• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • BJP Candidate List: ರಾಮದಾಸ್‌ಗಿಲ್ಲ ಟಿಕೆಟ್, ಈಶ್ವರಪ್ಪ ಕ್ಷೇತ್ರಕ್ಕೆ ಯಾರು ಅನ್ನೋದೇ ಸಸ್ಪೆನ್ಸ್!

BJP Candidate List: ರಾಮದಾಸ್‌ಗಿಲ್ಲ ಟಿಕೆಟ್, ಈಶ್ವರಪ್ಪ ಕ್ಷೇತ್ರಕ್ಕೆ ಯಾರು ಅನ್ನೋದೇ ಸಸ್ಪೆನ್ಸ್!

ರಾಮದಾಸ್‌ಗಿಲ್ಲ ಟಿಕೆಟ್, ಈಶ್ವರಪ್ಪ ಕ್ಷೇತ್ರಕ್ಕೆ ಯಾರು?

ರಾಮದಾಸ್‌ಗಿಲ್ಲ ಟಿಕೆಟ್, ಈಶ್ವರಪ್ಪ ಕ್ಷೇತ್ರಕ್ಕೆ ಯಾರು?

ಇದೀಗ ಬಿಜೆಪಿ 10 ಟಿಕೆಟ್ ಘೋಷಿಸಿ, 2 ಕ್ಷೇತ್ರಗಳ ಟಿಕೆಟ್ ಪೆಂಡಿಂಗ್ ಇರಿಸಿಕೊಂಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಜಗದೀಶ್ ಶೆಟ್ಟರ್ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ್ದು, ಕೆಎಸ್ ಈಶ್ವರಪ್ಪ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ಸಸ್ಪೆನ್ಸ್ ಆಗಿ ಇಟ್ಟಿದೆ.

 • News18 Kannada
 • 3-MIN READ
 • Last Updated :
 • Karnataka, India
 • Share this:

ಬೆಂಗಳೂರು: ರಾಜ್ಯ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ (BJP candidates list) ರಿಲೀಸ್ ಆಗಿದೆ. ಒಂದು ಮತ್ತು 2ನೇ ಪಟ್ಟಿ ರಿಲೀಸ್ ಮಾಡಿ ಕೈಸುಟ್ಟುಕೊಂಡಿದ್ದ ಬಿಜೆಪಿ, ಇದೀಗ ಅಳೆದು ತೂಗಿ 3ನೇ ಪಟ್ಟಿಯನ್ನು ರಿಲೀಸ್ ಮಾಡಿದೆ. ಈಗಾಗಲೇ 212 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಬಿಜೆಪಿ, ಒಟ್ಟು 12 ಕ್ಷೇತ್ರಗಳ ಟಿಕೆಟ್ ಪೆಂಡಿಂಗ್ ಉಳಿಸಿಕೊಂಡಿತ್ತು. ಇದೀಗ 10 ಟಿಕೆಟ್ ಘೋಷಿಸಿ, 2 ಕ್ಷೇತ್ರಗಳ ಟಿಕೆಟ್‌ ಅನ್ನು ಪೆಂಡಿಂಗ್ ಇರಿಸಿಕೊಂಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಜಗದೀಶ್ ಶೆಟ್ಟರ್ (Jagadish Shettar) ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ್ದು, ಕೆಎಸ್ ಈಶ್ವರಪ್ಪ (KS Eshwarappa) ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ಸಸ್ಪೆನ್ಸ್ ಆಗಿ ಇಟ್ಟಿದೆ.


ರಾಮದಾಸ್‌ಗಿಲ್ಲ ಟಿಕೆಟ್!


ಮಾಜಿ ಸಚಿವ, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಹಾಲಿ ಶಾಸಕ ಎಸ್‌ಎ ರಾಮದಾಸ್‌ಗೆ ಟಿಕೆಟ್ ಮಿಸ್ ಆಗಿದೆ. ರಾಮದಾಸ್‌ಗೆ ಈ ಬಾರಿ ಟಿಕೆಟ್ ಸಿಗುವುದೇ ಡೌಟ್ ಎನ್ನಲಾಗುತ್ತಿತ್ತು. ಇದೇ ಕಾರಣಕ್ಕೆ ಅವರ ಮನೆ ಮುಂದೆ ಅಭಿಮಾನಿಗಳು, ಕಾರ್ಯಕರ್ತರು ಗಲಾಟೆ ಮಾಡಿದ್ದರು. ಬಿಜೆಪಿ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ, ರಾಮದಾಸ್‌ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಆದರೆ ಯಾರ ಮಾತಿಗೂ ಮಣಿಯದ ಬಿಜೆಪಿ ಹೈಕಮಾಂಡ್, ರಾಮದಾಸ್‌ಗೆ ಟಿಕೆಟ್ ತಪ್ಪಿಸಿದೆ. ಅವರ ಬದಲು ಹೊಸಮುಖ ಶ್ರೀವತ್ಸ ಎಂಬುವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.


ಈಶ್ವರಪ್ಪ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು?


