ್ಲಿ ಎಂ.ಬಿ. ಪಾಟೀಲ್


ಬಳಿಕ 2004ರಲ್ಲಿ ತಿಕೋಟಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದು, ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ. ಬಳಿಕ ಕ್ಷೇತ್ರ ಮರುವಿಂಗಡಣೆ ಬಳಿಕ ವಿಜಯಪುರದ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರು. 2008, 2013 ಮತ್ತು 2018ರಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಗೆದ್ದು ಶಾಸಕರಾದರು.


ರಾಜ್ಯ ಸಚಿವರಾಗಿ ಪ್ರಮುಖ ಖಾತೆ ನಿರ್ವಹಣೆ


ಬಳಿಕ ಎಂಬಿ ಪಾಟೀಲ್ ಸಿದ್ದರಾಮಯ್ಯ, ಎಚ್‌ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗಿ, ವಿವಿಧ ಖಾತೆಗಳನ್ನು ನಿರ್ವಿಹಿಸಿದರು.


  • 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ.

  • 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಗೃಹಸಚಿವರಾಗಿದ್ದ ಎಂಬಿ ಪಾಟೀಲ್


ಜಲಸಂಪನ್ಮೂಲ ಸಚಿವರಾಗಿದ್ದಾಗ ಹಲವು ಸಾಧನೆ


  • ಎಂ.ಬಿ.ಪಾಟೀಲ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಜಲ ಸಂಪನ್ಮೂಲ ನಿರ್ವಹಣೆಯಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಒದಗಿಸುವ ಗುರಿಯನ್ನು ಹೊಂದಿದ್ದ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿದ್ದು ಅವರ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.

  • ಈ ಯೋಜನೆಯು ಹಲವಾರು ಅಣೆಕಟ್ಟುಗಳು ಮತ್ತು ಕಾಲುವೆಗಳ ನಿರ್ಮಾಣವನ್ನು ಒಳಗೊಂಡಿತ್ತು ಮತ್ತು ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಮತ್ತು ಬರಪೀಡಿತ ಪ್ರದೇಶದ ರೈತರ ಜೀವನೋಪಾಯವನ್ನು ಸುಧಾರಿಸುವಲ್ಲಿ ಯಶಸ್ವಿಯಾಗಿದೆ.

  • ಎಂ.ಬಿ.ಪಾಟೀಲ್ ಅವರ ಮತ್ತೊಂದು ಗಮನಾರ್ಹ ಸಾಧನೆಯೆಂದರೆ ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್ (ಕೆಬಿಜೆಎನ್‌ಎಲ್) ಯೋಜನೆಯ ಅನುಷ್ಠಾನ.

  • ಇದು ಕೃಷ್ಣಾ ನದಿಯ ನೀರಿನ ಸಂಪನ್ಮೂಲಗಳನ್ನು ರಾಜ್ಯದಲ್ಲಿ ನೀರಾವರಿ ಮತ್ತು ಕುಡಿಯುವ ನೀರು ಪೂರೈಕೆಗಾಗಿ ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಹಲವಾರು ಜಲಾಶಯಗಳು, ಕಾಲುವೆಗಳು ಮತ್ತು ಲಿಫ್ಟ್ ನೀರಾವರಿ ಯೋಜನೆಗಳ ನಿರ್ಮಾಣವನ್ನು ಒಳಗೊಂಡಿತ್ತು ಮತ್ತು ಇದು ರಾಜ್ಯದಲ್ಲಿ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.

  • ಹಲವಾರು ಏತ ನೀರಾವರಿ ಯೋಜನೆ ಜಾರಿಗೊಳಿಸಲು ಶ್ರಮಿಸಿದ್ದಾರೆ.


ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಭಾಗಿ


ಲಿಂಗಾಯತ ಸಮುದಾಯದ ಕೆಲವು ಸದಸ್ಯರು ವೀರಶೈವ ಲಿಂಗಾಯತ ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದೆ ಆದ್ದರಿಂದ ಪ್ರತ್ಯೇಕ ಧರ್ಮವೆಂದು ಪರಿಗಣಿಸಬಾರದು ಎಂದು ವಾದಿಸಿದರು. ಮತ್ತೊಂದೆಡೆ, ಪ್ರಸ್ತಾವನೆಯ ಬೆಂಬಲಿಗರು ವೀರಶೈವ ಲಿಂಗಾಯತಕ್ಕೆ ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿದ್ದು ಅದನ್ನು ಪ್ರತ್ಯೇಕ ಧರ್ಮವಾಗಿ ಗುರುತಿಸಬೇಕು ಎಂದು ವಾದಿಸಿದರು. ಪ್ರತ್ಯೇಕ ಧರ್ಮಕ್ಕಾಗಿ ಹೋರಾಡಿದವರಲ್ಲಿ ಎಂಬಿ ಪಾಟೀಲ್ ಕೂಡ ಇದ್ದರು.


ಇದನ್ನೂ ಓದಿ: DK Shivakumar: ಬೆದರದ ಬೆಚ್ಚದ ಕನಕಪುರ 'ಬಂಡೆ'! ಡಿಕೆ ಶಿವಕುಮಾರ್ ರಾಜಕೀಯ ಹಾದಿ ಹೇಗಿತ್ತು?


ರಾಜಕೀಯ ಹೊರತಾಗಿ ಇತರೇ ಕೆಲಸ


ಎಂಬಿ ಪಾಟೀಲ್ ರಾಜಕೀಯದ ಹೊರತಾಗಿ ಇತರೇ ಕೆಲಸಗಳಲ್ಲೂ ಸಕ್ರಿಯರಾಗಿದ್ದಾರೆ. 1990 ರಿಂದ 2005ರ ವರೆಗೆ ಬಿ.ಎಲ್.ಡಿ.ಐ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹುದ್ದೆ, 2005ರಿಂದ ಬಿ.ಎಲ್.ಡಿ.ಐ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇನ್ನು ಬಬಲೇಶ್ವರ ವ್ಯಾಪ್ತಿಯಲ್ಲಿ ಮರಗಳನ್ನು ಬೆಳೆಸಲು ಆಂದೋಲನ ನಡೆಸುತ್ತಿದ್ದಾರೆ.

top videos
    First published: