Karnataka Election 2023: ಕರ್ನಾಟಕದ ಚುನಾವಣಾ ರಣರಂಗದಲ್ಲಿ ಘಟಾನುಘಟಿ ನಾಯಕರು; ಬೃಹತ್ ಸಮಾವೇಶ, ರೋಡ್​ಶೋಗಳು

Karnataka Assembly Election 2023: ಇಂದು ಸಹ ಪ್ರಧಾನಿ ಮೋದಿ ಹಳೇ ಮೈಸೂರು ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ. ಇತ್ತ ಕುಡಚಿಯಲ್ಲಿ ಪ್ರಿಯಾಂಕಾ ಗಾಂಧಿ ಸಮಾವೇಶದಲ್ಲಿ ಭಾಗಿಯಾಗುತ್ತಿದ್ದಾರೆ. ಮತ್ತೊಂದ್ಕಡೆ ಜೆಡಿಎಸ್ ದೇವೇಗೌಡರ ನೇತೃತ್ವದಲ್ಲಿ ಸಮಾವೇಶ ಆಯೋಜನೆ ಮಾಡಿದೆ.

ಬೆಂಗಳೂರು: ಕರ್ನಾಟಕದ ಚುನಾವಣಾ ಅಖಾಡದಲ್ಲಿ (Karnataka Election) ಅಭ್ಯರ್ಥಿಗಳ ಪರ ಮತಯಾಚನೆ ಮಾಡಲು ಬಂದಿರುವ ರಾಷ್ಟ್ರೀಯ ನಾಯಕರು ಬೃಹತ್ ಸಮಾವೇಶ (Public Meeting), ರೋಡ್​ಶೋಗಳಲ್ಲಿ (Roadshows) ಭಾಗಿಯಾಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸಹ ಅಭ್ಯರ್ಥಿಗಳ ಪರವಾಗಿ ವೋಟ್ ಕೇಳುತ್ತಿದ್ದಾರೆ. ಇದರ ಜೊತೆಯಲ್ಲಿ  ರಾಜಕೀಯ ನಾಯಕರು (Political Leaders) ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದಾರೆ.

ಮತ್ತಷ್ಟು ಓದು ...
30 Apr 2023 19:29 (IST)

Karnataka Election 2023 Live: ಸಿದ್ದರಾಮಯ್ಯಗೆ ಹಣ ಕೊಟ್ಟ ಬಾಲಕ

30 Apr 2023 19:28 (IST)

Karnataka Election 2023 Live: ಕಾಂಗ್ರೆಸ್​ ಅಭ್ಯರ್ಥಿ ಪರ ಶಿವಣ್ಣ ಭರ್ಜರಿ ರೋಡ್ ಶೋ

ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್ ಕ್ಯಾಂಪೇನ್ ಮಾಡಿದ್ದಾರೆ. ಶಿವಣ್ಣ ಬೃಹತ್ ರೋಡ್‌ ಶೋ ನಡೆಸಿದ್ದು, ಶಿವಣ್ಣಗೆ ಪತ್ನಿ ಗೀತಾ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ.

30 Apr 2023 19:27 (IST)

Karnataka Election 2023 Live: ಹೆಚ್‌ಡಿಕೆಯನ್ನ ಗೆಲ್ಲಿಸಿ, ಮೇ 13ಕ್ಕೆ ಸಿಎಂ ಆಗ್ತಾರೆ; ಎಚ್​ಡಿ ದೇವೇಗೌಡ

ಬೆಂಗಳೂರು ದಕ್ಷಿಣದಲ್ಲಿ ಪ್ರಧಾನಿ ಮೋದಿಗೆ ಠಕ್ಕರ್ ಕೊಡಲು ದಳಪತಿಗಳು ಚನ್ನಪಟ್ಟಣದ ಇಗ್ಗಲೂರು ಗ್ರಾಮದಲ್ಲಿ ಜೆಡಿಎಸ್ ಬೃಹತ್‌ ಸಮಾವೇಶವನ್ನು ಆಯೋಜಿಸಿತ್ತು. ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು, ಈ ರಾಜ್ಯದಲ್ಲಿ ಬಡವರ ಪರ ಇರುವ ರಾಜಕಾರಣಿ ಒಬ್ಬರೇ ಅದು ಕುಮಾರಸ್ವಾಮಿ, ಹಾಗಾಗಿ ಈ ಬಾರಿ ಕುಮಾರಸ್ವಾಮಿ ಅವರಿಗೆ ನೀವು ಆಶೀರ್ವಾದ ಮಾಡಬೇಕು. ಮೇ 10 ರಂದು ಕುಮಾರಸ್ವಾಮಿರನ್ನ ಗೆಲ್ಲಿಸಿ, ಮೇ 13ಕ್ಕೆ ಅವರು ಸಿಎಂ ಆಗ್ತಾರೆ ಎಂದು ಹೇಳಿದರು.

30 Apr 2023 19:25 (IST)

Karnataka Election 2023 Live: ಜೆಡಿಎಸ್​​ಗೆ ಮತ್ತೊಂದು ಶಾಕ್​

ವಿಜಯಪುರದಿನದಿಂದ ದಿನಕ್ಕೆ ಚುನಾವಣಾ ಅಖಾಡ ರಣಗೇರುತ್ತಿದ್ದು, ವಿಜಯಪುರ ನಗರದ ಚುನಾವಣಾ ಅಖಾಡದಲ್ಲಿ ಅಚ್ಚರಿ ಬೆಳವಣಿಗೆಯಾಗಿದೆ. ವಿಜಯಪುರ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಂದೇನವಾಜ ಮಹಬರಿ ಕಣದಿಂದ ಹಿಂದಕ್ಕೆ ಸರಿದಿದ್ದು, ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಸೈಲೆಂಟ್ ಆಗಿರುವೆ ಎಂದಿದ್ದಾರೆ.

 

30 Apr 2023 18:00 (IST)

Karnataka Election 2023 Live: ಪ್ರಿಯಾಂಕಾ ಗಾಂಧಿ ಮಹತ್ವದ ಘೋಷಣೆ

ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ ಅವರು, ಖಾನಾಪುರದಲ್ಲಿ ಹೊಸ ಘೋಷಣೆ ಮಾಡಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ವೇತನ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಯಾವುದೇ ಪೆನ್ಶನ್ ಸಿಗಲ್ಲ, ಸೌಲಭ್ಯ ಸಿಗಲ್ಲ. ಆದ್ದರಿಂದ ಬಹುದಿನಗಳ ಬೇಡಿಕೆಯಂತೆ ಅಂಗನವಾಡಿ ಮಹಿಳೆಯರಿಗೆ 15000ವರೆಗೆ ವೇತನ ಹೆಚ್ಚಳ, ಆಶಾ ಕಾರ್ಯಕರ್ತೆಯರಿಗೆ 8000 ವೇತನ ಹೆಚ್ಚಳ, ಬಿಸಿಯೂಟ ಕಾರ್ಯಕರ್ತರಿಗೆ 5 ಸಾವಿರ ವೇತನ ಏರಿಕೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.

 

30 Apr 2023 17:25 (IST)

Karnataka Election 2023 Live: ಚಿತ್ತಾಪುರ ಕಾಂಗ್ರೆಸ್ ಕಡೆಯಿಂದ 6ನೇ ಗ್ಯಾರೆಂಟಿ ಕೊಟ್ಟ ಪ್ರಿಯಾಂಕ್​ ಖರ್ಗೆ

ನಮ್ಮ ಪಕ್ಷ ಐದು ಗ್ಯಾರಂಟಿ ಕೊಟ್ಟಿದೆ 6ನೇ ಗ್ಯಾರೆಂಟಿ ಈಗ ನಾನು ಕೊಡ್ತಿದ್ದೇನೆ, ಚಿತ್ತಾಪುರ ಕಾಂಗ್ರೆಸ್ ಕಡೆಯಿಂದ ನಾನು 6 ನೇ ಗ್ಯಾರೆಂಟಿ ಕೊಡ್ತಿದ್ದೇನೆ. ಈ ಆಫರ್ ರಾಜ್ಯದಲ್ಲಿ ಎಲ್ಲೂ ಇಲ್ಲ ಕೇವಲ ಚಿತ್ತಾಪುರ ಜನತೆಗೆ ಮಾತ್ರ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟರನ್ನು ಒದ್ದು ಒಳಗೆ ಕಳಿಸ್ತೀನಿ. ಅಕ್ಕಿ ಕಳ್ಳತನ, ಹಾಲಿನಪುಡಿ ಕಳ್ಳತನ ಮಾಡಿದವರಿಗೆ ಬಿಡಲ್ಲ. ಸಿಎಂ ಆಪ್ತ ಇರಲಿ ಪಿಎಂ ತೊಡೆಮೇಲೆ ಕುಂತವರಿಗೂ ಬಿಡಲ್ಲ ಎಂದು ಪ್ರಿಯಾಂಕ್​ ಖರ್ಗೆ ಆಶ್ವಾಸನೆ ಹೇಳಿದ್ದಾರೆ.

30 Apr 2023 16:03 (IST)

Karnataka Election 2023 Live: ಜೆಡಿಎಸ್​​ಗೆ ಹಾಕುವ ಒಂದೊಂದು ಮತ ಕಾಂಗ್ರೆಸ್‌ಗೆ ಹೋಗುತ್ತೆ: ಪ್ರಧಾನಿ ಮೋದಿ

ಜೆಡಿಎಸ್-ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ಮೋದಿ, ಎರಡೂ ಪಕ್ಷಗಳು ಅಸ್ಥಿರ ಸರ್ಕಾರದ ಕನಸು ಕಾಣ್ತಿವೆ. ಜೆಡಿಎಸ್ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದ. ಜೆಡಿಎಸ್​​ಗೆ ಹಾಕುವ ಒಂದೊಂದು ಮತ ಕಾಂಗ್ರೆಸ್‌ಗೆ ಹೋಗುತ್ತೆ. ಈ ಸ್ವಾರ್ಥ ಪಕ್ಷಗಳನ್ನು ಅಧಿಕಾರದಿಂದ ದೂರವಿಡಿ. ಈ ಬಾರಿ ಬಿಜೆಪಿ ಸರ್ಕಾರಕ್ಕೆ ಬೆಂಬಲಿಸಿ ಅಂತ ಮೋದಿ ಕರೆ ಕೊಟ್ಟಿದ್ದಾರೆ.

30 Apr 2023 15:54 (IST)

Karnataka Election 2023 Live: ಕಾಂಗ್ರೆಸ್​ನವರು ಬೈಗುಳದಲ್ಲೇ ಶತಕ ಪೂರೈಸಬಹುದು; ಮೋದಿ ವಾಗ್ದಾಳಿ

ನನ್ನನ್ನ ಕಾಂಗ್ರೆಸ್​ನವರು ಹಾವಿಗೆ ಹೋಲಿಸ್ತಾರೆ. ಕಾಂಗ್ರೆಸ್​ನವರು ನನ್ನ ಸಮಾಧಿಗೆ ಗುಂಡಿ ತೋಡ್ತಾರೆ. ನನಗೆ ಜನರೇ ಶಿವನ ಸ್ವರೂಪವಾಗಿದ್ದಾರೆ. ಕಾಂಗ್ರೆಸ್ ಬೈಗುಳವನ್ನೂ ಆಶೀರ್ವಾದ ಅಂತ ಭಾವಿಸ್ತೇನೆ. ಈ ಬಾರಿಯ ಸರ್ಕಾರ ಬಿಜೆಪಿಯ ಬಹುಮತದ ಸರ್ಕಾರ, ನಾನು ಮನ್ ಕಿ ಬಾತ್ ಶತಕ ಪೂರೈಸಿದ್ದೇನೆ. ಕಾಂಗ್ರೆಸ್​ನವರು ಬೈಗುಳದಲ್ಲೇ ಶತಕ ಪೂರೈಸಬಹುದು ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

30 Apr 2023 14:39 (IST)

Karnataka Election 2023 Live: ಸೋಮಣ್ಣಗೆ ಕಂಟಕ ಆಗುತ್ತಾ ‘ಆಮಿಷ ಆಡಿಯೋ’?

30 Apr 2023 14:27 (IST)

Karnataka Election 2023 Live: ಮೋದಿ ಹೋದಲ್ಲೆಲ್ಲಾ ಬಿಜೆಪಿ ಗೆಲ್ಲುತ್ತೆ

ಮೋದಿ ಮೊದಲ ಬಾರಿ ಹಾಸನ ಜಿಲ್ಲೆಗೆ ಬರುತ್ತಿದ್ದಾರೆ. ಈ ಬಾರಿ ಹಾಸನ ಜಿಲ್ಲೆಯಲ್ಲೂ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಮೋದಿ ಹೋದ ಕಡೆಯಲ್ಲಾ ಬಿಜೆಪಿ ಗೆಲ್ಲುತ್ತದೆ. ಪ್ರಿಯಾಂಕಾ-ರಾಹುಲ್ ಗಾಂಧಿ ಹೋದಲೆಲ್ಲಾ ಕಾಂಗ್ರೆಸ್ ಸೋಲುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.

30 Apr 2023 14:04 (IST)

Karnataka Election 2023 Live: ಮಾಜಿ ಸಿಎಂಗೆ ಟಾಂಗ್ ಕೊಟ್ಟ ಸಚಿವ ನಾರಯಣಗೌಡ

ಯಾವುದಾದರೂ ವಿಷಯ ಬಂದಾಗ ಟವಲ್ ಹಾಕೊಂಡು ಅಣ್ಣನಿಗೆ ಅಳು ಬರುತ್ತೆ. ಆದರೆ ಅಭಿವೃದ್ಧಿ ಅಂದಾಗ ಅಳು ಬರೋದಿಲ್ಲ. ಸಿಎಂ ಆಗಿ ಎಲ್ಲವನ್ನೂ ಹಾಸನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕುಟುಂಬ ರಾಜಕಾರಣ ಮಾಡೋರನ್ನು ಬಿಟ್ಟು, ಅಭಿವೃದ್ಧಿಗೆ ಮತ ನೀಡುವಂತೆ ನಾರಾಯಣಗೌಡರು ಮನವಿ ಮಾಡಿದರು.

30 Apr 2023 13:57 (IST)

Karnataka Election 2023 Live: ಮಹಿಳೆ ಕಾಲಿಗೆ ಬೀಳಲು ಬಂದಾಗ ದೂರ ಸರಿದ ಮೋದಿ

30 Apr 2023 13:37 (IST)

Karnataka Election 2023 Live: 100ನೇ ಮನ್ ಕೀ ಬಾತ್ ಗೆ ಸಿದ್ದರಾಮಯ್ಯ ವ್ಯಂಗ್ಯ

100ನೇ ಮನ್​ ಕೀ ಬಾತ್​ಗೆ ಕಂಪ್ಯೂಟರ್ ಮುಂದೆ ಕಾಯುತ್ತಾ ಕುಳಿತಿರುವ ಅಸ್ತಿಪಂಜರದ ಫೋಟೋ ಹಾಕಿ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.

30 Apr 2023 13:02 (IST)

Karnataka Election 2023 Live: ಭ್ರಷ್ಟ ಬಿಜೆಪಿ ಸರ್ಕಾರ ತೆಗೆಯಿರಿ: ಸತೀಶ್ ಜಾರಕಿಹೊಳಿ

ಮೇ 10ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಕಳೆದ ಐದು ವರ್ಷಗಳಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಖಾನಾಪುರ ಅಭಿವೃದ್ಧಿಗೆ ಅನೇಕ ಕೆಲಸ ಮಾಡಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೆಯೆಸಯಬೇಕಾಗಿದೆ. ಖಾನಾಪುರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಆಶೀರ್ವಾದ ಮಾಡಿ ಎಂದ ಸತೀಶ್ ಜಾರಕಿಹೊಳಿ ಮನವಿ ಮಾಡಿಕೊಂಡರು.

30 Apr 2023 12:54 (IST)

Karnataka Election 2023 Live: ಖರ್ಗೆ ವಿಷ ಸರ್ಪ ಹೇಳಿಕೆಗೆ ಮೋದಿ ತಿರುಗೇಟು

ಹಾವು ಭಗವಾನ್ ಪರಮೇಶ್ವರ ಕೊರಳಲ್ಲಿರುವ ದೇವರು. ನನಗೆ ಈ ದೇಶದ ಜನರೇ ಈಶ್ವರ ಸ್ವೂರೂಪಿಗಳು. ನಾನು ಜನರ ಕೊರಳಲ್ಲಿರುವ ಹಾವು ಆಗಲು ಯಾವ ಬೇಸರವಿಲ್ಲ. ಚುನಾವಣೆ ಸಮಯದಲ್ಲಿ ಇಂತಹ ಮಾತನ್ನು ಕರ್ನಾಟಕದ ಜನತೆ ಸಹಿಸಲ್ಲ ಎಂದು ಖರ್ಗೆ ವಿಷ ಸರ್ಪ ಹೇಳಿಕೆಗೆ ಮೋದಿ ತಿರುಗೇಟು ನೀಡಿದರು.

30 Apr 2023 12:31 (IST)

Karnataka Election 2023 Live: ಕೋಲಾರದಲ್ಲಿ ಕಾಂಗ್ರೆಸ್ ವಿರುದ್ಧ ಮೋದಿ ಗುಡುಗು

30 Apr 2023 12:20 (IST)

Karnataka Election 2023 Live: ಯೋಗಿ ಆದಿತ್ಯನಾಥರಿಗೆ ಬೆಳ್ಳಿ ಗದೆ

ಚುನಾವಣಾ ಪ್ರಚಾರಕ್ಕಾಗಿ ಕೊಪ್ಪಳಕ್ಕೆ ಆಗಮಿಸಿರುವ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಬೆಳ್ಳಿ ಗದೆ ಮತ್ತು ಅಂಜನಾದ್ರಿಯ ಆಂಜನೇಯನ ಫೋಟೋ ನೀಡಿ ಗೌರವಿಸಲಾಯ್ತು. ಈ ವೇಳೆ ನೆರೆದಿದ್ದ ಜನರು ಯೋಗಿ.. ಯೋಗಿ ಎಂದು ಘೋಷಣೆ ಕೂಗಿದರು.

30 Apr 2023 11:37 (IST)

Karnataka Election 2023 Live: ಸಚಿವ ವಿ.ಸೋಮಣ್ಣ ವಿರುದ್ಧ ಎಫ್ಐಆರ್ ದಾಖಲು

ನಾಮಪತ್ರ ವಾಪಸ್ಸು ಪಡೆಯಲು ಜೆಡಿಎಸ್ ಅಭ್ಯರ್ಥಿ ಜೊತೆ ಸೋಮಣ್ಣ ಮಾತಾಡಿರುವ ಆಡಿಯೋ ವೈರಲ್ ಕುರಿತು ಸಂಬಂಧ ಪ್ರಕರಣ ದಾಖಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಪ್ರಕರಣ ದಾಖಲಾಗಿದೆ.

 

30 Apr 2023 11:17 (IST)

Karnataka Election 2023 Live: ಹೆಬ್ಬಾಳ್ಕರ್ ಹೇಳಿಕೆಗೆ ಸಿಎಂ ವ್ಯಂಗ್ಯ

ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ  ತಿರುಗೇಟು ನೀಡಿದ್ದಾರೆ. ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂದು ಹೆಬ್ಬಾಳ್ಕರ್ ಹೇಳಿಕೆಗೆ ಸಿಎಂ ವ್ಯಂಗ್ಯವಾಡಿದರು.

30 Apr 2023 11:01 (IST)

Karnataka Election 2023 Live: ಮೋದಿ ಸಮಾವೇಶಕ್ಕೆ ಬಂದ ಬಾಲಕಿಯ ಮಾತು ಕೇಳಿ