ಇನ್ನು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಪ್ರತಿನಿಧಿಸುವ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನೇ ಘೋಷಣೆ ಮಾಡಿಲ್ಲ. ಈ ಬಾರಿ ಟಿಕೆಟ್ ಸಿಗೋದಿಲ್ಲ ಎಂಬ ಸುಳಿವಿನ ಮೇಲೆ ಟಿಕೆಟ್ ಘೋಷಣೆಗೂ ಮುನ್ನವೇ ಕೆಎಸ್ ಈಶ್ವರಪ್ಪ ಚುನಾವಣೆಯಿಂದ ನಿವೃತ್ತಿ ಪಡೆದಿದ್ದರು. ಆದರೆ ತಮ್ಮ ಪುತ್ರ ಕಾಂತೇಶ್‌ಗೆ ಟಿಕೆಟ್ ನೀಡಬೇಕು ಅಂತ ಮನವಿ ಮಾಡಿದ್ರು. ಆದರೆ 3ನೇ ಪಟ್ಟಿಯಲ್ಲೂ ಶಿವಮೊಗ್ಗ ನಗರಕ್ಕೆ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸಿಲ್ಲ. ಇನ್ನು ಮಸ್ಕಿ ಕ್ಷೇತ್ರಕ್ಕೂ ಇನ್ನೂ ಅಭ್ಯರ್ಥಿ ಘೋಷಣೆಯಾಗಿಲ್ಲ.


ಇದನ್ನೂ ಓದಿ: BJP Candidates List: ಅಳೆದು ತೂಗಿ ಬಿಜೆಪಿ 3ನೇ ಪಟ್ಟಿ ರಿಲೀಸ್; 10 ಕ್ಷೇತ್ರಕ್ಕೆ ಘೋಷಣೆ, ಇನ್ನೂ 2 ಕ್ಷೇತ್ರ ಬಾಕಿ!


ಸೋಮಣ್ಣ ಕ್ಷೇತ್ರದಲ್ಲಿ ಪುತ್ರನಿಗಿಲ್ಲ ಟಿಕೆಟ್


ಇತ್ತ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದಲ್ಲಿ ವಿ. ಸೋಮಣ್ಣ ಪುತ್ರ ಅರುಣ್ ಸೋಮಣ್ಣಗೆ ಟಿಕೆಟ್ ನಿರಾಕರಿಸಲಾಗಿದೆ. ಅರುಣ್ ಸೋಮಣ್ಣ ಬದಲು ಸೋಮಣ್ಣ ಆಪ್ತ, ಬಿಬಿಎಂಪಿ ಮಾಜಿ ಸದಸ್ಯ ಉಮೇಶ್ ಶೆಟ್ಟಿಗೆ ಟಿಕೆಟ್ ನೀಡಲಾಗಿದೆ.


ಯಾರಿಗೆ ಬಿಜೆಪಿ ಟಿಕೆಟ್?

ನಾಗಠಾಣಾಸಂಜೀವ್ ಐಹೊಳೆ
ಸೇಡಂರಾಜಕುಮಾರ್ ಪಾಟೀಲ್
ಕೊಪ್ಪಳಮಂಜುಳಾ ಅಮರೇಶ್
ರೋಣಕಳಕಪ್ಪ ಬಂಡಿ
ಹುಬ್ಬಳ್ಳಿ ಧಾರವಾಡ ಕೇಂದ್ರಮಹೇಶ್ ಟೆಂಗಿನಕಾಯಿ
ಹಗರಿಬೊಮ್ಮನಹಳ್ಳಿಬಿ. ರಾಜಣ್ಣ
ಹೆಬ್ಬಾಳ ಕಟ್ಟಾ ಜಗದೀಶ್
ಗೋವಿಂದರಾಜನಗರಉಮೇಶ್ ಶೆಟ್ಟಿ
ಮಹದೇವಪುರಮಂಜುಳಾ ಅರವಿಂದ
ಕೃಷ್ಣರಾಜಶ್ರೀವತ್ಸ


ಹೆಬ್ಬಾಳದಲ್ಲಿ ಕಟ್ಟಾ ಪುತ್ರ, ಅತ್ತ ಲಿಂಬಾವಳಿ ಪತ್ನಿಗೆ ಟಿಕೆಟ್

top videos


  ಇನ್ನು ಹೆಬ್ಬಾಳದಿಂದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಟಿಕೆಟ್ ಕೇಳಿದ್ದರು. ಆದರೆ ಅವರ ಪುತ್ರ ಕಟ್ಟಾ ಜಗದೀಶ್‌ಗೆ ಟಿಕೆಟ್ ನೀಡಲಾಗಿದೆ. ಅತ್ತ ಮಹದೇವಪುರದಿಂದ ಅರವಿಂದ ಲಿಂಬಾವಳಿ ಬದಲಿಗೆ ಅವರ ಪತ್ನಿ ಮಂಜುಳಾಗೆ ಟಿಕೆಟ್ ನೀಡಿದ್ದಾರೆ. ಇನ್ನು ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಧಾರವಾಡ ಕೇಂದ್ರಕ್ಕೆ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ಸಿಕ್ಕಿದೆ.

  First published: